ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ವಿರುದ್ಧ ಕಡಿಮೆ ಟೋಟಲ್ ಬಾರಿಸಿರುವ ತಂಡಗಳ ಪಟ್ಟಿ

List of Lowest totals by teams against Bangladesh in T20I

ಧಾಕಾ: ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್‌ 1) ನಡೆದ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲನೇ ಟಿ20ಐ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ 7 ವಿಕೆಟ್‌ಗಳ ಹೀನಾಯ ಸೋಲನುಭವಿಸಿದೆ. ಮುಸ್ತಫಿಝುರ್ ರಹ್ಮಾನ್, ನಸುಮ್ ಅಹ್ಮದ್ ಮತ್ತು ಮೊಹಮ್ಮದ್ ಸೈಫುದ್ದೀನ್ ಮಾರಕ ಬೌಲಿಂಗ್‌ನೊಂದಿಗೆ ಐದು ಪಂದ್ಯಗಳ ಈ ಟಿ20ಐ ಸರಣಿಯಲ್ಲಿ ಆತಿಥೇಯ ಬಾಂಗ್ಲಾ 1-0ಯ ಮುನ್ನಡೆ ಸಾಧಿಸಿದೆ.

 ಅಫ್ಘಾನಿಸ್ತಾನ ತಂಡಕ್ಕೆ ಟೆಸ್ಟ್‌ ಕ್ರಿಕೆಟ್‌ ಆಡಲು ಅನುಮತಿ ನೀಡಿದ ತಾಲಿಬಾನ್ ಅಫ್ಘಾನಿಸ್ತಾನ ತಂಡಕ್ಕೆ ಟೆಸ್ಟ್‌ ಕ್ರಿಕೆಟ್‌ ಆಡಲು ಅನುಮತಿ ನೀಡಿದ ತಾಲಿಬಾನ್

ಈ ಪಂದ್ಯದ ಸೋಲಿನೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಕೆಟ್ಟ ದಾಖಲೆಯೊಂದಕ್ಕೂ ಕಾರಣವಾಗಿದೆ. ಬಾಂಗ್ಲಾದೇಶ ವಿರುದ್ಧ ಟಿ20ಐ ಇನ್ನಿಂಗ್ಸ್‌ ಒಂದರಲ್ಲಿ ಅತೀ ಕಡಿಮೆ ರನ್‌ಗೆ ಆಲ್ ಔಟ್ ಆದ ಬೇಡದ ದಾಖಲೆ ಕಿವೀಸ್ ಹೆಸರಿನಲ್ಲಿ ಸೇರ್ಪಡೆಯಾಗಿದೆ. ಮೊದಲನೇ ಟಿ20ಐನಲ್ಲಿ 60 ರನ್‌ಗೆ ಆಲ್‌ ಔಟ್ ಆಗುವ ಮೂಲಕ ಕಿವೀಸ್ ಈ ದಾಖಲೆ ನಿರ್ಮಿಸಿದೆ.

60 ರನ್‌ಗೆ ಆಲ್ ಔಟ್ ಆದ ನ್ಯೂಜಿಲೆಂಡ್
ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲೆಂಡ್ ಕೆಟ್ಟ ಬ್ಯಾಟಿಂಗ್‌ ಪ್ರದರ್ಶಿಸಿತು. ರಾಚಿನ್ ರವೀಂದ್ರ 0, ಟಾಮ್ ಬ್ಲಂಡೆಲ್ 2, ವಿಲ್ ಯಂಗ್ 5, ಕಾಲಿನ್ ಡಿ ಗ್ರಾಂಡ್‌ಹೋಮ್ 1, ಟಾಮ್ ಲಾಥಮ್ 18, ಹೆನ್ರಿ ನಿಕೋಲ್ಸ್ 18, ಕೋಲ್ ಮೆಕ್ಕಾಂಚಿ 0, ಡೌಗ್ ಬ್ರೇಸ್‌ವೆಲ್ 5, ಅಜಾಜ್ ಪಟೇಲ್ 3, ಬ್ಲೇರ್ ಟಿಕ್ನರ್ 3, ಜೇಕಬ್ ಡಫಿ 3 ರನ್‌ನೊಂದಿಗೆ 16.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 60 ರನ್ ಗಳಿಸಿತ್ತು. ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಮೆಹಿದಿ ಹಸನ್ 1, ನಸುಮ್ ಅಹ್ಮದ್ 2, ಶಕೀಬ್ ಅಲ್ ಹಸನ್ 2, ಮುಸ್ತಪಿಝುರ್ ರಹ್ಮನ್ 3, ಮೊಹಮ್ಮದ್ ಸೈಫುದ್ದೀನ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್ ಬಳಿಕ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಭಾರತ vs ಇಂಗ್ಲೆಂಡ್ 4ನೇ ಟೆಸ್ಟ್ ಬಳಿಕ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಸುಲಭವಾಗಿ ಪಂದ್ಯ ಗೆದ್ದಿತು. ಮೊಹಮ್ಮದ್ ನೈಮ್ 1, ಲಿಟನ್ ದಾಸ್ 1, ಶಕೀಬ್ ಅಲ್ ಹಸನ್ 25, ಮುಶ್ಫಿಕರ್ ರಹೀಮ್ 16, ಮಹ್ಮದುಲ್ಲಾ 14 ರನ್‌ನೊಂದಿಗೆ 15 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 62 ರನ್ ಬಾರಿಸಿ ಗೆಲುವನ್ನಾಚರಿಸಿತು. ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಅಝಾಝ್ ಪಟೇಲ್ 1, ಕೋಲ್ ಮೆಕಾಂಚಿ 1 ಮತ್ತು ರಚಿನ್ ರವೀಂದ್ರ 1 ವಿಕೆಟ್‌ ಪಡೆದರು.

