ಐಪಿಎಲ್: ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಅರ್ಧ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳು

ದುಬೈ: ಭಾರತದ ಯುವ ಆಟಗಾರ ಪೃಥ್ವಿ ಶಾ ದಿಟ್ಟ ಬ್ಯಾಟ್ಸ್‌ಮನ್ ಅನ್ನೋದನ್ನು ಮತ್ತೆ ಸಾಭೀತು ಪಡಿಸಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 25) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ 6ನೇ ಪಂದ್ಯದಲ್ಲಿ ಶಾ ಬಿರುಸಿನ ಬ್ಯಾಟಿಂಗ್ ನೆರವಿನಿಂದಲೇ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 44 ರನ್‌ಗಳ ಭರ್ಜರಿ ಜಯ ಗಳಿಸಿದೆ. ಡೆಲ್ಲಿ ಪರ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಂದಿದ್ದ ಶಾ ಬ್ಯಾಟಿಂದ 9 ಬೌಂಡರಿಗಳು ಮತ್ತು 1 ಸಿಕ್ಸರ್ ಸಿಡಿದಿದ್ದವು.

'ಕಾಮೆಂಟರಿಯಿಂದ ಕಿತ್ತಾಕಿ': ಸುನಿಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಕಿಡಿ

ಪೃಥ್ವಿ ಶಾಗೆ ಈಗಿನ್ನೂ 20ರ ಹರೆಯ. ಆದರೆ ಶಾ ಈಗಾಗಲೇ ಐಪಿಎಲ್‌ನಲ್ಲಿ 5 ಅರ್ಧ ಶತಕಗಳ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ ಕಿರಿಯ ವಯಸ್ಸಿನಲ್ಲೇ ಅದ್ಭುತ ಬ್ಯಾಟಿಂಗ್ ತೋರಿದ ಒಂದಿಷ್ಟು ಬ್ಯಾಟ್ಸ್‌ಮನ್‌ಗಳಿದ್ದಾರೆ.

ಐಪಿಎಲ್ 2020: ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಭಾರೀ ದಂಡ!

21ರ ಹರೆಯ ತುಂಬುವ ಮೊದಲೇ ಐಪಿಎಲ್‌ನಲ್ಲಿ ಅತ್ಯಧಿಕ ಅರ್ಧ ಶತಕಗಳನ್ನು ಬಾರಿಸಿದ ಯುವ ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ.

ರಿಷಭ್ ಪಂತ್

ರಿಷಭ್ ಪಂತ್

ಈಗ 22ರ ಹರೆಯದವರಾಗಿರುವ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್‌ ಐಪಿಎಲ್‌ನಲ್ಲಿ ಕಿರಿಯ ಬ್ಯಾಟ್ಸ್‌ಮನ್‌ ಆಗಿದ್ದು ಅತೀ ಹೆಚ್ಚು ಅರ್ಧ ಶತಕಗಳನ್ನು ದಾಖಲಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 21ರ ಹರೆಯಕ್ಕೆ ಕಾಲಿರಿಸುವ ಮುನ್ನ ಪಂತ್ ಒಟ್ಟಿಗೆ 9 ಅರ್ಧ ಶತಕಗಳನ್ನು ಬಾರಿಸಿದ್ದರು.

ಪೃಥ್ವಿ ಶಾ

ಪೃಥ್ವಿ ಶಾ

ಡೆಲ್ಲಿ ತಂಡದಲ್ಲಿರುವ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 20ರ ಹರೆಯ ಶಾ ಡೆಲ್ಲಿ ಪರ 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಶಾಗೆ ಐಪಿಎಲ್ ಮುಗಿಯುವುದರ ಒಳಗೆ ಇನ್ನೂ ಒಂದಿಷ್ಟು ಅರ್ಧ ಶತಕಗಳನ್ನು ಬಾರಿಸಲು ಅವಕಾಶವಿದೆ.

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿದ್ದು ಈಗ ರಾಜಸ್ಥಾನ್ ರಾಯಲ್ಸ್‌ನಲ್ಲಿ ಆಡುತ್ತಿರುವ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 21ನೇ ವಯಸ್ಸಿಗೆ ಬರುವುದಕ್ಕೂ ಮೊದಲು ಐಪಿಎಲ್‌ನಲ್ಲಿ 4 ಅರ್ಧ ಶತಕಗಳನ್ನು ಬಾರಿಸಿದ್ದರು. ಐಪಿಎಲ್‌ನಲ್ಲಿ 2 ಶತಕಗಳ ದಾಖಲೆಯೂ ಸ್ಯಾಮ್ಸನ್ ಹೆಸರಿನಲ್ಲಿದೆ. ಸ್ಯಾಮ್ಸನ್‌ಗೀಗ 25ರ ಹರೆಯ.

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಕೂಡ ಉದಯೋನ್ಮುಖ ಆಟಗಾರ. ಸಣ್ಣ ವಯಸ್ಸಿನಲ್ಲಿ ಐಪಿಎಲ್‌ನಲ್ಲಿ 4 ಅರ್ಧ ಶತಕಗಳನ್ನು ಬಾರಿಸಿದ್ದರು. ಈಗ 25 ವರ್ಷ ವಯಸ್ಸಿನವರಾದ ಐಯ್ಯರ್, 64 ಐಪಿಎಲ್ ಪಂದ್ಯಗಳಲ್ಲಿ 13 ಅರ್ಧ ಶತಕ ಸೇರಿಸಿ 1746 ರನ್ ಗಳಿಸಿದ್ದಾರೆ.

ಶುಬ್ಮನ್ ಗಿಲ್

ಶುಬ್ಮನ್ ಗಿಲ್

ಕೋಲ್ಕತ್ತಾ ನೈಟ್‌ ರೈಡರ್ಸ್‌ನಲ್ಲಿರುವ ಶುಬ್‌ಮನ್ ಗಿಲ್‌ 21ರ ಹರೆಯಕ್ಕೂ ಮುನ್ನ ಐಪಿಎಲ್‌ನಲ್ಲಿ 4 ಅರ್ಧ ಶತಕಗಳನ್ನು ಬಾರಿಸಿದ್ದರು. ಬಲಗೈ ಬ್ಯಾಟ್ಸ್‌ಮನ್ ಗಿಲ್‌ಗೀಗ 21 ವರ್ಷ ವಯಸ್ಸು. 25 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 4 ಅರ್ಧ ಶತಕಗಳೂ ಸೇರಿ 506 ರನ್ ಬಾರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, September 26, 2020, 11:21 [IST]
Other articles published on Sep 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X