ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‍ನಲ್ಲಿ ದಾಖಲಾಗಿರುವ ದೊಡ್ಡ ರನ್ ಚೇಸ್‌ಗಳ ಪಟ್ಟಿ; ದೊಡ್ಡ ಚೇಸ್ ಮಾಡಿದ ತಂಡ ಯಾವುದು?

Top 10 list of highest run chases in test cricket history

ಭಾರತ ಮತ್ತು ಇಂಗ್ಲೆಂಡ್ ನಡುವೆ ಮರು ಆಯೋಜನೆಯಾಗಿದ್ದ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಐದನೇ ಟೆಸ್ಟ್ ಪಂದ್ಯ ನಿನ್ನೆಯಷ್ಟೇ ( ಜುಲೈ 5 ) ಮುಕ್ತಾಯಗೊಂಡಿದೆ. ಎಡ್ಜ್‌ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ 7 ವಿಕೆಟ್‍ಗಳ ಐತಿಹಾಸಿಕ ಗೆಲುವನ್ನು ಕಂಡಿದೆ.

ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್

ಹೌದು, ಟೀಂ ಇಂಡಿಯಾ ನೀಡಿದ್ದ 378 ರನ್‌ಗಳ ಗುರಿಯನ್ನು ಲೀಲಾಜಾಲವಾಗಿ ಬೆನ್ನತ್ತಿದ ಇಂಗ್ಲೆಂಡ್ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ರನ್‌ಗಳನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಚೇಸ್ ಮಾಡಿ ನೂತನ ಇತಿಹಾಸ ಬರೆದಿದೆ. ಇತ್ತ ಇದೇ ಮೊದಲ ಬಾರಿಗೆ ಇಷ್ಟು ಮೊತ್ತವನ್ನು ಗುರಿಯನ್ನು ನೀಡಿ ಸೋತ ಟೀಂ ಇಂಡಿಯಾ ಭಾರಿ ಮುಖಭಂಗಕ್ಕೆ ಒಳಗಾಗಿದೆ. ಅಷ್ಟೇ ಅಲ್ಲದೆ ಈ ಗೆಲುವನ್ನು ದಾಖಲಿಸಿದ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಸಮಬಲ ಮಾಡಿಕೊಂಡಿದೆ.

ಈತನ ಹುಚ್ಚುತನದಿಂದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಮಂಕಾಯಿತು ಎಂದ ಪೀಟರ್ಸನ್!ಈತನ ಹುಚ್ಚುತನದಿಂದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಮಂಕಾಯಿತು ಎಂದ ಪೀಟರ್ಸನ್!

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 416 ರನ್ ಕಲೆಹಾಕಿತ್ತು ಹಾಗೂ ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ಕಟ್ಟಿ ಹಾಕುವುದರ ಮೂಲಕ 132 ರನ್‌ಗಳ ಮುನ್ನಡೆಯನ್ನು ಕೂಡ ಕಾಯ್ದುಕೊಂಡಿತ್ತು. ಹೀಗೆ ಮೊದಲ ಇನ್ನಿಂಗ್ಸ್ ಮುಕ್ತಾಯದ ಹಂತಕ್ಕೆ ಪಂದ್ಯದಲ್ಲಿ ಹಿಡಿತವನ್ನು ಸಾಧಿಸಿದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಮುಗ್ಗರಿಸಿತು. 245 ರನ್‌ಗಳಿಗೆ ಆಲ್ ಔಟ್ ಆದ ಟೀಮ್ ಇಂಡಿಯಾ 378 ರನ್‌ಗಳ ಗುರಿಯನ್ನು ನೀಡಿತು. ಜೋ ರೂಟ್ ಮತ್ತು ಜಾನಿ ಬೈರ್ ಸ್ಟೋ ಭರ್ಜರಿ ಶತಕಗಳ ನೆರವಿನಿಂದ ಇಂಗ್ಲೆಂಡ್ ಈ ಮೊತ್ತವನ್ನು ಕಲೆಹಾಕಿ ತನ್ನ ಪಾಲಿನ ಅತಿದೊಡ್ಡ ಟೆಸ್ಟ್ ಗೆಲುವನ್ನು ದಾಖಲಿಸಿತು. ಹೀಗೆ ಇಂಗ್ಲೆಂಡ್ ತಂಡ ಬೃಹತ್ ಗೆಲುವನ್ನು ದಾಖಲಿಸುವುದರ ಮೂಲಕ ಟೆಸ್ಟ್ ಕ್ರಿಕೆಟ್‍ನ ಸಾರ್ವಕಾಲಿಕ ಅತಿಹೆಚ್ಚಿನ ರನ್ ಚೇಸ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಟೆಸ್ಟ್ ಕ್ರಿಕೆಟ್‍ನಲ್ಲಿ ದಾಖಲಾಗಿರುವ ಅತಿ ದೊಡ್ಡ ರನ್ ಚೇಸ್‌ಗಳ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ.

