ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಸರಣಿ ಈ ಆಟಗಾರನಿಗೆ ನಿರಾಸೆ ಮೂಡಿಸುತ್ತದೆ ಎಂದ ರಾಹುಲ್ ದ್ರಾವಿಡ್

Looking back to the series against Sri Lanka, Sanju Samson would be disappointed says Rahul Dravid

ಕೊಲಂಬೋ, ಜುಲೈ 30: ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿ ಅಂತ್ಯವಾಗಿದೆ. ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿದರೂ ಟಿ20 ಸರಣಿಯಲ್ಲಿ ಸೋಲು ಅನುಭಿಸಿದ್ದು ನಿರಾಸೆ ಮೂಡಿಸಿದೆ. ಅದರಲ್ಲೂ ಟಿ20 ಸರಣಿಯಲ್ಲಿ ಕೊರೊನಾವೈರಸ್‌ನಿಂದಾಗಿ ಟೀಮ್ ಇಂಡಿಯಾ ಎದುರಿಸಿದ ಸವಾಲಿನ ಕಾರಣದಿಂದಾಗಿ ಆಘಾತಕಾರಿಯಾಗಿ ಸರಣಿಯನ್ನು ಕಳೆದುಕೊಳ್ಳಬೇಕಾಯಿರು. ಆದರೆ ಇಂತಾ ಸಂದರ್ಭದಲ್ಲಿ ದೊರೆತ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕಿದ್ದ ಕೆಲ ಆಟಗಾರರು ನೀಡಿದ ಪ್ರದರ್ಶನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಶ್ರೀಲಂಕಾ ವಿರುದ್ಧದ ಸರಣಿ ಅಂತ್ಯವಾದ ಬಳಿಕ ಭಾರತೀಯ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದರು. ಈ ಸರಣಿಯ ಅಂತ್ಯದ ವೇಳೆಗೆ ಹಿಂದಿರುಗಿ ನೋಡಿದಾಗ ಓರ್ವ ಆಟಗಾರನಿಗೆ ನಿರಾಸೆಯಾಗುತ್ತದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ದ್ಯುತಿ ಚಾಂದ್ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ದ್ಯುತಿ ಚಾಂದ್

ಹಾಗಾದರೆ ದ್ರಾವಿಡ್ ಉಲ್ಲೇಖಿಸಿದ ಆ ಆಟಗಾರ ಯಾರು? ಯಾವ ಕಾರಣಕ್ಕೆ ಈ ಮಾತನ್ನು ಕೋಚ್ ದ್ರಾವಿಡ್ ಬಗ್ಗೆ ಹೇಳಿದರು? ಮುಂದೆ ಓದಿ..

ಸಂಜು ಸ್ಯಾಮ್ಸನ್ ಪ್ರದರ್ಶನದ ಬಗ್ಗೆ ದ್ರಾವಿಡ್ ಮಾತು

ಸಂಜು ಸ್ಯಾಮ್ಸನ್ ಪ್ರದರ್ಶನದ ಬಗ್ಗೆ ದ್ರಾವಿಡ್ ಮಾತು

ಶ್ರೀಲಂಕಾ ಪ್ರವಾಸದಲ್ಲಿ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಸಂಜು ಸ್ಯಾಮ್ಸನ್ ಪ್ರದರ್ಶನದ ಬಗ್ಗೆ ಮಾತನಾಡಿದರು. "ಬ್ಯಾಟಿಂಗ್ ನಡೆಸಲು ಇದು ಸುಲಭವಾದ ಪಿಚ್ ಆಗಿರಲಿಲ್ಲ. ಏಕದಿನ ಸರಣಿಯಲ್ಲಿ ಆತನಿಗೆ ಒಂದು ಪಂದ್ಯದಲ್ಲಿ ಆಡುವ ಅವಕಾಶ ದೊರೆತಿತ್ತು. ಆತ ಅಲ್ಲಿ 46 ರನ್‌ಗಳಿಸಿದ್ದಾನೆ. ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ. ಆದರೆ ಅಂತಿಮ ಎರಡು ಪಂದ್ಯಗಳಲ್ಲಿ ಪಿಚ್‌ ತುಂಬಾ ಸವಾಲಾಗಿತ್ತು" ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ನಿರಾಸೆಯಾಗಲಿದೆ

ಸಂಜು ಸ್ಯಾಮ್ಸನ್‌ಗೆ ನಿರಾಸೆಯಾಗಲಿದೆ

"ನಿಜ, ಸರಣಿ ಅಂತ್ಯವಾಗಿದ್ದು ಈಗ ಹಿಂದಿರುಗಿ ನೋಡಿದರೆ ಸಂಜು ಸ್ಯಾಮ್ಸನ್‌ಗೆ ಸ್ವಲ್ಪ ನಿರಾಸೆಯಾಗಬಹುದು. ಸಂಜು ಸ್ಯಾಮ್ಸನ್ ಮಾತ್ರವಲ್ಲ ತಂಡದಲ್ಲಿರುವ ಯುವ ಆಟಗಾರರು ಅತ್ಯಂತ ಪ್ರತಿಭಾವಂತರಾಗಿದ್ದಾರೆ. ಅವರೊಂದಿಗೆ ನಾವು ತಾಳ್ಮೆಯಿಂದ ವ್ಯವಹರಿಸಬೇಕಿದೆ" ಎಂದು ರಾಹುಲ್ ದ್ರಾವಿಡ್ ಸಂಜು ಸ್ಯಾಮ್ಸನ್ ಹಾಗೂ ಟೀಮ್ ಇಂಡಿಯಾದ ಯುವ ಆಟಗಾರರ ಬೆಂಬಲಕ್ಕೆ ನಿಂತು ಮಾತನಾಡಿದರು.

