ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2019ರಲ್ಲಿ 'ಹಿಟ್‌ಮ್ಯಾನ್' ರೋಹಿತ್‌ ಶರ್ಮಾ ಮಾಡಿದ ವಿಶೇಷ ದಾಖಲೆಗಳು!

List of records Rohit Sharma achieved in International Cricket in 2019

ಬೆಂಗಳೂರು, ಜನವರಿ 1: 'ಹಿಟ್‌ಮ್ಯಾನ್' ಖ್ಯಾತಿಯ ರೋಹಿತ್ ಶರ್ಮಾ ಪಾಲಿಗೆ 2019 ತುಂಬಾ ವಿಶೇಷ ವರ್ಷ. ಯಾಕೆಂದರೆ ಈ ಇಸವಿಯಲ್ಲಿ ಶರ್ಮಾ ಅನೇಕ ಅಪರೂಪದ ದಾಖಲೆಗಳಿಗೆ, ಸಾಧನೆಗಳಿಗೆ ಕಾರಣರಾಗಿದ್ದಾರೆ. ಅಷ್ಟೇ ಅಲ್ಲಾ ಎಲ್ಲಾ ಮಾದರಿಯ ಕ್ರಿಕೆಟ್‌ನ ಶ್ರೇಯಾಂಕದಲ್ಲಿ ಗಮನಾರ್ಹ ಜಿಗಿತ ಕಂಡಿದ್ದಾರೆ.

ಭಾರತ vs ಶ್ರೀಲಂಕಾ ಟಿ20 ಸರಣಿಯ ವೇಳಾಪಟ್ಟಿ ಮತ್ತು ಸಂಪೂರ್ಣ ಮಾಹಿತಿಭಾರತ vs ಶ್ರೀಲಂಕಾ ಟಿ20 ಸರಣಿಯ ವೇಳಾಪಟ್ಟಿ ಮತ್ತು ಸಂಪೂರ್ಣ ಮಾಹಿತಿ

2019ರ ಐಸಿಸಿ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಬಾರಿಸಿದ ರೋಹಿತ್, ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯಧಿಕ ಶತಕಗಳ ದಾಖಲೆಗಾಗಿ ಶ್ರೀಲಂಕಾದ ಕುಮಾರ ಸಂಗಕ್ಕರ (4 ಶತಕಗಳು) ಅವರನ್ನು ಮೀರಿಸಿದ್ದರು.

ಈ ವರ್ಷ ನಿವೃತ್ತಿಯಾಗಲಿರುವ ಕ್ರಿಕೆಟ್‌ ದಂತಕತೆಗಳು ಇವರು!ಈ ವರ್ಷ ನಿವೃತ್ತಿಯಾಗಲಿರುವ ಕ್ರಿಕೆಟ್‌ ದಂತಕತೆಗಳು ಇವರು!

2019ರಲ್ಲಿ ಏಕದಿನದಲ್ಲಿ 1490 ರನ್, 7 ಶತಕ, 13 ಅರ್ಧ ಶತಕ ಮತ್ತು 146 ಬೌಂಡರಿಗಳ ದಾಖಲೆ ಹೊಂದಿರುವ ಶರ್ಮಾ ಅವರಿಂದಾದ ಇನ್ನೊಂದಿಷ್ಟು ಮೈಲಿಗಲ್ಲುಗಳ ಇಣುಕುನೋಟ ಇಲ್ಲಿದೆ.

