ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2008 ರಿಂದ 2020 ತನಕ ಪರ್ಪಲ್ ಕ್ಯಾಪ್ ವಿಜೇತರ ಪಟ್ಟಿ

List of Purple cap winner in IPL from 2008

ಬ್ಯಾಟ್ಸ್ ಮನ್ ಗಳ ನೆಚ್ಚಿನ ಟೂರ್ನಮೆಂಟ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರಲ್ಲಿ ರನ್ ಹೊಳೆ ಹರಿದಿದ್ದು ಕಡಿಮೆ. ಭಾರತ ಪಿಚ್ ಗಳಲ್ಲಿ ಮಿಂಚುತ್ತಿದ್ದ ಸ್ಪಿನ್ನರ್ ಗಳು ಅಷ್ಟಾಗಿ ಮಿಂಚಲಿಲ್ಲ. ಆದರೆ, ವಿಕೆಟ್ ಕೀಳುವಲ್ಲಿ ವೇಗಿಗಳು ಹಿಂದೆ ಬೀಳಲಿಲ್ಲ. ಅನೇಕ ಕ್ರಿಕೆಟರ್ಸ್ ಸಕತ್ ಆಗಿ ಮಿಂಚಲು ವೇದಿಕೆ ಒದಗಿಸುತ್ತಿರುವ ಐಪಿಎಲ್ ಈ ಬಾರಿ ಕೋವಿಡ್ 19 ಕಾರಣದಿಂದ ಈ ಬಾರಿ ಮುಂದೂಲ್ಪಟ್ಟರೂ ಉತ್ತಮವಾಗಿ ಆಯೋಜನೆಗೊಂಡಿತ್ತು.

2008 ರಿಂದ 2020 ತನಕ ಆರೆಂಜ್ ಕ್ಯಾಪ್ ವಿಜೇತರು2008 ರಿಂದ 2020 ತನಕ ಆರೆಂಜ್ ಕ್ಯಾಪ್ ವಿಜೇತರು

ಯುಎಇ ಪಿಚ್ ಗಳಲ್ಲಿ ತೇವ, ಗಾಳಿ, ಹವಾಮಾನ ವೈಪರೀತ್ಯದ ನಡುವೆ ಹಲವು ವೇಗಿಗಳು ಮಿಂಚಿದರು. ಯಾರ್ಕರ್ ಹಾಕುವುದರಲ್ಲಿ ಬೂಮ್ರಾರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ನಟರಾಜನ್ ಮೀರಿಸಿದರೆ, ವಿಕೆಟ್ ಗಳಿಕೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಾಗಿಸೊ ರಬಾಡಾ ಮೀರಿಸಿದರು.

ಐಪಿಎಲ್: 500ರನ್ ಕ್ಲಬ್ಬಿಗೆ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಎಂಟ್ರಿಐಪಿಎಲ್: 500ರನ್ ಕ್ಲಬ್ಬಿಗೆ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಎಂಟ್ರಿ

ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಆವೃತ್ತಿಯಿಂದ ನೀಡಲಾಗುತ್ತಿರುವ ಪ್ರಶಸ್ತಿಗಳ ಪೈಕಿ ಪರ್ಪಲ್ ಕ್ಯಾಪ್ ಮುಖ್ಯವಾಗಿದ್ದು, ಟೂರ್ನಮೆಂಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಆಟಗಾರನಿಗೆ ಸಂದಾಯವಾಗಲಿದೆ. ಕಳೆದ ಸೀಸನ್ ತನಕ 10 ಲಕ್ಷ ರು ಪ್ರಶಸ್ತಿ ಮೊತ್ತ ನೀಡಲಾಗುತ್ತಿತ್ತು. ಈ ಬಾರಿ ಆರ್ಥಿಕ ಸಂಕಷ್ಟದಿಂದ ಪ್ರಶಸ್ತಿ ಮೊತ್ತ ಕಡಿಮೆ ಮಾಡಲಾಗಿದೆ.

2019ರಲ್ಲಿ ಮಿಂಚಿ 2020ರಲ್ಲಿ ಫ್ಲಾಪ್ ಆದ ಟಾಪ್ 5 ಕ್ರಿಕೆಟರ್ಸ್2019ರಲ್ಲಿ ಮಿಂಚಿ 2020ರಲ್ಲಿ ಫ್ಲಾಪ್ ಆದ ಟಾಪ್ 5 ಕ್ರಿಕೆಟರ್ಸ್

2008 ರಿಂದ 2020 ತನಕ ಪರ್ಪಲ್ ಕ್ಯಾಪ್ ವಿಜೇತರ ಪಟ್ಟಿ, ಆಡಿದ ಪಂದ್ಯ, ಗಳಿಸಿದ ವಿಕೆಟ್ ವಿವರ ಮುಂದಿದೆ..

