ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇನ್ನೊಂದು ತುದಿಯಲ್ಲಿ ರೋಹಿತ್ ನಿಂತಿದ್ದರೆ ಆಟ ಕಷ್ಟವೇ ಅಲ್ಲ: ಕೊಹ್ಲಿ

‘Life isnt difficult when Rohit is at the other end’ – Kohli

ಗುವಾಹಟಿ, ಅಕ್ಟೋಬರ್ 22: ಬ್ಯಾಟಿಂಗ್ ಗೆ ಇಳಿದಿದ್ದಾಗ ಕ್ರೀಸಿನ ಇನ್ನೊಂದು ತುದಿಯಲ್ಲಿ ರೋಹಿತ್ ಶರ್ಮಾ ನಿಂತಿದ್ದರೆ ಆಟ ಕಷ್ಟವೇ ಅಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನದಲ್ಲಿನ ರೋಹಿತ್ ಅವರ ಆಕರ್ಷಕ ಬ್ಯಾಟಿಂಗ್ ಕುರಿತು ಕೊಹ್ಲಿ ಭರವಸೆ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯ

ಗುವಾಹಟಿಯಲ್ಲಿ ಭಾನುವಾರ (ಅಕ್ಟೋಬರ್ 21) ನಡೆದಿದ್ದ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ, ರೋಹಿತ್ ಇಬ್ಬರೂ ಶತಕದಾಟ ಆಡಿದ್ದರು. ಹೀಗಾಗಿ ಭಾರತ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು.

1ನೇ ಪಂದ್ಯ ಭಾರತಕ್ಕೆ ಸುಲಭ ತುತ್ತು, ಕೊಹ್ಲಿ-ರೋಹಿತ್ ಆಟದ ಗಮ್ಮತ್ತು1ನೇ ಪಂದ್ಯ ಭಾರತಕ್ಕೆ ಸುಲಭ ತುತ್ತು, ಕೊಹ್ಲಿ-ರೋಹಿತ್ ಆಟದ ಗಮ್ಮತ್ತು

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ವಿಂಡೀಸ್ ತಂಡ ಶಿಮ್ರಾನ್ ಹೆಟ್ಮರ್ ಶತಕದ (106 ರನ್) ನೆರವಿನಿಂದ 50 ಓವರ್ ಗಳಲ್ಲಿ 8 ವಿಕೆಟ್ ಕಳೆದು ಭರ್ಜರಿ 322 ರನ್ ಪೇರಿಸಿ ಭಾರತಕ್ಕೆ 323 ರನ್ ಗುರಿ ನೀಡಿತ್ತು. ಭಾರತ 42.1 ಓವರ್ ನಲ್ಲೇ 2 ವಿಕೆಟ್ ಕಳೆದು 326 ರನ್ ಪೇರಿಸಿ ಗೆಲುವಿನ ನಗು ಬೀರಿತು.

300ರ ಗುರಿ ಮುಟ್ಟೋದು ಸುಲಭವಿಲ್ಲ

300ರ ಗುರಿ ಮುಟ್ಟೋದು ಸುಲಭವಿಲ್ಲ

ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 300ಕ್ಕೂ ಹೆಚ್ಚಿನ ರನ್ ಗುರಿ ಮುಟ್ಟೋದು ಸುಲಭವಿಲ್ಲ. ಟೆಸ್ಟ್ ನಲ್ಲಿ ಹೀನಾಯ ಸೋಲು ಕಂಡಿದ್ದ ವೆಸ್ಟ್ ಇಂಡೀಸ್ ಏಕದಿನದಲ್ಲಿ ಭಾರತಕ್ಕೆ ತಿರುಗೇಟು ನೀಡಲು ಯೋಚಿಸಿತ್ತು. ಹೀಗಾಗಿಯೇ ಚತುರ ಆಟ ಆಡಿದ ವಿಂಡೀಸ್ ಭಾರತಕ್ಕೆ 323 ರನ್ ಗುರಿ ನೀಡಿತ್ತು.