1. ವಿಶ್ವದ ಮೊದಲ ಆಟಗಾರ ರೋಹಿತ್

1. ವಿಶ್ವದ ಮೊದಲ ಆಟಗಾರ ರೋಹಿತ್

ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಇಳಿದ ಚೊಚ್ಚಲ ಸರಣಿಯಲ್ಲೇ ಎರಡು ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಆಟಗಾರನಾಗಿ ರೋಹಿತ್ ಶರ್ಮಾ 2019ರಲ್ಲಿ ದಾಖಲೆ ಬರೆದಿದ್ದರು. ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಈ ದಾಖಲೆ ನಿರ್ಮಾಣವಾಗಿತ್ತು. ಅಲ್ಲದೆ ರೋಹಿತ್ ಈ ಸಾಧನೆ ಆರಂಭಿರಾಗಿ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್‌ (303 ರನ್) ಬಾರಿಸಿದ ಶ್ರೀಲಂಕಾದ ಮಾಜಿ ನಾಯಕ ತಿಲಕರತ್ನೆ ದಿಲ್ಶನ್ ಹೆಸರಿನಲ್ಲಿದ್ದ ದಾಖಲೆ (215 ರನ್) ಮೀರಿಸಿತ್ತು.

2. ವಿಶ್ವಕಪ್‌ನಲ್ಲಿ ಸತತ 3 ಶತಕಗಳು

2. ವಿಶ್ವಕಪ್‌ನಲ್ಲಿ ಸತತ 3 ಶತಕಗಳು

ಏಕದಿನ ವಿಶ್ವಕಪ್‌ನಲ್ಲಿ ಸತತ ಮೂರು ಶತಕಗಳನ್ನು ಬಾರಿಸಿದ ವಿಶ್ವದ ಎರಡನೇ ಆಟಗಾರನಾಗಿ ಶರ್ಮಾ ಮೈಲಿಗಲ್ಲು ಸ್ಥಾಪಿಸಿದ್ದರು. 2015ರ ಆವೃತ್ತಿಯಲ್ಲಿ ಸತತ ನಾಲ್ಕು ಶತಕಗಳನ್ನು ಬಾರಿಸಿದ್ದ ಕುಮಾರ ಸಂಗಕ್ಕಾರ ಈ ದಾಖಲೆ ಸಾಲಿನಲ್ಲಿ ಮೊದಲಿದ್ದಾರೆ. ಅಲ್ಲದೆ ಏಕದಿನದಲ್ಲಿ ವಿರಾಟ್ ಕೊಹ್ಲಿ (ಭಾರತದಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ-2018) ಬಳಿಕ ಸತತ 3 ಏಕದಿನ ಶತಕಗಳನ್ನು ಬಾರಿಸಿದ ಭಾರತದ ಎರಡನೇ ಆಟಗಾರನಾಗಿ ಗುರುತಿಸಿಕೊಂಡಿದ್ದರು.

3. ಚೇಸಿಂಗ್‌ ವೇಳೆ ಶತಕಗಳ ದಾಖಲೆ

3. ಚೇಸಿಂಗ್‌ ವೇಳೆ ಶತಕಗಳ ದಾಖಲೆ

ಇಂಗ್ಲೆಂಡ್‌ನಲ್ಲಿ ನಡೆದ 2019ರ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಬಾರಿಸಿದ ಐದು ಶತಕಗಳಲ್ಲಿ ಮೂರು ಶತಕಗಳು ಸಿಡಿದಿದ್ದು ಚೇಸಿಂಗ್ ವೇಳೆ. ಹೀಗಾಗಿ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲೇ ಚೇಸಿಂಗ್‌ ವೇಳೆ ಮೂರು ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಆಟಗಾರನಾಗಿ ರೋಹಿತ್ ದಾಖಲೆ ನಿರ್ಮಿಸಿದ್ದಾರೆ. ಇಷ್ಟೇ ಅಲ್ಲ ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ (5 ಶತಕ) ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಆಟಗಾರ ರೋಹಿತ್ ಶರ್ಮಾ. ಈ ದಾಖಲೆ ಮೊದಲು ಶ್ರೀಲಂಕಾದ ಕುಮಾರ ಸಂಗಕ್ಕಾರ (2015ರ ಆವೃತ್ತಿಯಲ್ಲಿ 4 ಶತಕಗಳು) ಹೆಸರಿನಲ್ಲಿತ್ತು.

