ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆದ್ದ ದಾಖಲೆಗಳ ಪಟ್ಟಿ!

List of Batsmen hitting 6 of the final ball of 20th over to win in IPL

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 8) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 56ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ ರೋಚಕ ಜಯ ಗಳಿಸಿದೆ. ಕೊನೇ ಎಸೆತಕ್ಕೆ 6 ರನ್‌ ಬೇಕಿದ್ದಾಗ ಸಿಕ್ಸ್ ಚಚ್ಚಿರುವ ಶ್ರೀಕರ್ ಭರತ್ ಪಂದ್ಯ ಗೆಲ್ಲಿಸಿ ಆರ್‌ಸಿಬಿ ಪಾಲಿನ ಹೀರೋ ಅನ್ನಿಸಿದ್ದಾರೆ.

ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ ಚಚ್ಚಿದ ಇಶಾನ್ ಕಿಶನ್!ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ ಚಚ್ಚಿದ ಇಶಾನ್ ಕಿಶನ್!

ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಶ್ರೀಕರ್ ಭರತ್ 52 ಎಸೆತಗಳಲ್ಲಿ 78 ರನ್ ಸಿಡಿಸಿದರು. ಕೊನೇ ಎಸೆತಕ್ಕೆ ಸಿಕ್ಸರ್ ಕೂಡ ಸೇರಿ 3 ಫೋರ್, 4 ಸಿಕ್ಸರ್ ಬಾರಿಸಿದರು. ಡೆಲ್ಲಿ ವಿರುದ್ಧದ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಬಾರಿಸಿ ಪಂದ್ಯ ಗೆದ್ದ ದಾಖಲೆ ನಿರ್ಮಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 48 (31 ಎಸೆತ), ಶಿಖರ್ ಧವನ್ 43 (35), ರಿಷಭ್ ಪಂತ್ 10, ಶ್ರೇಯಸ್ ಐಯ್ಯರ್ 18, ಶಿಮ್ರನ್ ಹೆಟ್ಮೈಯರ್ 29, ರಿಪಾಲ್ ಪಟೇಲ್ 7 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 164 ರನ್ ಗಳಿಸಿತು.

ಐಪಿಎಲ್ ಅಭಿಯಾನ ಮುಗಿಸಿದ ಆರ್‌ಆರ್: ಡ್ರೆಸ್ಸಿಂಗ್ ರೂಮ್‌ನಲ್ಲಿ ನಾಯಕ ಸಂಜು ಭಾವನಾತ್ಮಕ ಮಾತುಐಪಿಎಲ್ ಅಭಿಯಾನ ಮುಗಿಸಿದ ಆರ್‌ಆರ್: ಡ್ರೆಸ್ಸಿಂಗ್ ರೂಮ್‌ನಲ್ಲಿ ನಾಯಕ ಸಂಜು ಭಾವನಾತ್ಮಕ ಮಾತು

ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ 4, ಶ್ರೀಕರ್ ಭರತ್ 78, ಎಬಿ ಡಿ ವಿಲಿಯರ್ಸ್ 26, ಗ್ಲೆನ್ ಮ್ಯಾಕ್ಸ್‌ವೆಲ್ 51 (33) ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 166 ರನ್ ಗಳಿಸಿತು. ಆವೇಶ್ ಖಾನ್ ಅವರ ಕೊನೇ ಎಸೆತಕ್ಕೆ ಶ್ರೀಕರ್ ಭರತ್ ಸಿಕ್ಸ್ ಬಾರಿಸಿ ಆರ್‌ಸಿಬಿ ಪಂದ್ಯ ಗೆಲ್ಲಲು ಕಾರಣರಾದರು.

ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್‌ ಬಾರಿಸಿ ಪಂದ್ಯ ಗೆಲ್ಲಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ
* ಕೊನೇ ಎಸೆತಕ್ಕೆ 5 ರನ್ ಬೇಕಿದ್ದಾಗ ಸಿಕ್ಸ್ ಬಾರಿಸಿದ್ದು
- ಡ್ವೇನ್ ಬ್ರಾವೊ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, 2012
- ಶ್ರೀಕರ್ ಭರತ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, 2021

ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುತ್ತಿಲ್ಲ ಈ ಐವರು ದಿಗ್ಗಜ ಆಟಗಾರರುಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುತ್ತಿಲ್ಲ ಈ ಐವರು ದಿಗ್ಗಜ ಆಟಗಾರರು

* ಕೊನೇ ಎಸೆತಕ್ಕೆ 4 ರನ್‌ಗಳು ಬೇಕಿದ್ದಾಗ ಸಿಕ್ಸ್ ಬಾರಿಸಿದ್ದು
- ಅಂಬಾಟಿ ರಾಯುಡು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, 2011

* ಕೊನೇ ಎಸೆತಕ್ಕೆ 3 ರನ್ ಬೇಕಿದ್ದಾಗ ಸಿಕ್ಸ್ ಬಾರಿಸಿದ್ದು
- ರೋಹಿತ್ ಶರ್ಮಾ, ಡೆಕ್ಕನ್ ಚಾರ್ಜರ್ಸ್ ವಿರುದ್ಧ, 2012
- ಸೌರಭ್ ತಿವಾರಿ, ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ, 2012
- ಮಿಚೆಲ್ ಸ್ಯಾಂಟ್ನರ್, ರಾಜಸ್ಥಾನ್ ರಾಯಲ್ಸ್ ವಿರುದ್ಧ, 2019

Story first published: Saturday, October 9, 2021, 1:11 [IST]
Other articles published on Oct 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X