ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲಿ ಇಂಗ್ಲೆಂಡ್ ಚೇಸ್ ಮಾಡಲಾಗದೇ ಮಂಕಾದ ಸಣ್ಣ ಮೊತ್ತ, ಚೇಸ್ ಮಾಡಿರುವ ಬೃಹತ್ ಮೊತ್ತಗಳ ಪಟ್ಟಿ

List of highest run chases and big collapse in little chases by England in test cricket

3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿರುವ ಐದನೇ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಸೆಣಸಾಟವನ್ನು ನಡೆಸುತ್ತಿದೆ.

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ಹೌದು, ಸೀಮಿತ ಓವರ್ ಸರಣಿಗಳಿಗೂ ಮುನ್ನ ಈ ಟೆಸ್ಟ್ ಪಂದ್ಯ ಆಯೋಜನೆಯಾಗಿದ್ದು, ಜುಲೈ 1ರಿಂದ ಪಂದ್ಯ ಪ್ರಾರಂಭಗೊಂಡಿದೆ. ಈ ಪಂದ್ಯದ ಮೊದಲ 3 ದಿನಗಳ ಮುಕ್ತಾಯದ ನಂತರ ಪಂದ್ಯದ ಮೇಲೆ ಪ್ರವಾಸಿ ಟೀಂ ಇಂಡಿಯಾ ಹಿಡಿತವನ್ನು ಸಾಧಿಸಿದ್ದು, ಮೂರನೇ ದಿನದ ಮುಕ್ತಾಯದ ಹಂತಕ್ಕೆ 257 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಹೌದು, ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಆಕರ್ಷಕ ಶತಕಗಳ ನೆರವಿನಿಂದ 416 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

IND vs ENG 5ನೇ ಟೆಸ್ಟ್: ಕೊಹ್ಲಿ ಮತ್ತೆ ಫ್ಲಾಪ್, ಪೂಜಾರ-ಪಂತ್ ಆಸರೆ; 3ನೇ ದಿನ ಭಾರತಕ್ಕೆ ಮುನ್ನಡೆIND vs ENG 5ನೇ ಟೆಸ್ಟ್: ಕೊಹ್ಲಿ ಮತ್ತೆ ಫ್ಲಾಪ್, ಪೂಜಾರ-ಪಂತ್ ಆಸರೆ; 3ನೇ ದಿನ ಭಾರತಕ್ಕೆ ಮುನ್ನಡೆ

ಇತ್ತ ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿ ನಂತರ ಮಂಕಾದ ಇಂಗ್ಲೆಂಡ್ ಬ್ಯಾಟಿಂಗ್‍ನಲ್ಲೂ ಹಿನ್ನಡೆ ಅನುಭವಿಸಿತು. ಜಾನಿ ಬೈರ್ ಸ್ಟೋ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ಮೊದಲನೇ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲ್ ಔಟ್ ಆಯಿತು ಹಾಗೂ ಮೊದಲ ಇನಿಂಗ್ಸ್ ಮುಕ್ತಾಯದ ಹಂತಕ್ಕೆ ಟೀಮ್ ಇಂಡಿಯಾ 132 ರನ್ ಮುನ್ನಡೆ ಸಾಧಿಸಿತು. ನಂತರ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿ 257 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಹೀಗೆ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿಯನ್ನು ನೀಡುವ ಸಾಧ್ಯತೆಗಳು ಹೆಚ್ಚಿದ್ದು, ಈ ಹಿಂದೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‍ನಲ್ಲಿ ಯಶಸ್ವಿಯಾಗಿ ಚೇಸ್ ಮಾಡಿರುವ ಅತಿ ದೊಡ್ಡ ಮೊತ್ತ ಯಾವುದು ಹಾಗೂ ಚೇಚ್ ಮಾಡಲಾಗದೇ ಸೋತ ಸಣ್ಣ ಮೊತ್ತ ಯಾವುದು ಎಂಬುದರ ಕುರಿತ ಮಾಹಿತಿ ಮುಂದೆ ಇದೆ ಓದಿ.

