2021ರ ಟಿ20 ವಿಶ್ವಕಪ್ ನಂತರ ಹೆಚ್ಚು ಟಿ20 ಪಂದ್ಯ ಗೆದ್ದಿರುವ ಹಾಗೂ ಸೋತಿರುವ ತಂಡ ಯಾವುದು?

ಕಳೆದ ಬಾರಿ ಯುಎಇಯಲ್ಲಿ ನಡೆದಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮಣ್ಣು ಮುಕ್ಕಿಸಿದ್ದ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧದ ಪ್ರಮುಖ ಪಂದ್ಯಗಳಲ್ಲಿ ಸೋಲುವುದರ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವುದರಲ್ಲಿ ವಿಫಲವಾಗಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು.

ಆತನ ಅಲಭ್ಯತೆ ಏಷ್ಯಾಕಪ್‌ನಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಎಂದ ಪಾಕ್ ಮಾಜಿ ಕ್ರಿಕೆಟಿಗ!ಆತನ ಅಲಭ್ಯತೆ ಏಷ್ಯಾಕಪ್‌ನಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಎಂದ ಪಾಕ್ ಮಾಜಿ ಕ್ರಿಕೆಟಿಗ!

ಹೀಗೆ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬೃಹತ್ ವಿಫಲ ಹೊಂದಿದ ನಂತರ ತಂಡದಲ್ಲಿ ಭಾರೀ ಬದಲಾವಣೆಗಳು ಜರುಗಿದ್ದು, ಟೂರ್ನಿ ಮುಕ್ತಾಯದ ಬಳಿಕ ನೂತನ ನಾಯಕ ಮತ್ತು ನೂತನ ಕೋಚ್ ಭಾರತ ತಂಡದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹೀಗೆ ಸಾಕಷ್ಟು ಬದಲಾವಣೆಗಳನ್ನು ಹೊಂದಿರುವ ಟೀಮ್ ಇಂಡಿಯಾ ಈ ವರ್ಷ ನಡೆಯಲಿರುವ ಪ್ರತಿಷ್ಠಿತ ಟೂರ್ನಿಗಳಾದ ಏಷ್ಯಾಕಪ್ ಹಾಗೂ ಟಿ ಟ್ವೆಂಟಿ ವಿಶ್ವಕಪ್‌ಗಳನ್ನು ಗೆಲ್ಲುವತ್ತ ಚಿತ್ತ ನೆಟ್ಟಿದ್ದು, ಈಗಾಗಲೇ ಬಿಸಿಸಿಐ ಇದೇ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಏಷ್ಯಾಕಪ್‌ಗಾಗಿ ಹದಿನೈದು ಆಟಗಾರರ ಭಾರತ ತಂಡವನ್ನು ಪ್ರಕಟಿಸಿದೆ.

ಆ ಒಂದು ವಿಚಾರ ಮಾತ್ರ ನನಗೆ ಅರ್ಥವೇ ಆಗುತ್ತಿಲ್ಲ: ಗೊಂದಲದ ಬಗ್ಗೆ ತುಟಿ ಬಿಚ್ಚಿದ ಶಿಖರ್ ಧವನ್ಆ ಒಂದು ವಿಚಾರ ಮಾತ್ರ ನನಗೆ ಅರ್ಥವೇ ಆಗುತ್ತಿಲ್ಲ: ಗೊಂದಲದ ಬಗ್ಗೆ ತುಟಿ ಬಿಚ್ಚಿದ ಶಿಖರ್ ಧವನ್

ಈ ಬಾರಿಯ ಏಷ್ಯಾಕಪ್ ಟೂರ್ನಿ 20 ಓವರ್ ಮಾದರಿಯಲ್ಲಿರಲಿದ್ದು, ಟೀಮ್ ಇಂಡಿಯಾ ಸೇರಿದಂತೆ ಈ ಟೂರ್ನಿಯಲ್ಲಿ ಭಾಗವಹಿಸುವ ಏಷ್ಯಾ ಕ್ರಿಕೆಟ್ ತಂಡಗಳು ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಮುಗಿದ ನಂತರ ಒಟ್ಟು ಎಷ್ಟು ಟಿ ಟ್ವೆಂಟಿ ಪಂದ್ಯಗಳಲ್ಲಿ ಕಣಕ್ಕಿಳಿದಿವೆ ಹಾಗೂ ಎಷ್ಟು ಪಂದ್ಯಗಳಲ್ಲಿ ಗೆದ್ದಿವೆ ಎಂಬ ಮಾಹಿತಿ ಹಾಗೂ ಒಟ್ಟಾರೆ ಎಲ್ಲಾ ತಂಡಗಳ ಫಲಿತಾಂಶದ ಮಾಹಿತಿಯೂ ಈ ಕೆಳಕಂಡಂತಿದೆ.

