ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿ ಹೆಚ್ಚು ಬಾರಿ 90+ ರನ್ ಕಲೆಹಾಕಿ ಶತಕ ಕೈತಪ್ಪಿಸಿಕೊಂಡಿರುವ ಭಾರತೀಯ ಕ್ರಿಕೆಟಿಗರ ಪಟ್ಟಿ

List of Players with most nervous nineties in international cricket

ಪ್ರಸ್ತುತ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತೊಡಗಿಕೊಂಡಿದ್ದು, ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದೆ.

2023ರಲ್ಲಿ ವಿಶ್ವಕಪ್‌ ಇರುವ ಕಾರಣ ಈತ ತಂಡದಲ್ಲಿದ್ದಾನೆ ನಂತರ ನಿವೃತ್ತಿ ಹೇಳುತ್ತಾನೆ ಎಂದ ರವಿಶಾಸ್ತ್ರಿ2023ರಲ್ಲಿ ವಿಶ್ವಕಪ್‌ ಇರುವ ಕಾರಣ ಈತ ತಂಡದಲ್ಲಿದ್ದಾನೆ ನಂತರ ನಿವೃತ್ತಿ ಹೇಳುತ್ತಾನೆ ಎಂದ ರವಿಶಾಸ್ತ್ರಿ

ಇತ್ತಂಡಗಳ ನಡುವೆ ಮೊದಲಿಗೆ ಏಕದಿನ ಸರಣಿ ನಡೆಯುತ್ತಿದ್ದು, ಟೀಮ್ ಇಂಡಿಯಾದ ಪೂರ್ಣಾವಧಿ ನಾಯಕ ರೋಹಿತ್ ಶರ್ಮಾ ವಿಶ್ರಾಂತಿಯ ಕಾರಣದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದು, ಶಿಖರ್ ಧವನ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜುಲೈ 22ರ ಶುಕ್ರವಾರದಂದು ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 3 ರನ್‌ಗಳ ಜಯ ಸಾಧಿಸುವುದರ ಮೂಲಕ ಈ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

'ಟೀಮ್ ಇಂಡಿಯಾಗೆ ಈ 2 ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ'; ಪಣತೊಟ್ಟ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ!'ಟೀಮ್ ಇಂಡಿಯಾಗೆ ಈ 2 ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ'; ಪಣತೊಟ್ಟ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ!

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಶಿಖರ್ ಧವನ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 99 ಎಸೆತಗಳಲ್ಲಿ 97 ರನ್ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಶಿಖರ್ ಧವನ್ ಕೇವಲ 3 ರನ್‌ಗಳಿಂದ ಶತಕ ವಂಚಿತರಾಗುವುದರ ಮೂಲಕ ತಮ್ಮ 18ನೇ ಏಕದಿನ ಶತಕ ಬಾರಿಸುವುದನ್ನು ಕೈ ತಪ್ಪಿಸಿಕೊಂಡರು. ಹೀಗೆ ಏಕದಿನ ಕ್ರಿಕೆಟ್ ಮಾದರಿಯಲ್ಲಿ 90ಕ್ಕೂ ಹೆಚ್ಚು ರನ್ ಗಳಿಸಿ ಶಿಖರ್ ಧವನ್ ಶತಕ ವಂಚಿತರಾದದ್ದು ಇದು ಆರನೇ ಬಾರಿಗೆ. ಹಾಗಿದ್ದರೆ ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೂ ಟೀಮ್ ಇಂಡಿಯಾದ ಯಾವ ಆಟಗಾರರು ಎಷ್ಟು ಬಾರಿ 90ಕ್ಕೂ ಹೆಚ್ಚು ರನ್ ಕಲೆಹಾಕಿ ಶತಕವಂಚಿತರಾಗಿದ್ದಾರೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ ಓದಿ.

ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಬಾರಿ 90+ ರನ್ ಗಳಿಸಿ ಶತಕ ವಂಚಿತರಾದವರು

ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಬಾರಿ 90+ ರನ್ ಗಳಿಸಿ ಶತಕ ವಂಚಿತರಾದವರು

ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಬಾರಿ 90ಕ್ಕೂ ಹೆಚ್ಚು ರನ್ ಬಾರಿಸಿ ಔಟ್ ಆಗಿ ಶತಕ ವಂಚಿತರಾಗಿರುವ ಭಾರತೀಯ ಕ್ರಿಕೆಟಿಗರ ಪಟ್ಟಿ:

