ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಯ 10 ಟಿ20ಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಭಾರತೀಯರ ಪಟ್ಟಿ; ಪಟ್ಟಿಯಲ್ಲಿಲ್ಲ ನಾಯಕ ರೋಹಿತ್!

List of Indians who score most runs in last 10 t20 innings; Rohit Sharma failed to beat Virat Kohli

ಸದ್ಯ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರತವಾಗಿದ್ದು ಸೀಮಿತ ಓವರ್ ಸರಣಿಗಳಲ್ಲಿ ಕೆರೆಬಿಯನ್ನರ ವಿರುದ್ಧ ಸೆಣಸಾಟ ನಡೆಸುತ್ತಿದೆ. ಮೊದಲಿಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್‌ವಾಷ್ ಸಾಧನೆ ಮಾಡಿದ ಟೀಮ್ ಇಂಡಿಯಾ ಸದ್ಯ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನೂ ಸಹ ವಶಪಡಿಸಿಕೊಳ್ಳುವತ್ತ ಕಣ್ಣಿಟ್ಟಿದೆ. ಇನ್ನು ಟೀಮ್ ಇಂಡಿಯಾ ಈ ವರ್ಷ ಹಲವಾರು ಟಿ ಟ್ವೆಂಟಿ ಸರಣಿಗಳನ್ನು ಆಡಿದ್ದು, ಇತ್ತೀಚೆಗೆ ಕನಿಷ್ಟವೆಂದರೂ ಐದು ಯುವ ಆಟಗಾರರು ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.

ಏಷ್ಯಾಕಪ್ 2022: ಭಾರತ ತಂಡ ಪ್ರಕಟಗೊಳ್ಳುವ ದಿನಾಂಕವಿದು; ರಾಹುಲ್ ಬದಲು ಈತ ಉಪನಾಯಕ!ಏಷ್ಯಾಕಪ್ 2022: ಭಾರತ ತಂಡ ಪ್ರಕಟಗೊಳ್ಳುವ ದಿನಾಂಕವಿದು; ರಾಹುಲ್ ಬದಲು ಈತ ಉಪನಾಯಕ!

ಇನ್ನು ಫಾರ್ಮ್ ಕಳೆದುಕೊಂಡಿದ್ದ ಹಲವಾರು ಅನುಭವಿ ಆಟಗಾರರೂ ಸಹ ಮತ್ತೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಸಾಲು ಸಾಲು ಉತ್ತಮ ಪ್ರದರ್ಶನಗಳನ್ನು ನೀಡಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿಂದೆ ಪ್ರಸ್ತುತ ಟೀಮ್ ಇಂಡಿಯಾ ಪರ ಯಾವ ಬ್ಯಾಟ್ಸ್‌ಮನ್ ಅತಿಹೆಚ್ಚು ರನ್ ಬಾರಿಸಿ ಮಿಂಚುತ್ತಿದ್ದಾರೆ ಎಂಬ ಪ್ರಶ್ನೆ ಎದುರಾದಾಗಲೆಲ್ಲಾ ಸಾಮಾನ್ಯವಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರ ಹೆಸರುಗಳು ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಆದರೆ, ಇದೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದು, ಟೀಮ್ ಇಂಡಿಯಾ ಪರ ಇತ್ತೀಚಿನ ದಿನಗಳಲ್ಲಿ ಈ ಮೂವರು ಸ್ಟಾರ್ ಆಟಗಾರರಿಗಿಂತ ಯುವ ಆಟಗಾರರೇ ಹೆಚ್ಚಿನ ರನ್ ಗಳಿಸಿ ಅಬ್ಬರಿಸುತ್ತಿದ್ದಾರೆ.

ಭಾರತದ ಪರ ಈ ದಾಖಲೆಯನ್ನು ಮಾಡಿರುವುದು ರೋಹಿತ್ ಶರ್ಮಾ ಬಿಟ್ಟರೆ ಸ್ಮೃತಿ ಮಂಧಾನ ಮಾತ್ರ!ಭಾರತದ ಪರ ಈ ದಾಖಲೆಯನ್ನು ಮಾಡಿರುವುದು ರೋಹಿತ್ ಶರ್ಮಾ ಬಿಟ್ಟರೆ ಸ್ಮೃತಿ ಮಂಧಾನ ಮಾತ್ರ!

ಹಾಗಿದ್ದರೆ, ಟೀಮ್ ಇಂಡಿಯಾ ಪರ ತಮ್ಮ ಕೊನೆಯ 10 ಟಿ ಟ್ವೆಂಟಿ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಕಲೆಹಾಕಿರುವ ಅಟಗಾರರ ಪಟ್ಟಿಯಲ್ಲಿ ಯಾವ ಆಟಗಾರರಿದ್ದಾರೆ ಎಂಬುದರು ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ತಮ್ಮ ಕೊನೆಯ 10 ಟಿ ಟ್ವೆಂಟಿ ಇನ್ನಿಂಗ್ಸ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರು

ತಮ್ಮ ಕೊನೆಯ 10 ಟಿ ಟ್ವೆಂಟಿ ಇನ್ನಿಂಗ್ಸ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರು

