ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಡಿಮೆ ರನ್‌ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದಿದ್ದು ಇದೇ ಮೊದಲಲ್ಲ

Lowest totals successfully defended by KXIP in IPL

ದುಬೈ: ಕಡಿಮೆ ಟೋಟಲ್ ಗಳಿಸಿಯೂ ಕಿಂಗ್ಸ್‌ 11 ಪಂಜಾಬ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಗೆದ್ದಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 25) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 43ನೇ ಪಂದ್ಯದಲ್ಲಿ ಪಂಜಾಬ್ ರೋಚಕ 12 ರನ್‌ಗಳ ಜಯ ದಾಖಲಿಸಿದೆ.

ಎಸ್‌ಆರ್‌ಎಚ್ ಕಡಿಮೆ ಟೋಟಲ್‌ ಚೇಸ್ ಮಾಡದೆ ಸೋತ ದಾಖಲೆಗಳಿವುಎಸ್‌ಆರ್‌ಎಚ್ ಕಡಿಮೆ ಟೋಟಲ್‌ ಚೇಸ್ ಮಾಡದೆ ಸೋತ ದಾಖಲೆಗಳಿವು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್‌ 11 ಪಂಜಾಬ್ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಅಂಥ ಕೊಡುಗೆ ನೀಡದಿದ್ದರೂ, ಬೌಲಿಂಗ್‌ನಲ್ಲಿ ಕೆ11ಪಿ ಅದ್ಭುತ ಪ್ರದರ್ಶನ ನೀಡಿತ್ತು. ಮೊಹಮ್ಮದ್ ಶಮಿ 1, ಅರ್ಷ್‌ದೀಪ್ ಸಿಂಗ್ 23ಕ್ಕೆ 3, ಮುರುಗನ್ ಅಶ್ವಿನ್ 1, ರವಿ ಬಿಷ್ಣೋಯ್ 1, ಕ್ರಿಸ್ ಜೋರ್ಡನ್ 13ಕ್ಕೆ 3 ವಿಕೆಟ್ ಮುರಿದು ಹೈದರಾಬಾದ್ ಸೋಲಿಗೆ ಕಾರಣರಾದರು.

ಎಂಎಸ್ ಧೋನಿಯ ಸಿಎಸ್‌ಕೆ ಈಗಲೂ ಪ್ಲೇ ಆಫ್‌ಗೆ ಪ್ರವೇಶಿಸಬಲ್ಲದು!ಎಂಎಸ್ ಧೋನಿಯ ಸಿಎಸ್‌ಕೆ ಈಗಲೂ ಪ್ಲೇ ಆಫ್‌ಗೆ ಪ್ರವೇಶಿಸಬಲ್ಲದು!

ಕೆಎಲ್ ರಾಹುಲ್ 27, ಮನ್‌ದೀಪ್‌ ಸಿಂಗ್ 17, ಕ್ರಿಸ್ ಗೇಲ್ 20, ನಿಕೋಲಸ್ ಪೂರನ್ 32, ಗ್ಲೆನ್ ಮ್ಯಾಕ್ಸ್‌ವೆಲ್ 12 ರನ್‌ನೊಂದಿಗೆ ಪಂಜಾಬ್ 20 ಓವರ್‌ಗೆ 7 ವಿಕೆಟ್ ಕಳೆದು 126 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಡೇವಿಡ್ ವಾರ್ನರ್ 35, ಜಾನಿ ಬೇರ್ಸ್ಟೋವ್ 19, ಮಿನೀಶ್ ಪಾಂಡೆ 15, ವಿಜಯ್ ಶಂಕರ್ 26 ರನ್‌ನೊಂದಿಗೆ 19.5 ಓವರ್‌ಗೆ ಎಲ್ಲ ವಿಕೆಟ್ ಕಳೆದು 114 ರನ್ ಬಾರಿಸಿ ಶರಣಾಗಿದೆ.

ನೋವಿನ ನಡುವೆಯೂ ಆಡಿದ ಮನ್‌ದೀಪ್, ರಾಣಾಗೆ ಸಚಿನ್ ಶ್ಲಾಘನೆನೋವಿನ ನಡುವೆಯೂ ಆಡಿದ ಮನ್‌ದೀಪ್, ರಾಣಾಗೆ ಸಚಿನ್ ಶ್ಲಾಘನೆ

ಈ ಸೋಲಿನೊಂದಿಗೆ ಹೈದರಾಬಾದ್, ಐಪಿಎಲ್‌ನಲ್ಲಿ ಅತೀ ಕಡಿಮೆ ಟೋಟಲ್ ಕೂಡ ಚೇಸ್ ಮಾಡದ ಕೆಟ್ಟ ದಾಖಲೆಗೆ ಕಾರಣವಾಗಿದೆ. ಪಂಜಾಬ್ ತಂಡ ಅತೀ ಕಡಿಮೆ ಒಟ್ಟು ರನ್ ಗಳಿಸಿಯೂ ಪಂದ್ಯ ಗೆದ್ದ ವಿಶೇಷ ದಾಖಲೆಗಾಗಿ ಗುರುತಿಸಿಕೊಂಡಿದೆ.

ಕಡಿಮೆ ಟೋಟಲ್ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದ ದಾಖಲೆಗಳು
* 119 vs ಮುಂಬೈ ಇಂಡಿಯನ್ಸ್, ಡರ್ಬನ್, 2009
* 126 vs, ಸನ್ ರೈಸರ್ಸ್ ಹೈದರಾಬಾದ್, ದುಬೈ, 2020 *
* 132 vs ಕೋಲ್ಕತ್ತಾ ನೈಟ್ ರೈಡರ್ಸ್, ಅಬುಧಾಬಿ, 2014

Story first published: Sunday, October 25, 2020, 8:37 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X