ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಭಾರತದ ವಿರುದ್ಧ ಅಪರೂಪದ ದಾಖಲೆ ಬರೆದ ಇಂಗ್ಲೆಂಡ್

List of Teams ending with a 1st innings lead on opening day without losing a wicket

ಲೀಡ್ಸ್: ಪ್ರವಾಸಿ ಭಾರತದ ವಿರುದ್ಧ ಆತಿಥೇಯ ಇಂಗ್ಲೆಂಡ್ ತಂಡ ಅಪರೂಪದ ದಾಖಲೆ ಬರೆದಿದೆ. ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ದಿನದಾಟದಲ್ಲಿ ವಿಕೆಟ್ ನಷ್ಟವಿಲ್ಲದೆ ಲೀಡ್‌ನೊಂದಿಗೆ ಆಡಿ ಈ ದಾಖಲೆ ನಿರ್ಮಿಸಿದೆ. ಟೆಸ್ಟ್‌ ಪಂದ್ಯವೊಂದರಲ್ಲಿ ಆರಂಭಿಕ ದಿನದಾಟದ ವೇಳೆ ಮೊದಲ ಇನ್ನಿಂಗ್ಸ್‌ನಲ್ಲಿ ಒಂದೂ ವಿಕೆಟ್ ನಷ್ಟವಿಲ್ಲದೆ ಮುನ್ನಡೆ ಪಡೆದು ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಇಂಗ್ಲೆಂಡ್ ಮತ್ತೊಮ್ಮೆ ಸ್ಥಾನ ಪಡೆದುಕೊಂಡಿದೆ.

ಭಾರತ vs ಇಂಗ್ಲೆಂಡ್: ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೇಡದ ದಾಖಲೆ ಬರೆದ ವಿರಾಟ್ ಕೊಹ್ಲಿಭಾರತ vs ಇಂಗ್ಲೆಂಡ್: ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೇಡದ ದಾಖಲೆ ಬರೆದ ವಿರಾಟ್ ಕೊಹ್ಲಿ

ಲೀಡ್ಸ್‌ನಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಭಾರತದ ಯಾವುದೇ ಬ್ಯಾಟ್ಸ್‌ಮನ್‌ 20 ರನ್ ಕೂಡ ಗಳಿಸದೆ ಬೇಗನೆ ನಿರ್ಗಮಿಸಿದ್ದು ಹಿನ್ನಡೆಗೆ ಕಾರಣವಾಯ್ತು. ಮೊದಲ ಇನ್ನಿಂಗ್ಸ್‌ ಆಡುತ್ತಿರುವ ಇಂಗ್ಲೆಂಡ್ ಈಗಾಗಲೇ 42 ರನ್ ಮುನ್ನಡೆ ಪಡೆದುಕೊಂಡಿದೆ.

Virat Kohli ವಿಕೆಟ್ ಪಡೆದು ಕುಣಿದು ಕುಪ್ಪಳಿಸಿದ Anderson | Oneindia Kannada
ಡಕ್‌ಔಟ್ ಆದ ಕೆಎಲ್ ರಾಹುಲ್

ಡಕ್‌ಔಟ್ ಆದ ಕೆಎಲ್ ರಾಹುಲ್

ಲೀಡ್ಸ್‌ ಪಂದ್ಯದಲ್ಲಿ ಭಾರತದ ಒಬ್ಬರೂ ಬ್ಯಾಟ್ಸ್‌ಮನ್‌ನಿಂದ ಉತ್ತಮ ರನ್ ಬರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್, ಕನ್ನಡಿಗ ಕೆಎಲ್ ರಾಹುಲ್ ಡಕ್‌ ಔಟ್ ಆದರು. ಜೇಮ್ಸ್ ಆ್ಯಂಡರ್ಸನ್ ಓವರ್‌ನಲ್ಲಿ 4 ಎಸೆತ ಎದುರಿಸಿದ ಬಳಿಕ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ರಾಹುಲ್ ಪೆವಿಲಿಯನ್‌ನತ್ತ ನಡೆದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 19 ರನ್ ಬಾರಿಸಿ ಕ್ರೆಗ್ ಓವರ್‌ಟನ್ ಓವರ್‌ನಲ್ಲಿ ಆಲಿ ರಾಬಿನ್ಸನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ರೋಹಿತ್ ಬಿಟ್ಟರೆ ತಂಡದ ಪರ ಎರಡನೇ ಅತ್ಯಧಿಕ ರನ್ ಗಳಿಸಿದ್ದು ಅಜಿಂಕ್ಯ ರಹಾನೆ. ಅದು 18 ರನ್. 10ಕ್ಕೂ ಹೆಚ್ಚು ರನ್ ಗಳಿಸಿದ್ದು ಇವರಿಬ್ಬರೆ. ಉಳಿದೆಲ್ಲರೂ 10ಕ್ಕೂ ಕಡಿಮೆ ರನ್‌ಗೆ ಔಟ್ ಆಗಿದ್ದರು.

