ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್, ಜಯಸೂರ್ಯ ಅಲ್ಲ, ಅತಿಹೆಚ್ಚು ವರ್ಷ ಏಕದಿನ ಕ್ರಿಕೆಟ್ ಆಡಿದ ದಾಖಲೆ ಇರುವುದು ಇವರ ಹೆಸರಲ್ಲಿ!

List of players who have played ODI cricket for most number of years

ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿ ಸ್ಟಾರ್ ಕ್ರಿಕೆಟರ್ ಆಗಿ ಮಿಂಚಬೇಕು ಎಂಬುದು ಕ್ರಿಕೆಟ್ ಅನ್ನು ವೃತ್ತಿಜೀವನವಾಗಿ ಆಯ್ದುಕೊಳ್ಳುವ ಪ್ರತಿಯೊಬ್ಬರ ಕನಸಾಗಿರುತ್ತದೆ. ಹೀಗೆ ಕ್ರಿಕೆಟ್ ಲೋಕಕ್ಕೆ ಪ್ರವೇಶಿಸಿ ಯಶಸ್ವಿಯಾಗಿ ಸ್ಟಾರ್ ಕ್ರಿಕೆಟಗರಾಗಿ ಮೆರೆದ ಹಲವಾರು ಆಟಗಾರರ ಉದಾಹರಣೆಗಳು ನಮ್ಮ ಮುಂದಿವೆ. ಹಾಗೆಂದ ಮಾತ್ರಕ್ಕೆ ಕ್ರಿಕೆಟ್ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಬ್ಬರೂ ಕೂಡ ಯಶಸ್ಸು ಕಾಣುತ್ತಾರೆ ಎಂದಲ್ಲ.

IND vs SA: ಆತನನ್ನು ಬದಲಿಸದಿದ್ದರೆ ಟೀಮ್ ಇಂಡಿಯಾ ಸರಣಿಯನ್ನೇ ಸೋಲುತ್ತೆ ಎಂದ ನೆಟ್ಟಿಗರು!IND vs SA: ಆತನನ್ನು ಬದಲಿಸದಿದ್ದರೆ ಟೀಮ್ ಇಂಡಿಯಾ ಸರಣಿಯನ್ನೇ ಸೋಲುತ್ತೆ ಎಂದ ನೆಟ್ಟಿಗರು!

ಹಲವಾರು ಪ್ರತಿಭೆಗಳು ಸರಿಯಾದ ಅವಕಾಶ ಸಿಗದೇ ಮೂಲೆಗುಂಪಾಗಿದ್ದರೆ, ಇನ್ನೂ ಕೆಲ ಆಟಗಾರರು ಎಷ್ಟೇ ಅವಕಾಶ ಸಿಕ್ಕರೂ ಸಹ ಉತ್ತಮ ಪ್ರದರ್ಶನ ನೀಡಲಾಗದೇ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಬಿದ್ದಿದ್ದಾರೆ. ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುವ ಅವಕಾಶ ಸಿಕ್ಕರೂ ಸಹ ಹೆಚ್ಚು ದಿನಗಳ ಕಾಲ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕೆಂದರೆ ಆ ಆಟಗಾರ ಸತತವಾಗಿ ಉತ್ತಮ ಫಾರ್ಮ್ ಕಾಪಾಡಿಕೊಳ್ಳಬೇಕು, ಹಾಗಿದ್ದಾಗ ಮಾತ್ರ ಆತ ಸತತವಾಗಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶ ಪಡೆಯಲು ಸಾಧ್ಯ.

ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ಬಾರಿ 100 ರನ್‌ಗಳ ಜತೆಯಾಟವಾಡಿರುವ ಜೋಡಿ ಯಾವುದು? ಇಲ್ಲಿದೆ ಪಟ್ಟಿಟಿ20 ಪಂದ್ಯಗಳಲ್ಲಿ ಅತಿಹೆಚ್ಚು ಬಾರಿ 100 ರನ್‌ಗಳ ಜತೆಯಾಟವಾಡಿರುವ ಜೋಡಿ ಯಾವುದು? ಇಲ್ಲಿದೆ ಪಟ್ಟಿ