ಅತಿದೊಡ್ಡ ಮೊತ್ತದ ಟೆಸ್ಟ್ ರನ್ ಚೇಸ್ ಪಟ್ಟಿ

ಅತಿದೊಡ್ಡ ಮೊತ್ತದ ಟೆಸ್ಟ್ ರನ್ ಚೇಸ್ ಪಟ್ಟಿ

1. ವೆಸ್ಟ್ ಇಂಡೀಸ್ 418/7 vs ಆಸ್ಟ್ರೇಲಿಯಾ - ಗುರಿ: 418

2. ದಕ್ಷಿಣ ಆಫ್ರಿಕಾ 414/4 vs ಆಸ್ಟ್ರೇಲಿಯಾ - ಗುರಿ: 414

3. ಆಸ್ಟ್ರೇಲಿಯಾ 404/3 vs ಇಂಗ್ಲೆಂಡ್ - ಗುರಿ: 404

4. ಭಾರತ 406/4 vs ವೆಸ್ಟ್ ಇಂಡೀಸ್‌ - ಗುರಿ: 403

5. ವೆಸ್ಟ್ ಇಂಡೀಸ್‌ 395/7 vs ಬಾಂಗ್ಲಾದೇಶ - ಗುರಿ: 395

6. ಶ್ರೀಲಂಕಾ 391/6 vs ಜಿಂಬಾಬ್ವೆ - ಗುರಿ: 388

7. ಭಾರತ 387/4 vs ಇಂಗ್ಲೆಂಡ್ - ಗುರಿ: 387

8. ಇಂಗ್ಲೆಂಡ್ 378/3 vs ಭಾರತ - ಗುರಿ: 378

9. ಪಾಕಿಸ್ತಾನ 382/3 vs ಶ್ರೀಲಂಕಾ - ಗುರಿ: 377

10. ಆಸ್ಟ್ರೇಲಿಯಾ 369/6 vs ಪಾಕಿಸ್ತಾನ - ಗುರಿ: 369

ವೆಸ್ಟ್ ಇಂಡೀಸ್ ಹೆಸರಿನಲ್ಲಿದೆ ದಾಖಲೆ

ವೆಸ್ಟ್ ಇಂಡೀಸ್ ಹೆಸರಿನಲ್ಲಿದೆ ದಾಖಲೆ

2003ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 240 ರನ್ ಕಲೆಹಾಕಿತ್ತು ಹಾಗೂ ವೆಸ್ಟ್ ಇಂಡೀಸ್ ಕೂಡ ಮೊದಲನೇ ಇನ್ನಿಂಗ್ಸ್‌ನಲ್ಲಿ 240 ರನ್ ಬಾರಿಸಿತ್ತು. ಅತ್ತ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಬರೋಬ್ಬರಿ 417 ರನ್ ಕಲೆಹಾಕಿ ವೆಸ್ಟ್ ಇಂಡೀಸ್ ತಂಡಕ್ಕೆ 418 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಇತ್ತ 7 ವಿಕೆಟ್ ನಷ್ಟಕ್ಕೆ 418 ರನ್ ಕಲೆಹಾಕಿದ ವೆಸ್ಟ್ ಇಂಡೀಸ್ 3 ವಿಕೆಟ್‍ಗಳ ಜಯ ಸಾಧಿಸಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ತಂಡವೊಂದು ಚೇಸ್ ಮಾಡಿದ ಅತೀ ದೊಡ್ಡ ಮೊತ್ತವಾಗಿದೆ.

403 ರನ್ ಚೇಸ್ ಮಾಡಿತ್ತು ಟೀಮ್ ಇಂಡಿಯಾ

403 ರನ್ ಚೇಸ್ ಮಾಡಿತ್ತು ಟೀಮ್ ಇಂಡಿಯಾ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಚೇಸ್ ಮಾಡಿದ ತಂಡಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಲ್ಕನೇ ಸ್ಥಾನದಲ್ಲಿದೆ. 1976ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ 359 ರನ್ ಕಲೆಹಾಕಿತ್ತು ಹಾಗೂ ಟೀಮ್ ಇಂಡಿಯಾ 228 ರನ್‌ಗಳಿಗೆ ಆಲ್ ಔಟ್ ಆಗಿತ್ತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 271 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿದ ವೆಸ್ಟ್ ಇಂಡೀಸ್ ಭಾರತಕ್ಕೆ ಗೆಲ್ಲಲು 403 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಇತ್ತ 4 ವಿಕೆಟ್ ನಷ್ಟಕ್ಕೆ 406 ರನ್ ಚಚ್ಚಿದ ಟೀಮ್ ಇಂಡಿಯಾ 6 ವಿಕೆಟ್‍ಗಳ ಬೃಹತ್ ಗೆಲುವನ್ನು ದಾಖಲಿಸಿತ್ತು. ಟೀಮ್ ಇಂಡಿಯಾದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಗುಂಡಪ್ಪ ವಿಶ್ವನಾಥ್ ಹಾಗೂ ಸುನಿಲ್ ಗವಾಸ್ಕರ್ ಶತಕ ಬಾರಿಸಿ ಮಿಂಚಿದ್ದರು.

Story first published: Wednesday, July 6, 2022, 10:16 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X