ಟಿ20 ಸರಣಿಯಲ್ಲಿ ಸಂಜು ಕಳಪೆ

ಟಿ20 ಸರಣಿಯಲ್ಲಿ ಸಂಜು ಕಳಪೆ

ಏಕದಿನ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಆಡಿದ ಒಂದು ಪಂದ್ಯದಲ್ಲಿ 46 ರನ್‌ಗಳಿಸಿದರು. ಆದರೆ ಟಿ20 ಸರಣಿಯಲ್ಲಿ ಕಳಪೆ ಆಟವನ್ನು ಪ್ರದರ್ಶಿಸಿದ್ದಾರೆ. ಮೂರು ಟಿ20 ಪಂದ್ಯಗಳಲ್ಲಿ ಸಂಜು ಗಳಿಸಿದ್ದು ಕೇವಲ 34 ರನ್‌ಗಳನ್ನು ಮಾತ್ರ. ಟಿ20 ಮಾದರಿಯಲ್ಲಿ ಸಾಕಷ್ಟು ಅವಕಾಶಗಳು ಸಂಜು ಸ್ಯಾಮ್ಸನ್ ಪಾಲಿಗೆ ದೊರೆತಿದ್ದರೂ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಸಂಜು ವಿಫಲರಾಗಿದ್ದಾರೆ. ಹೀಗಾಗಿ ಸಂಜು ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಭಾರತೀಯ ತಂಡದಲ್ಲಿದ್ದ ಪ್ರಮುಖ ಆಟಗಾರರು ಕೊರೊನಾವೈರಸ್‌ನ ಕಾರಣದಿಂದಾಗಿ ಐಸೋಲೇಶನ್‌ಗೆ ಒಳಗಾಗಿದ್ದ ಸಂದರ್ಭದಲ್ಲಿ ಜವಾಬ್ಧಾರಿಯುತ ಪ್ರದರ್ಶನ ನೀಡಬೇಕಾಗಿದ್ದ ಸಂಜು ಸ್ಯಾಮ್ಸನ್ ಅದರಲ್ಲಿ ವಿಫಲವಾಗಿದ್ದಾರೆ.

ಸಂಜು ಸ್ಯಾಮ್ಸನ್ ಆಡಿದ್ದು ಸರಿ ಇಲ್ಲಾ ಅಕ್ಮಲ್ | Oneindia Kannada
ನಾನು ನಿರಾಶನಾಗಿಲ್ಲ ಎಂದ ದ್ರಾವಿಡ್

ನಾನು ನಿರಾಶನಾಗಿಲ್ಲ ಎಂದ ದ್ರಾವಿಡ್

ಇನ್ನು ಇದೇ ಸಂದರ್ಭದಲ್ಲಿ ಭಾರತೀಯ ತಂಡದ ಯುವ ಆಟಗಾರರ ಪ್ರದರ್ಶನದಿಂದಾಗಿ ನಿರಾಸೆಯಾಯಿತಾ ಎಂಬ ಪ್ರಶ್ನೆಯೂ ರಾಹುಲ್ ದ್ರಾವಿಡ್‌ಗೆ ಎದುರಾಗಿತ್ತು. ಇದಕ್ಕೆ ರಾಹುಲ್ ದ್ರಾವಿಡ್ "ಅವರಿನ್ನೂ ಯುವ ಆಟಗಾರರಾಗಿರುವ ಕಾರಣ ನಾನು ಅವರ ಪ್ರದರ್ಶನದಿಂದಾಗಿ ನಿರಾಶನಾಗಲಿಲ್ಲ. ಅವರು ಈ ರೀತಿಯ ಪರಿಸ್ಥಿತಿಗಳಲ್ಲಿ ಮತ್ತು ಇಷ್ಟು ಉತ್ಕಷ್ಟ ಬೌಲಿಂಗ್ ದಾಳಿಯನ್ನು ಎದುರಿಸಿದಾಗಲೇ ಪಾಠವನ್ನು ಕಲಿಯುತ್ತಾರೆ ಹಾಗೂ ಮತ್ತಷ್ಟು ಉತ್ತಮವಾಗುತ್ತಾರೆ. ಶ್ರೀಲಂಕಾ ತಂಡದ ಬೌಲಿಂಗ್ ದಾಳಿ ಅಂತಾರಾಷ್ಟ್ರೀಯ ಮಟ್ಟದ ಬೌಲಿಂಗ್ ದಾಳಿಯಾಗಿದೆ" ಎಂದು ಭಾರತ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.

Story first published: Friday, July 30, 2021, 20:16 [IST]
Other articles published on Jul 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X