ಎಲ್ಲಾ ಜೊತೆಯಾಟದಲ್ಲಿದೆ

ಎಲ್ಲಾ ಜೊತೆಯಾಟದಲ್ಲಿದೆ

ಆರಂಭಿಕ ಆಟಗಾರ ಶಿಖರ್ ಧವನ್ 10 ರನ್ನಿಗೆ ಔಟಾದಾಗ ಬಂದ ಕೊಹ್ಲಿ, ರೋಹಿತ್ ಗೆ ಉತ್ತಮ ಜೊತೆಯಾಟ ನೀಡಿದ್ದರು. ಇಬ್ಬರ ಜೊತೆಯಾಟ 246 ರನ್ ಕಲೆ ಹಾಕಿತ್ತು. ಪಂದ್ಯದ ಬಳಿಕ ಮಾತನಾಡುತ್ತ ಇದನ್ನೇ ನೆನಪಿಸಿಕೊಂಡ ಕೊಹ್ಲಿ, 'ಗರಿಷ್ಠ ಮೊತ್ತ ಎದುರಿಗಿತ್ತು. ಆದರೆ ಉತ್ತಮ ಜೊತೆಯಾಟ ಎಲ್ಲವನ್ನೂ ನಿಭಾಯಿಸಬಲ್ಲದು ಎಂಬುದು ನಮಗೆ ಗೊತ್ತಿತ್ತು' ಎಂದರು.

ವಿಂಡೀಸ್ ಉತ್ತಮ ಬ್ಯಾಟಿಂಗ್

ವಿಂಡೀಸ್ ಉತ್ತಮ ಬ್ಯಾಟಿಂಗ್

ವೆಸ್ಟ್ ಇಂಡೀಸ್ ಉತ್ತಮ ಬ್ಯಾಟಿಂಗ್ ಮಾಡಿತ್ತು. ಅದರಲ್ಲೂ 320+ ರನ್ ಬೇಧಿಸೋಸು ನಿಜಕ್ಕೂ ಸವಾಲಿನ ಕೆಲಸ. ಆದರೆ ಕ್ರೀಸಿನ ಇನ್ನೊಂದು ಬದಿಯಲ್ಲಿ ರೋಹಿತ್ ಇದ್ದಿದ್ದರಿಂದ ಬದುಕು (ಆಟ) ಕಷ್ಟ ಅನ್ನಿಸಲಿಲ್ಲ' ಎಂದು ಕೊಹ್ಲಿ ಹೇಳಿದರು.

ಇಬ್ಬರೂ ಆಕರ್ಷಕ ಶತಕ

ಇಬ್ಬರೂ ಆಕರ್ಷಕ ಶತಕ

107 ಎಸೆತಗಳಿಗೆ 140 ರನ್ ಪೇರಿಸುವ ಮೂಲಕ ಕೊಹ್ಲಿ ತನ್ನ 36ನೇ ಏಕದಿನ ಶತಕ ಪೂರೈಸಿದರೆ, 117 ಎಸೆತಗಳಲ್ಲಿ 152 ರನ್ ಸಿಡಿಸಿದ ಶರ್ಮಾ 20ನೇ ಶತಕದ ಸಾಧನೆ ಮೆರೆದರು. ಈ ವೇಳೆ ಕೊಹ್ಲಿ 21 ಬೌಂಡರಿ, 2 ಸಿಕ್ಸರ್ ಗಳನ್ನು ಬಾರಿಸಿದ್ದರು. ಶರ್ಮಾ 15 ಬೌಂಡರಿ, 8 ಸಿಕ್ಸರ್ ಗಳನ್ನು ಚಚ್ಚಿದ್ದರು.

Story first published: Monday, October 22, 2018, 13:18 [IST]
Other articles published on Oct 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X