ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022: ತಂಡಗಳು, ವೇಳಾಪಟ್ಟಿ, ಪಂದ್ಯದ ಸಮಯ

ಟೀಂ ಇಂಡಿಯಾ ಮಾಜಿ ಆಟಗಾರರ ಆಟವನ್ನ ನೆನಪಿಸಿಕೊಳ್ಳುವಿರಾ? ಆದ್ರೆ ಮತ್ತೊಮ್ಮೆ ಮೈದಾನದಲ್ಲಿ ನಿಮ್ಮ ಮೆಚ್ಚಿನ ಮಾಜಿ ಕ್ರಿಕೆಟಿಗರನ್ನ ನೋಡುವ ಅವಕಾಶ ಲಭಿಸಲಿದೆ. ಹೌದು ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022 ಇನ್ನೆರಡು ದಿನಗಳಲ್ಲಿ ಕಿಕ್‌ ಸ್ಟಾರ್ಟ್‌ಗೆ ಸಿದ್ಧಗೊಂಡಿದ್ದು, ಟೂರ್ನಮೆಂಟ್‌ಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಮೂರು ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಭಾರತದ ಮಾಜಿ ಆಟಗಾರರನ್ನೊಳಗೊಂಡ ತಂಡವನ್ನ ಕೂಡ ಇಲ್ಲಿ ನೋಡಬಹುದಾಗಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಮೊದಲ ಸೀಸನ್‌ ಬಹು ಯಶಸ್ವಿಯಾದ ಬಳಿಕ, ಎರಡನೇ ಸೀಸನ್‌ನಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಕೇವಲ ಮೂರು ತಂಡಗಳಷ್ಟೇ ಇದಲ್ಲಿ ಭಾಗಿಯಾಗುತ್ತಿದೆ. ಜನವರಿ 20, 2022 ರಂದು ಪ್ರಾರಂಭವಾಗಲಿರುವ ಟೂರ್ನಿ , ಜನವರಿ 29, 2022 ರವರೆಗೆ ನಡೆದು ಮುಕ್ತಾಯಗೊಳ್ಳಲಿದೆ. ಓಮಾನ್‌ನ ಅಲ್ ಎಮಿರೇಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಟೂರ್ನಿ ನಡೆಯಲಿದ್ದು, ಈ ಹೊಸ ಲೀಗ್​ನ ಆಯುಕ್ತರಾಗಿ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ನೇಮಕವಾಗಿದ್ದಾರೆ.

ರಸ್ತೆ ಸುರಕ್ಷತೆ ವಿಶ್ವ ಟಿ20 ಟೂರ್ನಿಯಲ್ಲಿ ಭಾಗವಹಿಸಿದ್ದ ಸಚಿನ್ ತೆಂಡೂಲ್ಕರ್ LLC 2022ನಲ್ಲಿ ಭಾಗಿಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ರೆ ಯುವರಾಜ್ ಸಿಂಗ್ ಈಗಾಗಲೇ ಟೂರ್ನಿಯಲ್ಲಿ ಆಡುವುದನ್ನ ಖಚಿತಪಡಿಸಿದ್ದಾರೆ.

