ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್‌ನಲ್ಲಿ ಆಡುವ ಐಪಿಎಲ್ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ

List of Players who are part of IPL playing in CPL

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ ಬಗ್ಗೆ ಕುತೂಹಲ ಇರಿಸಿಕೊಂಡವರೆಲ್ಲ ಒಮ್ಮೆ ಕೆರಿಬಿಯನ್ ಲೀಗ್‌ನತ್ತವೂ ಕಣ್ಣಾಯಿಸಲೇಬೇಕು. ಯಾಕೆಂದರೆ ಐಪಿಎಲ್‌ನ ಬೇರೆ ಬೇರೆ ಫ್ರಾಂಚೈಸಿಗಳಲ್ಲಿ ಆಡುವ ಒಂದಿಷ್ಟು ವಿದೇಶಿ ಆಟಗಾರರು ಸಿಪಿಎಲ್‌ನಲ್ಲೂ ಆಡುತ್ತಿದ್ದಾರೆ. ಆರು ತಂಡಗಳ ನಡುವೆ ನಡೆಯಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ 18ರಿಂದ ಟ್ರಿನಿಡಾಡ್ ಮತ್ತು ಟೊಬಾಗೊ ತಾಣಗಳಲ್ಲಿ ನಡೆಯಲಿದೆ.

ಧೋನಿ ಇನ್ನೆಷ್ಟು ಕಾಲ ಐಪಿಎಲ್‌ನಲ್ಲಿ ಆಡ್ತಾರೆ? ಇಲ್ಲಿದೆ ಕುತೂಹಲಕಾರಿ ಉತ್ತರ!ಧೋನಿ ಇನ್ನೆಷ್ಟು ಕಾಲ ಐಪಿಎಲ್‌ನಲ್ಲಿ ಆಡ್ತಾರೆ? ಇಲ್ಲಿದೆ ಕುತೂಹಲಕಾರಿ ಉತ್ತರ!

ಕೊರೊನಾವೈರಸ್ ಭೀತಿ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಟಿ20 ಟೂರ್ನಿಯಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಗುರುತಿಸಿಕೊಳ್ಳಲಿದೆ. ವಿಶೇಷವೆಂದರೆ ಸಿಪಿಎಲ್‌ನಲ್ಲಿ ಒಬ್ಬ ಭಾರತೀಯ ಆಟಗಾರನೂ ಆಡುತ್ತಿದ್ದಾರೆ.

ಧೋನಿ ಭವಿಷ್ಯದ ಯೋಜನೆ ಹಂಚಿಕೊಂಡ ಆಪ್ತ ಗೆಳೆಯ ಅರುಣ್ ಪಾಂಡೆಧೋನಿ ಭವಿಷ್ಯದ ಯೋಜನೆ ಹಂಚಿಕೊಂಡ ಆಪ್ತ ಗೆಳೆಯ ಅರುಣ್ ಪಾಂಡೆ

ಸಿಪಿಎಲ್‌ನಲ್ಲಿ ಆಡುವ ಐಪಿಎಲ್ ಆಟಗಾರರ ಪಟ್ಟಿಯ ಜೊತೆಗೆ ಸಿಪಿಎಲ್‌ನ ಇನ್ನೊಂದಿಷ್ಟು ಮಾಹಿತಿಯಿದೆ.

ಸೆಪ್ಟೆಂಬರ್ 10ರಂದು ಫೈನಲ್‌

ಸೆಪ್ಟೆಂಬರ್ 10ರಂದು ಫೈನಲ್‌

ಆಗಸ್ಟ್ 18ರಂದು ಆರಂಭಗೊಳ್ಳುವ ಸಿಪಿಎಲ್ ಸೆಪ್ಟೆಂಬರ್ 10ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಟ್ರಿನ್‌ಬಾಗೋ ನೈಟ್ ರೈಡರ್ಸ್ ಮತ್ತು ಗಯಾನಾ ಅಮೇಝಾನ್ ವಾರಿಯರ್ಸ್ ತಂಡಗಳು ಕಾದಾಡಲಿವೆ. ಆರಂಭಿಕ ಪಂದ್ಯ ಟ್ರನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ 7.30 pmಗೆ ಆರಂಭವಾಗಲಿದೆ.