ಆ್ಯಂಡರ್ಸನ್, ಓವರ್‌ಟನ್ ಮಾರಕ ಬೌಲಿಂಗ್

ಆ್ಯಂಡರ್ಸನ್, ಓವರ್‌ಟನ್ ಮಾರಕ ಬೌಲಿಂಗ್

ಭಾರತದ ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಮತ್ತು ಕ್ರೆಗ್ ಓವರ್‌ಟನ್ ಮಾರಕ ಬೌಲಿಂಗ್‌ ನಡೆಸಿದರು. ಆ್ಯಂಡರ್ಸನ್ 6 ರನ್‌ಗೆ 3 ವಿಕೆಟ್‌ ಮುರಿದರೆ, ಓವರ್‌ಟನ್ 14 ರನ್‌ಗೆ 3 ವಿಕೆಟ್ ಕೆಡವಿದರು. ಇನ್ನು ಆಲಿ ರಾಬಿನ್ಸನ್ 16 ರನ್‌ಗೆ 2, ಸ್ಯಾಮ್ ಕರನ್ 27 ರನ್‌ಗೆ 2 ವಿಕೆಟ್‌ ಪಡೆದು ಪಾರಮ್ಯ ಮೆರೆದರು. ಆರಂಭಿಕ ಇನ್ನಿಂಗ್ಸ್‌ ಅನ್ನು ಕಡಿಮೆ ರನ್‌ಗೆ ಮುಗಿಸಿದ ಕೆಟ್ಟ ದಾಖಲೆಗೆ ಭಾರತ ಕಾರಣವಾಯ್ತು. ಬುಧವಾರ (ಆಗಸ್ಟ್ 25) ಆರಂಭಿಕ ದಿನದಾಟದ ಅಂತ್ಯಕ್ಕೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 78 ರನ್ ಗಳಿಸಿತ್ತು. ಆರಂಭಿಕ ಇನ್ನಿಂಗ್ಸ್‌ಗೆ ಇಳಿದಿದ್ದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 42 ಓವರ್‌ಗಳಲ್ಲಿ 120 ರನ್ ಬಾರಿಸಿ 42 ರನ್ ಮುನ್ನಡೆಯಲ್ಲಿತ್ತು. ರೋರಿ ಬರ್ನ್ಸ್, ಹಸೀಬ್ ಹಮೀದ್ ತಲಾ ಅರ್ಧ ಶತಕ ಬಾರಿಸಿ ಆಡುತ್ತಿದ್ದರು.

ಇಂಗ್ಲೆಂಡ್ ಹೆಸರಿಗೆ ವಿಶೇಷ ದಾಖಲೆ

ಇಂಗ್ಲೆಂಡ್ ಹೆಸರಿಗೆ ವಿಶೇಷ ದಾಖಲೆ

(ತೃತೀಯ ಟೆಸ್ಟ್‌ನ ಆರಂಭಿಕ ದಿನ ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿಕೆಟ್‌ ನಷ್ಟವಿಲ್ಲದೆ 120 ರನ್ ಗಳಿಸಿ ಮುನ್ನಡೆ ಸಾಧಿಸಿದ್ದರಿಂದ ವಿಶೇಷ ದಾಖಲೆ ಪಟ್ಟಿಗೆ ಸೇರಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ದಿನ ಮೊದಲನೇ ಇನ್ನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ ಅತ್ಯಧಿಕ ರನ್ ಗಳಿಸಿ ಲೀಡ್ ಪಡೆದವರಲ್ಲಿ ನ್ಯೂಜಿಲೆಂಡ್‌ ಮೊದಲ ಸ್ಥಾನದಲ್ಲಿದೆ.)
* 160/0 ನ್ಯೂಜಿಲೆಂಡ್ vs ಪಾಕಿಸ್ತಾನ 104, ಹ್ಯಾಮಿಲ್ಟನ್ 2000/01
* 157/0 ಇಂಗ್ಲೆಂಡ್ vs ಆಸ್ಟ್ರೇಲಿಯಾ 98, ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ 2010/11
* 120/0 ಇಂಗ್ಲೆಂಡ್ vs ಭಾರತ 78, ಲೀಡ್ಸ್‌ 2021

Story first published: Thursday, August 26, 2021, 11:22 [IST]
Other articles published on Aug 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X