1. ಸಚಿನ್ ತೆಂಡೂಲ್ಕರ್ - 18 ಬಾರಿ

2. ಶಿಖರ್ ಧವನ್ - 6 ಬಾರಿ

3. ಸೌರವ್ ಗಂಗೂಲಿ - 6 ಬಾರಿ

4. ವಿರಾಟ್ ಕೊಹ್ಲಿ - 5 ಬಾರಿ

5. ವಿರೇಂದ್ರ ಸೆಹ್ವಾಗ್ - 5 ಬಾರಿ

ಎಲ್ಲಾ ಮಾದರಿಯ ಕ್ರಿಕೆಟ್ ಸೇರಿ ಹೆಚ್ಚು ಬಾರಿ 90+ ರನ್ ಗಳಿಸಿ ಶತಕ ವಂಚಿತರಾದವರು

ಎಲ್ಲಾ ಮಾದರಿಯ ಕ್ರಿಕೆಟ್ ಸೇರಿ ಹೆಚ್ಚು ಬಾರಿ 90+ ರನ್ ಗಳಿಸಿ ಶತಕ ವಂಚಿತರಾದವರು

ಎಲ್ಲಾ ಮಾದರಿಯ ಕ್ರಿಕೆಟ್ ಸೇರಿದಂತೆ ಅತಿ ಹೆಚ್ಚು ಬಾರಿ 90ಕ್ಕೂ ಹೆಚ್ಚು ರನ್ ಬಾರಿಸಿ ಔಟ್ ಆಗಿ ಶತಕ ವಂಚಿತರಾಗಿರುವ ಭಾರತೀಯ ಕ್ರಿಕೆಟಿಗರ ಪಟ್ಟಿ:

1. ಸಚಿನ್ ತೆಂಡೂಲ್ಕರ್: 27 ಬಾರಿ

2. ರಾಹುಲ್‌ ದ್ರಾವಿಡ್: 12 ಬಾರಿ

3. ಶಿಖರ್ ಧವನ್: 10 ಬಾರಿ

4. ವಿರೇಂದ್ರ ಸೆಹ್ವಾಗ್: 10 ಬಾರಿ

ವಿಶ್ವಕಪ್ ಮುಗಿದ್ಮೇಲೆ ಏಕದಿನ‌ ಕ್ರಿಕೆಟ್ ಗೆ Hardik Pandya ಗುಡ್ ಬೈ | *Cricket | OneIndia Kannada
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಬಾರಿ 90+ ರನ್ ಗಳಿಸಿ ಶತಕ ವಂಚಿತರಾದ ಎಲ್ಲಾ ದೇಶಗಳ ಆಟಗಾರರ ಟಾಪ್ 5 ಪಟ್ಟಿ

ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಬಾರಿ 90+ ರನ್ ಗಳಿಸಿ ಶತಕ ವಂಚಿತರಾದ ಎಲ್ಲಾ ದೇಶಗಳ ಆಟಗಾರರ ಟಾಪ್ 5 ಪಟ್ಟಿ

1. ಸಚಿನ್ ತೆಂಡೂಲ್ಕರ್ - 18 ಬಾರಿ

2. ಗ್ರ್ಯಾಂಡ್ ವಿಲಿಯಂ ಫ್ಲವರ್ ( ಜಿಂಬಾಬ್ವೆ ) - 9 ಬಾರಿ

3. ನಾಥನ್ ಜಾನ್ ಆಸಲ್ ( ನ್ಯೂಜಿಲೆಂಡ್‌ ) - 9 ಬಾರಿ

4. ಅರವಿಂದ ಡಿ ಸಿಲ್ವಾ ( ಶ್ರೀಲಂಕಾ ) - 9 ಬಾರಿ

5. ಜಾಕ್ ಕಾಲೀಸ್ ( ದಕ್ಷಿಣ ಆಫ್ರಿಕಾ ) - 8 ಬಾರಿ

ಈ ಮೂಲಕ ತಿಳಿಯುವುದೇನೆಂದರೆ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಕ್ರಿಕೆಟ್ ಮಾದರಿ ತೆಗೆದುಕೊಂಡರೂ ಅತಿ ಹೆಚ್ಚು ಬಾರಿ 90ಕ್ಕಿಂತ ಅಧಿಕ ರನ್ ಗಳಿಸಿ ಶತಕ ಕೈತಪ್ಪಿಸಿಕೊಂಡಿರುವ ಆಟಗಾರ ಎಂದರೆ ಅದು ಸಚಿನ್ ತೆಂಡೂಲ್ಕರ್ ಎಂಬುದು. ಸಚಿನ್ ತೆಂಡೂಲ್ಕರ್ ಕಾಲದಲ್ಲಿಯೇ ಈ 90ಕ್ಕಿಂತ ಹೆಚ್ಚು ರನ್ ಗಳಿಸಿ ಔಟ್ ಆಗಿ ಶತಕವಂಚಿತರಾಗುತ್ತಿದ್ದಕ್ಕೆ 'ನರ್ವಸ್ ನೈಂಟಿ' ಎಂದು ಹೆಸರನ್ನು ಇಡಲಾಗಿತ್ತು.

Story first published: Sunday, July 24, 2022, 19:59 [IST]
Other articles published on Jul 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X