ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ ಕ್ರಿಕೆಟ್‌ಗೆ ಕೊನೆಗೂ DRS ಕರುಣಿಸಿದ ಬಿಸಿಸಿಐ

Limited DRS to be used in Ranji knockout matches

ಮುಂಬೈ, ಜುಲೈ 19: ಕ್ರಿಕೆಟ್‌ ಅಭಿಮಾನಿಗಳ ಕೂಗಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ ಕಿವಿ ಕೊಟ್ಟಿದ್ದು, ಪ್ರತಿಷ್ಠಿತ ದೇಶಿ ಕ್ರಿಕೆಟ್‌ ಟೂರ್ನಿ ರಣಜಿ ಟ್ರೋಫಿಯ ನಾಕ್‌ಔಟ್‌ ಹಂತಗಳಲ್ಲಿ ಸೀಮಿತ ಮಟ್ಟದಲ್ಲಿ ಡಿಸಿಷನ್‌ ರಿವ್ಯೂ ಸಿಸ್ಟಮ್‌ (ಡಿಆರ್‌ಎಸ್‌) ಬಳಕೆ ಮಾಡಲು ನಿರ್ಧರಿಸಿದೆ.

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಆಯ್ಕೆ ಪ್ರಕ್ರಿಯೆ ಮುಂದೂಡಿಕೆವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಆಯ್ಕೆ ಪ್ರಕ್ರಿಯೆ ಮುಂದೂಡಿಕೆ

ಬಿಸಿಸಿಐ ಡಿಆರ್‌ಎಸ್‌ ಬಳಕೆಗೆ ಮುಂದಾಗಿದೆಯಾದರೂ ಕೊಂಚ ಟ್ವಿಸ್ಟ್‌ ನೀಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಡಿಆರ್‌ಎಸ್‌ನಲ್ಲಿ 'ಹಾಕ್‌ ಐ' ಮತ್ತು 'ಅಲ್ಟ್ರಾ ಎಡ್ಜ್‌' ಎರಡು ಅತ್ಯುನ್ನತ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಆದರೆ, ಬಿಸಿಸಿಐ ತನ್ನ ಡಿಆರ್‌ಎಸ್‌ನಲ್ಲಿ ಈ ಎರಡೂ ತಂತ್ರಜ್ಞಾನಗಳನ್ನು ಕೈ ಬಿಟ್ಟಿದೆ.

ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿ ಮನೀಶ್‌ ಪಾಂಡೆವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿ ಮನೀಶ್‌ ಪಾಂಡೆ

ಕಳೆದ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಅಂಪೈರ್‌ಗಳ ಕಳಪೆ ತೀರ್ಪುಗಳು ಸಾಕಷ್ಟು ವಿವಾದ ಸೃಷ್ಟಿಸಿದ್ದವು. ಅದರಲ್ಲೂ ಕರ್ನಾಟಕ ತಂಡಕ್ಕೆ ಅಂಪೈರ್‌ಗಳ ಕಳಪೆ ತೀರ್ಪು ಭಾರಿ ಪೆಟ್ಟು ನೀಡಿತ್ತು. ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಚೇತೇಶ್ವರ್‌ ಪೂಜಾರ ಅವರ ಬ್ಯಾಟ್‌ಗೆ ಚೆಂಡು ದಾಗಿದ್ದರೂ ಕೂಡ ಅಂಪೈರ್‌ ನಾಟ್‌ಔಟ್‌ ತೀರ್ಪು ನೀಡಿದ್ದರು. ಬಳಿಕ ಇದರ ಲಾಭ ಪಡೆದ ಪೂಜಾರ ಶತಕ ಬಾರಿಸಿ ಕರ್ನಾಟಕದ ಕೈಲಿದ್ದ ಗೆಲುವನ್ನು ಕಸಿದುಕೊಂಡಿದ್ದರು.

ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಅಖಾಡಕ್ಕೆ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಅಖಾಡಕ್ಕೆ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌

"ಕಳೆದ ವರ್ಷ ಕೆಲ ನಾಕ್‌ಔಟ್‌ ಪಂದ್ಯಗಳಲ್ಲಿ ಅಂಪೈರ್‌ಗಳಿಂದ ಭಾರಿ ಪ್ರಮಾದಗಳೇ ನಡೆದಿವೆ. ಹೀಗಾಗಿ ಇವೆಲ್ಲವನ್ನೂ ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ನಮ್ಮಲ್ಲಿರುವ ಎಲ್ಲವನ್ನೂ ಬಳಕೆ ಮಾಡಲಿದ್ದೇವೆ. ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ನಮ್ಮಲ್ಲಿ ಲಭ್ಯವಿರುವ ಎಲ್ಲಾ ರೀತಿಯ ತಂತ್ರಜ್ಞಾನಗಳನ್ನು ಬಳಕೆ ಮಾಡಲಿದ್ದೇವೆ. ಈ ಮೂಲಕ ಆನ್‌ಫೀಲ್ಡ್‌ ಅಂಪೈರ್‌ಗಳು ಸರಿಯಾದ ತೀರ್ಪು ನೀಡಲು ನೆರವಾಗಲಿದ್ದೇವೆ," ಎಂದು ಬಿಸಿಸಿಐನ ಕ್ರಿಕೆಟ್‌ ವ್ಯವಹಾರಗಳ ಜನರಲ್‌ ಮ್ಯಾನೇಜರ್‌ ಸಬಾ ಕರೀಮ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ರಿಂಗಳಷ್ಟೇ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ರಣಜಿ ಟ್ರೋಫಿಯಲ್ಲಿ ಡಿಆರ್‌ಎಸ್‌ ಬಳಕೆ ಸಮ್ಮತಿಸಿದೆ. "ದೇಶಿ ಟೂರ್ನಿಗಳಲ್ಲಿ ಈ ತಂತ್ರಜ್ಞಾನಗಳ ಬಳಕೆ ಎಷ್ಟು ಪ್ರಭಾವ ಬೀರಬಲ್ಲದು ಎಂದು ಪ್ರಯೋಗ ನಡೆಸಲಿದ್ದೇವೆ," ಎಂದು ಕರೀಮ್‌ ಹೇಳಿದ್ದಾರೆ.

Story first published: Friday, July 19, 2019, 12:50 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X