ಟೀಮ್ ಇಂಡಿಯಾ ಪರ ಕೊನೆಯ ತಮ್ಮ ಹತ್ತು ಟಿ ಟ್ವೆಂಟಿ ಇನ್ನಿಂಗ್ಸ್‌ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಟಾಪ್ 7 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ

1. ಟೀಂ ಇಂಡಿಯಾ ಪರ ಕೊನೆಯ ಹತ್ತು ಟಿ ಟ್ವೆಂಟಿ ಇನ್ನಿಂಗ್ಸ್‌ನಲ್ಲಿ 370 ರನ್ ಕಲೆಹಾಕಿರುವ ಸೂರ್ಯಕುಮಾರ್ ಯಾದವ್ ಈ ಅತಿಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

2. 348 ರನ್ ಕಲೆಹಾಕಿರುವ ಇಶಾನ್ ಕಿಶನ್ ದ್ವಿತೀಯ ಸ್ಥಾನದಲ್ಲಿದ್ದಾರೆ.

3. 307 ರನ್ ಕಲೆಹಾಕಿರುವ ಭಾರತ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ.

4. 288 ರನ್ ಕಲೆಹಾಕಿರುವ ಕೆಎಲ್ ರಾಹುಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

5. 274 ರನ್ ಬಾರಿಸಿರುವ ಶಿಖರ್ ಧವನ್ ಐದನೇ ಸ್ಥಾನದಲ್ಲಿದ್ದಾರೆ.

6. 249 ರನ್ ಬಾರಿಸಿರುವ ರವೀಂದ್ರ ಜಡೇಜಾ ಆರನೇ ಸ್ಥಾನದಲ್ಲಿದ್ದಾರೆ.

7. 229 ರನ್ ಬಾರಿಸಿರುವ ಶ್ರೇಯಸ್ ಐಯ್ಯರ್ ಏಳನೇ ಸ್ಥಾನದಲ್ಲಿದ್ದಾರೆ.

ಪಟ್ಟಿಯಲ್ಲಿಲ್ಲ ರೋಹಿತ್ ಶರ್ಮಾ

ಪಟ್ಟಿಯಲ್ಲಿಲ್ಲ ರೋಹಿತ್ ಶರ್ಮಾ

ಇನ್ನು ಈ ಪಟ್ಟಿಯಲ್ಲಿ ಕಾಣೆಯಾಗಿರುವ ಪ್ರಮುಖ ಹೆಸರು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರದ್ದು. ಹೌದು, ರೋಹಿತ್ ಶರ್ಮ ಕಳೆದ ಹತ್ತು ಟಿ ಟ್ವೆಂಟಿ ಇನ್ನಿಂಗ್ಸ್‌ನಲ್ಲಿ ಈ ಆಟಗಾರರು ಕಲೆಹಾಕಿರುವಷ್ಟು ರನ್ ಕಲೆಹಾಕದೇ ಮಂಕಾಗಿದ್ದಾರೆ. ಹಿಟ್‌ಮ್ಯಾನ್ ಎಂದೇ ಕರೆಸಿಕೊಳ್ಳುವ ರೋಹಿತ್ ಬ್ಯಾಟಿಂಗ್‌ನಲ್ಲಿ ಇಷ್ಟರ ಮಟ್ಟಿಗೆ ಮಂಕಾಗಲು ಕಾರಣ ನಾಯಕತ್ವದ ಒತ್ತಡವಾ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡದೇ ಇರದು.

ಕಳಪೆ ಫಾರ್ಮ್ ಎಂದರೂ ಪಟ್ಟಿಯಲ್ಲಿ ಕೊಹ್ಲಿ

ಕಳಪೆ ಫಾರ್ಮ್ ಎಂದರೂ ಪಟ್ಟಿಯಲ್ಲಿ ಕೊಹ್ಲಿ

ಇನ್ನು ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಬ್ಯಾಟಿಂಗ್ ಆಡುತ್ತಿಲ್ಲ, ಅವರು ಕಳಪೆ ಫಾರ್ಮ್ ಹೊಂದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ವಿರಾಟ್ ಕೊಹ್ಲಿ ತಮ್ಮ ಕಳಪೆ ಫಾರ್ಮ್‌ನಲ್ಲಿ ಕಲೆಹಾಕಿರುವ ರನ್ ಕೂಡ ತಂಡದಲ್ಲಿ ಫಾರ್ಮ್‌ನಲ್ಲಿರುವ ಆಟಗಾರರಿಗಿಂತ ಹೆಚ್ಚಿರುವುದು ಗಮನಾರ್ಹ. ಇದೇ ಕಾರಣಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್ ಬರುತ್ತಿದೆ, ಶತಕ ಬರುತ್ತಿಲ್ಲ ಅಷ್ಟೇ ಇದೇನು ಕಳಪೆ ಫಾರ್ಮ್ ಅಲ್ಲ ಎಂಬ ಹೇಳಿಕೆ ನೀಡಿದ್ದರೇನೋ..

Story first published: Thursday, August 4, 2022, 18:59 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X