4. ಏಕದಿನ ಸರಣಿಯಲ್ಲಿ ಅತ್ಯಧಿಕ ಶತಕಗಳು

4. ಏಕದಿನ ಸರಣಿಯಲ್ಲಿ ಅತ್ಯಧಿಕ ಶತಕಗಳು

ರೋಹಿತ್ ಶರ್ಮಾ ವಿಶ್ವಕಪ್‌ ವೇಳೆ ಬಾರಿಸಿದ ಐದು ಶತಕಗಳು ಇನ್ನೂ ಅನೇಕ ದಾಖಲೆಗಳಿಗೆ ಕಾರಣವಾಗಿತ್ತು. ಶರ್ಮಾ ಆ ಸಾಧನೆ ಏಕದಿನ ಸರಣಿಯೊಂದರಲ್ಲಿ ಬ್ಯಾಟ್ಸ್‌ಮನ್ ಒಬ್ಬ ಬಾರಿಸಿದ ಅತ್ಯಧಿಕ ಸಂಖ್ಯೆಯ ಶತಕಗಳಾಗಿ ದಾಖಲೆ ಬರೆದಿತ್ತು. ಈ ದಾಖಲೆ ಮಾಡಿದ ವಿಶ್ವದ ಎರಡನೇ ಆಟಗಾರ ರೋಹಿತ್. ಇದಕ್ಕೂ ಮುನ್ನ ಅಂದರೆ 1955ರಲ್ಲಿ ವೆಸ್ಟ್ ಇಂಡೀಸ್‌ನ ಕ್ಲೈಡ್ ವಾಲ್ಕಾಟ್ ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ 5 ಶತಕಗಳನ್ನು ಬಾರಿಸಿದ್ದರು.

5. ಸಚಿನ್ ತೆಂಡೂಲ್ಕರ್ ದಾಖಲೆ ಸರಿ ಸಮ

5. ಸಚಿನ್ ತೆಂಡೂಲ್ಕರ್ ದಾಖಲೆ ಸರಿ ಸಮ

ವಿಶ್ವಕಪ್‌ ಇತಿಹಾಸದಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಒಟ್ಟು 6 ಶತಕಗಳನ್ನು ಬಾರಿಸಿದ್ದ ಸಚಿನ್ ಈ ದಾಖಲೆ ಉಳಿಸಿಕೊಂಡಿದ್ದರು. ಆದರೆ 2019ರ ವಿಶ್ವಕಪ್‌ ಬಳಿಕ ಇದೇ ದಾಖಲೆಯನ್ನು ರೋಹಿತ್ ಶರ್ಮಾ ಕೂಡ ಮರುಕಳಿಸಿದ್ದಾರೆ. ಅಂದರೆ ಶರ್ಮಾ ಈಗ ವಿಶ್ವಕಪ್‌ನಲ್ಲಿ ಒಟ್ಟಿಗೆ 6 ಶತಕಗಳನ್ನು ಬಾರಿಸಿದಂತಾಗಿದೆ.

6. ಬೇರೆ ಬೇರೆ ತಂಡಗಳ ವಿರುದ್ಧ ಶತಕ

6. ಬೇರೆ ಬೇರೆ ತಂಡಗಳ ವಿರುದ್ಧ ಶತಕ

ಕ್ಯಾಲೆಂಡರ್ ವರ್ಷವೊಂದರಲ್ಲಿ 7 ವಿವಿಧ ದೇಶಗಳ ವಿರುದ್ಧ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ರೋಹಿತ್ ಶರ್ಮಾ. 2019ರಲ್ಲಿ ಶರ್ಮಾ ಅವರು ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ವಿರುದ್ಧ ವಿಶ್ವಕಪ್‌ ವೇಳೆ ಶತಕ ಬಾರಿಸಿದ್ದರು. ಇನ್ನು ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ತಲಾ ಒಂದೊಂದು ಶತಕಗಳನ್ನು ಬಾರಿಸಿದ್ದರು. ಅಂದರೆ ರೋಹಿತ್ 2019ರಲ್ಲಿ ಒಟ್ಟಿಗೆ 10 ಅಂತಾರಾಷ್ಟ್ರೀಯ ಶತಕಗಳನ್ನು 7 ವಿವಿಧ ದೇಶಗಳ ವಿರುದ್ಧ ಬಾರಿಸಿದ್ದಾರೆ.