ಇಂಡಿಯಾ ಮಹರಾಜಸ್ ತಂಡದಲ್ಲಿ ಸೆಹ್ವಾಗ್, ಯುವರಾಜ್, ಭಜ್ಜಿ

ಇಂಡಿಯಾ ಮಹರಾಜಸ್ ತಂಡದಲ್ಲಿ ಸೆಹ್ವಾಗ್, ಯುವರಾಜ್, ಭಜ್ಜಿ

ಭಾರತದ ಪ್ರಮುಖ ಮಾಜಿ ಆಟಗಾರರನ್ನೊಳಗೊಂಡ ಇಂಡಿಯಾ ಮಹಾರಾಜಸ್ ತಂಡದ ಭಾರತ ಕ್ರಿಕೆಟ್‌ನ ದಿಗ್ಗಜರು ಕಣಕ್ಕಿಳಿಯಲಿದ್ದಾರೆ. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಸೇರಿದಂತೆ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಬದ್ರಿನಾಥ್, ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಹೇಮಾಂಗ್ ಬದಾನಿ, ವೇಣುಗೋಪಾಲ್ ರಾವ್, ಮುನಾಫ್ ಪಟೇಲ್, ಸಂಜಯ್ ಬಂಗಾರ್, ನಯನ್ ಮೊಂಗಿಯಾ ಮತ್ತು ಅಮಿತ್ ಭಂಡಾರಿ ಆಡಲಿದ್ದಾರೆ.

ಭಾರತದ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ನಾನು ರೆಡಿ ಇದ್ದೇನೆ ಎಂದ ಬುಮ್ರಾ!

ಏಷ್ಯನ್ ಟೀಮ್:

ಏಷ್ಯನ್ ಟೀಮ್:

ಶೋಯೆಬ್ ಅಖ್ತರ್, ಶಾಹಿದ್ ಅಫ್ರಿದಿ, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಕಮ್ರಾನ್ ಅಕ್ಮಲ್, ಚಾಮಿಂದಾ ವಾಸ್, ರೋಮೇಶ್ ಕಲುವಿತಾರಣ, ತಿಲಕರತ್ನೆ ದಿಲ್ಶನ್, ಅಜರ್ ಮಹಮೂದ್, ಉಪುಲ್ ತರಂಗ, ಮಿಸ್ಬಾ-ಉಲ್-ಹಕ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಮೊಹಮ್ಮದ್ ಯೂಸಫ್‌, ಉಮರ್‌ ಗುಲ್‌, ಅಸ್ಗರ್ ಅಫ್ಘಾನ್

ರೆಸ್ಟ್ ಆಫ್‌ ದಿ ವರ್ಲ್ಡ್‌

ರೆಸ್ಟ್ ಆಫ್‌ ದಿ ವರ್ಲ್ಡ್‌

ವಿಶ್ವ ಕ್ರಿಕೆಟ್ ಲೆಜೆಂಡ್ಸ್​ಗಳನ್ನು ಒಳಗೊಂಡಿರುವ ಮೂರನೇ ತಂಡದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್‌ ತಂಡಗಳ ಮಾಜಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಡರೆನ್ ಸ್ಯಾಮಿ, ಡೇನಿಯಲ್ ವೆಟ್ಟೋರಿ, ಬ್ರೆಟ್ ಲೀ, ಜಾಂಟಿ ರೋಡ್ಸ್, ಕೆವಿನ್ ಪೀಟರ್ಸನ್, ಇಮ್ರಾನ್ ತಾಹಿರ್, ಓವೈಸ್ ಷಾ, ಹರ್ಷಲ್ ಗಿಬ್ಸ್, ಆಲ್ಬಿ ಮೊರ್ಕೆಲ್, ಮೋರ್ನೆ ಮೊರ್ಕೆಲ್, ಕೋರಿ ಆಂಡರ್ಸನ್, ಮಾಂಟಿ ಪನೇಸರ್, ಬ್ರಾಡ್ ಹ್ಯಾಡಿನ್, ಕೆವಿನ್ ಒ'ಬ್ರಿಯೆನ್ ಮತ್ತು ಬ್ರೆಂಡನ್ ಟೇಲರ್

