ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 90+ ಬಾರಿಸಿ ಶತಕ ಮಿಸ್ ಮಾಡಿಕೊಂಡ ಸಕ್ರಿಯ ಆಟಗಾರರಿವರು

List of active players who got out for 90+ runs and missed century for most times in ODI cricket

ಕ್ರಿಕೆಟ್‌ನಲ್ಲಿ ಓರ್ವ ಬ್ಯಾಟ್ಸ್‌ಮನ್‌ ಶತಕ ಬಾರಿಸಿದರೆ ಅದು ಆತನ ಇನ್ನಿಂಗ್ಸ್‌ನ ಉತ್ತಮ ಸಾಧನೆ ಎನ್ನಬಹುದು. ಇನ್ನು ಆಗಾಗ ಶತಕ ಬಾರಿಸುವ ಆಟಗಾರ ಉತ್ತಮ ಫಾರ್ಮ್ ಹೊಂದಿದ್ದಾನೆ ಹಾಗೂ ತಂಡಕ್ಕೆ ಆಸರೆಯಾಗಬಲ್ಲ ಆಟಗಾರ ಎಂಬ ಅಭಿಪ್ರಾಯ ವ್ಯಕ್ತವಾಗುವುದಂತೂ ಸತ್ಯ. ಹೀಗೆ ಓರ್ವ ಬ್ಯಾಟ್ಸ್‌ಮನ್ ಪಾಲಿಗೆ ಶತಕ ಅತಿಮುಖ್ಯವಾದ ಅಂಶವಾಗಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುನ್ನತ ಹೆಸರು ಮಾಡಿರುವ ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿ ವಿವಿಧ ದಾಖಲೆ ನಿರ್ಮಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ರೋಹಿತ್ ಶರ್ಮಾ; ವಿಶೇಷ ಪತ್ರ ಬರೆದ ಹಿಟ್‌ಮ್ಯಾನ್ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ರೋಹಿತ್ ಶರ್ಮಾ; ವಿಶೇಷ ಪತ್ರ ಬರೆದ ಹಿಟ್‌ಮ್ಯಾನ್

ವೇಗದ ಶತಕ, ಅತಿಹೆಚ್ಚು ಶತಕ, ವಿದೇಶಿ ನೆಲದಲ್ಲಿ ಅಧಿಕ ಶತಕ, ಸ್ವದೇಶಿ ನೆಲದಲ್ಲಿ ಅಧಿಕ ಶತಕ, ಹೆಚ್ಚು ಏಕದಿನ ಶತಕ, ಹೆಚ್ಚು ಟಿ ಟ್ವೆಂಟಿ ಶತಕ ಹಾಗೂ ಹೆಚ್ಚು ಟೆಸ್ಟ್ ಶತಕ ಎಂಬ ಹಲವು ದಾಖಲೆಗಳಿವೆ. ಇನ್ನು ಶತಕ ಬಾರಿಸುವ ಹಾದಿಯಲ್ಲಿದ್ದ ಹಲವಾರು ಬ್ಯಾಟ್ಸ್‌ಮನ್‌ಗಳು 90 ರನ್ ಗಳಿಸಿದ್ದ ಸಂದರ್ಭದಲ್ಲಿ ಸಾಕಷ್ಟು ಬಾರಿ ಔಟ್ ಆಗಿದ್ದು, ಕೆಲ ಕ್ರಿಕೆಟಿಗರು ಅತಿಹೆಚ್ಚು ಬಾರಿ 90 ರನ್ ಗಳಿಸಿ ಔಟ್ ಆದ ಬೇಡವಾದ ದಾಖಲೆ ಮಾಡಿದ್ದಾರೆ.

