ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ.ಆಫ್ರಿಕಾ vs ಭಾರತ: ಆಫ್ರಿಕಾ ಒಬ್ಬ ಮಾರಕ ವೇಗಿ ಔಟ್, ಮತ್ತೊಬ್ಬ ಇನ್?!

Lungi Ngidi unlikely to play vs India, Amla recovering well

ಸೌತಾಂಪ್ಟನ್, ಜೂನ್ 3: ವಿಶ್ವಕಪ್ 2019ರ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆಯಾದರೂ ದಕ್ಷಿಣ ಆಫ್ರಿಕಾ ಕೂಡ ಈ ಪಂದ್ಯದಲ್ಲಿ ಪ್ರಬಲ ಸ್ಪರ್ಧೆಯೊಡ್ಡುವ ಸಾಧ್ಯತೆಯಿದೆ. ಯಾಕೆಂದರೆ ಪ್ರೋಟಿಯಾಸ್ ಮಾರಕ ವೇಗಿ ಲುಂಗಿಸಾನಿ ಎನ್‌ಗಿಡಿ ತಂಡದಿಂದ ಹೊರಬಿದ್ದಿದ್ದರೂ ಮತ್ತೊಬ್ಬ ಅಪಾಯಕಾರಿ ಬೌಲರ್ ಡೇಲ್ ಸ್ಟೇನ್ ಅವರು ಎನ್‌ಗಿಡಿ ಸ್ಥಾನದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

2019ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಡೇಲ್ ಸ್ಟೇನ್ ಆಡಿರಲಿಲ್ಲ. ಗಾಯಾಳಾಗಿದ್ದ ಸ್ಟೇನ್ ಆಗಿನ್ನೂ ಚೇತರಿಸಿಕೊಂಡಿರಲಿಲ್ಲ. ಪರಿಣಾಮ ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 104 ರನ್ ಸೋಲನುಭವಿಸಿತ್ತು. ಅನಂತರ ಬಾಂಗ್ಲಾದೇಶ ವಿರುದ್ಧವೂ ದಕ್ಷಿಣ ಆಫ್ರಿಕಾ 21 ರನ್ ನಿಂದ ಸೋತಿತ್ತು.

ವಿಶ್ವಕಪ್-ಭಾರತ vs ಪಾಕ್ ಕದನ: ಭಾರತದ ಮೇಲೆಯೇ ಹೆಚ್ಚಿನ ಒತ್ತಡ!ವಿಶ್ವಕಪ್-ಭಾರತ vs ಪಾಕ್ ಕದನ: ಭಾರತದ ಮೇಲೆಯೇ ಹೆಚ್ಚಿನ ಒತ್ತಡ!

ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ಪಂದ್ಯ ಯಾಕೆ ಜಿದ್ದಾಜಿದ್ದಿ ಅನ್ನಿಸಲಿದೆ ಅನ್ನೋದಕ್ಕೆ ಕೆಳಗೊಂದಿಷ್ಟು ಅಂಶಗಳಿವೆ.

{headtohead_cricket_6_3}

ದಕ್ಷಿಣ ಆಫ್ರಿಕಾ ಗೆಲ್ಲಲೇಬೇಕು

ದಕ್ಷಿಣ ಆಫ್ರಿಕಾ ಗೆಲ್ಲಲೇಬೇಕು

ವಿಶ್ವಕಪ್ ಆರಂಭಿಕ ಎರಡೂ ಪಂದ್ಯಗಳಲ್ಲಿ ಮುಗ್ಗರಿಸಿರುವುದರಿಂದ ಪ್ರೋಟಿಯಾಸ್, ಜೂನ್ 5ರಂದು ಭಾರತ ವಿರುದ್ಧದ ಪಂದ್ಯದಲ್ಲಿ ಶತಾಯ ಗತಾಯ ಗೆಲ್ಲಲೇಬೇಕಿದೆ. ಇಲ್ಲದಿದ್ದರೆ ತಂಡದ ವಿಶ್ವಕಪ್ ಸೆಮಿಫೈನಲ್ ಕನಸು ದುಬಾರಿಯಾಗಲಿದೆ. ಹೀಗಾಗಿ ಈ ಪ್ರಮುಖ ಪಂದ್ಯದಲ್ಲಿ ಡೇನ್ ಸ್ಟೇನ್ ಅವರನ್ನು ಕಣಕ್ಕಿಳಿಸಲೂಬಹುದು.

