ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG 5ನೇ ಟೆಸ್ಟ್: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ 8ನೇ ಟೆಸ್ಟ್; ಹಳೇ 7 ಪಂದ್ಯಗಳ ಫಲಿತಾಂಶವೇನು?

List of all test matches results between India and England in Edgbaston cricket ground

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಕಳೆದ ವರ್ಷ ಮುಂದೂಡಲ್ಪಟ್ಟಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಹೌದು, ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಕಳೆದ ವರ್ಷ ಆಯೋಜನೆಯಾಗಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟು ಇದೀಗ ಮರು ಆಯೋಜನೆಯಾಗಿದೆ.

ಹಳ್ಳಿ ದಾರಿಯಲ್ಲಿ ನಾಟಿ ವೈದ್ಯರಿಂದ ಮೊಣಕಾಲು ನೋವಿಗೆ 40 ರೂ. ಚಿಕಿತ್ಸೆ ಪಡೆದ ಎಂಎಸ್ ಧೋನಿಹಳ್ಳಿ ದಾರಿಯಲ್ಲಿ ನಾಟಿ ವೈದ್ಯರಿಂದ ಮೊಣಕಾಲು ನೋವಿಗೆ 40 ರೂ. ಚಿಕಿತ್ಸೆ ಪಡೆದ ಎಂಎಸ್ ಧೋನಿ

ಇತ್ತಂಡಗಳ ನಡುವಿನ ಈ ಪಂದ್ಯ ಎಡ್ಜ್‌ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದು, ಈ ಪಂದ್ಯದ ಫಲಿತಾಂಶ ಸರಣಿಯ ವಿಜೇತ ತಂಡ ಯಾವುದು ಎಂಬುದನ್ನು ನಿರ್ಧರಿಸಲಿದೆ. ಹೌದು, ಈ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಈ ಪಂದ್ಯದಲ್ಲಿ ಗೆದ್ದರೆ ಅಥವಾ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಸರಣಿಯಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಲಿದೆ ಅಥವಾ ಈ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿದರೆ ಸಮಬಲ ಸಾಧಿಸಲಿದ್ದು, ಸರಣಿ ನೀರಸ ಡ್ರಾನಲ್ಲಿ ಅಂತ್ಯಗೊಳ್ಳಲಿದೆ.

IND vs ENG: ಇದೇ ತಪ್ಪು ಕೊಹ್ಲಿ-ಶಾಸ್ತ್ರಿ ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ? ಭಾರತದ ವಿರುದ್ಧವೇ ನೆಟ್ಟಿಗರ ಕಿಡಿ!IND vs ENG: ಇದೇ ತಪ್ಪು ಕೊಹ್ಲಿ-ಶಾಸ್ತ್ರಿ ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ? ಭಾರತದ ವಿರುದ್ಧವೇ ನೆಟ್ಟಿಗರ ಕಿಡಿ!

ಹೀಗಾಗಿ ಈ ಪಂದ್ಯ ಎರಡೂ ತಂಡಗಳಿಗೂ ಮಹತ್ವದ ಹಣಾಹಣಿಯಾಗಿ ಪರಿಣಮಿಸಿದ್ದು, ಯಾವ ತಂಡ ಗೆಲ್ಲಲಿದೆ ಎಂಬ ಕುತೂಹಲ ಮೂಡಿದೆ. ಇನ್ನು ಈ ಎಡ್ಜ್‌ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿರುವ ಎಂಟನೇ ಟೆಸ್ಟ್ ಪಂದ್ಯ ಇದಾಗಿದ್ದು, ಕಳೆದ 7 ಟೆಸ್ಟ್ ಪಂದ್ಯಗಳ ಫಲಿತಾಂಶ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ ಓದಿ.

