ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ ಆಡಲಿರುವ ಭಾರತ ತಂಡದಲ್ಲಿ ಕೊರತೆಯಿದೆ: ಪಾಕ್ ಮಾಜಿ ಕ್ರಿಕೆಟರ್

Little concerning that India hasnt picked any wrist spinner for WTC final, says Danish Kaneria

ನವದೆಹಲಿ: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕಾಗಿ ಸಿದ್ಧವಾಗಿರುವ ಟೀಮ್ ಇಂಡಿಯಾದಲ್ಲಿ ಒಂದು ಕೊರತೆ ಎದ್ದು ಕಾಣುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದನಿಶ್ ಕನೇರಿಯಾ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಆಡಲಿರುವ ಭಾರತ ತಂಡದಲ್ಲಿ ರಿಸ್ಟ್ ಸ್ಪಿನ್ನರ್‌ಗಳಿಲ್ಲ ಎಂದು ಕನೇರಿಯಾ ಕಳವಳ ತೋರಿಕೊಂಡಿದ್ದಾರೆ.

ಶ್ರೀಲಂಕಾ ಪ್ರವಾಸ ಸರಣಿಗೆ ಭಾರತಕ್ಕೆ ಶಿಖರ್ ಧವನ್ ನಾಯಕ?!ಶ್ರೀಲಂಕಾ ಪ್ರವಾಸ ಸರಣಿಗೆ ಭಾರತಕ್ಕೆ ಶಿಖರ್ ಧವನ್ ನಾಯಕ?!

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕಳೆದ ವಾರ ತಂಡ ಪ್ರಕಟಿಸಿತ್ತು. ಈ ತಂಡದಲ್ಲಿ ರಿಸ್ಟ್ ಸ್ಪಿನ್ನರ್‌ಗಳಿಲ್ಲ. ಇದು ತಂಡದ ವೀಕ್ ಪಾಯಿಂಟ್‌ ಎಂದು ದನಿಶ್ ಕನೇರಿಯಾ ಹೇಳಿದ್ದಾರೆ.

'ಭಾರತ ಸ್ವಲ್ಪ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಒಟ್ಟಾರೆ ಅವರ ತಂಡ ಚೆನ್ನಾಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಭಾರತ ತಂಡದಲ್ಲಿ ಅವರು ರಿಸ್ಟ್ ಸ್ಪಿನ್ನರ್‌ಗಳನ್ನು ಆರಿಸಿಲ್ಲ,' ಎಂದು ಕರಾಚಿಯಿಂದ ಪಿಟಿಐ ಜೊತೆ ಮಾತನಾಡಿದ ಕನೇರಿಯಾ ಅಭಿಪ್ರಾಯಿಸಿದ್ದಾರೆ.

ಆ ಇಬ್ಬರು ಆಟಗಾರರ ವಿಕೆಟ್ ಪಡೆದದ್ದು ಬಹಳ ಖುಷಿ ಕೊಟ್ಟಿದೆ : ಅವೇಶ್ ಖಾನ್ಆ ಇಬ್ಬರು ಆಟಗಾರರ ವಿಕೆಟ್ ಪಡೆದದ್ದು ಬಹಳ ಖುಷಿ ಕೊಟ್ಟಿದೆ : ಅವೇಶ್ ಖಾನ್

ಭಾರತ ತಂಡ ಮುಂದಿನ ತಿಂಗಳಿನಿಂದ ಇಂಗ್ಲೆಂಡ್‌ಗೆ ಸುದೀರ್ಘ ಪ್ರವಾಸ ಕೈಗೊಳ್ಳಲಿದೆ. ಜೂನ್ 18ರಿಂದ 22ರ ವರೆಗೆ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆದರೆ, ಆಗಸ್ಟ್ 4ರಿಂದ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ 5 ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ.

Story first published: Tuesday, May 11, 2021, 20:15 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X