ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಸ್‌ ಟಿ20 ಲೀಗ್‌ನಲ್ಲೂ ಶಾರೂಕ್ ಫ್ರಾಂಚೈಸಿ: ಲಾಸ್‌ಏಂಜಲೀಸ್ ತಂಡದ ಮಾಲೀಕತ್ವ

Los Angeles Knight Riders is the name of the Shah Rukh Khans team in Major League Cricket in the USA

ಬಾಲಿವುಡ್‌ನ ಖ್ಯಾತ ನಟ ಶಾರೂಕ್ ಖಾನ್ ಕ್ರಿಕೆಟ್‌ ಲೀಗ್‌ನಲ್ಲೂ ಖ್ಯಾತರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫ್ರಾಂಚೈಸಿಗಳ ಮಾಲೀಕತ್ವ ಹೊಂದಿರುವ ಶಾರೂಖ್ ಖಾನ್ ಮತ್ತೊಂದು ಕ್ರಿಕೆಟ್ ಲೀಗ್ ತಂಡದ ಮಾಲೀಕರಾಗುತ್ತಿದ್ದಾರೆ.

ಅಮೆರಿಕಾದ ಕ್ರಿಕೆಟ್‌ನ ಲೀಗ್‌ನಲ್ಲಿ ಫ್ರಾಂಚೈಸಿಯೊಂದನ್ನು ಶಾರೂಕ್ ಖಾನ್ ಖರೀದಿಸಲಿದ್ದಾರೆ. ಶೀಘ್ರದಲ್ಲೇ ಈ ಟಿ20 ಕ್ರಿಕೆಟ್ ಲೀಗ್‌ಗೆ ಚಾಲನೆ ದೊರೆಯಲಿದ್ದು ಲಾಸ್ ಏಂಜಲೀಸ್ ತಂಡದ ಮಾಲೀಕತ್ವ ಶಾರೂಕ್ ಖಾನ್ ಹೊಂದಲಿದ್ದಾರೆ ಎಂದು ವರದಿಯಾಗಿದೆ.

ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್

ಯುಎಸ್‌ಎಯ ಈ ಕ್ರಿಕೆಟ್‌ ಲೀಗ್‌ನಲ್ಲಿ ಆರು ತಂಡಗಳು ಪಾಲ್ಗೊಳ್ಳಲಿದೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ವಾಶಿಂಗ್ಟನ್ ಡಿಸಿ, ಶಿಕಾಗೋ, ಡಲ್ಲಾಸ್ ಹಾಗೂ ಲಾಸ್ ಏಂಜಲೀಸ್ ನಗರಗಳನ್ನು ಪ್ರತಿನಿಧಿಸುವ ತಂಡಗಳು ಈ ಲೀಗ್‌ನಲ್ಲಿ ಇರಲಿದೆ. ಇದರಲ್ಲಿ ಲಾಸ್ ಏಂಜಲೀಸ್ ನಗರವನ್ನು ಪ್ರತಿನಿಧೀಸುವ ತಂಡದ ಮಾಲೀಕತ್ವ ಶಾರೂಕ್ ಪಾಲಾಗಲಿದೆ ಎನ್ನಲಾಗಿದೆ.

ಮುಂಬೈ ಮಿರರ್ ಈ ಬಗ್ಗೆ ವರದಿಯನ್ನು ಮಾಡಿದ್ದು ಶಾರೂಕ್ ಖಾನ್ ಮಾಲೀಕತ್ವದ ತಂಡದ ಹೆಸರನ್ನು ಕೂಡ ಹೇಳಿಕೊಂಡಿದೆ. "ಲಾ ನೈಟ್ ರೈಡರ್ಸ್" ಎಂಬುದು ಶಾರೂಖ್ ಖಾನ್ ಒಡೆತನದ ತಮಡದ ಹೆಸರಾಗಿರಲಿದೆ ಎಂದು ಮುಂಬೈ ಮಿರರ್ ಹೇಳಿದೆ.

2021 ಟಿ20 ವಿಶ್ವಕಪ್‌ ಭಾರತದ ಬದಲು ಯುಎಇಗೆ ಸ್ಥಳಾಂತರಗೊಳ್ಳಲಿ: ಪಿಸಿಬಿ2021 ಟಿ20 ವಿಶ್ವಕಪ್‌ ಭಾರತದ ಬದಲು ಯುಎಇಗೆ ಸ್ಥಳಾಂತರಗೊಳ್ಳಲಿ: ಪಿಸಿಬಿ

ಐಪಿಎಲ್‌ನಲ್ಲಿ ಕೊಲ್ಕತ್ತಾ ತಂಡವನ್ನು ಹೊಂದಿರುವ ಶಾರೂಕ್ ಖಾನ್ ಕೊಲ್ಕತ್ತಾ ನೈಟ್ ರೈಡರ್ಸ್ ಎಂದು ತಂಡಕ್ಕೆ ಹೆಸರಿಟ್ಟಿದ್ದಾರೆ. ಇದರಲ್ಲಿ ಉತ್ತಮ ಯಶಸ್ಸು ಕಂಡ ಬಳಿಕ ಕೆರಿಬಿಯರ್ ಪ್ರೀಮಿಯರ್ ಲೀಗ್‌ನಲ್ಲೂ ಶಾರೂಕ್ ತಂಡವನ್ನು ಹೊಂದಿದರು. ಅದರಲ್ಲಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡವನ್ನು ಹೊಂದಿದ್ದಾರೆ. 2022ರ ಐಪಿಎಲ್ ಆವೃತ್ತಿಯ ನಂತರ ಯುಎಸ್‌ನ ಈ ಕ್ರಿಕೆಟ್ ಲೀಗ್ ಆರಂಭವಾಗಲಿದೆ ಎನ್ನಲಾಗುತ್ತಿದೆ.

Story first published: Tuesday, December 1, 2020, 10:17 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X