ಇಂಗ್ಲೆಂಡ್ ಯಶಸ್ವಿಯಾಗಿ ಚೇಸ್ ಮಾಡಿರುವ ರನ್ ಪಟ್ಟಿ

ಇಂಗ್ಲೆಂಡ್ ಯಶಸ್ವಿಯಾಗಿ ಚೇಸ್ ಮಾಡಿರುವ ರನ್ ಪಟ್ಟಿ

ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಶಸ್ವಿಯಾಗಿ ಚೇಸ್ ಮಾಡಿರುವ ಬೃಹತ್ ರನ್ ಗುರಿಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ

1. 22 ಆಗಸ್ಟ್ 2019ರಂದು ಆಸ್ಟ್ರೇಲಿಯಾ ನೀಡಿದ್ದ 359 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 362 ರನ್ ಕಲೆಹಾಕಿ ಗೆಲುವು ಸಾಧಿಸಿತ್ತು. ಇದು ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‍ನಲ್ಲಿ ಬೆನ್ನತ್ತಿರುವ ಬೃಹತ್ ಮೊತ್ತವಾಗಿದೆ.


2. 1928ರ ಡಿಸೆಂಬರ್ 29ರಂದು ಆಸ್ಟ್ರೇಲಿಯಾ 332 ರನ್‌ಗಳ ಗುರಿಯನ್ನು ಬೆನ್ನತ್ತುವಲ್ಲಿ ಸಫಲವಾಗಿದ್ದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ ಗುರಿಯನ್ನು ಮುಟ್ಟಿತ್ತು.

3. 2021ರ ಆಗಸ್ಟ್ 16ರಂದು ಆಸ್ಟ್ರೇಲಿಯಾ 315 ರನ್‌ಗಳ ಗುರಿಯನ್ನು ಇಂಗ್ಲೆಂಡ್ ತಂಡಕ್ಕೆ ನೀಡಿತ್ತು. ಈ ಗುರಿಯನ್ನು 4 ವಿಕೆಟ್‍ಗಳಲ್ಲಿ ಬೆನ್ನತ್ತಿದ್ದ ಇಂಗ್ಲೆಂಡ್ 6 ವಿಕೆಟ್‍ಗಳ ಗೆಲುವನ್ನು ಸಾಧಿಸಿತ್ತು.

4. 1997ರ ಫೆಬ್ರವರಿ 14ರಂದು ನ್ಯೂಜಿಲೆಂಡ್ ಇಂಗ್ಲೆಂಡ್ ತಂಡಕ್ಕೆ 305 ರನ್‌ಗಳ ಗುರಿ ನೀಡಿತ್ತು. ಅತ್ತ 6 ವಿಕೆಟ್ ನಷ್ಟಕ್ಕೆ 307 ರನ್ ಕಲೆಹಾಕಿದ ಇಂಗ್ಲೆಂಡ್ 4 ವಿಕೆಟ್‍ಗಳ ಗೆಲುವನ್ನು ಕಂಡಿತ್ತು.

5. 2022ರ ಜೂನ್ 10ರಂದು ನ್ಯೂಜಿಲೆಂಡ್‌ 299 ರನ್‌ಗಳ ಗುರಿ ನೀಡಿತ್ತು. ಇತ್ತ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 299 ರನ್ ಕಲೆಹಾಕಿ 5 ವಿಕೆಟ್‍ಗಳ ಜಯ ಕಂಡಿತ್ತು.

