ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

100% ಸಕ್ಸಸ್: ನಾಯಕನಾಗಿ ಎಲ್ಲಾ ಸರಣಿಗಳನ್ನು ಗೆದ್ದ ರೋಹಿತ್ ಶರ್ಮಾ; ಇಲ್ಲಿದೆ ಆ ಎಲ್ಲಾ ಸರಣಿಗಳ ಪಟ್ಟಿ

List of series which Team India have won after Rohit Sharma appointed as full time captain

ಕಳೆದ ವರ್ಷ ಯುಎಇ ನೆಲದಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದ ನಂತರ ಟೀಮ್ ಇಂಡಿಯಾದ ಚಿತ್ರಣವೇ ಬದಲಾಗಿ ಹೋಯಿತು. ತಮ್ಮ ಅವಧಿ ಮುಗಿದ ಕಾರಣ ರವಿಶಾಸ್ತ್ರಿ ಕೋಚ್ ಸ್ಥಾನದಿಂದ ಕೆಳಗಿಳಿದರೆ, ವಿರಾಟ್ ಕೊಹ್ಲಿ ಕೂಡ ಟಿ ಟ್ವೆಂಟಿ ಹಾಗೂ ಏಕದಿನ ತಂಡದ ನಾಯಕತ್ವವನ್ನು ತ್ಯಜಿಸಿದರು. ಕಾಲಕ್ರಮೇಣ ಟೆಸ್ಟ್ ತಂಡದ ನಾಯಕತ್ವದಿಂದಲೂ ಕೂಡ ವಿರಾಟ್ ಕೊಹ್ಲಿ ಕೆಳಗಿಳಿದರು.

ಕೆರಿಯರ್‌ಗೆ ಮುಳುವಾಯ್ತಾ ಕಳಪೆ ಫಾರ್ಮ್? ಒಂದಲ್ಲಾ ಎರಡಲ್ಲ ಬರೋಬ್ಬರಿ 23 ಪಂದ್ಯಗಳಿಂದ ಕೊಹ್ಲಿ ಔಟ್!ಕೆರಿಯರ್‌ಗೆ ಮುಳುವಾಯ್ತಾ ಕಳಪೆ ಫಾರ್ಮ್? ಒಂದಲ್ಲಾ ಎರಡಲ್ಲ ಬರೋಬ್ಬರಿ 23 ಪಂದ್ಯಗಳಿಂದ ಕೊಹ್ಲಿ ಔಟ್!

ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಕೂಡಲೇ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ನೂತನ ನಾಯಕ ಎಂದು ಘೋಷಿಸಿತು. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೂಲಕ ಭಾರತ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರ ಸ್ವೀಕರಿಸಿದ ರೋಹಿತ್ ಶರ್ಮಾ ಇಲ್ಲಿಯವರೆಗೂ ತಂಡವನ್ನು ಮುನ್ನಡೆಸಿರುವ ಯಾವುದೇ ಸರಣಿಯಲ್ಲಿಯೂ ಕೂಡ ಸೋಲು ಕಂಡಿಲ್ಲ ಎಂಬುದು ವಿಶೇಷ.

12 ಸಿಕ್ಸರ್ ಸಹಿತ ಶತಕ ಸಿಡಿಸಿ ಅಬ್ಬರಿಸಿದ ಮುರಳಿ ವಿಜಯ್!; ಆದರೂ ಹೀನಾಯವಾಗಿ ಸೋತ ತಂಡ12 ಸಿಕ್ಸರ್ ಸಹಿತ ಶತಕ ಸಿಡಿಸಿ ಅಬ್ಬರಿಸಿದ ಮುರಳಿ ವಿಜಯ್!; ಆದರೂ ಹೀನಾಯವಾಗಿ ಸೋತ ತಂಡ

ಹೌದು, ರೋಹಿತ್ ಶರ್ಮಾ ಭಾರತ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ನಂತರ ಇಲ್ಲಿಯವರೆಗೂ ಮುನ್ನಡೆಸಿರುವ ಎಲ್ಲಾ ಮಾದರಿಯ ಪ್ರತೀ ಸರಣಿಯಲ್ಲಿಯೂ ಯಶಸ್ವಿಯಾಗಿದ್ದಾರೆ. ಹೀಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆದ್ದಿರುವ ಸರಣಿಗಳ ಸಂಪೂರ್ಣ ಪಟ್ಟಿ ಮುಂದೆ ಇದೆ ಓದಿ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆದ್ದಿರುವ ಸರಣಿಗಳ ಪಟ್ಟಿ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆದ್ದಿರುವ ಸರಣಿಗಳ ಪಟ್ಟಿ

ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪೂರ್ಣಾವಧಿ ನಾಯಕನಾದ ನಂತರ ಟೀಮ್ ಇಂಡಿಯಾ ಇಲ್ಲಿಯವರೆಗೂ ಒಟ್ಟು 7 ಸರಣಿಗಳನ್ನು ಆಡಿದ್ದು, ಎಲ್ಲಾ ಸರಣಿಗಳಲ್ಲಿ ಕೂಡ ವಿಜೇತ ತಂಡವಾಗಿ ಹೊರಹೊಮ್ಮಿದೆ. ಆ ಸರಣಿಗಳ ವಿವರ ಇಲ್ಲಿದೆ.


