ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫಾಸ್ಟ್ ಮತ್ತು ಸ್ಪಿನ್ ಎರಡೂ ಬೌಲಿಂಗ್‌ ಮಾಡಿರುವ 7 ಖ್ಯಾತ ಕ್ರಿಕೆಟಿಗರಿವರು

List of famous cricketers who have bowled both spin and fast in international cricket

ಕ್ರಿಕೆಟ್‍ನಲ್ಲಿ ಬೌಲರ್ ಎಂದರೆ ಎಲ್ಲರ ತಲೆಗೂ ಬರುವುದು ಸ್ಪಿನ್ ಬೌಲರ್ ಅಥವಾ ಫಾಸ್ಟ್ ಬೌಲರ್ ಎಂಬ ವಿಷಯ. ಹೌದು, ಬೌಲರ್ ಓರ್ವ ವೇಗಿ ಅಥವಾ ಸ್ಪಿನ್ನರ್ ಆಗಿರುವುದು ಸಾಮಾನ್ಯ ವಿಷಯ. ಆದರೆ ಕೆಲ ಆಟಗಾರರು ಕೆಲವೊಂದು ಪಂದ್ಯಗಳಲ್ಲಿ ಸ್ಪಿನ್ ಮತ್ತು ಇನ್ನೂ ಕೆಲವು ಪಂದ್ಯಗಳಲ್ಲಿ ವೇಗದ ಬೌಲಿಂಗ್ ಮಾಡಿದ್ದಾರೆ ಎಂಬುದನ್ನು ನೀವು ನಂಬಲೇಬೇಕು.

ಭಾರತ vs ವಿಂಡೀಸ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್‌, ಸೋನಿ ಚಾನೆಲ್‌ಗಳಲ್ಲಿ ಪ್ರಸಾರವಾಗದಿರಲು ಇದೇ ಕಾರಣಭಾರತ vs ವಿಂಡೀಸ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್‌, ಸೋನಿ ಚಾನೆಲ್‌ಗಳಲ್ಲಿ ಪ್ರಸಾರವಾಗದಿರಲು ಇದೇ ಕಾರಣ

ಹೌದು, ಆಟಗಾರನೋರ್ವ ವೇಗದ ಬೌಲರ್ ಆಗಿದ್ದುಕೊಂಡು ಕೆಲ ಪಂದ್ಯಗಳಲ್ಲಿ ಸ್ಪಿನ್ ಬೌಲಿಂಗ್ ಮಾಡಿದ ಉದಾಹರಣೆಗಳಿವೆ. ಅದೇ ರೀತಿ ಸ್ಪಿನ್ನರ್ ಎಂದು ಗುರುತಿಸಿಕೊಂಡ ಕೆಲ ಬೌಲರ್‌ಗಳು ಕೆಲವು ಪಂದ್ಯಗಳಲ್ಲಿ ವೇಗದ ಬೌಲಿಂಗ್ ಮಾಡಿದ ಉದಾಹರಣೆಗಳಿವೆ. ಕ್ರಿಕೆಟ್ ಇತಿಹಾಸದಲ್ಲಿ ಕೆಲ ಬೌಲರ್‌ಗಳು ಪಿಚ್‌ಗೆ ಅನುಗುಣವಾಗಿ ಯಾವ ರೀತಿಯ ಬೌಲಿಂಗ್ ಮಾಡಿದರೆ ಉತ್ತಮ ಎಂಬ ಆಯ್ಕೆ ಮಾಡಿಕೊಂಡಿದ್ದಾರೆ. 2021ರ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ವೇಗದ ಬೌಲರ್ ಓಲಿ ರಾಬಿನ್ ಸನ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ ಬೌಲಿಂಗ್ ಮಾಡಿದ್ದರು.

