ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕನಾಗಿ ಅತಿಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಟಗಾರರ ಪಟ್ಟಿ; ಕೊಹ್ಲಿ, ಪಾಂಟಿಂಗ್ ಅಲ್ಲ ನಂಬರ್ 1!

List of batsmen who have smashed most centuries as Test Captain

ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡ ನಂತರ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಒಂದೊಂದಾಗಿ ಟಿ ಟ್ವೆಂಟಿ, ಏಕದಿನ ಹಾಗೂ ಟೆಸ್ಟ್ ನಾಯಕತ್ವವನ್ನು ಕಳೆದುಕೊಳ್ಳುತ್ತಾ ಬಂದರು.

ಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 4000 ರನ್ ಪೂರೈಸಿ ಅಬ್ಬರಿಸಿರುವ ಮೂವರು ಆಟಗಾರರಿವರುಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 4000 ರನ್ ಪೂರೈಸಿ ಅಬ್ಬರಿಸಿರುವ ಮೂವರು ಆಟಗಾರರಿವರು

ಇನ್ನು ವಿರಾಟ್ ಕೊಹ್ಲಿ ಸದ್ಯ ಸಕ್ರಿಯರಾಗಿರುವ ಆಟಗಾರರ ಪೈಕಿ ಅತಿ ಹೆಚ್ಚು ಶತಕ ಹಾಗೂ ಅತಿ ಹೆಚ್ಚು ರನ್ ಬಾರಿಸಿರುವ ಆಟಗಾರ ಎಂಬ ಕೀರ್ತಿಯನ್ನು ಸಂಪಾದಿಸಿದ್ದರೂ ಸಹ ನಾಯಕತ್ವವನ್ನು ಕಳೆದುಕೊಳ್ಳುವುದಕ್ಕೂ ಹಿಂದಿನ ಕೆಲ ತಿಂಗಳುಗಳಲ್ಲಿ ಶತಕ ಬಾರಿಸಲು ವಿಫಲರಾದರು. ಹೌದು, ವಿರಾಟ್ ಕೊಹ್ಲಿ ಅಂತಿಮವಾಗಿ ಶತಕ ಬಾರಿಸಿ ಎರಡೂವರೆ ವರ್ಷಗಳೇ ಕಳೆದಿದ್ದು, 71ನೇ ಶತಕವನ್ನು ಯಾವಾಗ ಬಾರಿಸುತ್ತಾರೆ ಎಂಬ ಪ್ರಶ್ನೆ ಹಾಗೂ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಲೀಸೆಸ್ಟರ್‌ಶೈರ್ ಟೆಸ್ಟ್: ಕೈಹಿಡಿದ ಮಾಜಿ ಆರ್‌ಸಿಬಿ ಆಟಗಾರ; ಭಾರತದ ಪರ ಅರ್ಧಶತಕ ಬಾರಿಸಿದ್ದು ಈತನೊಬ್ವನೇಲೀಸೆಸ್ಟರ್‌ಶೈರ್ ಟೆಸ್ಟ್: ಕೈಹಿಡಿದ ಮಾಜಿ ಆರ್‌ಸಿಬಿ ಆಟಗಾರ; ಭಾರತದ ಪರ ಅರ್ಧಶತಕ ಬಾರಿಸಿದ್ದು ಈತನೊಬ್ವನೇ

ಇನ್ನು ನಾಯಕನಾಗಿದ್ದಾಗ ಹಲವಾರು ದಾಖಲೆಗಳನ್ನು ಹಾಗೂ ಮೈಲಿಗಲ್ಲುಗಳನ್ನು ನಿರ್ಮಿಸಿರುವ ವಿರಾಟ್ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೆ ನಾಯಕನಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಶತಕ ಬಾರಿಸಿರುವ ಆಟಗಾರ ಯಾರು, ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರು ಯಾರು ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ ಓದಿ.

ಟಾಪ್ 6 ಪಟ್ಟಿ

ಟಾಪ್ 6 ಪಟ್ಟಿ

ಟೆಸ್ಟ್ ತಂಡದ ನಾಯಕರಾಗಿ ಅತಿ ಹೆಚ್ಚು ಶತಕಗಳನ್ನು ಬಾರಿಸಿರುವ ಆಟಗಾರರ ಟಾಪ್ 6 ಪಟ್ಟಿ ಹೀಗಿದೆ

1. ಗ್ರೇಮ್ ಸ್ಮಿತ್ - ದಕ್ಷಿಣ ಆಫ್ರಿಕಾ - 25 ಟೆಸ್ಟ್ ಶತಕಗಳು

2. ವಿರಾಟ್ ಕೊಹ್ಲಿ - ಭಾರತ - 20 ಟೆಸ್ಟ್ ಶತಕಗಳು

3. ರಿಕಿ ಪಾಂಟಿಂಗ್ - ಆಸ್ಟ್ರೇಲಿಯಾ - 19 ಶತಕಗಳು

4. ಸ್ಟೀವ್ ವಾ - ಆಸ್ಟ್ರೇಲಿಯಾ - 15 ಶತಕಗಳು

5. ಅಲನ್ ಬಾರ್ಡರ್ - ಆಸ್ಟ್ರೇಲಿಯಾ - 15 ಶತಕಗಳು

6. ಸ್ಟೀವ್ ಸ್ಮಿತ್ - ಆಸ್ಟ್ರೇಲಿಯಾ - 15 ಶತಕಗಳು

ಗ್ರೇಮ್ ಸ್ಮಿತ್ ಸಾರ್ವಕಾಲಿಕ ದಾಖಲೆ ಮುರಿಯುವಲ್ಲಿ ವಿಫಲರಾದ ಕೊಹ್ಲಿ

ಗ್ರೇಮ್ ಸ್ಮಿತ್ ಸಾರ್ವಕಾಲಿಕ ದಾಖಲೆ ಮುರಿಯುವಲ್ಲಿ ವಿಫಲರಾದ ಕೊಹ್ಲಿ

ನಾಯಕನಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ 25 ಶತಕಗಳನ್ನು ಬಾರಿಸಿ ಅತಿ ಹೆಚ್ಚು ಶತಕ ಸಿಡಿಸಿದ ಕ್ಯಾಪ್ಟನ್ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿರುವ ಗ್ರೇಮ್ ಸ್ಮಿತ್ ಅವರನ್ನು ಹಿಂದಿಕ್ಕುವ ಎಲ್ಲಾ ಸಾಧ್ಯತೆ ಇರುವುದು ವಿರಾಟ್ ಕೊಹ್ಲಿಗೆ ಎಂಬ ಮಾತಿತ್ತು. ಅದರಂತೆ ವಿರಾಟ್ ಕೊಹ್ಲಿ ಹಲವಾರು ದಿಗ್ಗಜ ಕ್ರಿಕೆಟಿಗರನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದರಾದರೂ ಗ್ರೇಮ್ ಸ್ಮಿತ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ ಎಷ್ಟನೇ ಸ್ಥಾನ?

ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ ಎಷ್ಟನೇ ಸ್ಥಾನ?

ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಒಟ್ಟಾರೆ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೂ 27 ಶತಕಗಳನ್ನು ಬಾರಿಸಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದಾರೆ.

Story first published: Saturday, June 25, 2022, 11:27 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X