2008: ಸೊಹೈಲ್ ತನ್ವೀರ್

2008: ಸೊಹೈಲ್ ತನ್ವೀರ್

2008ನೇ ಸೀಸನ್ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ವಿಜೇತರು ಸೊಹೈಲ್ ತನ್ವೀರ್ (ರಾಜಸ್ಥಾನ್ ರಾಯಲ್ಸ್)

ಎಡಗೈ ವೇಗಿ ಸೊಹೈಲ್ ಅವರು 11 ಪಂದ್ಯಗಳಲ್ಲಿ 11.22 ಸ್ಟ್ರೈಕ್ ರೇಟ್ ನಂತೆ 6.46ರಂತೆ ರನ್ ನೀಡಿ 22 ವಿಕೆಟ್ ಪಡೆದಿದ್ದಾರೆ. 41.1 ಓವರ್ ಎಸೆದಿದ್ದು 266 ರನ್ ಕೊಟ್ಟಿದ್ದಾರೆ. 1 ಬಾರಿ ಪಂದ್ಯವೊಂದರಲ್ಲಿ 4 ವಿಕೆಟ್ ಗಳಿಸಿದ್ದಾರೆ. 6/14 ಶ್ರೇಷ್ಠ ಪ್ರದರ್ಶನ.
2009: ಆರ್ ಪಿ ಸಿಂಗ್

2009: ಆರ್ ಪಿ ಸಿಂಗ್

2009ರಲ್ಲಿ ಭಾರತೀಯ ಬೌಲರ್ ಗಳ ಪೈಕಿ ಮೊಟ್ಟ ಮೊದಲ ಬಾರಿಗೆ ರುದ್ರಪ್ರತಾಪ್ ಸಿಂಗ್ ಅವರುಪರ್ಪಲ್ ಕ್ಯಾಪ್ ಧರಿಸಿದರು. ಡೆಕ್ಕನ್ ಚಾರ್ಜರ್ಸ್ ಪರ ಆಡುತ್ತಾ 16 ಪಂದ್ಯಗಳಿಂದ 23 ವಿಕೆಟ್ ಪಡೆದರು.

16 ಪಂದ್ಯಗಳಲ್ಲಿ 15.56 ಸ್ಟ್ರೈಕ್ ರೇಟ್ ನಂತೆ 6.98ರಂತೆ ರನ್ ನೀಡಿ 23 ವಿಕೆಟ್ ಪಡೆದಿದ್ದಾರೆ. 59.4 ಓವರ್ ಎಸೆದಿದ್ದು 417 ರನ್ ಕೊಟ್ಟಿದ್ದಾರೆ. 1 ಬಾರಿ ಪಂದ್ಯವೊಂದರಲ್ಲಿ 4 ವಿಕೆಟ್ ಗಳಿಸಿದ್ದಾರೆ. 4/22 ಶ್ರೇಷ್ಠ ಪ್ರದರ್ಶನ.
2010: ಪ್ರಗ್ಯಾನ್ ಓಜಾ

2010: ಪ್ರಗ್ಯಾನ್ ಓಜಾ

2010ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡುತ್ತಾ ಸ್ಪಿನ್ನರ್ ಪ್ರಗ್ನಾಜ್ ಓಝಾ ಅವರು 16 ಪಂದ್ಯಗಳಿಂದ 21 ವಿಕೆಟ್ ಗಳನ್ನು ಪಡೆದು ಪರ್ಪಲ್ ಕ್ಯಾಪ್ ಧರಿಸಿದರು.

16 ಪಂದ್ಯಗಳಲ್ಲಿ 16.80 ಸ್ಟ್ರೈಕ್ ರೇಟ್ ನಂತೆ 7.29 ರಂತೆ ರನ್ ನೀಡಿ 21 ವಿಕೆಟ್ ಪಡೆದಿದ್ದಾರೆ. 58.5 ಓವರ್ ಎಸೆದಿದ್ದು 429 ರನ್ ಕೊಟ್ಟಿದ್ದಾರೆ. 3/26 ಶ್ರೇಷ್ಠ ಪ್ರದರ್ಶನ.

