ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿ

List of captains who led Team India from July 2021 to July 2022

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಪದೇಪದೆ ನಾಯಕರನ್ನು ಹೆಚ್ಚು ಬದಲಿಸುತ್ತಿರುವ ತಂಡ ಎಂದರೆ ಅದು ಟೀಮ್ ಇಂಡಿಯಾ ಎಂದರೆ ತಪ್ಪಾಗಲಾರದು. ಹೌದು, ಕಳೆದ ವರ್ಷ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ಟೀಮ್ ಇಂಡಿಯಾಗೆ ನಾಯಕರಾಗಿ ಹಲವಾರು ಆಟಗಾರರು ನೇಮಕಗೊಂಡಿದ್ದಾರೆ. ವಿವಿಧ ಸರಣಿಗಳಲ್ಲಿ ವಿವಿಧ ನಾಯಕರು ತಂಡಗಳನ್ನು ಮುನ್ನಡೆಸಿದ ಉದಾಹರಣೆಗಳಿವೆ.

IND vs ENG 5ನೇ ಟೆಸ್ಟ್: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ 8ನೇ ಟೆಸ್ಟ್; ಹಳೇ 7 ಪಂದ್ಯಗಳ ಫಲಿತಾಂಶವೇನು?IND vs ENG 5ನೇ ಟೆಸ್ಟ್: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ 8ನೇ ಟೆಸ್ಟ್; ಹಳೇ 7 ಪಂದ್ಯಗಳ ಫಲಿತಾಂಶವೇನು?

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಹೀನಾಯ ಸೋಲನ್ನು ಕಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದು ತೀವ್ರ ಮುಖಭಂಗಕ್ಕೆ ಒಳಗಾದ ನಂತರ ವಿರಾಟ್ ಕೊಹ್ಲಿ ಮೊದಲಿಗೆ ಸೀಮಿತ ಓವರ್ ತಂಡಗಳ ನಾಯಕತ್ವವನ್ನು ತ್ಯಜಿಸಿದರು. ಕಾಲಕ್ರಮೇಣ ಟೆಸ್ಟ್ ಕ್ರಿಕೆಟ್ ನಾಯಕತ್ವವನ್ನು ಕೂಡ ವಿರಾಟ್ ಕೊಹ್ಲಿ ಬಿಟ್ಟುಕೊಟ್ಟರು. ಹೀಗೆ ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಸಂಪೂರ್ಣವಾಗಿ ಕೆಳಗಿಳಿದ ನಂತರ ಟೀಮ್ ಇಂಡಿಯಾವನ್ನು ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿಯೂ ನಾಯಕನಾಗಿ ಮುನ್ನಡೆಸುವ ಜವಾಬ್ದಾರಿ ರೋಹಿತ್ ಶರ್ಮಾ ಹೆಗಲಿಗೆ ಬಿತ್ತು.

IND vs ENG: ಇದೇ ತಪ್ಪು ಕೊಹ್ಲಿ-ಶಾಸ್ತ್ರಿ ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ? ಭಾರತದ ವಿರುದ್ಧವೇ ನೆಟ್ಟಿಗರ ಕಿಡಿ!IND vs ENG: ಇದೇ ತಪ್ಪು ಕೊಹ್ಲಿ-ಶಾಸ್ತ್ರಿ ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ? ಭಾರತದ ವಿರುದ್ಧವೇ ನೆಟ್ಟಿಗರ ಕಿಡಿ!

ಆದರೆ ರೋಹಿತ್ ಶರ್ಮಾ ಆರೋಗ್ಯ ಸಮಸ್ಯೆ ಹಾಗೂ ಇನ್ನಿತರೆ ಕಾರಣಗಳಿಂದ ಟೀಮ್ ಇಂಡಿಯಾವನ್ನು ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿಯೂ ಮುನ್ನಡೆಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿಯೇ ವಿವಿಧ ಸರಣಿಗಳಿಗೆ ವಿವಿಧ ನಾಯಕರ ನೇಮಕವಾಗಿದ್ದು, ಕಳೆದ ಒಂದು ವರ್ಷದಲ್ಲಿ ಅಂದರೆ 2021ರ ಜುಲೈ ತಿಂಗಳಿನಿಂದ ಇಲ್ಲಿಯವರೆಗೂ ಟೀಮ್ ಇಂಡಿಯಾವನ್ನು ಬರೋಬ್ಬರಿ 8 ನಾಯಕರು ಮುನ್ನಡೆಸಿದ್ದಾರೆ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಸಹ ಅನಾರೋಗ್ಯದ ಕಾರಣ ರೋಹಿತ್ ಶರ್ಮಾ ಗೈರಾಗಿದ್ದು ಜಸ್ ಪ್ರೀತ್ ಬುಮ್ರಾ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗೆ ಕಳೆದ 12 ತಿಂಗಳುಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ಕಣಕ್ಕಿಳಿದ ಆಟಗಾರರ ಪಟ್ಟಿ ಮುಂದೆ ಓದಿ.