ಗಾಯದ ಸಮಸ್ಯೆಯಿಂದ ಅವಕಾಶ ಸಿಗದೇ ಟೀಮ್ ಇಂಡಿಯಾದ ಹೊರಬಿದ್ದಿರುವ ನಾಲ್ವರು ಆಟಗಾರರ ಪಟ್ಟಿಗಾಯದ ಸಮಸ್ಯೆಯಿಂದ ಅವಕಾಶ ಸಿಗದೇ ಟೀಮ್ ಇಂಡಿಯಾದ ಹೊರಬಿದ್ದಿರುವ ನಾಲ್ವರು ಆಟಗಾರರ ಪಟ್ಟಿ

ಆ ಸಂದರ್ಭದಲ್ಲಿ ಓಲಿ ರಾಬಿನ್ಸನ್ ಅವರ ಈ ನಿರ್ಣಯ ಕೆಲವರಲ್ಲಿ ಆಶ್ಚರ್ಯವನ್ನು ಮೂಡಿಸಿತ್ತು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿಯೂ ಕೂಡಾ ಪರಿಣಮಿಸಿತ್ತು. ಹೀಗೆ ಕ್ರಿಕೆಟ್ ಇತಿಹಾಸದಲ್ಲಿ ಫಾಸ್ಟ್ ಮತ್ತು ಸ್ಪಿನ್ ಎರಡೂ ಶೈಲಿಯ ಬೌಲಿಂಗ್‌ನ್ನು 7 ಖ್ಯಾತ ಕ್ರಿಕೆಟಿಗರು ಮಾಡಿದ ಉದಾಹರಣೆಗಳಿವೆ. ಆ ಕ್ರಿಕೆಟಿಗರ ಪಟ್ಟಿ ಕೆಳಕಂಡಂತಿದೆ.

1. ಸಚಿನ್ ತೆಂಡೂಲ್ಕರ್

1. ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವಂತ ಸಚಿನ್ ತೆಂಡೂಲ್ಕರ್ ಆರಂಭದ ದಿನಗಳಲ್ಲಿ ತಂಡದ ಪ್ರಮುಖ ಬೌಲರ್ ಆಗಿದ್ದರು. ಸಚಿನ್ ತೆಂಡೂಲ್ಕರ್ ಒಟ್ಟು 154 ಏಕದಿನ ವಿಕೆಟ್ ಪಡೆದುಕೊಂಡಿರುವುದೇ ಇದಕ್ಕೆ ನಿದರ್ಶನ. ಹೀಗೆ ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲೂ ಒಳ್ಳೆಯ ಅಂಕಿ ಅಂಶ ಹೊಂದಿರುವ ಸಚಿನ್ ತೆಂಡೂಲ್ಕರ್ ಫಾಸ್ಟ್ ಮತ್ತು ಸ್ಪಿನ್ ಎರಡೂ ಮಾದರಿಯ ಬೌಲಿಂಗ್ ಮಾಡಿದ್ದರು. ಹೌದು, ಸಚಿನ್ ತೆಂಡೂಲ್ಕರ್ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸ್ಪಿನ್ ಮತ್ತು ಫಾಸ್ಟ್ ಎರಡೂ ಮಾದರಿಯ ಬೌಲಿಂಗ್ ಮಾಡಿದ ಅನುಭವವನ್ನು ಹೊಂದಿದ್ದಾರೆ.

2. ಕಪಿಲ್ ದೇವ್

2. ಕಪಿಲ್ ದೇವ್

ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಸ್ಪಿನ್ ಬೌಲಿಂಗ್ ಪ್ರಯತ್ನಿಸಿದ್ದರು ಎಂಬುದನ್ನು ನೀವು ನಂಬಲೇಬೇಕು. 1985ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು ಅಂತಿಮ ಎಸೆತದಲ್ಲಿ 22 ರನ್‌ಗಳ ಅಗತ್ಯತೆ ಇತ್ತು. ಪಂದ್ಯ ಟೀಮ್ ಇಂಡಿಯಾ ತೆಕ್ಕೆಗೆ ಆಗಲೇ ಬಿದ್ದಿದ್ದ ಕಾರಣದಿಂದಾಗಿ ಕಪಿಲ್ ದೇವ್ ಆ ಅಂತಿಮ ಎಸೆತದಲ್ಲಿ ಆಫ್ ಸ್ಪಿನ್ ಬೌಲಿಂಗ್ ಮಾಡಿದ್ದರು.