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳ ಫಲಿತಾಂಶ

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳ ಫಲಿತಾಂಶ

ಎಡ್ಜ್‌ಬಾಸ್ಟನ್‌ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಇಲ್ಲಿಯವರೆಗೂ ಒಟ್ಟು 7 ಟೆಸ್ಟ್ ಪಂದ್ಯಗಳು ನಡೆದಿದ್ದು, ಆ ಎಲ್ಲಾ ಪಂದ್ಯಗಳ ಫಲಿತಾಂಶದ ಪಟ್ಟಿ ಕೆಳಕಂಡಂತಿದೆ.


1. ಭಾರತ vs ಇಂಗ್ಲೆಂಡ್ - 1967 - ಇಂಗ್ಲೆಂಡ್ ಜಯ

2. ಭಾರತ vs ಇಂಗ್ಲೆಂಡ್ - 1974 - ಇಂಗ್ಲೆಂಡ್ ಜಯ

3. ಭಾರತ vs ಇಂಗ್ಲೆಂಡ್ - 1979 - ಇಂಗ್ಲೆಂಡ್ ಜಯ

4. ಭಾರತ vs ಇಂಗ್ಲೆಂಡ್ - 1986 - ಡ್ರಾ

5. ಭಾರತ vs ಇಂಗ್ಲೆಂಡ್ - 1996 - ಇಂಗ್ಲೆಂಡ್ ಗೆಲುವು

6. ಭಾರತ vs ಇಂಗ್ಲೆಂಡ್ - 2011 - ಇಂಗ್ಲೆಂಡ್ ಗೆಲುವು

7. ಭಾರತ vs ಇಂಗ್ಲೆಂಡ್ - 2018 - ಇಂಗ್ಲೆಂಡ್ ಗೆಲುವು

ಗೆಲುವಿನ ಖಾತೆ ತೆರೆಯಬೇಕಿದೆ ಟೀಮ್ ಇಂಡಿಯಾ

ಗೆಲುವಿನ ಖಾತೆ ತೆರೆಯಬೇಕಿದೆ ಟೀಮ್ ಇಂಡಿಯಾ

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಎಡ್ಜ್‌ಬಾಸ್ಟನ್‌ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿರುವ ಒಟ್ಟು 7 ಟೆಸ್ಟ್ ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಇಂಗ್ಲೆಂಡ್ ಜಯ ಸಾಧಿಸಿದ್ದರೆ, ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ ಹಾಗೂ ಟೀಮ್ ಇಂಡಿಯಾ ಯಾವುದೇ ಪಂದ್ಯದಲ್ಲಿಯೂ ಜಯ ಸಾಧಿಸಲಾಗದೇ ತೀವ್ರ ಹಿನ್ನಡೆ ಅನುಭವಿಸಿದೆ. ಸದ್ಯ ಮತ್ತೊಮ್ಮೆ ಇದೇ ಕ್ರೀಡಾಂಗಣದಲ್ಲಿ ಈ ಬಾರಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ಟೆಸ್ಟ್ ಪಂದ್ಯದಲ್ಲಿ ಎದುರಿಸುತ್ತಿದ್ದು, ಗೆದ್ದು ಕೆಟ್ಟ ಇತಿಹಾಸವನ್ನು ಅಳಿಸಿ ಹಾಕಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Cheteshwar Pujara ಅವರ ವಿರುದ್ಧ ಅಭಿಮಾನಿಗಳ ಆಕ್ರೋಶ | *Cricket | OneIndia Kannada
ಪಂದ್ಯದಲ್ಲಿ ಕಣಕ್ಕಿಳಿದಿರುವ ಆಡುವ ಬಳಗಗಳು

ಪಂದ್ಯದಲ್ಲಿ ಕಣಕ್ಕಿಳಿದಿರುವ ಆಡುವ ಬಳಗಗಳು

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರುವ ಆಡುವ ಬಳಗಗಳು ಕೆಳಕಂಡಂತಿವೆ.

ಭಾರತ: ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ(ನಾಯಕ)


ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್(ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

Story first published: Saturday, July 2, 2022, 10:13 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X