ಹೀಗೆ ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ದಿಗ್ಗಜ ಕ್ರಿಕೆಟಿಗರು ವರ್ಷಾನುಗಟ್ಟಲೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅದರಲ್ಲಿಯೂ ಕೆಲ ಕ್ರಿಕೆಟಿಗರು ಅತಿ ಹೆಚ್ಚು ವರ್ಷಗಳ ಕಾಲ ಏಕದಿನ ಕ್ರಿಕೆಟ್‍ನಲ್ಲಿ ಸಕ್ರಿಯರಾಗಿ ಉಳಿದು ದೊಡ್ಡ ಮೈಲಿಗಲ್ಲು ನೆಟ್ಟಿದ್ದಾರೆ. ಹೀಗೆ ಹೆಚ್ಚು ವರ್ಷಗಳ ಕಾಲ ಏಕದಿನ ಕ್ರಿಕೆಟ್ ಆಡಿದ ಆಟಗಾರರ ಪಟ್ಟಿ ಹೇಗಿದೆ ಮತ್ತು ಈ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವವರು ಯಾರು ಎಂಬುದರ ಕುರಿತಾದ ವಿವರ ಮುಂದೆ ಇದೆ ಓದಿ.

ಅತಿ ಹೆಚ್ಚು ವರ್ಷ ಏಕದಿನ ಕ್ರಿಕೆಟ್ ಆಡಿದವರ ಪಟ್ಟಿ

ಅತಿ ಹೆಚ್ಚು ವರ್ಷ ಏಕದಿನ ಕ್ರಿಕೆಟ್ ಆಡಿದವರ ಪಟ್ಟಿ

ಅತಿ ಹೆಚ್ಚು ವರ್ಷಗಳ ಕಾಲ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಸಕ್ರಿಯರಾಗಿದ್ದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ಮಿಥಾಲಿ ರಾಜ್, ಟೀಮ್ ಇಂಡಿಯಾ: 22 ವರ್ಷ 274 ದಿನಗಳು

2. ಸಚಿನ್ ತೆಂಡೂಲ್ಕರ್ - ಟೀಮ್ ಇಂಡಿಯಾ - 22 ವರ್ಷ 91 ದಿನಗಳು

3. ಸನತ್ ಜಯಸೂರ್ಯ - ಶ್ರೀಲಂಕಾ - 21 ವರ್ಷ 184 ದಿನಗಳು

4. ಜಾವೇದ್ ಮಿಯಾಂದಾದ್ - ಪಾಕಿಸ್ತಾನ - 20 ವರ್ಷ 272 ದಿನಗಳು

ಮಿಥಾಲಿ ರಾಜ್ ಹೆಸರಲ್ಲಿದೆ ದಾಖಲೆ

ಮಿಥಾಲಿ ರಾಜ್ ಹೆಸರಲ್ಲಿದೆ ದಾಖಲೆ

ಇತ್ತೀಚಿಗಷ್ಟೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ ಭಾರತದ ಮಿಥಾಲಿ ರಾಜ್ ಅತಿ ಹೆಚ್ಚು ದಿನಗಳ ಕಾಲ ಏಕದಿನ ಕ್ರಿಕೆಟ್‍ನಲ್ಲಿ ಸಕ್ರಿಯರಾಗಿದ್ದ ಪ್ಲೇಯರ್ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. 1999ರಿಂದ 2022ರವರೆಗೆ ಸುದೀರ್ಘವಾಗಿ ಏಕದಿನ ಕ್ರಿಕೆಟ್ ಆಡಿರುವ ಮಿಥಾಲಿ ರಾಜ್ ಒಟ್ಟು 22 ವರ್ಷ 274 ದಿನಗಳ ಕಾಲ ಸಕ್ರಿಯರಾಗಿದ್ದ ದಾಖಲೆ ಮಾಡಿದ್ದಾರೆ.

ಅತಿ ಹೆಚ್ಚು ಪಂದ್ಯ ಆಡಿದವರಲ್ಲಿ ಸಚಿನ್ ನಂಬರ್ 1

ಅತಿ ಹೆಚ್ಚು ಪಂದ್ಯ ಆಡಿದವರಲ್ಲಿ ಸಚಿನ್ ನಂಬರ್ 1

ಅತಿ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಟಾಪ್ 5 ಆಟಗಾರರ ಪಟ್ಟಿ ಕೆಳಕಂಡಂತಿದೆ
1. ಸಚಿನ್ ತೆಂಡೂಲ್ಕರ್ - 463 ಪಂದ್ಯಗಳು

2. ಜಯವರ್ಧನೆ - 448 ಪಂದ್ಯಗಳು

3. ಸನತ್ ಜಯಸೂರ್ಯ - 445 ಪಂದ್ಯಗಳು

4. ಕುಮಾರ್ ಸಂಗಕ್ಕಾರ - 404 ಪಂದ್ಯಗಳು

5. ಶಾಹೀದ್ ಅಫ್ರಿದಿ - 398 ಪಂದ್ಯಗಳು

Story first published: Saturday, June 11, 2022, 20:08 [IST]
Other articles published on Jun 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X