ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್ ಸೋಲು: ನಾಯಕ ಕೊಹ್ಲಿ, ಕೋಚ್ ಶಾಸ್ತ್ರಿ ಅಧಿಕಾರಕ್ಕೆ ಕತ್ತರಿ?

ಬೆಂಗಳೂರು, ಆಗಸ್ಟ್ 14: ಇಂಗ್ಲೆಂಡ್‌ನಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರ ಅಧಿಕಾರಕ್ಕೆ ಕತ್ತರಿ ಹಾಕಲು ಬಿಸಿಸಿಐ ಉದ್ದೇಶಿಸಿದೆ.

ಮುಖ್ಯವಾಗಿ ಲಾರ್ಡ್ಸ್ ಪಂದ್ಯದಲ್ಲಿ ಹೀನಾಯ ಇನ್ನಿಂಗ್ಸ್ ಸೋಲು ಅನುಭವಿಸಿ ತೀವ್ರ ಮುಜುಗರಕ್ಕೆ ಒಳಗಾಗಿರುವ ತಂಡವನ್ನು ತಹಬದಿಗೆ ತರಲು ಬಿಸಿಸಿಐ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಐಸಿಸಿ ಶ್ರೇಯಾಂಕ: ಒಂದೇ ಪಂದ್ಯದಲ್ಲಿ ಮೊದಲ ಸ್ಥಾನ ಕಳೆದುಕೊಂಡ ಕೊಹ್ಲಿ ಐಸಿಸಿ ಶ್ರೇಯಾಂಕ: ಒಂದೇ ಪಂದ್ಯದಲ್ಲಿ ಮೊದಲ ಸ್ಥಾನ ಕಳೆದುಕೊಂಡ ಕೊಹ್ಲಿ

ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿರುವ ಬಿಸಿಸಿಐ, ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಅವರ ಕೆಲವು ಅಧಿಕಾರಗಳನ್ನು ನಿಯಂತ್ರಿಸಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಮೂರನೇ ಪಂದ್ಯಕ್ಕೂ ಮುನ್ನ ಕೊಹ್ಲಿ ಮತ್ತು ರವಿಶಾಸ್ತ್ರಿ ಅವರ ಎದುರು ಕೆಲವು ಪ್ರಶ್ನೆಗಳನ್ನು ಬಿಸಿಸಿಐ ಇರಿಸಲಿದೆ. ತಂಡದ ಒಟ್ಟಾರೆ ವೈಫಲ್ಯಗಳಿಗೆ ಕಾರಣಗಳನ್ನು ತಿಳಿದುಕೊಳ್ಳಲು ಮಂಡಳಿ ಬಯಸಿದೆ.

ಕನಿಷ್ಠ ಅರ್ಧಶತಕವೂ ಇಲ್ಲ

ಕನಿಷ್ಠ ಅರ್ಧಶತಕವೂ ಇಲ್ಲ

ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಹೊರತುಪಡಿಸಿ ಯಾವ ಆಟಗಾರನೂ 50 ರನ್‌ ಗಡಿ ದಾಟಲು ವಿಫಲವಾಗಿರುವುದು. ಲಾರ್ಡ್ಸ್ ಟೆಸ್ಟ್‌ನಲ್ಲಿ ಆರ್. ಅಶ್ವಿನ್ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 29 & 33* ರನ್ ಗಳಿಸಿದ್ದೇ ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿತ್ತು.

ಬೌಲಿಂಗ್ ಇಲ್ಲ, ಬ್ಯಾಟಿಂಗ್ ಇಲ್ಲ, ಒಂದ್ ಕ್ಯಾಚೂ ಮಾಡದೆ ರಶೀದ್ ದಾಖಲೆ!

ವೇಳಾಪಟ್ಟಿ ಬದಲಿಸಿ ಮಾಡಿದ್ದೇನು?

ವೇಳಾಪಟ್ಟಿ ಬದಲಿಸಿ ಮಾಡಿದ್ದೇನು?

ಟೆಸ್ಟ್ ಸರಣಿಗೂ ಮುನ್ನ ಪ್ರವಾಸದ ನಿಯೋಜಿತ ವೇಳಾಪಟ್ಟಿಯ ರಚನೆಯಲ್ಲಿ ಬದಲಾವಣೆಗಳನ್ನು ಮಾಡಿದ್ದರೂ ಪ್ರಯೋಜನ ಆಗದೇ ಇರುವುದು. ಟೆಸ್ಟ್ ಸರಣಿಗೆ ಮುನ್ನ ಆಟಗಾರರಿಗೆ ನೆರವಾಗುತ್ತದೆ ಎಂದು ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಒತ್ತಾಯ ಮಾಡಿ ಪ್ರವಾಸ ವೇಳಾಪಟ್ಟಿ ಬದಲಿಸಿದ್ದರು. ಆದರೆ, ಯಾವ ಪ್ರಯೋಜನವಾಗಿದೆ?

ನಾಟಿಂಗ್ಹ್ಯಾಮ್ ಟೆಸ್ಟ್ ಗೆ ಸಂಪೂರ್ಣ ಚೇತರಿಸಿಕೊಳ್ಳುವೆ: ಕೊಹ್ಲಿ ವಿಶ್ವಾಸ

ಫೀಲ್ಡಿಂಗ್ ಕೋಚ್ ಬಂದ ಮೇಲೆಯೇ ಹೀಗೆ

ಫೀಲ್ಡಿಂಗ್ ಕೋಚ್ ಬಂದ ಮೇಲೆಯೇ ಹೀಗೆ

ಆರ್ ಶ್ರೀಧರ್ ಅವರು ಫೀಲ್ಡಿಂಗ್ ಕೋಚ್ ಆಗಿ ನೇಮಕವಾದ ಬಳಿಕ ಭಾರತವು ಸುಮಾರು 50 ಕ್ಯಾಚ್‌ಗಳನ್ನು ಕೈಚೆಲ್ಲಿದೆ. ಶ್ರೀಧರ್ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಅವರ ಪಾತ್ರವನ್ನು ಪರಿಶೀಲನೆಗೆ ಒಳಪಡಿಸುವುದು.

ತಂಡದ ಆಯ್ಕೆಗೆ ಸ್ವತಂತ್ರ ಆಯ್ಕೆದಾರ

ತಂಡದ ಆಯ್ಕೆಗೆ ಸ್ವತಂತ್ರ ಆಯ್ಕೆದಾರ

ಪ್ರವಾಸಿ ಆಯ್ಕೆದಾರರ ಅಗತ್ಯದ ಬಗ್ಗೆ ಚರ್ಚಿಸುವುದು. ಇದರಿಂದ ತಂಡದ ಆಯ್ಕೆ ಪ್ರಕ್ರಿಯೆಯಿಂದ ಕೊಹ್ಲಿ ಮತ್ತು ರವಿಶಾಸ್ತ್ರಿ ಭಾಗಿಯಾಗದಂತೆ ಮಾಡುವುದು. ತಂಡದ ಆಯ್ಕೆ ವೇಳೆ ಸ್ವತಂತ್ರ ಅಭಿಪ್ರಾಯವು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂಬ ಅಭಿಪ್ರಾಯವನ್ನು ಬಿಸಿಸಿಐ ವ್ಯಕ್ತಪಡಿಸಿದೆ.

Story first published: Tuesday, August 14, 2018, 13:36 [IST]
Other articles published on Aug 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X