ವಿವಾಹ ವಿಚ್ಛೇದನ ಪಡೆದುಕೊಂಡ ಭಾರತೀಯ ಕ್ರಿಕೆಟಿಗರ ಪಟ್ಟಿ

Cricket ಲೋಕದಲ್ಲಿ ವಿಚ್ಚೇದನ ಪಡೆದ ತಾರೆಗಳು ಇವರೇ | Oneindia Kannada

ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳೆಂದ ಮೇಲೆ ಅವರವರ ವೈಯಕ್ತಿಕ ಜೀವನದಲ್ಲಿ ಮನಸ್ತಾಪಗಳು, ಒಳಜಗಳಗಳು ಮತ್ತು ವಿಚ್ಛೇದನಗಳು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವೆನಿಸುವಂತೆ ಆಗಿಬಿಟ್ಟಿದೆ.

ಈ ಹಿಂದೆ ಕ್ರಿಕೆಟ್ ಜಗತ್ತಿನ ಹಲವಾರು ಆಟಗಾರರು ತಮ್ಮ ಸಂಗಾತಿಗಳಿಗೆ ವಿಚ್ಛೇದನ ನೀಡುವ ಮೂಲಕ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದರು. ಹೌದು, ವಿಶ್ವ ಕ್ರಿಕೆಟ್‌ನ ಹಲವಾರು ಕ್ರಿಕೆಟಿಗರು ತಮ್ಮ ವೈವಾಹಿಕ ಜೀವನಕ್ಕೆ ವಿವಾಹ ವಿಚ್ಛೇದನದ ಮೂಲಕ ಮಂಗಳವನ್ನು ಹಾಡಿದ್ದಾರೆ. ಅದರಲ್ಲಿಯೂ ಭಾರತದ ಕೆಲ ಕ್ರಿಕೆಟಿಗರು ಕೂಡ ಈ ವಿವಾಹ ವಿಚ್ಛೇದನದ ಸುಳಿಯಿಂದ ಹೊರತಾಗಿಲ್ಲ. ಹೌದು, ಭಾರತದ ಹಲವಾರು ಕ್ರಿಕೆಟಿಗರು ವಿವಾಹವಾಗಿ ಯಾವುದೇ ವಿವಾದಗಳನ್ನು ಮಾಡಿಕೊಳ್ಳದೆ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿರುವಾಗಲೇ ದಿಢೀರನೆ ತಮ್ಮ ಸಂಗಾತಿಯಿಂದ ವಿಚ್ಛೇದನವನ್ನು ಪಡೆದುಕೊಂಡು ಸುದ್ದಿಯಾಗಿದ್ದರು.

'ಹಾಕಿ ರಾಷ್ಟ್ರೀಯ ಕ್ರೀಡೆ' ಎಂದು ಗುರುತಿಸುವ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್!'ಹಾಕಿ ರಾಷ್ಟ್ರೀಯ ಕ್ರೀಡೆ' ಎಂದು ಗುರುತಿಸುವ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್!

ಇದೀಗ ಹೊಸದಾಗಿ ಟೀಮ್ ಇಂಡಿಯಾ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಅವರ ಪತ್ನಿ ಆಯೆಷಾ ವೈವಾಹಿಕ ವಿಚ್ಛೇದನ ತೆಗೆದುಕೊಳ್ಳುವುದರ ಮೂಲಕ 8 ವರ್ಷಗಳ ವೈವಾಹಿಕ ಜೀವನಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ. ಶಿಖರ್ ಧವನ್ ಅವರ ಪತ್ನಿ ಆಯೇಷಾ ಸಾಮಾಜಿಕ ಜಾಲತಾಣದಲ್ಲಿ ತಾವು ವಿಚ್ಛೇದನ ಪಡೆದುಕೊಂಡಿರುವ ವಿಷಯವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. 2012ರ ಅಕ್ಟೋಬರ್ 30ರಂದು ಶಿಖರ್ ಧವನ್ ಆಯೆಷಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೂಲತಃ ಬಂಗಾಳದವರಾದ ಆಯೆಷಾ 8 ವರ್ಷವಿದ್ದಾಗ ಆಸ್ಟ್ರೇಲಿಯಾಗೆ ಸ್ಥಳಾಂತರವಾಗಿ ಜೀವನ ನಡೆಸುತ್ತಿದ್ದರು. ಕಿಕ್ ಬಾಕ್ಸರ್ ಆಗಿರುವ ಆಯೆಶಾ ಕ್ರೀಡಾ ತರಬೇತುದಾರರು ಕೂಡ ಹೌದು. 46ರ ಹರೆಯದ ಆಯೆಷಾ ಧವನ್ ಜೊತೆಗೆ ವಿವಾಹಕ್ಕೂ ಮುನ್ನ ಆಸ್ಟ್ರೇಲಿಯಾದ ಉದ್ಯಮಿಯೋರ್ವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ಅಲಿಯಾಹ್ ಹಾಗೂ ರಿಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ದಾಂಪತ್ಯ ಬೇರ್ಪಟ್ಟ ಬಳಿಕ ಆಯೆಶಾ ಧವನ್ ಅವರನ್ನು ವಿವಾಹವಾಗಿದ್ದರು. ಧವನ್ ಹಾಗೂ ಆಯೆಶಾ ದಂಪತಿಗೆ ಜೊರಾವರ್ ಎಂಬ ಓರ್ವ ಪುತ್ರನಿದ್ದಾನೆ.

