ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸತತವಾಗಿ 23 ಮತ್ತು 22 ಏಕದಿನ ಪಂದ್ಯ ಸೋತ ಕಳಪೆ ತಂಡವಿದು; ಅಪಾಯದಲ್ಲಿ ವಿಂಡೀಸ್!

List of 5 teams with most consecutive ODI losses; Bangladesh tops the list with 23 consecutive losses

ಸದ್ಯ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದು ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ಏಕದಿನ ಸರಣಿ ನಡೆಯುತ್ತಿದ್ದು, ಮೊದಲೆರಡು ಪಂದ್ಯಗಳು ಮುಕ್ತಾಯವಾದ ನಂತರ ಟೀಮ್ ಇಂಡಿಯಾ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಿ 2-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಹಾಗೂ ಸರಣಿಯನ್ನು ಕೈವಶಪಡಿಸಿಕೊಂಡಿದೆ.

IND vs WI: 17 ವರ್ಷಗಳಿಂದ ಯಾರಿಂದಲೂ ಮುರಿಯಲು ಆಗದಿದ್ದ ಧೋನಿಯ ದಾಖಲೆ ಮುರಿದ ಅಕ್ಷರ್ ಪಟೇಲ್!IND vs WI: 17 ವರ್ಷಗಳಿಂದ ಯಾರಿಂದಲೂ ಮುರಿಯಲು ಆಗದಿದ್ದ ಧೋನಿಯ ದಾಖಲೆ ಮುರಿದ ಅಕ್ಷರ್ ಪಟೇಲ್!

ಹೀಗೆ ವೆಸ್ಟ್ ಇಂಡೀಸ್ ತವರಿನಲ್ಲಿ ಸತತ ಎರಡನೇ ಏಕದಿನ ಸರಣಿಯಲ್ಲಿ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗುವ ಭೀತಿಯಲ್ಲಿದೆ. ಹೌದು, ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದ ಬಾಂಗ್ಲಾದೇಶ ವಿಂಡೀಸ್ ತಂಡದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಅಡಿ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ವಿಂಡೀಸ್ ತಂಡಕ್ಕೆ ತವರಿನಲ್ಲಿಯೇ ವೈಟ್ ವಾಷ್ ಮುಖಭಂಗ ಮಾಡಿತ್ತು. ಸದ್ಯ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್ ವಾಶ್ ಮುಖಭಂಗದ ಸನಿಹದಲ್ಲಿರುವ ವೆಸ್ಟ್ ಇಂಡೀಸ್ ಅದರ ಜೊತೆಗೆ ಮುಂದಿನ ಪಂದ್ಯಗಳಲ್ಲಿ ಬೇಡವಾದ ಕೆಟ್ಟ ದಾಖಲೆಯ ಪಟ್ಟಿ ಸೇರುವ ಸಾಧ್ಯತೆಗಳಿವೆ.

IND vs WI: ದ್ವಿತೀಯ ಏಕದಿನದ ವೇಳೆ ದ್ರಾವಿಡ್ ಸರ್ ತುಂಬಾ ಆತಂಕಕ್ಕೊಳಗಾಗಿದ್ದರು; ಶ್ರೇಯಸ್ ಐಯ್ಯರ್IND vs WI: ದ್ವಿತೀಯ ಏಕದಿನದ ವೇಳೆ ದ್ರಾವಿಡ್ ಸರ್ ತುಂಬಾ ಆತಂಕಕ್ಕೊಳಗಾಗಿದ್ದರು; ಶ್ರೇಯಸ್ ಐಯ್ಯರ್

ಹೌದು, ವೆಸ್ಟ್ ಇಂಡೀಸ್ ಸತತವಾಗಿ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಸೋತ ತಂಡಗಳ ಪಟ್ಟಿಯಲ್ಲಿನ ತನ್ನ ಹಳೆಯ ದಾಖಲೆಯನ್ನು ಈ ಬಾರಿ ಮುರಿಯುವ ಸಾಧ್ಯತೆಗಳು ಹೆಚ್ಚಿವೆ. ಈ ಮೂಲಕ ವೆಸ್ಟ್ ಇಂಡೀಸ್ ಮತ್ತೊಮ್ಮೆ ಭಾರೀ ಮುಖಭಂಗಕ್ಕೊಳಗಾಗುವ ಸನಿಹದಲ್ಲಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಸೋತಿರುವ ತಂಡಗಳ ಟಾಪ್ 5 ಪಟ್ಟಿಯ ವಿವರ ಈ ಕೆಳಕಂಡಂತಿದೆ.

ಸತತವಾಗಿ ಅತಿ ಹೆಚ್ಚು ಏಕದಿನ ಪಂದ್ಯ ಸೋತ ತಂಡಗಳ ಪಟ್ಟಿ

ಸತತವಾಗಿ ಅತಿ ಹೆಚ್ಚು ಏಕದಿನ ಪಂದ್ಯ ಸೋತ ತಂಡಗಳ ಪಟ್ಟಿ

• ಬಾಂಗ್ಲಾದೇಶ - ಸತತವಾಗಿ 23 ಏಕದಿನ ಪಂದ್ಯಗಳಲ್ಲಿ ಸೋಲುವುದರ ಮೂಲಕ ಈ ಕೆಟ್ಟ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿದೆ.

• ಬಾಂಗ್ಲಾದೇಶ - ಸತತವಾಗಿ 22 ಏಕದಿನ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದ ಬಾಂಗ್ಲಾದೇಶ ಈ ಕೆಟ್ಟ ದಾಖಲೆಯ ಎರಡನೇ ಸ್ಥಾನವನ್ನು ಕೂಡ ಅಲಂಕರಿಸಿದೆ.