2021ರ ವಿಶ್ವಕಪ್ ಬಳಿಕ ವಿವಿಧ ತಂಡಗಳು ಆಡಿರುವ ಪಂದ್ಯಗಳು ಮತ್ತು ಫಲಿತಾಂಶ

2021ರ ವಿಶ್ವಕಪ್ ಬಳಿಕ ವಿವಿಧ ತಂಡಗಳು ಆಡಿರುವ ಪಂದ್ಯಗಳು ಮತ್ತು ಫಲಿತಾಂಶ

2021ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ಇಲ್ಲಿಯವರೆಗೂ ವಿವಿಧ ತಂಡಗಳು ಆಡಿರುವ ಒಟ್ಟಾರೆ ಟಿ ಟ್ವೆಂಟಿ ಪಂದ್ಯಗಳು ಹಾಗೂ ಫಲಿತಾಂಶದ ಸಂಪೂರ್ಣ ಪಟ್ಟಿ:

ಟಾಪ್ 1, ಭಾರತ: 24 ಪಂದ್ಯಗಳು, 19 ಗೆಲುವು, 4 ಸೋಲು

ಟಾಪ್ 2, ಜಿಂಬಾಬ್ವೆ: 16 ಪಂದ್ಯಗಳು, 9 ಗೆಲುವು, 7 ಸೋಲು

ಟಾಪ್ 3, ನ್ಯೂಜಿಲೆಂಡ್ 10 ಪಂದ್ಯಗಳು, 7 ಗೆಲುವು, 3 ಸೋಲು

ಟಾಪ್ 4, ಆಸ್ಟ್ರೇಲಿಯಾ: 9 ಪಂದ್ಯಗಳು, 6 ಗೆಲುವು, 2 ಸೋಲು

ಟಾಪ್ 5, ಐರ್ಲೆಂಡ್: 17 ಪಂದ್ಯಗಳು, 6 ಗೆಲುವು, 11 ಸೋಲು

ಟಾಪ್ 6, ಪಾಕಿಸ್ತಾನ: 7 ಪಂದ್ಯಗಳು, 6 ಗೆಲುವು, 1 ಸೋಲು

ಟಾಪ್ 7, ಆಸ್ಟ್ರೇಲಿಯಾ: 10 ಪಂದ್ಯಗಳು, 6 ಗೆಲುವು, 3 ಸೋಲು

ಟಾಪ್ 8, ವೆಸ್ಟ್ ಇಂಡೀಸ್: 19 ಪಂದ್ಯಗಳು, 6 ಗೆಲುವು, 12 ಸೋಲು

ಟಾಪ್ 9, ಅಫ್ಘಾನಿಸ್ತಾನ: 5 ಪಂದ್ಯಗಳು, 4 ಗೆಲುವು, 1 ಸೋಲು

ಟಾಪ್ 10, ಇಂಗ್ಲೆಂಡ್: 11 ಪಂದ್ಯಗಳು, 4 ಗೆಲುವು, 7 ಸೋಲು

ಟಾಪ್ 10 ಪಟ್ಟಿಯಲ್ಲಿಲ್ಲ ಬಾಂಗ್ಲಾ, ಶ್ರೀಲಂಕಾ

ಟಾಪ್ 10 ಪಟ್ಟಿಯಲ್ಲಿಲ್ಲ ಬಾಂಗ್ಲಾ, ಶ್ರೀಲಂಕಾ

ಇನ್ನು ಈ ಟಾಪ್ 10 ಪಟ್ಟಿಯಲ್ಲಿ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಇಲ್ಲದೇ ಇರುವುದು ತಂಡಗಳಿಗೆ ಹಿನ್ನಡೆಯುಂಟಾಗುವ ಸಾಧ್ಯತೆಗಳಿವೆ. ಏಷ್ಯಾಕಪ್ ಟೂರ್ನಿ ಟಿ ಟ್ವೆಂಟಿ ಮಾದರಿಯಲ್ಲಿ ನಡೆಯುವುದರಿಂದ ಹೆಚ್ಚು ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನು ಆಡದೇ ಇರುವ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಟಿ ಟ್ವೆಂಟಿ ಪಂದ್ಯಗಳನ್ನು ಆಡಿ ಅನುಭವ ಪಡೆದಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಂದೆ ಅಕ್ಷರಶಃ ಮಂಕಾಗುವುದು ಖಚಿತ ಎನ್ನಬಹುದು.

ಶಸ್ತ್ರ ಚಿಕಿತ್ಸೆ ನಂತರ ಟೆಂಪಲ್ ರನ್ ಮಾಡುತ್ತಿರುವ KL Rahul !! | *Cricket | OneIndia Kannada
ಭಾರತ ಹೆಚ್ಚು ಗೆಲುವು, ವಿಂಡೀಸ್ ಹೆಚ್ಚು ಸೋಲು

ಭಾರತ ಹೆಚ್ಚು ಗೆಲುವು, ವಿಂಡೀಸ್ ಹೆಚ್ಚು ಸೋಲು

ಇನ್ನು ಈ ಪಟ್ಟಿಯಲ್ಲಿ ಅತಿಹೆಚ್ಚು ಪಂದ್ಯ ಗೆದ್ದ ಭಾರತ ಅಗ್ರಸ್ಥಾನದಲ್ಲಿದ್ದರೆ, ಈ ಹಿಂದೆ ಟಿ ಟ್ವೆಂಟಿ ಪರಿಣಿತರು ಎಂದು ಖ್ಯಾತಿಯನ್ನು ಪಡೆದಿದ್ದ ವೆಸ್ಟ್ ಇಂಡೀಸ್ ಅತಿಹೆಚ್ಚು ಸೋಲನ್ನು ಕಂಡ ತಂಡವಾಗಿದೆ.

For Quick Alerts
ALLOW NOTIFICATIONS
For Daily Alerts
Read more about: mykhel original india t20
Story first published: Wednesday, August 10, 2022, 15:59 [IST]
Other articles published on Aug 10, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X