2011: ಲಸಿತ್ ಮಾಲಿಂಗ

2011: ಲಸಿತ್ ಮಾಲಿಂಗ

ಲಸಿತ್ ಮಾಲಿಂಗ ಅವರು ಐಪಿಎಲ್ ನ ಯಶಸ್ವಿ ಬೌಲರ್ ಗಳಲ್ಲಿ ಒಬ್ಬರಾಗಿದ್ದು, 2011ರಲ್ಲಿ 16 ಪಂದ್ಯಗಳಿಂದ 28 ವಿಕೆಟ್ ಗಳನ್ನು ಗಳಿಸಿ ನೇರಳೆ ಟೋಪಿ ಗಳಿಸಿದರು.

16 ಪಂದ್ಯಗಳಲ್ಲಿ 13.50 ಸ್ಟ್ರೈಕ್ ರೇಟ್ ನಂತೆ 5.95 ರಂತೆ ರನ್ ನೀಡಿ 28 ವಿಕೆಟ್ ಪಡೆದಿದ್ದಾರೆ. 63 ಓವರ್ ಎಸೆದಿದ್ದು 375 ರನ್ ಕೊಟ್ಟಿದ್ದಾರೆ. ಒಂದು ಬಾರಿ 5 ವಿಕೆಟ್ ಪಡೆದಿದ್ದು, 5/13 ಶ್ರೇಷ್ಠ ಪ್ರದರ್ಶನ.
2012: ಮಾರ್ನೆ ಮೊರ್ಕೆಲ್

2012: ಮಾರ್ನೆ ಮೊರ್ಕೆಲ್

2012ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಾ ದಕ್ಷಿಣ ಆಫ್ರಿಕಾದ ವೇಗಿ ಮಾರ್ನೆ ಮಾರ್ಕೆಲ್ ಅವರು 16 ಪಂದ್ಯಗಳಿಂದ 25 ವಿಕೆಟ್ ಗಳನ್ನು ಗಳಿಸಿ ನೇರಳೆ ಕ್ಯಾಪ್ ಧರಿಸಿದರು.

16 ಪಂದ್ಯಗಳಲ್ಲಿ 15.12 ಸ್ಟ್ರೈಕ್ ರೇಟ್ ನಂತೆ 7.19 ರಂತೆ ರನ್ ನೀಡಿ 25 ವಿಕೆಟ್ ಪಡೆದಿದ್ದಾರೆ. 63 ಓವರ್ ಎಸೆದಿದ್ದು 453 ರನ್ ಕೊಟ್ಟಿದ್ದಾರೆ. ಒಂದು ಬಾರಿ 4 ವಿಕೆಟ್ ಪಡೆದಿದ್ದು, 4/20 ಶ್ರೇಷ್ಠ ಪ್ರದರ್ಶನ.

2013ರಲ್ಲಿ ಬ್ರಾವೊ ಡ್ವಾಯ್ನೆ

2013ರಲ್ಲಿ ಬ್ರಾವೊ ಡ್ವಾಯ್ನೆ

2013ರಲ್ಲಿ ಬ್ರಾವೊ ಡ್ವಾಯ್ನೆ ಬ್ರಾವೊ ಅವರು ಐಪಿಎಲ್ ನ ಆರಂಭದ ವರ್ಷದಿಂದ ಉತ್ತಮ ಆಲ್ ರೌಂಡರ್ ಆಗಿ ರೂಪುಗೊಂಡಿದ್ದಾರೆ. 2013ರಲ್ಲಿ ಬ್ರಾವೊ ಅವರು ಪರ್ಪಲ್ ಕ್ಯಾಪ್ ಅವರು 18 ಪಂದ್ಯಗಳಿಂದ 32 ವಿಕೆಟ್ ಗಳನ್ನು ಗಳಿಸಿ ಮೊದಲ ಬಾರಿಗೆ ಪರ್ಪಲ್ ಕ್ಯಾಪ್ ಗಳಿಸಿದ್ದರು.

18 ಪಂದ್ಯಗಳಲ್ಲಿ 11.71 ಸ್ಟ್ರೈಕ್ ರೇಟ್ ನಂತೆ 7.95 ರಂತೆ ರನ್ ನೀಡಿ 32 ವಿಕೆಟ್ ಪಡೆದಿದ್ದಾರೆ. 62.3 ಓವರ್ ಎಸೆದಿದ್ದು 497 ರನ್ ಕೊಟ್ಟಿದ್ದಾರೆ. ಒಂದು ಬಾರಿ 4 ವಿಕೆಟ್ ಪಡೆದಿದ್ದು, 4/42 ಶ್ರೇಷ್ಠ ಪ್ರದರ್ಶನ.