ENG vs NED: ಪಿಚ್ ಆಚೆ ಬಂದ ಎಸೆತಕ್ಕೆ ಬೃಹತ್ ಸಿಕ್ಸರ್ ಚಚ್ಚಿದ ಬಟ್ಲರ್; ವಿಡಿಯೋ ವೈರಲ್ENG vs NED: ಪಿಚ್ ಆಚೆ ಬಂದ ಎಸೆತಕ್ಕೆ ಬೃಹತ್ ಸಿಕ್ಸರ್ ಚಚ್ಚಿದ ಬಟ್ಲರ್; ವಿಡಿಯೋ ವೈರಲ್

ಹೀಗೆ ಈಗ ಸಕ್ರಿಯರಾಗಿ ಕ್ರಿಕೆಟ್ ಆಡುತ್ತಿರುವ ಆಟಗಾರರಲ್ಲಿ ( ನಿವೃತ್ತಿ ಹೊಂದಿರದ ) ಹಲವರು 90 ರನ್ ಗಳಿಸಿ ಔಟ್ ಆಗಿದ್ದು, ಈ ಪೈಕಿ ಅತಿಹೆಚ್ಚು ಬಾರಿ 90+ ರನ್ ಗಳಿಸಿ ಔಟ್ ಆಗಿ ಶತಕ ಮಿಸ್ ಮಾಡಿಕೊಂಡಿದ್ದಾರೆ. ಹೀಗೆ ಅತಿಹೆಚ್ಚು ಬಾರಿ 90+ ರನ್ ಗಳಿಸಿ ಔಟ್ ಆಗಿ ಶತಕ ಕೈತಪ್ಪಿಸಿಕೊಂಡಿರುವ ಸಕ್ರಿಯ ಬ್ಯಾಟ್ಸ್‌ಮನ್‌ಗಳ ಪಟ್ಟಿ ಈ ಕೆಳಕಂಡಂತಿದೆ.

1. ಕೇನ್ ವಿಲಿಯಮ್ಸನ್

1. ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಇಲ್ಲಿಯವರೆಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 7 ಬಾರಿ 90+ ರನ್ ಗಳಿಸಿ ಔಟ್ ಅಗಿದ್ದು, ಸಕ್ರಿಯರಾಗಿ ಕ್ರಿಕೆಟ್ ಆಡುತ್ತಿರುವ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಕೇನ್ ವಿಲಿಯಮ್ಸನ್ ಒಟ್ಟು 13 ಏಕದಿನ ಶತಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

2. ಶಿಖರ್ ಧವನ್

2. ಶಿಖರ್ ಧವನ್

ಟೀಮ್ ಇಂಡಿಯಾ ಪರ ಹಲವಾರು ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿರುವ ಶಿಖರ್ ಧವನ್ 6 ಬಾರಿ 90+ ರನ್ ಗಳಿಸಿ ಔಟ್ ಆಗಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಧವನ್ ಒಟ್ಟು 17 ಏಕದಿನ ಶತಕಗಳನ್ನು ಬಾರಿಸಿದ್ದಾರೆ.

3. ವಿರಾಟ್ ಕೊಹ್ಲಿ

3. ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಲ್ಲಿಯವರೆಗೂ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಒಟ್ಟು 6 ಬಾರಿ 90+ ರನ್ ಗಳಿಸಿ ಔಟ್ ಆಗಿದ್ದಾರೆ ಹಾಗೂ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಇಲ್ಲಿಯವರೆಗೂ ಒಟ್ಟು 43 ಶತಕಗಳನ್ನು ಬಾರಿಸಿದ್ದು, ಸಕ್ರಿಯ ಆಟಗಾರರ ಪೈಕಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ.

4. ಗ್ಲೆನ್ ಮ್ಯಾಕ್ಸ್‌ವೆಲ್

4. ಗ್ಲೆನ್ ಮ್ಯಾಕ್ಸ್‌ವೆಲ್

ಅಸ್ಟ್ರೇಲಿಯಾದ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಇಲ್ಲಿಯವರೆಗೂ ಒಟ್ಟು 5 ಬಾರಿ 90+ ರನ್ ಗಳಿಸಿ ಔಟ್ ಆಗಿ ಶತಕ ಮಿಸ್ ಮಾಡಿಕೊಂಡಿದ್ದಾರೆ. ಇನ್ನು ಮ್ಯಾಕ್ಸ್‌ವೆಲ್ ಒಟ್ಟು 2 ಬಾರಿ ಏಕದಿನ ಶತಕಗಳನ್ನು ಬಾರಿಸಿದ್ದಾರೆ.

Story first published: Friday, June 24, 2022, 10:31 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X