ಫೋರ್, ಸಿಕ್ಸರ್‌ಗಳಿಂದ ಅತಿಹೆಚ್ಚು ಟಿ20 ರನ್ ಬಾರಿಸಿದ ಡೇಂಜರಸ್ ಬ್ಯಾಟ್ಸ್‌ಮನ್‌ಗಳಿವರು

ಇತ್ತೀಚಿನ ದಿನಗಳಲ್ಲಿ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯ ಅಬ್ಬರ ತುಸು ಹೆಚ್ಚಾಗಿಯೇ ಇದೆ ಎಂದು ಹೇಳಬಹುದು. ಅದರಲ್ಲಿಯೂ ಈ ವರ್ಷ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಹಾಗೂ ಏಷ್ಯಾಕಪ್ ಟೂರ್ನಿ ಕೂಡ ಟಿ ಟ್ವೆಂಟಿ ಮಾದರಿಯಲ್ಲಿಯೇ ನಡೆಯುತ್ತಿರುವ ಕಾರಣ ಈ ಚುಟುಕು ಕ್ರಿಕೆಟ್ ಮಾದರಿ ಪ್ರಸ್ತುತ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಮಾದರಿಗಳಿಗಿಂತ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಇನ್ನು ವಿಶ್ವದಾದ್ಯಂತ ನಡೆಯುವ ಹಲವಾರು ವಿವಿಧ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳು ಕೂಡ ಈ ಟಿಟ್ವೆಂಟಿ ಮಾದರಿಯಲ್ಲಿಯೇ ನಡೆಯುತ್ತಿರುವ ಕಾರಣ ಈ ಚುಟುಕು ಕ್ರಿಕೆಟ್ ವಿಶ್ವದಾದ್ಯಂತ ವ್ಯಾಪಿಸಿದ್ದು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್‌ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್‌ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!

ಇನ್ನು ಈ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯ ಅಂತರರಾಷ್ಟ್ರೀಯ ಸ್ವರೂಪದಲ್ಲಿ ಈಗಾಗಲೇ ವಿಶ್ವದ ಹಲವಾರು ಕ್ರಿಕೆಟಿಗರು ವಿವಿಧ ದಾಖಲೆಗಳನ್ನು ನಿರ್ಮಿಸಿದ್ದು, ಈ ವರ್ಷದ ಆರಂಭದಲ್ಲಿ ಈ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಇದೀಗ ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗಪ್ಟಿಲ್ ಹಾಗೂ ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ. ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಸದ್ಯ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರೆ, ಮಾರ್ಟಿನ್ ಗಪ್ಟಿಲ್ ದ್ವಿತೀಯ ಸ್ಥಾನ ಹಾಗೂ ವಿರಾಟ್ ಕೊಹ್ಲಿ ತೃತೀಯ ಸ್ಥಾನದಲ್ಲಿದ್ದಾರೆ.

ಭಾರತ vs ಜಿಂಬಾಬ್ವೆ: ಜಿಂಬಾಬ್ವೆ ಪ್ರವಾಸದಿಂದ ದ್ರಾವಿಡ್‌ಗೆ ಬ್ರೇಕ್; ಬದಲಿ ಕೋಚ್ ಆಯ್ಕೆ!ಭಾರತ vs ಜಿಂಬಾಬ್ವೆ: ಜಿಂಬಾಬ್ವೆ ಪ್ರವಾಸದಿಂದ ದ್ರಾವಿಡ್‌ಗೆ ಬ್ರೇಕ್; ಬದಲಿ ಕೋಚ್ ಆಯ್ಕೆ!

ಇನ್ನು ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ಮೂಲಕ ಅತಿ ಹೆಚ್ಚು ರನ್ ಕಲೆಹಾಕಿರುವ ಆಟಗಾರರು ಇದ್ದು, ಈ ಆಟಗಾರರ ಟಾಪ್ 3 ಪಟ್ಟಿ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

