ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!

ಸೈನಿಕರ ಕಥೆ ಹೇಳಲು ಹೊರಟ ಧೋನಿ | Oneindia Kannada
M S Dhoni to produce TV show on Army officers

ಮಾಜಿ ನಾಯಕ ಟೀಮ್ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ಟಿವಿ ಕಾರ್ಯಕ್ರಮ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಧ್ಯ ಅಂತರಾಷ್ಟ್ರೀಯ ಪಂದ್ಯಗಳಿಂದ ವಿಶ್ರಾಂತಿಯಲ್ಲಿರುವ ಧೋನಿ ವೀರ ಸೇನಾನಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಪರಮವೀರ ಚಕ್ರ ಮತ್ತು ಅಶೋಕಚಕ್ರ ವಿಜೇತ ವೀರ ಸೇನಾನಿಗಳ ಜೀವನ ಕಥೆಹೇಳಲು ಧೋನಿ ಬರುತ್ತಿದ್ದಾರೆ. ಅದಕ್ಕೆ ಬೇಕಾದ ಪೂರಕ ಸಿದ್ಧತೆಗಳೂ ಕೂಡ ಆಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಸದ್ಯ ಇದು ಸ್ಕ್ರಿಪ್ಟ್ ಹಂತದಲ್ಲಿದ್ದು ಮುಂದಿನ ವರ್ಷದಲ್ಲಿ ಸೆಟ್ಟೇರಲಿದೆ.

ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿರುವ ಮಾಜಿ ನಾಯಕ ಧೋನಿ, ಈ ಸಮಯದಲ್ಲಿ ಸೇನಾಧಿಕಾರಿಗಳೊಂದಿಗೆ ಸಾಕಷ್ಟು ಸಮಯ ಕಳೆದಿದ್ದಾರೆ. ವಿಶ್ವಕಪ್‌ ಮುಗಿದ ಬಳಿಕ ಯಾವುದೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾಗಿಯಾಗದ ಅವರು ಎರಡು ವಾರಗಳ ಅವಧಿಯನ್ನು ಭಾರತದ ಪ್ರಾದೇಶಿಕ ಸೈನ್ಯದೊಂದಿಗೆ ಕಳೆದಿದ್ದರು. ಈ ಸಂದರ್ಭದಲ್ಲಿ ಹಲವು ವೀರ ಸೇನಾನಿಗಳ ಜೊತೆಗೆ ಧೋನಿ ಕಾಲಕಳೆದಿದ್ದಾರೆ.

ಸೈನಿಕರಿಂದ ಪ್ರೇರಣೆಗೊಂಡ ಧೋನಿ

ಸೈನಿಕರಿಂದ ಪ್ರೇರಣೆಗೊಂಡ ಧೋನಿ

ಸೇನೆಯ ರೆಜಿಮೆಂಟ್‌ನಲ್ಲಿ ಸಮಯ ಕಳೆದ ಧೋನಿ ಸೈನಿಕರ ಮತ್ತು ಅವರ ಕುಟುಂಬಗಳ ಕಠಿಣ ಸಂದರ್ಭಗಳ ಕುರಿತಾಗಿ ಸಾಕಷ್ಟು ತಿಳಿದುಕೊಂಡಿದ್ದಾರೆ. ಅದರಿಂದ ಪ್ರೇರಣೆಗೊಂಡಿರುವ ಧೋನಿ ಈ ವಿಚಾರವನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ.

ಧೋನಿಯೇ ನಿರ್ಮಾಣ

ಧೋನಿಯೇ ನಿರ್ಮಾಣ

ಈ ಕಾರ್ಯಕ್ರಮವನ್ನು ಸ್ವತಃ ಮಹೇಂದ್ರ ಸಿಂಗ್ ಧೋನಿಯೇ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸ್ಟುಡಿಯೋ ನೆಕ್ಸ್ಟ್‌ ಸಂಸ್ಥೆಯೊಂದಿಗೆ ಕೈಜೋಡಿಸಿ ಧೋನಿ ಎಂಟರ್ಟೈನ್‌ಮೆಂಟ್ ಪ್ರೈವೆಟ್ ಲಿಮಿಟೆಡ್ ಮೂಲಕ ಕಾರ್ಯಕ್ರಮ ನಿರ್ಮಾಣ ನಡೆಯಲಿದೆ.

ಹಾಟ್‌ಸ್ಟಾರ್‌ಗಾಗಿ ಕಾರ್ಯಕ್ರಮ ನಿರ್ಮಿಸಿದ್ದ ಧೋನಿ

ಹಾಟ್‌ಸ್ಟಾರ್‌ಗಾಗಿ ಕಾರ್ಯಕ್ರಮ ನಿರ್ಮಿಸಿದ್ದ ಧೋನಿ

ಧೋನಿಗೆ ಇದೇನು ಹೊಸ ಕಾರ್ಯಕ್ರಮವಲ್ಲ. ಈ ಹಿಂದೆ ಧೋನಿ ಹಾಟ್‌ಸ್ಟಾರ್‌ಗಾಗಿ ಕಾರ್ಯಕ್ರಮವೊಂದನ್ನು ನಿರ್ಮಾಣ ಮಾಡಿದ್ದರು. ಐಪಿಎಲ್ ನಿಂದ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್‌ 2018ರಲ್ಲಿ ಮತ್ತೆ ಚಾಂಪಿಯನ್ ಆಗಿ ಕಮ್ ಬ್ಯಾಕ್ ಮಾಡಿದ ಹಿಂದಿನ ಕಥೆಯನ್ನು ಧೋನಿ ನಿರ್ಮಾಣ ಮಾಡಿದ್ದರು. ಆದರೆ ಧೋನಿ ಮಾಡಲು ಹೊರಟಿರುವ ಈ ಚಿತ್ರ ಕಿರುತೆರೆಗೆ ಧೋನಿಯ ಮೊದಲ ಕೊಡುಗೆಯಾಗಿದೆ

ಸಿನಿಮಾ ಮೂಲಕ ಮಿಂಚಿದ್ದ ಧೋನಿ

ಸಿನಿಮಾ ಮೂಲಕ ಮಿಂಚಿದ್ದ ಧೋನಿ

ಧೋನಿ ಸಿನಿಮಾ ಮೂಲಕ ಮುಂಚಿದ್ದರು. ಆದರೆ ಇದರಲ್ಲಿ ಧೋನಿ ಯಾವುದೇ ವಿಭಾಗದಲ್ಲೂ ಭಾಗಿಯಾಗಿರಲಿಲ್ಲ. ಧೋನಿ ಜೀವನಾಧಾರಿತ ಚಿತ್ರ ಅದಾಗಿತ್ತು. 2016ರಲ್ಲಿ "ಎಂ.ಎಸ್‌.ಧೋನಿ; ದಿ ಅನ್‌ಟೋಲ್ಡ್‌ ಸ್ಟೋರಿ" ಹೆಸರಿನಲ್ಲಿ ತೆರೆಗೆ ಬಂದಿತ್ತು. ಸುಶಾಂತ್ ಸಿಂಗ್ ರಜಪೂತ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದರು.

Story first published: Tuesday, December 10, 2019, 15:08 [IST]
Other articles published on Dec 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X