ಕೊಹ್ಲಿ ರಾಜೀನಾಮೆ: 'ನಾಯಕತ್ವ ಯಾರ ಜನ್ಮಸಿದ್ದ ಹಕ್ಕು ಅಲ್ಲ' ಎಂದ ಗೌತಮ್ ಗಂಭೀರ್

ಪ್ರತಿ ತಂಡಗಳ ವಿರುದ್ಧ ಎರಡು ಪಂದ್ಯಗಳು

ಪ್ರತಿ ತಂಡಗಳ ವಿರುದ್ಧ ಎರಡು ಪಂದ್ಯಗಳು

LLC 2022 ಕ್ರಿಕೆಟ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿರುವ ಮೂರು ತಂಡಗಳು ಪ್ರತಿ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನ ಆಡಲಿವೆ. ಈ ಮೂಲಕ ಇಂಡಿಯಾ ಮಹಾರಾಜಸ್ ತಂಡವು ಏಷ್ಯಾ ಲಯನ್ಸ್ ಹಾಗೂ ವರ್ಲ್ಡ್‌ ಜಾಯಂಟ್ಸ್ ವಿರುದ್ಧ ತಲಾ ಎರಡು ಪಂದ್ಯ ಆಡಲಿದೆ. ಹೀಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಲೀಡ್ ಪಡೆದ ಎರಡು ತಂಡಗಳು ಜನವರಿ 29, 2022ರಂದು ಫೈನಲ್ ಪಂದ್ಯವನ್ನಾಡಲಿವೆ.

ಪಂದ್ಯದ ವೇಳಾಪಟ್ಟಿ ಮತ್ತು ಸಮಯ

ಪಂದ್ಯದ ವೇಳಾಪಟ್ಟಿ ಮತ್ತು ಸಮಯ

ಜನವರಿ 20, 2022: ಇಂಡಿಯಾ ಮಹಾರಾಜಸ್ v/s ಏಷ್ಯಾ ಲಯನ್ಸ್, 8 PM IST

ಜನವರಿ 21, 2022: ವಲ್ಡ್ ಜೈಂಟ್ಸ್ v/s ಏಷ್ಯಾ ಲಯನ್ಸ್, 8 PM IST

ಜನವರಿ 22, 2022: ವರ್ಲ್ಡ್ ಜೈಂಟ್ಸ್ v/s ಇಂಡಿಯಾ ಮಹಾರಾಜಸ್, 8 PM IST

ಜನವರಿ 24, 2022: ಏಷ್ಯಾ ಲಯನ್ಸ್ v/s ಭಾರತ ಮಹಾರಾಜರು, 8 PM IST

ಜನವರಿ 26, 2022: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್, 8 PM IST

ಜನವರಿ 27, 2022: ಏಷ್ಯಾ ಲಯನ್ಸ್ vs ವರ್ಲ್ಡ್ ಜೈಂಟ್ಸ್, 8 PM IST

ಜನವರಿ 29, 2022: ಫೈನಲ್ ಪಂದ್ಯ, 8 PM IST

IPL 2022 Exclusive: ಎಲ್ಲಾ ಒತ್ತಡದಿಂದ ಮುಕ್ತರಾದ Virat Kohli ಈಗ RCB ಗೆ ಮತ್ತೆ ಕ್ಯಾಪ್ಟನ್!! | Oneindia
ಯಾವ ಚಾನೆಲ್‌ನಲ್ಲಿ ಪಂದ್ಯ ವೀಕ್ಷಿಸಬಹುದು?

ಯಾವ ಚಾನೆಲ್‌ನಲ್ಲಿ ಪಂದ್ಯ ವೀಕ್ಷಿಸಬಹುದು?

ಲೆಜೆಂಡ್ಸ್ ಕ್ರಿಕೆಟ್ ಲೀಗ್ 2022 ರ ಎಲ್ಲಾ ಪಂದ್ಯಗಳನ್ನು ಸೋನಿ ಟೆನ್ 1 ಮತ್ತು ಸೋನಿ ಟೆನ್ 3 ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಭಾರತದಾದ್ಯಂತ SONY LIV ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನಡೆಯಲಿವೆ.

For Quick Alerts
ALLOW NOTIFICATIONS
For Daily Alerts
Story first published: Tuesday, January 18, 2022, 8:43 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X