ಒಬ್ಬ ಭಾರತೀಯ ಆಟಗಾರ

ಒಬ್ಬ ಭಾರತೀಯ ಆಟಗಾರ

ಸಿಪಿಎಲ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್, ಜಮೈಕಾ ತಲೈವಾಸ್, ಸೇಂಟ್ ಲೂಸಿಯಾ ಝೌಕ್ಸ್, ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್‌, ಬಾರ್ಬೊಡೋಸ್ ಟ್ರಿಡೆಂಟ್ಸ್‌ ಮತ್ತು ಗಯಾನಾ ಅಮೇಝಾನ್ ವಾರಿಯರ್ಸ್ ತಂಡಗಳು ಸೆಣಸಾಡಲಿವೆ. ಇದರಲ್ಲಿ ಒಬ್ಬ ಭಾರತೀಯ ಆಟಗಾರರೂ ಇದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ 48ರ ಹರೆಯದಪ್ರವೀಣ್ ತಾಂಬೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಸಿಪಿಎಲ್‌ನಲ್ಲಿ ಆಡಲಿದ್ದಾರೆ.

ಟ್ರನ್‌ಬಾಗೊ ನೈಟ್ ರೈಡರ್ಸ್ ಯಶಸ್ವಿ ತಂಡ

ಟ್ರನ್‌ಬಾಗೊ ನೈಟ್ ರೈಡರ್ಸ್ ಯಶಸ್ವಿ ತಂಡ

33 ಪಂದ್ಯಗಳನ್ನೊಳಗೊಂಡ ಸಿಪಿಎಲ್‌ನಲ್ಲಿ ಟ್ರನ್‌ಬಾಗೊ ನೈಟ್ ರೈಡರ್ಸ್ ಯಶಸ್ವಿ ತಂಡ ಎನಿಸಿಕೊಂಡಿದೆ. ಟ್ರನ್‌ಬಾಗೊ ನೈಟ್ ರೈಡರ್ಸ್ 3 ಬಾರಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಟೂರ್ನಿಯಲ್ಲಿ ಅತೀ ಹೆಚ್ಚು ರನ್ ದಾಖಲೆ ಕ್ರಿಸ್ ಗೇಲ್ (2354) ಹೆಸರಿನಲ್ಲಿದ್ದರೆ, ಹೆಚ್ಚು ವಿಕೆಟ್ ದಾಖಲೆ ಡ್ವೇನ್ ಬ್ರಾವೋ (97 ವಿಕೆಟ್) ಹೆಸರಿನಲ್ಲಿದೆ.

ಸಿಪಿಎಲ್‌ನಲ್ಲಿ ಆಡುವ ಐಪಿಎಲ್ ಆಟಗಾರರು

ಸಿಪಿಎಲ್‌ನಲ್ಲಿ ಆಡುವ ಐಪಿಎಲ್ ಆಟಗಾರರು

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): ಆ್ಯಂಡ್ರೆ ರಸ್ಸೆಲ್, ಕ್ರಿಸ್ ಗ್ರೀನ್, ಸುನಿಲ್ ನರೈನ್.
ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ): ಸಂದೀಪ್ ಲಮಿಚೇನ್, ಶಿಮ್ರಾನ್ ಹೆಟ್ಮೈಯರ್, ಕೀಮೊ ಪಾಲ್.
ರಾಜಸ್ಥಾನ್ ರಾಯಲ್ಸ್ (ಆರ್.ಆರ್): ಓಶೇನ್ ಥಾಮಸ್.
ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್): ಮೊಹಮ್ಮದ್ ನಬಿ, ರಶೀದ್ ಖಾನ್.
ಕಿಂಗ್ಸ್ ಇಲೆವೆನ್ ಪಂಜಾಬ್ (ಕೆXIಪಿ): ನಿಕೋಲಸ್ ಪೂರನ್, ಶೆಲ್ಡನ್ ಕಾಟ್ರೆಲ್.
ಮುಂಬೈ ಇಂಡಿಯನ್ಸ್ (ಎಂಐ): ಶೆರ್ಫೇನ್ ರುದರ್ಫೋರ್ಡ್, ಕ್ರಿಸ್ ಲಿನ್, ಕೀರನ್ ಪೊಲಾರ್ಡ್.
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) - ಇಮ್ರಾನ್ ತಾಹಿರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ.

Story first published: Tuesday, August 18, 2020, 20:02 [IST]
Other articles published on Aug 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X