ಹೊರಬಿದ್ದ ಎನ್‌ಗಿಡಿ

ಹೊರಬಿದ್ದ ಎನ್‌ಗಿಡಿ

ಜೂನ್ 2ರಂದಿನ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಲುಂಗಿ ಎನ್‌ಗಿಡಿ ಹ್ಯಾಮ್‌ಸ್ಟ್ರಿಂಗ್ ಇಂಜುರಿಗೀಡಾಗಿ ತಂಡದಿಂದ ಹೊರ ಬಿದ್ದಾಗ ಆಫ್ರಿಕಾ ಆಘಾತ ಅನುಭವಿಸಿತ್ತು. ಆಫ್ರಿಕಾ ತಂಡವೇ ನೀಡಿರುವ ಮಾಹಿತಿ ಪ್ರಕಾರ ಜೂನ್ 3ರಿಂದ ಎನ್‌ಗಿಡಿಗೆ ಸುಮಾರು 10 ದಿನಗಳ ವಿಶ್ರಾಂತಿ ಅನಿವಾರ್ಯವಾಗಿದೆ. ಆದರೆ ಜೂನ್‌ 3ರ ವೇಳೆ ತಣ್ಣಗೆ ಅಭ್ಯಾಸ ನಡೆಸಿದ್ದ ಡೇಲ್ ಸ್ಟೇನ್ ಚೇತರಿಕೆಯ ಮುನ್ಸೂಚನೆ ನೀಡಿದ್ದರು. ಮತ್ತೊಂದೆಡೆ ಆಫ್ರಿಕಾದ ಹಾಶಿಮ್ ಆಮ್ಲಾ ಕೂಡ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.

ಡೇಲ್ ಸ್ಟೇನ್ ಇನ್

ಡೇಲ್ ಸ್ಟೇನ್ ಇನ್

ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಸತತ ಎರಡು ಪಂದ್ಯಗಳಲ್ಲಿ ಸೋತಿದ್ದು ತೀರಾ ಕಡಿಮೆ. ಇನ್ನು ಭಾರತ ವಿರುದ್ಧವೂ ಸೋತರೆ ಆಫ್ರಿಕಾ, ವಿಶ್ವಕಪ್‌ನಲ್ಲಿ ಸತತ 3 ಪಂದ್ಯಗಳಲ್ಲಿ ಸೋತು ಬೇಡದ ದಾಖಲೆಗೆ ಕಾರಣವಾಗಲಿದೆ. ಹೀಗಾಗಿ ಆಫ್ರಿಕಾ ಬೌಲಿಂಗ್ ವಿಭಾಗ ಬಲಿಷ್ಠಗೊಳಿಸಿಕೊಳ್ಳಲು ಭಾರತ ವಿರುದ್ಧ ಡೇಲ್ ಸ್ಟೇನ್ ಅವರನ್ನಾದರೂ ಕಣಕ್ಕಿಳಿಸುವುದು ಅನಿವಾರ್ಯವಾಗಿದೆ.

ಭಾರತವೇ ಫೇವರಿಟ್

ಭಾರತವೇ ಫೇವರಿಟ್

ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ಎದುರು ಭಾರತ ಹಿನ್ನಡೆ ಕಾಣುವ ಸಾಧ್ಯತೆ ಬಹಳ ಕಡಿಮೆ. ಮೊದಲ ಪಂದ್ಯದಲ್ಲೀ ಭಾರತ ಶುಭಾರಂಭ ಕಾಣುವ ಎಲ್ಲಾ ಲಕ್ಷಣಗಳಿವೆ. ಗಾಯದ ಸಮಸ್ಯೆಯಲ್ಲಿ ಭಾರತ ಹೊರತಾಗಿಲ್ಲ. ಆದರೆ ಸಮಸ್ಯೆಯನ್ನು ಮೆಟ್ಟಿ, ಭಾರತ ಗೆಲುವಿನ ಮೆಟ್ಟಿಲೇರುವುದರಲ್ಲಿದೆ. ಇತ್ತ ಆರಂಭಿಕ ಎರಡೂ ಪಂದ್ಯಗಳಲ್ಲೂ ಸೋತು ದಕ್ಷಿಣ ಆಫ್ರಿಕಾ ಸಹಜವಾಗೇ ಹೆಚ್ಚು ಒತ್ತಡದಲ್ಲಿರುವುದರಿಂದ ಭಾರತ ಇದರ ಲಾಭ ಪಡೆಯಬಲ್ಲದು.

Story first published: Monday, June 3, 2019, 16:03 [IST]
Other articles published on Jun 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X