ಜುಲೈ 2021ರಿಂದ ಜುಲೈ 2022ರವರೆಗೆ ನಾಯಕರಾದವರು

ಜುಲೈ 2021ರಿಂದ ಜುಲೈ 2022ರವರೆಗೆ ನಾಯಕರಾದವರು

ಕಳೆದ ವರ್ಷದ ಜುಲೈ ತಿಂಗಳಿನಿಂದ ಈ ವರ್ಷದ ಜುಲೈ ತಿಂಗಳಿನವರೆಗೆ ಟೀಮ್ ಇಂಡಿಯಾದ ನಾಯಕನಾಗಿ ತಂಡವನ್ನು ಪ್ರತಿನಿಧಿಸಿರುವ ಆಟಗಾರರ ಪಟ್ಟಿ ಕೆಳಕಂಡಂತಿದೆ.

1. ಜುಲೈ 2021, ಭಾರತ vs ಶ್ರೀಲಂಕಾ ಸರಣಿ - ಶಿಖರ್ ಧವನ್

2. ಆಗಸ್ಟ್ 2021, ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ - ವಿರಾಟ್ ಕೊಹ್ಲಿ

3. ನವೆಂಬರ್ 2021, ಭಾರತ vs ನ್ಯೂಜಿಲೆಂಡ್ ಸೀಮಿತ ಓವರ್ ಸರಣಿ - ರೋಹಿತ್ ಶರ್ಮಾ

4. ನವೆಂಬರ್ 2021, ಭಾರತ vs ನ್ಯೂಜಿಲೆಂಡ್ ಟೆಸ್ಟ್ - ಅಜಿಂಕ್ಯಾ ರಹಾನೆ

5. ಜನವರಿ 2022, ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿ - ಕೆಎಲ್ ರಾಹುಲ್

6. ಜೂನ್ 2022, ಭಾರತ vs ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ಸರಣಿ - ರಿಷಭ್ ಪಂತ್

7. ಜೂನ್ 2022, ಭಾರತ vs ಐರ್ಲೆಂಡ್ ಟಿ ಟ್ವೆಂಟಿ ಸರಣಿ - ಹಾರ್ದಿಕ್ ಪಾಂಡ್ಯ

8. ಜುಲೈ 2022, ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ - ಜಸ್ಪ್ರಿತ್ ಬುಮ್ರಾ

ಕಳೆದ 12 ತಿಂಗಳುಗಳಲ್ಲಿ ಅತಿ ಹೆಚ್ಚು ನಾಯಕರನ್ನು ಬದಲಾಯಿಸಿದ ಏಕೈಕ ತಂಡ ಭಾರತ

ಕಳೆದ 12 ತಿಂಗಳುಗಳಲ್ಲಿ ಅತಿ ಹೆಚ್ಚು ನಾಯಕರನ್ನು ಬದಲಾಯಿಸಿದ ಏಕೈಕ ತಂಡ ಭಾರತ

ಹೀಗೆ ಕಳೆದೊಂದು ವರ್ಷದಲ್ಲಿ 8 ವಿವಿಧ ನಾಯಕರು ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, ಇತರೆ ಯಾವುದೇ ತಂಡವೂ ಕೂಡ ಇಷ್ಟು ನಾಯಕರನ್ನು ಬದಲಿಸಿಲ್ಲ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಟ್ರೋಲ್ ಕೂಡ ಆಗುತ್ತಿದೆ.

England ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಶೇಷ ಪ್ರಯೋಗ | *Cricket | OneIndia Kannada
ಅಭ್ಯಾಸ ಪಂದ್ಯ ಲೆಕ್ಕಕ್ಕೆ ತೆಗೆದುಕೊಂಡರೆ ಟೀಮ್ ಇಂಡಿಯಾಗೆ ಬರೋಬ್ಬರಿ 9 ನಾಯಕರು!

ಅಭ್ಯಾಸ ಪಂದ್ಯ ಲೆಕ್ಕಕ್ಕೆ ತೆಗೆದುಕೊಂಡರೆ ಟೀಮ್ ಇಂಡಿಯಾಗೆ ಬರೋಬ್ಬರಿ 9 ನಾಯಕರು!

ಇನ್ನು ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರೆ, ಮತ್ತೊಂದೆಡೆ ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಡರ್ಬಿಶೈರ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ತೊಡಗಿಕೊಳ್ಳುತ್ತಿದೆ. ಹಾಗೂ ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯಾ ಬದಲಾಗಿ ದಿನೇಶ್ ಕಾರ್ತಿಕ್ ನಾಯಕನಾಗಿ ಮುನ್ನಡೆಸಲಿದ್ದು, ಇದನ್ನೂ ಸಹ ಗಣನೆಗೆ ತೆಗೆದುಕೊಂಡರೆ ಕಳೆದ ಹನ್ನೆರಡು ತಿಂಗಳುಗಳಲ್ಲಿ ಟೀಮ್ ಇಂಡಿಯಾ ಬದಲಾಯಿಸಿದ ನಾಯಕರ ಸಂಖ್ಯೆ 9ಕ್ಕೆ ಏರಲಿದೆ.

Story first published: Friday, July 1, 2022, 22:12 [IST]
Other articles published on Jul 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X