ಸದ್ಯ ಧವನ್ ಮತ್ತು ಅವರ ಪತ್ನಿ ಆಯೇಷಾ ವಿಚ್ಛೇದನ ಪಡೆದುಕೊಂಡಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಶಿಖರ್ ಧವನ್ ಇದುವರೆಗೂ ಈ ಕುರಿತಾಗಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ.

ಓವಲ್ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಗೆ ಬೂಮ್ರಾ ಕೊಟ್ಟ ಈ ಉಪಾಯದಿಂದ ಬಿತ್ತು 2 ಪ್ರಮುಖ ವಿಕೆಟ್!ಓವಲ್ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಗೆ ಬೂಮ್ರಾ ಕೊಟ್ಟ ಈ ಉಪಾಯದಿಂದ ಬಿತ್ತು 2 ಪ್ರಮುಖ ವಿಕೆಟ್!

ಇನ್ನು ವಿವಾಹ ವಿಚ್ಛೇದನ ಪಡೆದುಕೊಂಡ ಭಾರತೀಯ ಕ್ರಿಕೆಟ್ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ..

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

ಭಾರತದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ವಂಜರಾ ಜೊತೆ ವಿವಾಹವಾಗಿ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ನಂತರ ತನ್ನ ಪತ್ನಿ ನಿಕಿತಾ ವಂಜರಾ ಟೀಮ್ ಇಂಡಿಯಾದ ತನ್ನ ಸಹ ಆಟಗಾರ ಮುರಳಿ ವಿಜಯ್ ಜೊತೆ ಸಂಪರ್ಕದಲ್ಲಿರುವುದನ್ನು ತಿಳಿದ ಬಳಿಕ ಆಕೆಗೆ ದಿನೇಶ್ ಕಾರ್ತಿಕ್ ವಿವಾಹ ವಿಚ್ಛೇದನವನ್ನು ನೀಡಿ ಬೇರ್ಪಟ್ಟರು. ಹೀಗೆ ನಿಕಿತಾ ವಂಜರಾ ಜೊತೆ ವಿವಾಹ ವಿಚ್ಛೇದನ ಪಡೆದುಕೊಂಡ ದಿನೇಶ್ ಕಾರ್ತಿಕ್ ನಂತರ ದೀಪಿಕಾ ಪಲ್ಲಿಕಲ್ ಜೊತೆ ವಿವಾಹ ಆಗಿದ್ದಾರೆ.

ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್

ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ತಮ್ಮ ಮೊದಲ ಪತ್ನಿ ನೌರೀನ್‌ಗೆ ವಿಚ್ಛೇದನವನ್ನು ನೀಡಿ 1996ರಲ್ಲಿ ಚಲನಚಿತ್ರ ನಟಿ ಸಂಗೀತಾ ಬಿಜಲಾನಿ ಜತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ನಂತರದ ದಿನಗಳಲ್ಲಿ ನಟಿ ಸಂಗೀತಾ ಬಿಜಲಾನಿಗೂ ಕೂಡ ಮೊಹಮ್ಮದ್ ಅಜರುದ್ದೀನ್ ವಿವಾಹ ವಿಚ್ಛೇದನವನ್ನು ನೀಡಿದರು.

ವಿನೋದ್ ಕಾಂಬ್ಳಿ

ವಿನೋದ್ ಕಾಂಬ್ಳಿ

ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ 1998ರಲ್ಲಿ ತನ್ನ ಬಾಲ್ಯದ ಗೆಳತಿ ನೊಯೆಲ್ಲಾ ಲೂಯಿಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಂತರದ ದಿನಗಳಲ್ಲಿ ನೊಯೆಲ್ಲಾ ಲೂಯಿಸ್‌ಗೆ ವಿಚ್ಛೇದನವನ್ನು ನೀಡಿದ ವಿನೋದ್ ಕಾಂಬ್ಳಿ ಮಾಜಿ ರೂಪದರ್ಶಿ ಆ್ಯಂಡ್ರಿಯಾ ಜೊತೆ ವಿವಾಹವಾದರು.

ಜಾವಗಲ್ ಶ್ರೀನಾಥ್

ಜಾವಗಲ್ ಶ್ರೀನಾಥ್

ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ತಮ್ಮ ಮೊದಲ ಪತ್ನಿ ಜ್ಯೋತ್ಸ್ನಾಗೆ ವಿಚ್ಛೇದನವನ್ನು ನೀಡಿ 2008ರಲ್ಲಿ ಪತ್ರಕರ್ತೆ ಮಾಧವಿ ಪತ್ರಾವಳಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 4 - October 18 2021, 07:30 PM
ಶ್ರೀಲಂಕಾ
Namibia
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 8, 2021, 11:35 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X