ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್ ಆಟಗಾರರನ್ನು ಬೆಳೆಯಲು ಬಿಡುವುದಿಲ್ಲ ಎಂದ ತ್ಸೊತ್ಸೊಬೆ ; ಎಬಿಡಿ ಹೆಸರು ಕೂಡ ಉಲ್ಲೇಖ

Lonwabo Tsotsobe Alleges Former South African Skipper Graeme Smith
South Africa ತಂಡದಲ್ಲಿ ವರ್ಣಬೇಧ ಆರೋಪ ಮಾಡಿದ ಆಟಗಾರ | Oneinida Kannada

ಲೊನ್ವಾಬೊ ತ್ಸೊತ್ಸೊಬೆ, ಈ ಆಟಗಾರನ ಹೆಸರು ಕ್ರೀಡಾಭಿಮಾನಿಗಳಿಗೆ ತಿಳಿದೇ ಇರುತ್ತದೆ. 2015ರವರೆಗೂ ದಕ್ಷಿಣ ಆಫ್ರಿಕಾ ತಂಡದ ಪರ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚಿದ್ದ ಲೊನ್ವಾಬೊ ತ್ಸೊತ್ಸೊಬೆ 2015ರ ಸ್ಪಾಟ್ ಫಿಕ್ಸಿಂಗ್ ಹಗರಣವೊಂದರಲ್ಲಿ ಸಿಲುಕಿಕೊಂಡು ತಮ್ಮ ಕ್ರಿಕೆಟ್ ಜೀವನವನ್ನು ಹಾಳು ಮಾಡಿಕೊಂಡರು. ದಕ್ಷಿಣ ಆಫ್ರಿಕಾ ಪರ 61 ಏಕದಿನ ಹಾಗೂ 23 ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದ ತ್ಸೊತ್ಸೊಬೆ ಕ್ರಮವಾಗಿ 94 ಮತ್ತು 18 ವಿಕೆಟ್‍ಗಳನ್ನು ಪಡೆದಿದ್ದಾರೆ.

ಟೀಮ್ ಇಂಡಿಯಾ ವನಿತೆಯರ ವೇತನ ಶ್ರೇಣಿ ಪ್ರಕಟಿಸಿದ ಬಿಸಿಸಿಐ ; ವೇದಾ ಕೃಷ್ಣಮೂರ್ತಿಗೆ ನಿರಾಸೆ!ಟೀಮ್ ಇಂಡಿಯಾ ವನಿತೆಯರ ವೇತನ ಶ್ರೇಣಿ ಪ್ರಕಟಿಸಿದ ಬಿಸಿಸಿಐ ; ವೇದಾ ಕೃಷ್ಣಮೂರ್ತಿಗೆ ನಿರಾಸೆ!

2015ರ ಡಿಸೆಂಬರ್‌ನಲ್ಲಿ ನಡೆದ ರಾಮ್ ಸ್ಲಾನ್ ಟಿ20 ಲೀಗ್‌ ವೇಳೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡ ತ್ಸೊತ್ಸೊಬೆಗೆ 8 ವರ್ಷಗಳ ನಿಷೇಧವನ್ನು ಹೇರಲಾಯಿತು. ಹೀಗೆ ನಿಷೇಧಕ್ಕೊಳಗಾಗಿದ್ದ ತ್ಸೊತ್ಸೊಬೆ ಇದೀಗ ಗ್ರೇಮ್ ಸ್ಮಿತ್ ವಿರುದ್ಧ ವರ್ಣ ಭೇದದ ಗಂಭೀರ ಆರೋಪವನ್ನು ಮಾಡಿದ್ದಾರೆ. ಗ್ರೇಮ್ ಸ್ಮಿತ್ ವರ್ಣ ಭೇದ ಮಾಡುತ್ತಾರೆ ಎಂಬುದಕ್ಕೆ ತ್ಸೊತ್ಸೊಬೆ ಉದಾಹರಣೆಯೊಂದನ್ನು ಸಹ ನೀಡಿ ವಿವರಿಸಿದ್ದಾರೆ.

ಪಾಕ್‌ನ ಮೊಹಮ್ಮದ್ ಅಮೀರ್ ಅವರನ್ನು ಖರೀದಿಸಬಹುದಾದ 3 ಐಪಿಎಲ್ ತಂಡಗಳಿವುಪಾಕ್‌ನ ಮೊಹಮ್ಮದ್ ಅಮೀರ್ ಅವರನ್ನು ಖರೀದಿಸಬಹುದಾದ 3 ಐಪಿಎಲ್ ತಂಡಗಳಿವು

2012ರ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಸಮಯದಲ್ಲಿ ವಿಕೆಟ್ ಕೀಪರ್ ಮಾರ್ಕ್ ಬೌಚರ್ ಗಾಯಕ್ಕೊಳಗಾಗಿ ತಂಡದಿಂದ ಹೊರಗುಳಿಯುವ ಪರಿಸ್ಥಿತಿ ಬಂದಾಗ ಥಮಿ ತ್ಸೊಲೆಕೈಲ್ ಎಂಬ ಆಟಗಾರನಿಗೆ ಅವಕಾಶ ನೀಡಬೇಕಿತ್ತು. ಆದರೆ ಗ್ರೇಮ್ ಸ್ಮಿತ್ ಥಮಿ ತ್ಸೊಲೆಕೈಲ್ ಬದಲು ಎಬಿ ಡಿವಿಲಿಯರ್ಸ್ ಅವರಿಗೆ ವಿಕೆಟ್ ಕೀಪಿಂಗ್ ಮಾಡುವ ಅವಕಾಶವನ್ನು ನೀಡಿದರು. ಈ ಮೂಲಕ ಥಮಿ ತ್ಸೊಲೆಕೈಲ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವುದನ್ನು ಗ್ರೇಮ್ ಸ್ಮಿತ್ ತಡೆಗಟ್ಟಿದರು ಎಂದು ತ್ಸೊತ್ಸೊಬೆ ಆರೋಪಿಸಿದ್ದಾರೆ.

 'ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು' ; ಶ್ರೀಶಾಂತ್‌ - ಧೋನಿ ನಡುವೆ ನಡೆದಿದ್ದ ಘಟನೆ ಬಿಚ್ಚಿಟ್ಟ ಉತ್ತಪ್ಪ 'ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು' ; ಶ್ರೀಶಾಂತ್‌ - ಧೋನಿ ನಡುವೆ ನಡೆದಿದ್ದ ಘಟನೆ ಬಿಚ್ಚಿಟ್ಟ ಉತ್ತಪ್ಪ

ಥಮಿ ತ್ಸೊಲೆಕೈಲ್ ಕಪ್ಪು ವರ್ಣದ ಆಟಗಾರನಾಗಿದ್ದ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ನೀಡಲು ಗ್ರೇಮ್ ಸ್ಮಿತ್ ನಿರಾಕರಿಸಿದರು ಹಾಗೂ ಆತನಿಗೆ ಆಡಲು ಅವಕಾಶ ನೀಡಿದರೆ ಆ ಕ್ಷಣವೇ ನಿವೃತ್ತಿ ಘೋಷಿಸುವುದಾಗಿ ಸ್ಮಿತ್ ಬೆದರಿಸಿದರು ಎಂಬ ಗಂಭೀರ ಆರೋಪವನ್ನು ಇದೀಗ ತ್ಸೊತ್ಸೊಬೆ ಮಾಡಿದ್ದಾರೆ.

Story first published: Thursday, May 20, 2021, 11:21 [IST]
Other articles published on May 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X