ಬಾಂಗ್ಲಾದೇಶ ವಿರುದ್ಧ ತಂಡಗಳು ಅತೀ ಕಡಿಮೆ ಟೋಟಲ್ ಬಾರಿಸಿರುವ ದಾಖಲೆಗಳು
* 60 ರನ್, ನ್ಯೂಜಿಲೆಂಡ್, ಮೀರ್‌ಪುರ್, 2021*
* 62 ರನ್, ಆಸ್ಟ್ರೇಲಿಯಾ, ಮೀರ್‌ಪುರ್, 2021*
* 72 ರನ್, ಅಫ್ಘಾನಿಸ್ತಾನ, ಮೀರ್‌ಪುರ್, 2014
* 82 ರನ್, ಯುನೈಟೆಡ್ ಅರಬ್ ಎಮಿರೇಟ್ಸ್, 2016

ಆರ್ ಅಶ್ವಿನ್ ಕಣಕ್ಕಿಳಿಯುವ ಸಮಯ ಬಂದಿದೆ ಎಂದು ಸಂದೇಶ ನೀಡಿದ ದಿನೇಶ್ ಕಾರ್ತಿಕ್ಆರ್ ಅಶ್ವಿನ್ ಕಣಕ್ಕಿಳಿಯುವ ಸಮಯ ಬಂದಿದೆ ಎಂದು ಸಂದೇಶ ನೀಡಿದ ದಿನೇಶ್ ಕಾರ್ತಿಕ್

ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ XI: ರಚಿನ್ ರವೀಂದ್ರ, ಟಾಮ್ ಬ್ಲಂಡೆಲ್, ವಿಲ್ ಯಂಗ್, ಕಾಲಿನ್ ಡಿ ಗ್ರಾಂಡ್‌ಹೋಮ್, ಟಾಮ್ ಲಾಥಮ್ (ನಾಯಕ ಮತ್ತು ವಿಕೆಟ್ ಕೀಪರ್), ಹೆನ್ರಿ ನಿಕೋಲ್ಸ್, ಕೋಲ್ ಮೆಕ್ಕಾಂಚಿ, ಡೌಗ್ ಬ್ರೇಸ್‌ವೆಲ್, ಅಜಾಜ್ ಪಟೇಲ್, ಬ್ಲೇರ್ ಟಿಕ್ನರ್, ಜೇಕಬ್ ಡಫಿ.

IND vs ENG ನಾಲ್ಕನೇ ಪಂದ್ಯಕ್ಕೆ ಈ ಆಟಗಾರರು ಬೇಕೇಬೇಕು ! | Oneindia Kannada

ಬಾಂಗ್ಲಾದೇಶ ತಂಡದ ಪ್ಲೇಯಿಂಗ್ XI: ಮೊಹಮ್ಮದ್ ನೈಮ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹ್ಮದುಲ್ಲಾ (ನಾಯಕ), ಅಫೀಫ್ ಹೊಸೇನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಮುಸ್ತಫಿಜುರ್ ರಹಮಾನ್, ನಸುಮ್ ಅಹ್ಮದ್

Story first published: Thursday, September 2, 2021, 9:50 [IST]
Other articles published on Sep 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X