ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಅಂಕಿಅಂಶಗಳಲ್ಲಿ ರೂಟ್, ಬಾಬರ್ ಮತ್ತು ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಬೆಸ್ಟ್!

List of batsmen with most international centuries since 2019

ಹಿಟ್ ಮ್ಯಾನ್ ಎಂದೇ ಖ್ಯಾತಿಯನ್ನು ಹೊಂದಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ತಮ್ಮದೇ ಆದ ಹಲವಾರು ದಾಖಲೆ ಮತ್ತು ಮೈಲಿಗಲ್ಲುಗಳನ್ನು ಸೃಷ್ಟಿಸಿದ್ದಾರೆ. ತಮ್ಮ ಬ್ಯಾಟಿಂಗ್ ವೈಫಲ್ಯದ ಕುರಿತು ಟೀಕೆಗಳನ್ನು ಮಾಡುವ ಮತ್ತು ಕಾಲೆಳೆಯುವ ಜನರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡುವ ರೋಹಿತ್ ಶರ್ಮಾ ತಮ್ಮ ಸಾಮರ್ಥ್ಯವೇನು ಎಂಬುದನ್ನು ಉತ್ತಮ ಇನ್ನಿಂಗ್ಸ್ ಕಟ್ಟುವ ಮೂಲಕ ಮನವರಿಕೆ ಮಾಡಿಸುತ್ತಾರೆ.

ಐಪಿಎಲ್ 2021: ಅಪಾರವಾದ ಒತ್ತಡದಲ್ಲಿರುವ ಟಾಪ್ 3 ನಾಯಕರುಐಪಿಎಲ್ 2021: ಅಪಾರವಾದ ಒತ್ತಡದಲ್ಲಿರುವ ಟಾಪ್ 3 ನಾಯಕರು

ಹೌದು, ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿದರೆ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ತಮ್ಮ ಕಾಲೆಳೆದ ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರವನ್ನು ನೀಡುತ್ತಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಓವರ್‌ಸೀಸ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಮಾಡುವುದರಲ್ಲಿ ಎಡವುತ್ತಾರೆ, ರೋಹಿತ್ ಶರ್ಮಾ ಆಟವೇನಿದ್ದರೂ ಭಾರತ ಮತ್ತು ಏಷ್ಯಾ ಖಂಡದ ಪಿಚ್‌ಗಳಲ್ಲಿ ಮಾತ್ರ ಎಂದು ಕೆಲವರು ರೋಹಿತ್ ಶರ್ಮಾ ಬ್ಯಾಟಿಂಗ್ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದ್ದರು.

ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್‌ನಲ್ಲಿ ಕೊಹ್ಲಿ ಮತ್ತು ಪಂತ್ ನಿರ್ಮಿಸಲಿರುವ ದಾಖಲೆಗಳುಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್‌ನಲ್ಲಿ ಕೊಹ್ಲಿ ಮತ್ತು ಪಂತ್ ನಿರ್ಮಿಸಲಿರುವ ದಾಖಲೆಗಳು

ಈ ಯಾವುದೇ ಟೀಕೆಗಳಿಗೂ ಸೊಪ್ಪು ಹಾಕದ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯ ಪಂದ್ಯಗಳ ಮೂಲಕ ಉತ್ತರವನ್ನು ನೀಡುತ್ತಿದ್ದಾರೆ. ಅದರಲ್ಲಿಯೂ ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಆಡಿದ ಆಟ ನೋಡಿ ಟೀಕಾಕಾರರೇ ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದರು ಎಂದರೆ ತಪ್ಪಾಗಲಾರದು. ಏಕೆಂದರೆ ಟೀಕಾಕಾರರು ಎಣಿಸಿದ ರೀತಿ ಇಂಗ್ಲೆಂಡ್ ಪಿಚ್‌ನಲ್ಲಿ ಎಡವದೇ ಸರಾಗವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕವನ್ನು ಸಿಡಿಸಿ ಕೇವಲ 17 ರನ್‌ಗಳಿಂದ ಶತಕ ವಂಚಿತರಾಗಿ ಉತ್ತಮ ಇನ್ನಿಂಗ್ಸ್ ಕಟ್ಟಿ ದಿಗ್ಗಜ ಕ್ರಿಕೆಟಿಗರಿಂದ ಪ್ರಶಂಸೆಗಳನ್ನು ಪಡೆದುಕೊಂಡರು. 145 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 83 ರನ್ ಗಳಿಸಿ ಕೆಎಲ್ ರಾಹುಲ್ ಜತೆ ಟೀಮ್ ಇಂಡಿಯಾಗೆ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಶಾರ್ದೂಲ್ ಠಾಕೂರ್ ಆಡದಿದ್ದರೆ ಉತ್ತಮ ಎನ್ನುತ್ತಿವೆ ಈ 3 ಕಾರಣಗಳುಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಶಾರ್ದೂಲ್ ಠಾಕೂರ್ ಆಡದಿದ್ದರೆ ಉತ್ತಮ ಎನ್ನುತ್ತಿವೆ ಈ 3 ಕಾರಣಗಳು