3. ಆ್ಯಂಡ್ರ್ಯೂ ಸೈಮಂಡ್ಸ್

3. ಆ್ಯಂಡ್ರ್ಯೂ ಸೈಮಂಡ್ಸ್

ಕ್ರಿಕೆಟ್ ಇತಿಹಾಸದಲ್ಲಿ ಆಗಾಗ ಸ್ಪಿನ್ ಮತ್ತು ಫಾಸ್ಟ್ ಬೌಲಿಂಗ್ ಎರಡನ್ನೂ ಸಹ ಮಾಡುತ್ತಿದ್ದ ಆಟಗಾರನೆಂದರೆ ಅದು ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಸೈಮಂಡ್ಸ್. ಸಂದರ್ಭಕ್ಕನುಗುಣವಾಗಿ ಆ್ಯಂಡ್ರ್ಯೂ ಸೈಮಂಡ್ಸ್ ಕೆಲವೊಂದು ಪಂದ್ಯಗಳಲ್ಲಿ ಸ್ಪಿನ್ ಬೌಲಿಂಗ್ ಮತ್ತು ಇನ್ನೂ ಕೆಲ ಪಂದ್ಯಗಳಲ್ಲಿ ಫಾಸ್ಟ್ ಬೌಲಿಂಗ್ ಮಾಡಿದ್ದಾರೆ. ಸೈಮಂಡ್ಸ್ ಒಟ್ಟಾರೆ 165 ಅಂತರರಾಷ್ಟ್ರೀಯ ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ.

4. ಮನೋಜ್ ಪ್ರಭಾಕರ್

4. ಮನೋಜ್ ಪ್ರಭಾಕರ್

ಮನೋಜ್ ಪ್ರಭಾಕರ್ ಈ ಹಿಂದೆ ಟೀಮ್ ಇಂಡಿಯಾದಲ್ಲಿ ಸತತವಾಗಿ ಅವಕಾಶ ಪಡೆದುಕೊಳ್ಳುತ್ತಿದ್ದ ಆಲ್ ರೌಂಡರ್ ಆಟಗಾರ. ಮೀಡಿಯಂ ಫಾಸ್ಟ್ ಬೌಲರ್ ಆಗಿದ್ದ ಮನೋಜ್ ಪ್ರಭಾಕರ್ 1996ರ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವೇಗದ ಬೌಲಿಂಗ್ ಮೂಲಕ ಸರಿಯಾದ ಆರಂಭವನ್ನು ಪಡೆದುಕೊಳ್ಳದೇ ಇದ್ದ ಕಾರಣದಿಂದಾಗಿ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ ಪ್ರಯತ್ನಿಸಿದ್ದರು.

5. ಸೊಹೈಲ್ ತನ್ವೀರ್

5. ಸೊಹೈಲ್ ತನ್ವೀರ್

ವೇಗದ ಬೌಲರ್ ಆಗಿ ಪಾಕಿಸ್ತಾನ ತಂಡದ ಪರ ಎಲ್ಲಾ ಮಾದರಿಯಲ್ಲಿಯೂ ಆಟವನ್ನಾಡಿರುವ ಸೊಹೈಲ್ ತನ್ವೀರ್ ಕೆಲವೊಂದು ಸಂದರ್ಭದಲ್ಲಿ ಸ್ಪಿನ್ ಬೌಲಿಂಗ್ ಮಾಡಿದ ಉದಾಹರಣೆ ಕೂಡ ಇದೆ. 2007ರಲ್ಲಿ ಭಾರತದ ವಿರುದ್ಧ ಕೋಲ್ಕತಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ಸೊಹೈಲ್ ತನ್ವೀರ್ ವೇಗದ ಬೌಲಿಂಗ್ ಬದಲಾಗಿ ಸ್ಪಿನ್ ಬೌಲಿಂಗ್ ಮಾಡಿದ್ದರು.