3. ಪೌಲ್ ಸ್ಟರ್ಲಿಂಗ್

3. ಪೌಲ್ ಸ್ಟರ್ಲಿಂಗ್

ಐರ್ಲೆಂಡ್ ಕ್ರಿಕೆಟ್ ವಿಶ್ವ ಕ್ರಿಕೆಟ್‌ಗೆ ನೀಡಿದ ಸ್ಪೋಟಕ ಟಿ ಟ್ವೆಂಟಿ ದಾಂಡಿಗರಲ್ಲಿ ಪ್ರಮುಖರಾದವರು ಪೌಲ್ ಸ್ಟರ್ಲಿಂಗ್. 2009ರಲ್ಲಿ ಪದಾರ್ಪಣೆ ಮಾಡಿದ ಈ ಐರ್ಲೆಂಡ್ ತಂಡದ ಆರಂಭಿಕ ಆಟಗಾರ ಪೌಲ್ ಸ್ಟರ್ಲಿಂಗ್ ಇಲ್ಲಿಯವರೆಗೂ ಒಟ್ಟು 111 ಟಿ ಟ್ವೆಂಟಿ ಇನ್ನಿಂಗ್ಸ್ ಆಡಿ ಒಟ್ಟು 2975 ರನ್ ಕಲೆ ಹಾಕಿದ್ದು, ಅತಿ ಹೆಚ್ಚು ಟಿ ಟ್ವೆಂಟಿ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೀಗೆ ಉತ್ತಮ ಅಂಕಿ ಅಂಶ ಹೊಂದಿರುವ ಪೌಲ್ ಸ್ಟರ್ಲಿಂಗ್ ಬೌಂಡರಿಗಳ ಮೂಲಕ ಅತಿ ಹೆಚ್ಚು ಟಿ ಟ್ವೆಂಟಿ ರನ್ ಕಲೆಹಾಕಿರುವ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 340 ಫೋರ್ಸ್ ಮತ್ತು 110 ಸಿಕ್ಸರ್ ಬಾರಿಸಿರುವ ಪೌಲ್ ಸ್ಟರ್ಲಿಂಗ್ ಕೇವಲ ಫೋರ್ ಮತ್ತು ಸಿಕ್ಸರ್ ಮುಖಾಂತರವೇ 2020 ಟಿ ಟ್ವೆಂಟಿ ರನ್ ಬಾರಿಸಿದ್ದಾರೆ.

2. ರೋಹಿತ್ ಶರ್ಮಾ

2. ರೋಹಿತ್ ಶರ್ಮಾ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 124 ಟಿ ಟ್ವೆಂಟಿ ಇನ್ನಿಂಗ್ಸ್ ಆಡಿ 3487 ರನ್ ಕಲೆಹಾಕುವ ಮೂಲಕ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಆಟಗಾರ ಎನಿಸಿಕೊಂಡಿದ್ದಾರೆ. ಈ ರನ್ ಪೈಕಿ 2230 ರನ್‌ಗಳು ಫೋರ್ ಮತ್ತು ಸಿಕ್ಸರ್ ಮೂಲಕವೇ ಹರಿದು ಬಂದಿದ್ದು, ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಬೌಂಡರಿ ಮೂಲಕ ಅತಿ ಹೆಚ್ಚು ರನ್ ಕಲೆಹಾಕಿದ ಎರಡನೇ ಆಟಗಾರ ಎಂದು ರೋಹಿತ್ ಶರ್ಮಾ ಕರೆಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 313 ಫೋರ್ ಮತ್ತು 163 ಸಿಕ್ಸರ್ ಚಚ್ಚಿದ್ದಾರೆ.

1. ಮಾರ್ಟಿನ್ ಗಪ್ಟಿಲ್

1. ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್ ತಂಡದ ಡೇಂಜರಸ್ ಆಟಗಾರ ಮಾರ್ಟಿನ್ ಗಪ್ಟಿಲ್ ಬೌಂಡರಿಗಳ ಮೂಲಕ ಅತಿ ಹೆಚ್ಚು ಟಿ ಟ್ವೆಂಟಿ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 116 ಟಿ ಟ್ವೆಂಟಿ ಇನ್ನಿಂಗ್ಸ್ ಆಡಿ 3482 ರನ್ ಬಾರಿಸಿರುವ ಮಾರ್ಟಿನ್ ಗಪ್ಟಿಲ್ 65% ರನ್‌ಗಳನ್ನು ಬೌಂಡರಿಗಳಿಂದಲೇ ಕಲೆಹಾಕಿದ್ದಾರೆ. ಒಟ್ಟಾರೆಯಾಗಿ 2246 ರನ್‌ಗಳನ್ನು ಗಪ್ಟಿಲ್ ಬೌಂಡರಿ ಮೂಲಕವೇ ಬಾರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, August 13, 2022, 17:34 [IST]
Other articles published on Aug 13, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X