ಸಣ್ಣ ಮೊತ್ತವನ್ನೂ ಚೇಸ್ ಮಾಡದೇ ಮಂಕಾಗಿದ್ದ ಇಂಗ್ಲೆಂಡ್

ಸಣ್ಣ ಮೊತ್ತವನ್ನೂ ಚೇಸ್ ಮಾಡದೇ ಮಂಕಾಗಿದ್ದ ಇಂಗ್ಲೆಂಡ್

ಟೆಸ್ಟ್ ಕ್ರಿಕೆಟ್‍ನಲ್ಲಿ ಇಂಗ್ಲೆಂಡ್ ಅಲ್ಪ ಮೊತ್ತವನ್ನು ಚೇಸ್ ಮಾಡಲಾಗದೇ ಆಲ್ಔಟ್ ಆಗಿದ್ದ ಪಂದ್ಯಗಳ ಪಟ್ಟಿ

1. 1888ರಲ್ಲಿ ಆಸ್ಟ್ರೇಲಿಯಾ ನೀಡಿದ್ದ 124 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್ 62 ರನ್‌ಗಳಿಗೆ ಆಲ್ ಔಟ್ ಆಗಿತ್ತು.

2. 1994ರಲ್ಲಿ ವೆಸ್ಟ್ ಇಂಡೀಸ್ 194 ರನ್ ಗುರಿ ನೀಡಿದ್ದಾಗ ಇಂಗ್ಲೆಂಡ್ 46 ರನ್ ಕಲೆಹಾಕಿ ಆಲ್ ಔಟ್ ಆಗಿತ್ತು.

3. 1882ರಲ್ಲಿ ಆಸ್ಟ್ರೇಲಿಯಾ ನೀಡಿದ್ದ 85 ರನ್ ಗುರಿ ಬೆನ್ನತ್ತುವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್ 77 ರನ್‌ಗಳಿಗೆ ಆಲ್ ಔಟ್ ಆಗಿತ್ತು.

4. 1978ರಲ್ಲಿ ನ್ಯೂಜಿಲೆಂಡ್ ನೀಡಿದ್ದ 137 ರನ್ ಗುರಿ ಬೆನ್ನತ್ತುವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್ 64 ರನ್‌ಗಳಿಗೆ ಆಲ್ ಔಟ್ ಆಗಿತ್ತು


5. 1902ರಲ್ಲಿ ಆಸ್ಟ್ರೇಲಿಯಾ ನೀಡಿದ್ದ 124 ರನ್ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್ 120 ರನ್ ಕಲೆಹಾಕಿ ಸೋಲನ್ನುಂಡಿತ್ತು.


6. 1932ರಲ್ಲಿ ಆಸ್ಟ್ರೇಲಿಯಾ ನೀಡಿದ್ದ 251 ರನ್ ಕಲೆಹಾಕುವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್ 139 ರನ್ ಕಲೆಹಾಕಿ ಸೋತಿತ್ತು.

Kohli ಹಾಗು Bairstow ನಡುವೆ ಏನಿದು ಗಲಾಟೆ | *Cricket | OneIndia Kannada
ಮೊದಲಿಗಿಂತ ಇತ್ತೀಚಿನ ಇಂಗ್ಲೆಂಡ್ ತಂಡ ಟೆಸ್ಟ್ ಚೇಸಿಂಗ್‍ನಲ್ಲಿ ಬಲಿಷ್ಠ

ಮೊದಲಿಗಿಂತ ಇತ್ತೀಚಿನ ಇಂಗ್ಲೆಂಡ್ ತಂಡ ಟೆಸ್ಟ್ ಚೇಸಿಂಗ್‍ನಲ್ಲಿ ಬಲಿಷ್ಠ

ಮೇಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಇತ್ತೀಚೆಗಿನ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‍ನಲ್ಲಿ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಹೆಚ್ಚಾಗಿ ಚೇಸ್ ಮಾಡಿದೆ. ಅದರಲ್ಲಿಯೂ ಇಂಗ್ಲೆಂಡ್ 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು ಈ ವರ್ಷದ ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧ ಬೃಹತ್ ಮೊತ್ತವನ್ನು ಚೇಸ್ ಮಾಡಿದೆ.

Story first published: Monday, July 4, 2022, 13:35 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X