ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಂಕಾ ಪ್ರೀಮಿಯರ್ ಲೀಗ್: ಗಾಲೆ ಗ್ಲಾಡಿಯೇಟರ್ಸ್‌ಗೆ ಶಾಹಿದ್ ಅಫ್ರಿದಿ ನಾಯಕ

LPL 2020: Galle Gladiators Appoint Shahid Afridi As Their Captain

ಚೊಚ್ಚಲ ಎಲ್‌ಪಿಎಲ್‌ಗೆ ಭರದಿಂದ ಸಿದ್ಧತೆಗಳು ನಡೆಯುತ್ತಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಈ ಕ್ರಿಕೆಟ್ ಲೀಗ್‌ನಲ್ಲಿ ಭಾರತೀಯ ಮಾಜಿ ಆಟಗಾರರು ಸೇರಿದಂತೆ ವಿದೇಶದ ಅನೇಕ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಗಾಲೆ ಗ್ಲಾಡಿಯೇಟರ್ಸ್ ತಂಡಕ್ಕೆ ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ಆಟಗಾರ ಶಾಹಿದ್ ಅಫ್ರಿದಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಐದು ತಂಡಗಳು ಮುಖಾಮುಖಿಯಾಗಲಿದೆ. ಇದರಲ್ಲಿ ಗಾಲೆ ಗ್ಲಾಡಿಯೇಟರ್ಸ್ ಕೂಡ ಒಂದಾಗಿದೆ. ಈ ತಂಡಕ್ಕೆ ಶಾಹಿದ್ ಅಫ್ರಿದಿಯನ್ನು ನೇಮಕ ಮಾಡಲಾಗಿದೆ. ಶಾಹಿದ್ ಅಫ್ರಿದಿ ಇತ್ತೀಚೆಗೆ ಮುಕ್ತಾಯವಾದ ಪಾಕಿಸ್ತಾನ್ ಪ್ರೀಮಿಯರ್ ಲೀಗ್‌ನಲ್ಲೂ ಪಾಲ್ಗೊಂಡಿದ್ದರು.

ತಂದೆಯ ಅಗಲಿಕೆಯ ನೋವಿನಲ್ಲೂ ದೇಶ ಸೇವೆಗೆ ಸಿರಾಜ್ ಬಯಸಿದ್ದಾರೆ: ಬಿಸಿಸಿಐತಂದೆಯ ಅಗಲಿಕೆಯ ನೋವಿನಲ್ಲೂ ದೇಶ ಸೇವೆಗೆ ಸಿರಾಜ್ ಬಯಸಿದ್ದಾರೆ: ಬಿಸಿಸಿಐ

ಗಾಲೆ ಗ್ಲಾಡಿಯೇಟರ್ಸ್ ತಂಡ ಮೊದಲಿಗೆ ತನ್ನ ನಾಯಕನನ್ನಾಗಿ ಇನ್ನೊರ್ವ ಪಾಕಿಸ್ತಾನದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ನೇಮಕಮಾಡಿತ್ತು. ಆದರೆ ನ್ಯೂಜಿಲೆಂಡ್ ವಿರುದ್ದದ ಪ್ರವಾಸಕ್ಕೆ ಪಾಕ್ ತಂಡದ ಪರವಾಗಿ ಆಯ್ಕೆಯಾಗಿರುವ ಕಾರಣ ಎಲ್‌ಪಿಎಲ್‌ನಿಂದ ಸರ್ಫರಾಜ್ ಹಿಂದಕ್ಕೆ ಸರಿದಿದ್ದಾರೆ. ಹೀಗಾಗಿ ಶಾಹಿದ್ ಅಫ್ರಿದಿಯನ್ನು ನಾಯಕನನ್ನಾಗಿ ನೇಮಿಸಿಕೊಂಡಿದೆ.

ಶಾಹಿದ್ ಅಫ್ರಿದಿ ಮುನ್ನಡೆಸಲಿರುವ ಈ ತಂಡದ ಉಪನಾಯಕನನ್ನಾಗಿ ಭಾನುಕಾ ರಾಜಪಕ್ಸ ಅವರನ್ನು ನೇಮಿಸಿಕೊಳ್ಳಲಾಗಿದೆ. ಹಝ್ರತುಲ್ಲಾ ಜಜಾಯಿ, ಅಕಿಲಾ ಧನಂಜಯ, ಶೇಹನ್ ಜಯಸೂರ್ಯ, ಚಾಡ್ವಿಕ್ ವಾಲ್ಟನ್ ಮತ್ತು ಧನುಷ್ಕ ಗುಣತಿಲಕ ಅವರಂತಾ ಟಿ20 ಸ್ಪೆಶಲಿಸ್ಟ್ ಆಟಗಾರರನ್ನು ಗಾಲೆ ಗ್ಲಾಡಿಯೇಟರ್ಸ್ ಹೊಂದಿದೆ.

ಭಾರತ vs ಆಸೀಸ್: ಗಾಯ ಗುಣವಾಗುತ್ತಿದೆ, ಹೋರಾಟಕ್ಕೆ ಸಿದ್ಧ-ರೋಹಿತ್ಭಾರತ vs ಆಸೀಸ್: ಗಾಯ ಗುಣವಾಗುತ್ತಿದೆ, ಹೋರಾಟಕ್ಕೆ ಸಿದ್ಧ-ರೋಹಿತ್

ನವೆಂಬರ್ 26ರಿಂದ ಎಲ್‌ಪಿಎಲ್ ಆರಂಭವಾಗಲಿದ್ದು ಡಿಸೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ. ಹಂಬಂತೋಟದಲ್ಲಿರುವ ಮಹಿಂದ್ರಾ ರಾಜಪಕ್ಸ ಇಂಟರ್‌ನ್ಯಾಶನ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಎಲ್ಲಾ ಪಂದ್ಯಗಳು ಕೂಡ ನಡೆಯಲಿದೆ.

Story first published: Sunday, November 22, 2020, 11:41 [IST]
Other articles published on Nov 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X