ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಆಯ್ಕೆ ಸಮಿತಿ ಕೊನೆ ಸುತ್ತಿನಲ್ಲಿ ಉಳಿದ ಅಭ್ಯರ್ಥಿಗಳ್ಯಾರು?

ಬೆಂಗಳೂರು, ಫೆಬ್ರವರಿ 18: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೊಸ ಆಯ್ಕೆ ಸಮಿತಿ ರಚಿಸುತ್ತಿದ್ದು, ಹಿರಿಯ ರಾಷ್ಟ್ರೀಯ ತಂಡದ ಆಯ್ಕೆದಾರರ ರೇಸಿನಲ್ಲಿ ನಾಲ್ವರು ಅಂತಿಮವಾಗಿ ಉಳಿದುಕೊಂಡಿದ್ದಾರೆ. ಈ ಪೈಕಿ ಒಬ್ಬರು ಮುಖ್ಯ ಆಯ್ಕೆದಾರರಾಗಲಿದ್ದು, ಮಾಜಿ ವೇಗಿ ಅಜಿತ್ ಅಗರ್ಕರ್ ಹೆಸರು ಮುಂಚೂಣಿಯಲ್ಲಿದೆ. ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಯನ್ ಮೋಂಗಿಯಾ ಅಂತಿಮ ಸುತ್ತಿನಿಂದ ಹೊರಬಿದ್ದಿದ್ದಾರೆ.

ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಕಳೆದ ನವೆಂಬರ್‌ನಲ್ಲಿ ಅಂತ್ಯವಾಗಿದೆ. ಹೊಸ ಆಯ್ಕೆ ಸಮಿತಿ ರಚನೆಯಾಗದ ಹಿನ್ನೆಲೆಯಲ್ಲಿ ಎಂ.ಎಸ್‌.ಕೆ ಪ್ರಸಾದ್ ರಾಜಸ್ಥಾನ್ ಬ್ಯಾಟ್ಸ್ ಮನ್ ಗಗನ್ ಖೋಡಾ ಅವರು ಸಮಿತಿಯಲ್ಲಿ ಮುಂದುವರೆದಿದ್ದು, ಕಳೆದ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದ್ದರು. ಭಾರತ ತನ್ನ ಮುಂದಿನ ಸರಣಿಯನ್ನು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ಆಡಲಿದ್ದು, ಈ ಸರಣಿಗೆ ಹೊಸ ಆಯ್ಕೆ ಸಮಿತಿ ತಂಡವನ್ನು ಪ್ರಕಟಗೊಳಿಸಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಟೀಮ್ ಸೆಲೆಕ್ಷನ್ ಕಮಿಟಿಗೆ ಘಟಾನುಘಟಿಗಳಿಂದ ಅರ್ಜಿ: ಯಾರೆಲ್ಲಾ ಇದ್ದಾರೆ ನೋಡಿ!ಟೀಮ್ ಸೆಲೆಕ್ಷನ್ ಕಮಿಟಿಗೆ ಘಟಾನುಘಟಿಗಳಿಂದ ಅರ್ಜಿ: ಯಾರೆಲ್ಲಾ ಇದ್ದಾರೆ ನೋಡಿ!

ಮಾರ್ಚ್‌ 12ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದ್ದು ಇದಕ್ಕೂ ಮುನ್ನ ಹೊಸ ಆಯ್ಕೆ ಸಮಿತಿ ರಚನೆಯಾಗಲಿದೆ ಎಂದು ಸೌರವ್ ಗಂಗೂಲಿ ತಿಳಿಸಿದರು. ಈಗ ಬಂದಿರುವ ಅರ್ಜಿಗಳಲ್ಲಿ ಮಾಜಿ ವಿಕೆಟ್ ಕೀಪರ್ ನಯನ್ ಮೋಂಗಿಯಾ ಅತಿ ಹೆಚ್ಚು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದು, ರೇಸಿನಲ್ಲಿ ಮುಂಚೂಣಿಯಲ್ಲಿದ್ದರು, ಆದರೆ, ಅನುಭವಿ ವೇಗಿಯಾಗಿದ್ದ ಮಾಜಿ ಆಟಗಾರ ಅಜಿತ್ ಅಗರ್ಕರ್ ಅವರು ಮುಂದೆ ಬಂದಿದ್ದು, ಇನ್ನು 10 ದಿನಗಳಲ್ಲಿ ಹೊಸ ಆಯ್ಕೆ ಸಮಿತಿ, ಆಯ್ಕೆ ಸಮಿತಿ ಅಧ್ಯಕ್ಷ ಯಾರು ಎಂದು ತಿಳಿಯಲಿದೆ.