ಹೀಗೆ ತಮ್ಮ ಬ್ಯಾಟಿಂಗ್ ಕುರಿತು ಟೀಕೆ ಮಾಡುವವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ರೋಹಿತ್ ಶರ್ಮಾ 2019ರಿಂದೀಚೆಗೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿರುವ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಕಳೆದ ಬಾರಿ ಇಂಗ್ಲೆಂಡ್ ಭಾರತ ಪ್ರವಾಸ ( 2021 ) ಕೈಗೊಂಡಿದ್ದಾಗ ಶತಕ ಬಾರಿಸಿದ್ದ ರೋಹಿತ್ ಶರ್ಮಾ ತದನಂತರ ಇಲ್ಲಿಯವರೆಗೂ ಯಾವುದೇ ಶತಕವನ್ನು ಬಾರಿಸಿಲ್ಲ. ಆದರೂ ಸಹ 2019 ರಿಂದ ಇಲ್ಲಿಯವರೆಗೂ ಅತಿಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

2019ರಿಂದ ಇಲ್ಲಿಯವರೆಗೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿರುವ ಬ್ಯಾಟ್ಸ್‌ಮನ್‌ಗಳು

2019ರಿಂದ ಇಲ್ಲಿಯವರೆಗೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿರುವ ಬ್ಯಾಟ್ಸ್‌ಮನ್‌ಗಳು

2019ರಿಂದ ಇಲ್ಲಿಯವರೆಗೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿ ಈ ಕೆಳಕಂಡಂತಿದೆ..

1. ರೋಹಿತ್ ಶರ್ಮಾ: 12 ಶತಕಗಳು
2. ಬಾಬರ್ ಅಜಮ್: 11 ಶತಕಗಳು
3. ಜೋ ರೂಟ್: 10 ಶತಕಗಳು
4. ಡೇವಿಡ್ ವಾರ್ನರ್: 8 ಶತಕಗಳು
5. ವಿರಾಟ್ ಕೊಹ್ಲಿ: 7 ಶತಕಗಳು
6. ಸ್ಟೀವ್ ಸ್ಮಿತ್: 7 ಶತಕಗಳು
7. ಕೇನ್ ವಿಲಿಯಮ್ಸನ್: 7 ಶತಕಗಳು

ಕೆಟ್ಟ ಫಾರ್ಮ್ ಎಂದವರಿಗೆ ಈ ಶತಕಗಳೇ ಉತ್ತರ

ಕೆಟ್ಟ ಫಾರ್ಮ್ ಎಂದವರಿಗೆ ಈ ಶತಕಗಳೇ ಉತ್ತರ

ರೋಹಿತ್ ಶರ್ಮಾ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡುತ್ತಿಲ್ಲ, ಇವರಿಗೆಲ್ಲಾ ಸುಮ್ಮನೆ ಅವಕಾಶಗಳನ್ನು ನೀಡುವ ಬದಲು ಯುವ ಆಟಗಾರರಿಗೆ ಮನ್ನಣೆಯನ್ನು ನೀಡಿ ಎಂಬ ಮಾತುಗಳು ಕೇಳಿಬಂದಿದ್ದವು. ಹೀಗೆ ರೋಹಿತ್ ಶರ್ಮಾರನ್ನು ಗುರಿಯಾಗಿಸಿ ಟೀಕೆ ನಡೆಸುವವರಿಗೆ 2019ರಿಂದೀಚೆಗೆ ಅತಿ ಹೆಚ್ಚು ಶತಕ ಬಾರಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯೇ ಉತ್ತರ ಎಂದು ಹೇಳಿದರೆ ತಪ್ಪಾಗಲಾರದು. ವಿಶ್ವದ ಹಲವಾರು ಟಾಪ್ ಬ್ಯಾಟ್ಸ್‌ಮನ್‌ಗಳಿಗಿಂತ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ ಎಂಬುದಕ್ಕೆ ಈ ಶತಕಗಳ ಪಟ್ಟಿಯೇ ಸಾಕ್ಷಿ.

ಮೂರನೇ ಟೆಸ್ಟ್ ಫಿಟ್ ಆಗಿರೋ ಶಾರ್ಧೂಲ್ ತಾಕೂರ್ | Oneindia Kannada
ವಿರಾಟ್ ಕೊಹ್ಲಿಯ ಆ 7 ಶತಕಗಳೂ 2019ರದ್ದೇ!

ವಿರಾಟ್ ಕೊಹ್ಲಿಯ ಆ 7 ಶತಕಗಳೂ 2019ರದ್ದೇ!

ಇನ್ನು ಈ ಪಟ್ಟಿಯಲ್ಲಿ ನಾವು ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಅದು ವಿರಾಟ್ ಕೊಹ್ಲಿ ಬಾರಿಸಿರುವ 7 ಶತಕಗಳು. ಹೌದು, 2019ರಿಂದ ಇಲ್ಲಿಯವರೆಗೂ ವಿರಾಟ್ ಕೊಹ್ಲಿ ಒಟ್ಟು 7 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ಈ 7 ಶತಕಗಳನ್ನೂ ವಿರಾಟ್ ಕೊಹ್ಲಿ ಬಾರಿಸಿರುವುದು 2019ನೇ ವರ್ಷದಲ್ಲಿಯೇ. ನಂತರ 2020 ಮತ್ತು 2021ರಲ್ಲಿ ವಿರಾಟ್ ಕೊಹ್ಲಿ ಯಾವುದೇ ಶತಕಗಳನ್ನು ಬಾರಿಸಿಲ್ಲ.

Story first published: Tuesday, August 24, 2021, 14:22 [IST]
Other articles published on Aug 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X