ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2008-2022 ಐಪಿಎಲ್‌ವರೆಗೆ ಕೊನೆಯ ಸ್ಥಾನ ಪಡೆದುಕೊಂಡ ತಂಡಗಳ ಪಟ್ಟಿ: 4 ಬಾರಿ ಮುಗ್ಗರಿಸಿದ ತಂಡವಿದು!

List of Teams which ended their IPL journey at bottom of the points table from IPL 2008 to IPL 2022

ಕಳೆದ ಮಾರ್ಚ್ ತಿಂಗಳ ಅಂತಿಮ ವಾರದಲ್ಲಿ ಆರಂಭವಾದ ಜಗತ್ತಿನ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಇದೀಗ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯುತ್ತಿವೆ.

IPL 2022: ಗಾಯಕ್ಕೊಳಗಾದ ಹರ್ಷಲ್ ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆಡ್ತಾರಾ, ಇಲ್ವಾ?IPL 2022: ಗಾಯಕ್ಕೊಳಗಾದ ಹರ್ಷಲ್ ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆಡ್ತಾರಾ, ಇಲ್ವಾ?

ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನೂತನ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಕಣಕ್ಕಿಳಿದ ಕಾರಣ ಲೀಗ್ ಹಂತದಲ್ಲಿ ಹತ್ತು ತಂಡಗಳ ನಡುವೆ ಪ್ಲೇಆಫ್ ಸುತ್ತಿಗಾಗಿ ಹಣಾಹಣಿ ನಡೆಯಿತು. ಈ ಪೈಕಿ ಈ ಎರಡೂ ನೂತನ ತಂಡಗಳು ಹಾಗೂ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿ 4 ತಂಡಗಳು ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಂಡವು. ಈ ಮೂಲಕ 5 ವರ್ಷಗಳ ನಂತರ ನೂತನ ಐಪಿಎಲ್ ಚಾಂಪಿಯನ್ ಹೊರಹೊಮ್ಮುವುದು ಖಚಿತವಾಗಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವಂತಹ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ಈ ಬಾರಿ ಲೀಗ್ ಹಂತದಲ್ಲಿಯೇ ಹೊರಬೀಳುವ ಮೂಲಕ ನೆಲಕಚ್ಚಿವೆ.

IPL 2022: ಪ್ಲೇ ಆಫ್ ಪ್ರವೇಶಿಸಿರುವ 4 ತಂಡಗಳ ಪೈಕಿ ಈ ತಂಡವೇ ಚಾಂಪಿಯನ್ ಆಗಬೇಕು ಎಂದ ರೈನಾIPL 2022: ಪ್ಲೇ ಆಫ್ ಪ್ರವೇಶಿಸಿರುವ 4 ತಂಡಗಳ ಪೈಕಿ ಈ ತಂಡವೇ ಚಾಂಪಿಯನ್ ಆಗಬೇಕು ಎಂದ ರೈನಾ

ಅದರಲ್ಲಿಯೂ ಐಪಿಎಲ್ ಇತಿಹಾಸದಲ್ಲಿ 5 ಬಾರಿ ಟ್ರೋಫಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಜಯ ಸಾಧಿಸಿ ಇನ್ನುಳಿದ 10 ಪಂದ್ಯಗಳಲ್ಲಿ ಸೋಲುಂಡು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನ ಪಡೆದುಕೊಳ್ಳುವುದರ ಮೂಲಕ ತನ್ನ ಪಯಣವನ್ನು ಮುಗಿಸಿದೆ. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಅಂತಿಮ ಸ್ಥಾನ ಪಡೆದುಕೊಂಡಿದ್ದರೆ, ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೂ ನಡೆದಿರುವ ಎಲ್ಲಾ ಆವೃತ್ತಿಗಳಲ್ಲಿಯೂ ಅಂತಿಮ ಸ್ಥಾನಗಳನ್ನು ಪಡೆದುಕೊಂಡಿರುವ ತಂಡಗಳ ಸಂಪೂರ್ಣ ಪಟ್ಟಿ ಮುಂದೆ ಇದೆ ಓದಿ..