ಹೊಸ ಆಯ್ಕೆ ಸಮಿತಿಗೆ ಘಟಾನುಘಟಿಗಳಿಂದ ಅರ್ಜಿ

ಹೊಸ ಆಯ್ಕೆ ಸಮಿತಿಗೆ ಘಟಾನುಘಟಿಗಳಿಂದ ಅರ್ಜಿ

ಹೊಸ ಆಯ್ಕೆ ಸಮಿತಿಗೆ ಘಟಾನುಘಟಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಮಾಜಿ ಅಲ್ ರೌಂಡರ್ ಅಜಿತ್ ಅಗರ್ಕರ್, ನಯನ್ ಮೋಂಗಿಯಾ, ಕನ್ನಡಿಗ ವೆಂಕಟೇಶ್ ಪ್ರಸಾದ್, ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ , ರಾಜೇಶ್ ಚೌಹಾಣ್, ಅಮೆ ಕುರಾಸಿಯಾ ಕೂಡ ಅರ್ಜಿಯನ್ನು ಸಲ್ಲಿಸಿದ್ದರು. ಈ ಪೈಕಿ ನಾಲ್ವರನ್ನು ಈಗ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಇಬ್ಬರು ಸಿಎಸಿ ಸೇರಲಿದ್ದಾರೆ. ಮದನ್ ಲಾಲ್, ಆರ್ ಪಿ ಸಿಂಗ್ ಹಾಗೂ ಸುಲಕ್ಷಣಾ ನೇಲ್ ಅವರಿರುವ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಗೆ ಇಬ್ಬರು ಆಯ್ಕೆದಾರರು ಹೊಸದಾಗಿ ಸೇರಲಿದ್ದಾರೆ.

ಆಯ್ಕೆ ಸಮಿತಿ ಮಾನದಂಡವೇನು?

ಆಯ್ಕೆ ಸಮಿತಿ ಮಾನದಂಡವೇನು?

ಬಿಸಿಸಿಐ ನಿಯಮದ ಪ್ರಕಾರ ಬಂದಿರುವ ಅರ್ಜಿಗಳಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪ್ರತಿನಿಧಿಸಿರುವ ಹಿರಿಯ ವ್ಯಕ್ತಿ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಲಿದ್ದಾರೆ. ಪುರುಷರ ಹಿರಿಯರ ತಂಡಕ್ಕೆ ಆಯ್ಕೆದಾರರಾಗಬೇಕಾದರೆ ಕನಿಷ್ಠ 7 ಟೆಸ್ಟ್‌ ಪಂದ್ಯಗಳನ್ನು ಅಥವಾ 30 ಫಸ್ಟ್‌ ಕ್ಲಾಸ್ ಆಟವನ್ನು ಆಡಿರಬೇಕು ಅಥವಾ 10 ಅಂತಾರಾಷ್ಟ್ರೀಯ ಏಕದಿನ ಮತ್ತು 20 ಫಸ್ಟ್‌ ಕ್ಲಾಸ್ ಪಂದ್ಯಗಳನ್ನು ಆಡಿರಲೇಬೇಕು ಎಂಬ ನಿಯಮವಿದೆ. ಹಿರಿಯರ ಮಹಿಳಾ ತಂಡಕ್ಕೆ ಆಯ್ಕೆಗಾರರಾಗಬೇಕಾದರೆ ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರಲೇಬೇಕು. ಕಿರಿಯರ ತಂಡದ ಆಯ್ಕೆಗಾರರ ತಂಡ ಸೇರಬೇಕಾದರೆ ಕನಿಷ್ಟ 25 ಫಸ್ಟ್‌ ಕ್ಲಾಸ್ ಪಂದ್ಯಗಳನ್ನು ಆಡಿರಬೇಕು ಎಂಬ ನಿಯಮಗಳು ಇದೆ.