2014: ಮೋಹಿತ್ ಶರ್ಮಾ

2014: ಮೋಹಿತ್ ಶರ್ಮಾ

ಭಾರತ ಪರ ಆಡುವ ಮೋಹಿತ್ ಶರ್ಮ ಅವರು 2014ರಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಮೋಹಿತ್ ಶರ್ಮ ಅವರು ಕೂಡಾ ಚೆನ್ನೈ ಸೂಪರ್ ಕಿಂಗ್ಸ್ ಪರ ಅಡಿದ್ದಾರೆ. 16 ಪಂದ್ಯಗಳಿಂದ 23 ವಿಕೆಟ್ ಗಳನ್ನು ಗಳಿಸಿ ನೇರಳೆ ಟೋಪಿ ಧರಿಸಿದ್ದರು.

16 ಪಂದ್ಯಗಳಲ್ಲಿ 14.04 ಸ್ಟ್ರೈಕ್ ರೇಟ್ ನಂತೆ 8.39 ರಂತೆ ರನ್ ನೀಡಿ 23 ವಿಕೆಟ್ ಪಡೆದಿದ್ದಾರೆ. 53.5 ಓವರ್ ಎಸೆದಿದ್ದು 452 ರನ್ ಕೊಟ್ಟಿದ್ದಾರೆ. ಒಂದು ಬಾರಿ 4 ವಿಕೆಟ್ ಪಡೆದಿದ್ದು, 4/14 ಶ್ರೇಷ್ಠ ಪ್ರದರ್ಶನ.

2015: ಡ್ವಾಯ್ನೆ ಬ್ರಾವೋ

2015: ಡ್ವಾಯ್ನೆ ಬ್ರಾವೋ

2015ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾ ಆಲ್ ರೌಂಡರ್ ಡ್ವಾಯ್ನೆ ಬ್ರಾವೋ ಅವರು 17 ಪಂದ್ಯಗಳಿಂದ 26 ವಿಕೆಟ್ ಗಳನ್ನು ಗಳಿಸಿ ನೇರಳೆ ಕ್ಯಾಪ್ ಗಳಿಸಿದರು.

17 ಪಂದ್ಯ, 15 ಇನ್ನಿಂಗ್ಸ್ ಗಳಲಿ 12.07 ಸ್ಟ್ರೈಕ್ ರೇಟ್ ನಂತೆ 8.14 ರಂತೆ ರನ್ ನೀಡಿ 26 ವಿಕೆಟ್ ಪಡೆದಿದ್ದಾರೆ. 52.2 ಓವರ್ ಎಸೆದಿದ್ದು 426 ರನ್ ಕೊಟ್ಟಿದ್ದಾರೆ. 3/22 ಶ್ರೇಷ್ಠ ಪ್ರದರ್ಶನ

2016: ಭುವನೇಶ್ವರ ಕುಮಾರ್

2016: ಭುವನೇಶ್ವರ ಕುಮಾರ್

2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಲು ಭುವನೇಶ್ವರ್ ಕುಮಾರ್ ಅವರು ಕೂಡಾ ಕಾರಣ. 17 ಪಂದ್ಯಗಳಲ್ಲಿ 23 ವಿಕೆಟ್ ಕಿತ್ತು ಭರ್ಜರಿ ಪ್ರದರ್ಶನ ನೀಡಿದ್ದ ಭುವನೇಶ್ವರ್ ಅವರು ಪರ್ಪಲ್ ಕ್ಯಾಪ್ ವಿಜೇತರಾದರು.

17 ಪಂದ್ಯಗಳಲ್ಲಿ 17.21 ಸ್ಟ್ರೈಕ್ ರೇಟ್ ನಂತೆ 7.42 ರಂತೆ ರನ್ ನೀಡಿ 23 ವಿಕೆಟ್ ಪಡೆದಿದ್ದಾರೆ. 66 ಓವರ್ ಎಸೆದಿದ್ದು 490 ರನ್ ಕೊಟ್ಟಿದ್ದಾರೆ. ಒಂದು ಬಾರಿ 4 ವಿಕೆಟ್ ಪಡೆದಿದ್ದು, 4/29 ಶ್ರೇಷ್ಠ ಪ್ರದರ್ಶನ.

2017: ಭುವನೇಶ್ವರ ಕುಮಾರ್

2017: ಭುವನೇಶ್ವರ ಕುಮಾರ್

ಸನ್ ರೈಸರ್ಸ್ ಹೈದರಾಬಾದ್ ತಂಡ ವೇಗಿ ಭುವನೇಶ್ವರ್ ಕುಮಾರ್ ಅವರು ಸತತ ಎರಡನೇ ಸೀಸನ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ನೇರಳೆ ಟೋಪಿ ಧರಿಸಿದರು.