1. ಭಾರತ vs ನ್ಯೂಜಿಲೆಂಡ್‌ 3 ಪಂದ್ಯಗಳ ಟಿ ಟ್ವೆಂಟಿ ಸರಣಿ: ಎಲ್ಲಾ ಪಂದ್ಯಗಳಲ್ಲೂ ಟೀಮ್ ಇಂಡಿಯಾಗೆ ಜಯ

2. ಭಾರತ vs ವೆಸ್ಟ್ ಇಂಡೀಸ್ 3 ಪಂದ್ಯಗಳ ಏಕದಿನ ಸರಣಿ: ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾಗೆ ಜಯ

3. ಭಾರತ vs ವೆಸ್ಟ್ ಇಂಡೀಸ್ 3 ಪಂದ್ಯಗಳ ಟಿ ಟ್ವೆಂಟಿ ಸರಣಿ: ಎಲ್ಲಾ ಪಂದ್ಯಗಳಲ್ಲೂ ಟೀಮ್ ಇಂಡಿಯಾಗೆ ಗೆಲುವು

4. ಭಾರತ vs ಶ್ರೀಲಂಕಾ 3 ಪಂದ್ಯಗಳ ಟಿ ಟ್ವೆಂಟಿ ಸರಣಿ: ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾಗೆ ಗೆಲುವು

5. ಭಾರತ vs ಶ್ರೀಲಂಕಾ 2 ಪಂದ್ಯಗಳ ಟೆಸ್ಟ್ ಸರಣಿ: ಎರಡೂ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾಗೆ ಗೆಲುವು

6. ಭಾರತ vs ಇಂಗ್ಲೆಂಡ್ 3 ಪಂದ್ಯಗಳ ಟಿ ಟ್ವೆಂಟಿ ಸರಣಿ: 2-1 ಅಂತರದಲ್ಲಿ ಟೀಮ್ ಇಂಡಿಯಾಗೆ ಜಯ.

7. ಭಾರತ vs ಇಂಗ್ಲೆಂಡ್ 3 ಪಂದ್ಯಗಳ ಏಕದಿನ ಸರಣಿ: 2-1 ಅಂತರದಲ್ಲಿ ಟೀಂ ಇಂಡಿಯಾಗೆ ಜಯ.

ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದ ಮೂರನೇ ನಾಯಕ

ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದ ಮೂರನೇ ನಾಯಕ

ರೋಹಿತ್ ಶರ್ಮಾ ಇತ್ತೀಚಿಗಷ್ಟೇ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದಿಂದ ತಂಡವನ್ನು ಗೆಲ್ಲಿಸುವುದರ ಮೂಲಕ ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಗೆಲ್ಲಿಸಿದ ಮೂರನೇ ನಾಯಕ ಎಂಬ ದಾಖಲೆ ಬರೆದರು. ಈ ಹಿಂದೆ ಅಜರುದ್ದೀನ್ ಮತ್ತು ಎಂಎಸ್ ಧೋನಿ ಇಂಗ್ಲೆಂಡ್ ನೆಲದಲ್ಲಿ ಆಂಗ್ಲರ ವಿರುದ್ಧ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕರಾಗಿ ಮುನ್ನಡೆಸಿ ಯಶಸ್ಸು ಸಾಧಿಸಿದ್ದರು.

ಗೆದ್ದ ಖುಷಿಗೆ ಹಿಟ್ ಮ್ಯಾನ್ ಮೇಲೆ ಶಾಂಪೇನ್ ಚಿಮ್ಮಿಸಿದ ವಿರಾಟ್!! ರೋಹಿತ್ ಮಾಡಿದ್ದೇನು? | *Cricket | OneIndia
ರೋಹಿತ್ ಶರ್ಮಾಗೆ ಮೊದಲು ಸೋಲಿನ ರುಚಿ ತೋರಿಸಿದ್ದು ಇಂಗ್ಲೆಂಡ್!

ರೋಹಿತ್ ಶರ್ಮಾಗೆ ಮೊದಲು ಸೋಲಿನ ರುಚಿ ತೋರಿಸಿದ್ದು ಇಂಗ್ಲೆಂಡ್!

ಇನ್ನು ರೋಹಿತ್ ಶರ್ಮಾ ಪೂರ್ಣಾವಧಿ ನಾಯಕನಾಗಿ ನೇಮಕಗೊಂಡ ನಂತರ ನಡೆದ ಮೊದಲ 5 ಸರಣಿಗಳಲ್ಲಿನ ಯಾವುದೇ ಪಂದ್ಯದಲ್ಲಿಯೂ ಸಹ ಟೀಮ್ ಇಂಡಿಯಾ ಸೋತಿರಲಿಲ್ಲ. ಹೀಗೆ ಈ ಎಲ್ಲಾ ಸರಣಿಗಳಲ್ಲಿಯೂ ವೈಟ್ ವಾಶ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಹಾಗೂ ಏಕದಿನ ಸರಣಿಗಳಲ್ಲಿ ತಲಾ ಒಂದೊಂದು ಪಂದ್ಯ ಸೋತಿದೆ. ಈ ಮೂಲಕ ರೋಹಿತ್ ಶರ್ಮಾ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ನಂತರ ರೋಹಿತ್ ಶರ್ಮಾ ಮುನ್ನಡೆಸಿದ ಟೀಮ್ ಇಂಡಿಯಾವನ್ನು ಸೋಲಿಸಿದ ಪ್ರಥಮ ತಂಡ ಇಂಗ್ಲೆಂಡ್ ಆಗಿದೆ.

Story first published: Monday, July 18, 2022, 21:29 [IST]
Other articles published on Jul 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X