• ಜಿಂಬಾಬ್ವೆ - 1983ರ ಜೂನ್ ತಿಂಗಳಿನಿಂದ 1992ರ ಮಾರ್ಚ್ ತಿಂಗಳವರೆಗೆ ನಡೆದಿದ್ದ 18 ಏಕದಿನ ಪಂದ್ಯಗಳಲ್ಲಿ ಸತತವಾಗಿ ಸೋತಿದ್ದ ಜಿಂಬಾಬ್ವೆ ಈ ಕೆಟ್ಟ ದಾಖಲೆಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

• ಶ್ರೀಲಂಕಾ - ಜೂನ್ 2019ರಿಂದ ನವೆಂಬರ್ 2019ರವರೆಗೆ ಸತತವಾಗಿ 12 ಏಕದಿನ ಪಂದ್ಯಗಳನ್ನು ಸೋತಿದ್ದ ಶ್ರೀಲಂಕಾ ಈ ಕೆಟ್ಟ ದಾಖಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

• ವೆಸ್ಟ್ ಇಂಡೀಸ್ - 2005ರ ಫೆಬ್ರವರಿಯಿಂದ ಆಗಸ್ಟ್ ತಿಂಗಳವರೆಗೆ ಸತತವಾಗಿ 11 ಏಕದಿನ ಪಂದ್ಯಗಳಲ್ಲಿ ಸೋತಿದ್ದ ವೆಸ್ಟ್ ಇಂಡೀಸ್ ಈ ಕೆಟ್ಟ ದಾಖಲೆಯ ಪಟ್ಟಿಯಲ್ಲಿ ಐದನೇ ಸ್ಥಾನ ಅಲಂಕರಿಸಿದೆ.

ತನ್ನದೇ ಕೆಟ್ಟ ದಾಖಲೆ ಮುರಿದು ಮತ್ತಷ್ಟು ಕಳಪೆಯಾಗುವ ಹಾದಿಯಲ್ಲಿ ವಿಂಡೀಸ್

ತನ್ನದೇ ಕೆಟ್ಟ ದಾಖಲೆ ಮುರಿದು ಮತ್ತಷ್ಟು ಕಳಪೆಯಾಗುವ ಹಾದಿಯಲ್ಲಿ ವಿಂಡೀಸ್

ಸದ್ಯ ವೆಸ್ಟ್ ಇಂಡೀಸ್ ತಂಡ ಟೀಮ್ ಇಂಡಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಸೋಲುವುದರ ಮೂಲಕ ಸತತವಾಗಿ ಎಂಟನೇ ಏಕದಿನ ಪಂದ್ಯವನ್ನು ಸೋತಿದೆ. ಹೀಗಾಗಿ ವೆಸ್ಟ್ ಇಂಡೀಸ್ ಟೀಂ ಇಂಡಿಯಾ ವಿರುದ್ಧದ ತೃತೀಯ ಪಂದ್ಯವನ್ನು ಸಹ ಸೋತಿದ್ದೇ ಆದರೆ ಸತತವಾಗಿ 9 ಏಕದಿನ ಪಂದ್ಯಗಳನ್ನು ಸೋತಂತಾಗಲಿದೆ. ಹಾಗೂ ಆಗಸ್ಟ್ ತಿಂಗಳಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ಕಣಕ್ಕಿಳಿಯಲಿದ್ದು ಆ ಸರಣಿಯ ಎಲ್ಲಾ ಪಂದ್ಯಗಳನ್ನು ಸೋತರೆ 2005ರಲ್ಲಿ ತಾನೇ ನಿರ್ಮಿಸಿದ್ದ ಸತತ 11 ಏಕದಿನ ಪಂದ್ಯಗಳ ಸೋಲಿನ ತನ್ನ ಕೆಟ್ಟ ದಾಖಲೆಯನ್ನು ಮುರಿದು ಮತ್ತೊಂದು ಕೆಟ್ಟ ದಾಖಲೆಗೆ ಪಾತ್ರವಾಗುವ ಅಪಾಯದಲ್ಲಿದೆ.

ಅತಿ ಹೆಚ್ಚು ಸತತ ಸೋಲು ಕಂಡಿರುವ ತಂಡ ಬಾಂಗ್ಲಾದೇಶ

ಅತಿ ಹೆಚ್ಚು ಸತತ ಸೋಲು ಕಂಡಿರುವ ತಂಡ ಬಾಂಗ್ಲಾದೇಶ

ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಸೋತ ಕೆಟ್ಟ ದಾಖಲೆಯನ್ನು ಬಾಂಗ್ಲಾದೇಶ 2 ಬಾರಿ ತನ್ನ ಹೆಸರಿಗೆ ಬರೆದುಕೊಂಡಿದೆ. ಮೊದಲಿಗೆ 1986ರ ಮಾರ್ಚ್ ತಿಂಗಳಿನಿಂದ 1998ರ ಮೇ ತಿಂಗಳವರೆಗೆ 22 ಏಕದಿನ ಪಂದ್ಯಗಳಲ್ಲಿ ಸತತವಾಗಿ ಸೋತು ಕೆಟ್ಟ ದಾಖಲೆ ಬರೆದಿದ್ದ ಬಾಂಗ್ಲಾದೇಶ ಮತ್ತೆ 1999ರ ಅಕ್ಟೋಬರ್ ತಿಂಗಳಿನಿಂದ 2002ರ ಅಕ್ಟೋಬರ್ ತಿಂಗಳವರೆಗೆ ಸತತ 23 ಏಕದಿನ ಪಂದ್ಯಗಳಲ್ಲಿ ಸೋತು ಮತ್ತೊಂದು ಕೆಟ್ಟ ದಾಖಲೆ ಬರೆದಿತ್ತು.

Story first published: Monday, July 25, 2022, 18:17 [IST]
Other articles published on Jul 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X