ಅಕ್ಷರ್ ಪಟೇಲ್ ಬೌಲಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿದ ಆಸಿಸ್ ಕ್ರಿಕೆಟಿಗ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಕ್ಷರ್ ಪಟೇಲ್ ಟೀಮ್ ಇಂಡಿಯಾ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ತಾನಾಡಿದ ಮೊದಲ ಪಂದ್ಯದಲ್ಲೇ ಮಿಂಚುಹರಿಸಿದ ಅಕ್ಷರ್ ಪಟೇಲ್ ಎರಡನೇ ಪಂದ್ಯದಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ. ಎರಡನೇ ಪಂದ್ಯದಲ್ಲಿ ಅಕ್ಷರ್ ಒಟ್ಟು 11 ವಿಕೆಟ್ ಪಡೆದು ಮಿಂಚಿದ್ದಾರೆ.

ಅಕ್ಷರ್ ಪಟೇಲ್ ಈ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಆಶ್ಟನ್ ಆಗರ್ ಪ್ರತಿಕ್ರಿಯಿಸಿದ್ದಾರೆ. ಚೆನ್ನೈ ಹಾಗೂ ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ಅಕ್ಷರ್ ಪಟೇಲ್ ಪ್ರದರ್ಶನ ಅದ್ಭುತವಾಗಿತ್ತು. ಅವರ ಬೌಲಿಂಗ್‌ಅನ್ನು ನಾನು ಸಾಕಷ್ಟು ಆನಂದಿಸಿದ್ದೇನೆ ಎಂದಿದ್ದಾರೆ ಆಶ್ಟನ್ ಆಗರ್.

ಭಾರತ vs ಇಂಗ್ಲೆಂಡ್: ಟಿ20 ಸರಣಿಗೆ ಮತ್ತೆ ವರುಣ್ ಚಕ್ರವರ್ತಿ ಅನುಮಾನ!

ಭಾರತ ಉಪಖಂಡದಲ್ಲಿ ಕ್ರಿಕೆಟ್ ಆಡುವುದನ್ನು ನೋಡಲು ನಾನು ಆನಂದಿಸುತ್ತೇನೆ. ಸ್ಪಿನ್ನರ್ ಆಗಿ ಕಳೆದ ಪಂದ್ಯ ಭಾರತ ಉಪಖಂಡದಲ್ಲಿ ನಡೆದ ಪಂದ್ಯಗಳಲ್ಲಿ ವೀಕ್ಷಿಸಲು ಅತ್ಯಂತ ಶ್ರೇಷ್ಠವಾದ ಪಂದ್ಯವಾಗಿದೆ. ಅಕ್ಷರ್ ಪಟೇಲ್ ಬೌಲಿಂಗ್ ಮಾಡುವುದನ್ನು ನೋಡಲು ಸಾಕಷ್ಟು ಇಷ್ಟವಾಯಿತು ಎಂದು ಆಶ್ಟನ್ ಅಗರ್ ಹೇಳಿಕೆಯನ್ನು ನೀಡಿದ್ದಾರೆ.

ಚೆಂಡು ಹೊಳಪಿರುವ ಭಾಗವನ್ನು ಚೆನ್ನಾಗಿ ಉಪಯೋಗಿಸಲು ಅಕ್ಷರ್ ಪಟೇಲ್ ಸಮರ್ಥರಾಗಿದ್ದಾರೆ. ಅದೇ ಕಾರಣದಿಂದಾಗಿ ಅವರು ಸಾಕಷ್ಟು ಯಶಸ್ಸನ್ನು ಕೂಡ ಪಡೆದಕೊಳ್ಳಲು ಸಾಧ್ಯವಾಯಿತು. ಕಳೆದ ಎರಡು ಪಂದ್ಯಗಳಲ್ಲಿ ಅವರು ನೇರ ಎಸೆತಗಳಲ್ಲಿಯೇ ಸಮಾರು 10 ವಿಕೆಟ್‌ಗಳನ್ನು ಪಡೆದಿರಬಹುದು ಎಂದು ಆಶ್ಟನ್ ಅಗರ್ ಹೇಳಿದ್ದಾರೆ.

ಪಿಚ್ ದೂಷಿಸುವ ಮೂಲಕ ನಾವು ನಮಗೇ ಅಪಚಾರ ಮಾಡುತ್ತಿದ್ದೇವೆ: ಇಂಗ್ಲೆಂಡ್ ಬ್ಯಾಟಿಂಗ್ ಕೋಚ್

ಇನ್ನು ಇದೇ ಸಂದರ್ಭದಲ್ಲಿ ಆಶ್ಟನ್ ಅಗರ್ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿನ ಸ್ಥಿರತೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತೀಯ ಉಪಖಂಡದಲ್ಲಿ ಬೌಲಿಂಗ್‌ನಲ್ಲಿನ ಪ್ರಮುಖ ಸಂಗತಿಯೆಂದರೆ ಸ್ಥಿರತೆ ಹಾಗೂ ನಿಖರತೆ. ಚೆಂಡು ಪ್ರತಿಬಾರಿಯೂ ವಿಕೆಟ್‌ಗೆ ಬಡಿಯುವಂತಿರಬೇಕು. ಅಕ್ಷರ್ ಇದರಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ಆಶ್ಟನ್ ಅಗರ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, March 1, 2021, 15:52 [IST]
Other articles published on Mar 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X