14 ಪಂದ್ಯಗಳಲ್ಲಿ 12.07 ಸ್ಟ್ರೈಕ್ ರೇಟ್ ನಂತೆ 7.05 ರಂತೆ ರನ್ ನೀಡಿ 26 ವಿಕೆಟ್ ಪಡೆದಿದ್ದಾರೆ. 52.2ಓವರ್ ಎಸೆದಿದ್ದು 369 ರನ್ ಕೊಟ್ಟಿದ್ದಾರೆ. ಒಂದು ಬಾರಿ 5 ವಿಕೆಟ್ ಪಡೆದಿದ್ದು, 5/19 ಶ್ರೇಷ್ಠ ಪ್ರದರ್ಶನ.

2018: ಆಂಡ್ರ್ಯೂ ಟೈ

2018: ಆಂಡ್ರ್ಯೂ ಟೈ

ಕಿಂಗ್ಸ್ XI ಪಂಜಾಬ್ ಪರ ಆಡಿದ ವೇಗಿ ಆಂಡ್ರ್ಯೂ ಟೈ 2018ರ ಸೀಸನ್ ನಲ್ಲಿ ಮೂರು ಬಾರಿ 4 ವಿಕೆಟ್ ಗಳಿಸಿದ್ದಲ್ಲದೆ ಅತಿ ಹೆಚ್ಚು ವಿಕೆಟ್ ಗಳಿಸಿದ ಸಾಧನೆ ಮಾಡಿ ಪರ್ಪಲ್ ಟೋಪಿ ಧರಿಸಿದರು.

14 ಪಂದ್ಯಗಳಲ್ಲಿ 14.00 ಸ್ಟ್ರೈಕ್ ರೇಟ್ ನಂತೆ 8.00 ರಂತೆ ರನ್ ನೀಡಿ 24 ವಿಕೆಟ್ ಪಡೆದಿದ್ದಾರೆ. 56 ಓವರ್ ಎಸೆದಿದ್ದು 448 ರನ್ ಕೊಟ್ಟಿದ್ದಾರೆ. ಮೂರು ಬಾರಿ 4 ವಿಕೆಟ್ ಪಡೆದಿದ್ದು, 4/16 ಶ್ರೇಷ್ಠ ಪ್ರದರ್ಶನ.

2019: ಇಮ್ರಾನ್ ತಾಹಿರ್

2019: ಇಮ್ರಾನ್ ತಾಹಿರ್

ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರು 2019ರಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಧರಿಸಿದರು.

17 ಪಂದ್ಯಗಳಲ್ಲಿ 14.84 ಸ್ಟ್ರೈಕ್ ರೇಟ್ ನಂತೆ 6.69 ರಂತೆ ರನ್ ನೀಡಿ 26 ವಿಕೆಟ್ ಪಡೆದಿದ್ದಾರೆ. 64.2 ಓವರ್ ಎಸೆದಿದ್ದು 431 ರನ್ ಕೊಟ್ಟಿದ್ದಾರೆ. ಎರಡು ಬಾರಿ 4 ವಿಕೆಟ್ ಪಡೆದಿದ್ದು, 4/12 ಶ್ರೇಷ್ಠ ಪ್ರದರ್ಶನ.

2020: ಕಾಗಿಸೊ ರಬಾಡ

2020: ಕಾಗಿಸೊ ರಬಾಡ

ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಅವರು 2020ರಲ್ಲಿ ಬೂಮ್ರಾ ಹಿಂದಿಕ್ಕಿ ಅತಿ ಹೆಚ್ಚು ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಧರಿಸಿದರು.

17 ಪಂದ್ಯಗಳಲ್ಲಿ 13.13ಸ್ಟ್ರೈಕ್ ರೇಟ್ ನಂತೆ 8.34 ರಂತೆ ರನ್ ನೀಡಿ 26 ವಿಕೆಟ್ ಪಡೆದಿದ್ದಾರೆ. 65.4 ಓವರ್ ಎಸೆದಿದ್ದು 548 ರನ್ ಕೊಟ್ಟಿದ್ದಾರೆ. ಎರಡು ಬಾರಿ 4 ವಿಕೆಟ್ ಪಡೆದಿದ್ದು, 4/24 ಶ್ರೇಷ್ಠ ಪ್ರದರ್ಶನ.

Story first published: Wednesday, November 11, 2020, 1:40 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X