6. ಬೆನ್ ಸ್ಟೋಕ್ಸ್

6. ಬೆನ್ ಸ್ಟೋಕ್ಸ್

ಇಂಗ್ಲೆಂಡ್ ತಂಡದ ವಿಶ್ವಕಪ್ ಹೀರೋ ಎಂದೇ ಖ್ಯಾತಿಯನ್ನು ಪಡೆದಿರುವ ಬೆನ್ ಸ್ಟೋಕ್ಸ್ ಈ ಹಿಂದೆ ಪಾಕಿಸ್ತಾನ ವಿರುದ್ಧ ನಡೆದಿದ್ದ ಪಂದ್ಯವೊಂದರಲ್ಲಿ ತಮ್ಮ ವೇಗದ ಬೌಲಿಂಗ್ ಬದಲಾಗಿ ಸ್ಪಿನ್ ಬೌಲಿಂಗ್ ಪ್ರಯತ್ನಿಸಿದ್ದರು. ಪಾಕಿಸ್ತಾನ ತಂಡದ ಆಟಗಾರ ಶೋಯೆಬ್ ಮಲಿಕ್ ದ್ವಿಶತಕ ಸಿಡಿಸಿ ನೆಲಕಚ್ಚಿ ನಿಂತಿದ್ದರು ಹಾಗೂ ಇಂಗ್ಲೆಂಡ್ ತಂಡದ ಬೌಲರ್‌ಗಳಿಗೆ ಪಾಕಿಸ್ತಾನ ತಂಡದ ವಿಕೆಟ್ ಕಬಳಿಸಲು ಆಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಕೆಲ ಬದಲಾವಣೆಗಳನ್ನು ತರುವ ಯತ್ನದಲ್ಲಿ ಬೆನ್ ಸ್ಟೋಕ್ಸ್ ಸ್ಪಿನ್ ಬೌಲಿಂಗ್ ಪ್ರಯತ್ನಿಸಿದ್ದರು.

7. ರೋಹಿತ್ ಶರ್ಮಾ

7. ರೋಹಿತ್ ಶರ್ಮಾ

ರೋಹಿತ್ ಶರ್ಮಾ ಆರಂಭದ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದರು. ಆಫ್ ಸ್ಪಿನ್ ಬೌಲರ್ ಆಗಿದ್ದ ರೋಹಿತ್ ಶರ್ಮಾ ಕಳೆದ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪಂದ್ಯವೊಂದರಲ್ಲಿ ವೇಗದ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ನವದೀಪ್ ಸೈನಿ ಗಾಯಕ್ಕೊಳಗಾದ ಕಾರಣ ಓವರ್ ಮಧ್ಯದಲ್ಲಿಯೇ ಕ್ರೀಡಾಂಗಣದಿಂದ ಹೊರ ನಡೆದಿದ್ದರು. ಈ ಸಂದರ್ಭದಲ್ಲಿ ನವದೀಪ್ ಸೈನಿ ಓವರ್ ಪೂರ್ಣಗೊಳಿಸಲು ರೋಹಿತ್ ಶರ್ಮಾಗೆ ಚೆಂಡನ್ನು ನೀಡಲಾಗಿತ್ತು. ಆದರೆ ರೋಹಿತ್ ಶರ್ಮಾ ತಮ್ಮ ಸ್ಪಿನ್ ಬೌಲಿಂಗ್ ಮಾಡದೇ ವೇಗದ ಬೌಲಿಂಗ್ ಎಸೆಯುವ ಮೂಲಕ ಅಚ್ಚರಿ ಮೂಡಿಸಿದ್ದರು.

Story first published: Saturday, July 23, 2022, 18:55 [IST]
Other articles published on Jul 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X