ಅಂತಿಮ ಸ್ಥಾನ ಪಡೆದುಕೊಂಡಿರುವ ತಂಡಗಳ ಪಟ್ಟಿ

ಅಂತಿಮ ಸ್ಥಾನ ಪಡೆದುಕೊಂಡಿರುವ ತಂಡಗಳ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 15 ಆವೃತ್ತಿಗಳು ಜರುಗಿದ್ದು, ಈ ಎಲ್ಲಾ ಆವೃತ್ತಿಗಳಲ್ಲಿಯೂ ಅಂತಿಮ ಸ್ಥಾನ ಪಡೆದುಕೊಂಡ ತಂಡಗಳ ಪಟ್ಟಿ ಕೆಳಕಂಡಂತಿದೆ.

2008 - ಡೆಕ್ಕನ್ ಚಾರ್ಜರ್ಸ್

2009 - ಕೋಲ್ಕತ್ತಾ ನೈಟ್ ರೈಡರ್ಸ್

2010 - ಕಿಂಗ್ಸ್ ಇಲೆವೆನ್ ಪಂಜಾಬ್

2011 - ಪುಣೆ ವಾರಿಯರ್ಸ್ ಇಂಡಿಯಾ

2012 - ಡೆಲ್ಲಿ ಡೇರ್ ಡೆವಿಲ್ಸ್

2013 - ಡೆಲ್ಲಿ ಡೇರ್ ಡೆವಿಲ್ಸ್

2014 - ಡೆಲ್ಲಿ ಡೇರ್ ಡೆವಿಲ್ಸ್

2015 - ಕಿಂಗ್ಸ್ ಇಲೆವೆನ್ ಪಂಜಾಬ್

2016 - ಕಿಂಗ್ಸ್ ಇಲೆವೆನ್ ಪಂಜಾಬ್

2017 - ರಾಯಲ್ ಚಾಲೆಂಜರ್ಸ್ ಬೆಂಗಳೂರು

2018 - ಡೆಲ್ಲಿ ಡೇರ್ ಡೆವಿಲ್ಸ್

2019 - ರಾಯಲ್ ಚಾಲೆಂಜರ್ಸ್ ಬೆಂಗಳೂರು

2020 - ರಾಜಸ್ಥಾನ್ ರಾಯಲ್ಸ್

2021 - ಸನ್ ರೈಸರ್ಸ್ ಹೈದರಾಬಾದ್

2022 - ಮುಂಬೈ ಇಂಡಿಯನ್ಸ್

4 ಬಾರಿ ಕೊನೆ ಸ್ಥಾನ ಪಡೆದುಕೊಂಡ ತಂಡವಿದು

4 ಬಾರಿ ಕೊನೆ ಸ್ಥಾನ ಪಡೆದುಕೊಂಡ ತಂಡವಿದು

ಡೆಲ್ಲಿ ಡೇರ್ ಡೆವಿಲ್ಸ್ 2012, 2013, 2014 ಮತ್ತು 2016ರ ಐಪಿಎಲ್ ಆವೃತ್ತಿಗಳಲ್ಲಿ ಅಂತಿಮ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿಯೇ ಅತಿಹೆಚ್ಚು ಬಾರಿ ಕೊನೆಯ ಸ್ಥಾನ ಪಡೆದುಕೊಂಡಿರುವ ತಂಡ ಎನಿಸಿಕೊಂಡಿದೆ.

ಲಖನೌ ಮತ್ತು ಬೆಂಗಳೂರು ನಡುವೆ ರೋಚಕ ಪಂದ್ಯ !! | Oneindia Kannada
ಕಿಂಗ್ಸ್ ಇಲವೆನ್ ಪಂಜಾಬ್ 3 ಬಾರಿ

ಕಿಂಗ್ಸ್ ಇಲವೆನ್ ಪಂಜಾಬ್ 3 ಬಾರಿ

ಡೆಲ್ಲಿ ಡೇರ್ ಡೆವಿಲ್ಸ್ ಹೊರತುಪಡಿಸಿದರೆ ಪಂಜಾಬ್ ಕಿಂಗ್ಸ್ ಅತಿ ಹೆಚ್ಚು ಬಾರಿ ಕೊನೆಯ ಸ್ಥಾನ ಪಡೆದುಕೊಂಡಿರುವ ತಂಡ ಎನಿಸಿಕೊಂಡಿದೆ. 2010, 2015 ಮತ್ತು 2016ರ ಐಪಿಎಲ್ ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಅಂತಿಮ ಸ್ಥಾನ ಪಡೆದುಕೊಂಡಿದೆ.

Story first published: Wednesday, May 25, 2022, 10:06 [IST]
Other articles published on May 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X