7. ಗಂಗೂಲಿ, ವಾರ್ನರ್ ದಾಖಲೆ ಸರಿಸಮ

7. ಗಂಗೂಲಿ, ವಾರ್ನರ್ ದಾಖಲೆ ಸರಿಸಮ

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಧಿಕ ಏಕದಿನ ಶತಕಗಳನ್ನು ಬಾರಿಸಿದ ವಿಶ್ವದ 2ನೇ ಸಾಧಕನಾಗಿ ಗುರುತಿಸಿಕೊಂಡಿದ್ದಾರೆ. ಈ ಯಾದಿಯಲ್ಲಿ ಮೊದಲ ಸ್ಥಾನದಲ್ಲಿರುವ ಲಿಟ್ಲ್‌ ಮಾಸ್ಟರ್ ಸಚಿನ್ ತೆಂಡೂಲ್ಕರ್ 1998ರಲ್ಲಿ ಒಟ್ಟು 9 ಶತಕಗಳನ್ನು ಬಾರಿಸಿದ್ದರು. ಇನ್ನು ಏಳು ಶತಕಗಳ ದಾಖಲೆ ಸೌರವ್ ಗಂಗೂಲಿ (2000) ಮತ್ತು ಡೇವಿಡ್ ವಾರ್ನರ್ (2016) ಹೆಸರಿನಲ್ಲಿವೆ.

8. ಅತ್ಯಧಿಕ ಸಿಕ್ಸರ್ ದಾಖಲೆ

8. ಅತ್ಯಧಿಕ ಸಿಕ್ಸರ್ ದಾಖಲೆ

ಭಾರತಕ್ಕೆ ದಕ್ಷಿಣ ಆಫ್ರಿಕಾದ ಪ್ರವಾಸ ಸರಣಿಯ ವಿಶಾಖಪಟ್ಟಣ ಟೆಸ್ಟ್ (1ನೇ ಟೆಸ್ಟ್)ನಲ್ಲಿ ರೋಹಿತ್ ಒಟ್ಟಿಗೆ 13 (6+7) ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದು ಪಾಕಿಸ್ತಾನದ ವಾಸಿಮ್ ಅಕ್ರಮ್ (12 ಸಿಕ್ಸರ್‌ಗಳು, 1996ರಲ್ಲಿ ಜಿಂಬಾಬ್ವೆ ವಿರುದ್ಧದ ಟೆಸ್ಟ್) ಹೆಸರಿನಲ್ಲಿದ್ದ ಅತ್ಯಧಿಕ ಸಿಕ್ಸರ್ ವಿಶ್ವದಾಖಲೆಯನ್ನು ಮೀರಿಸಿದೆ. ಅಲ್ಲದೆ ರೋಹಿತ್, ಟೆಸ್ಟ್ ಕ್ರಿಕೆಟ್‌ನಲ್ಲಿ 10+ ಸಿಕ್ಸರ್‌ಗಳನ್ನು ಬಾರಿಸಿದ ಭಾರತದ ಮೊದಲ ಆಟಗಾರನಾಗಿ ಮತ್ತು ಎಲ್ಲಾ ಮೂರು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಾದರಿಗಳ ಪಂದ್ಯವೊಂದರಲ್ಲಿ 10+ ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. (2019ರಲ್ಲಿ ರೋಹಿತ್ ಇನ್ನೂ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಪ್ರಮುಖ ಕೆಲವೊಂದನ್ನಷ್ಟೇ ಆರಿಸಿ ಇಲ್ಲಿ ನೀಡಿದ್ದೇವೆ).

Story first published: Wednesday, January 1, 2020, 17:45 [IST]
Other articles published on Jan 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X