ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಂಕನ್ ಪ್ರೀಮಿಯರ್ ಲೀಗ್‌ ನಡೆಸಲು ಗ್ರೀನ್ ಸಿಗ್ನಲ್: ನವೆಂಬರ್ 21ರಿಂದ ಆರಂಭ

LPL 2020: Srilankan Health Ministry Has Given A Green Signal To LPL

ನವೆಂಬರ್ 21ರಿಂದ ನಡೆಯಲಿರುವ ಲಂಕನ್ ಪ್ರೀಮಿಯರ್ ಲೀಗ್‌ಗೆ ಕೊನೆಗೂ ಲಂಕಾದ ಅಧ್ಯಕ್ಷರು ಮತ್ತು ಆರೋಗ್ಯ ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಮೂಲಕ ಲಂಕಾ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.

ಲಂಕನ್ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) 2020 ನವೆಂಬರ್ 21 ರಿಂದ ಡಿಸೆಂಬರ್ 13, 2020 ರವರೆಗೆ ನಡೆಯಲಿದೆ. ಪಂದ್ಯಾವಳಿಯ ಎಲ್ಲಾ 23 ಪಂದ್ಯಗಳು ಕ್ಯಾಂಡಿಯ ಪಲ್ಲಿಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮತ್ತು ಹಂಬಂಟೋಟಾದ ಮಹಿಂದಾ ರಾಜಪಕ್ಸೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಶ್ರೀಲಂಕಾ ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಅವರು ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.

IPL ರೀತಿಯಲ್ಲಿ LPL ಯಶಸ್ಸು ಸಾಧಿಸಲು ಶ್ರೀಲಂಕಾ ಸರ್ಕಾರದ ಬೆಂಬಲIPL ರೀತಿಯಲ್ಲಿ LPL ಯಶಸ್ಸು ಸಾಧಿಸಲು ಶ್ರೀಲಂಕಾ ಸರ್ಕಾರದ ಬೆಂಬಲ

"ಇದು ಹೊಸ ಸಾಮಾನ್ಯ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ಆರೋಗ್ಯ ಮಾರ್ಗಸೂಚಿಗಳನ್ನು ಅನುಸರಿಸುವಾಗ ದೇಶವನ್ನು ಸಾಮಾನ್ಯ ಸ್ಥಿತಿಗೆ ಮರಳಿಸುವ ಸರ್ಕಾರದ ಬದ್ಧತೆಯ ಸೂಚಕವಾಗಿದೆ" ಎಂದು ಕ್ರೀಡಾ ಸಚಿವರು ದೇಶದ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

7 ಟೆಸ್ಟ್, 26 ಏಕದಿನ ಮತ್ತು 23 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರುವ ಪಲ್ಲಿಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು 35,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಮಹಿಂದಾ ರಾಜಪಕ್ಸೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಕೂಡ 35,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, 21 ಏಕದಿನ ಮತ್ತು 7 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದೆ. ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿದ ಕೊನೆಯ ಟಿ 20 ಪಂದ್ಯವು ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವೆ ಮಾರ್ಚ್ 6, 2020 ರಂದು ನಡೆಯಿತು.

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ, ಕೊಲಂಬೊ, ಕ್ಯಾಂಡಿ, ಗ್ಯಾಲೆ, ಡಂಬುಲ್ಲಾ ಮತ್ತು ಜಾಫ್ನಾ ಎಂಬ ಹೆಸರಿನ ಐದು ಫ್ರಾಂಚೈಸಿ ತಂಡಗಳು ಪ್ರಶಸ್ತಿಗಾಗಿ 15 ದಿನಗಳ ಅವಧಿಯಲ್ಲಿ 23 ಪಂದ್ಯಗಳಲ್ಲಿ ಸ್ಪರ್ಧಿಸಲಿವೆ.

Story first published: Thursday, November 5, 2020, 19:12 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X