ಲಕ್ಷ್ಮಣ್ ಶಿವರಾಮಕೃಷ್ಣನ್

ಲಕ್ಷ್ಮಣ್ ಶಿವರಾಮಕೃಷ್ಣನ್

ಆಯ್ಕೆ ಸಮಿತಿ ಸೇರಲು ಬಯಸಿರುವ ಅತ್ಯಂತ ಹಿರಿಯ ಅರ್ಜಿದಾರರಾಗಿದ್ದಾರೆ. ಲೆಗ್ ಸ್ಪಿನ್ ಮೂಲಕ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಭಾರತ ಪರ 9 ಟೆಸ್ಟ್ ಪಂದ್ಯ ಹಾಗೂ 16 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 26 ಹಾಗೂ 15 ವಿಕೆಟ್ ಗಳಿಸಿದ್ದಾರೆ. ಪಂದ್ಯದ ವೀಕ್ಷಕವಿವರಣೆಗಾರರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.

ವೆಂಕಟೇಶ್ ಪ್ರಸಾದ್

ವೆಂಕಟೇಶ್ ಪ್ರಸಾದ್

ಕರ್ನಾಟಕ ಮೂಲದ ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಮಧ್ಯಮ ವೇಗಿ, ಕಿರಿಯ ತಂಡ ಕೋಚ್, ಆಯ್ಕೆ ಸಮಿತಿ ಸದಸ್ಯರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ಅರ್ಜಿದಾರರ ಪೈಕಿ ಹೆಚ್ಚಿನ ಅನುಭವ ಉಳ್ಳವರಾಗಿದ್ದು, ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಭಾರತ ಪರ 33 ಟೆಸ್ಟ್ ಹಾಗೂ 161 ಏಕದಿನ ವಿಕೆಟ್ ಪಂದ್ಯಗಳನ್ನಾಡಿದ್ದು, ಒಟ್ಟಾರೆ 292 ವಿಕೆಟ್ ಗಳಿಸಿದ್ದಾರೆ.

ಅಜಿತ್ ಅಗರ್ಕರ್

ಅಜಿತ್ ಅಗರ್ಕರ್

ಭಾರತ ಪರ 26 ಟೆಸ್ಟ್ ಪಂದ್ಯ 191 ಏಕದಿನ ಪಂದ್ಯವನ್ನಾಡಿದ್ದು, ಕ್ರಮವಾಗಿ 58 ವಿಕೆಟ್ ಹಾಗೂ 288 ಏಕದಿನ ಕ್ರಿಕೆಟ್ ವಿಕೆಟ್ ಪಡೆದಿದ್ದಾರೆ. 4 ಟಿ20ಐ ಕೂಡಾ ಆಡಿದ್ದಾರೆ. 2000 ಅಂತಾರಾಷ್ಟೀಯ ರನ್ ಗಳಿಸಿದ್ದಾರೆ.

ರಾಜೇಶ್ ಚೌಹಾಣ್
ಭಾರತ ತಂಡದ ಮಾಜಿ ಆಟಗಾರ ರಾಜೇಶ್ ಚೌಹಾಣ್ 21 ಟೆಸ್ಟ್ ಪಂದ್ಯಗಳನ್ನಾಡಿದ್ದು, ಭಾರತ ಪರ 1993 ರಿಂದ 1998ರ ಅವಧಿಯಲ್ಲಿ ಆಡಿದ್ದು, 76 ವಿಕೆಟ್ ಪಡೆದಿದ್ದಾರೆ.

Story first published: Tuesday, February 18, 2020, 13:24 [IST]
Other articles published on Feb 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X