ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಬ್ಯಾಟಿಂಗ್ ಕೌಶಲ್ಯದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿದ್ದೇನೆ: ಪೃಥ್ವಿ ಶಾ

Made some small changes in my technique, minimized mistakes, says Prithvi Shaw

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿ ಟೀಕೆಗೆ ಗುರಿಯಾಗಿದ್ದ ಪೃಥ್ವಿ ಶಾ ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿ ಮತ್ತೆ ತನ್ನ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದರು. ಈಗ ಆ ಅತ್ಯುತ್ತಮ ಫಾರ್ಮ್‌ಅನ್ನು ಐಪಿಎಲ್‌ನ ಮೊದಲ ಪಂದ್ಯದಲ್ಲಿಯೂ ಮುಂದುವರಿಸಿದ ಪೃಥ್ವಿ ಶಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ. 38 ಎಸೆತಗಳಲ್ಲಿ ಭರ್ಜರಿ 72 ರನ್‌ ಬಾರಿಸಿದ್ದಲ್ಲದೆ ಮೊದಲ ವಿಕೆಟ್‌ಗೆ ಶಿಖರ್ ಧವನ್ ಜೊತೆಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಈ ಅದ್ಭುತ ಪ್ರದರ್ಶನದ ಬಳಿಕ 21ರ ಹರೆಯದ ಯುವ ಆಟಗಾರ ಪೃಥ್ವಿ ಶಾ ಪ್ರತಿಕ್ರಿಯಿಸಿದ್ದು ಆಟದ ತಾಂತ್ರಿಕ ಕೌಶಲ್ಯದಲ್ಲಿ ಕೆಲ ಬದಲಾವಣೆಯನ್ನು ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಇದು ಐಪಿಎಲ್‌ನ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಕೈಹಿಡಿದಿರುವುದಾಗಿ ಪೃಥ್ವಿ ಶಾ ಅಭಿಪ್ರಾಯಪಟ್ಟಿದ್ದಾರೆ.

ಒಂದೇ ಪಂದ್ಯದಲ್ಲಿ ರೋಹಿತ್ ಮತ್ತು ವಾರ್ನರ್‌ ದಾಖಲೆಯನ್ನು ಸರಿಗಟ್ಟಿದ ಧವನ್ಒಂದೇ ಪಂದ್ಯದಲ್ಲಿ ರೋಹಿತ್ ಮತ್ತು ವಾರ್ನರ್‌ ದಾಖಲೆಯನ್ನು ಸರಿಗಟ್ಟಿದ ಧವನ್

''ಐಪಿಎಲ್‌ಗಿಂತ ಮುನ್ನ ನಾನು ನನ್ನ ಬ್ಯಾಟಿಂಗ್‌ನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ನಾನು ಮೊದಲು ಮಾಡುತ್ತಿದ್ದ ತಪ್ಪುಗಳನ್ನು ಕಡಿಮೆ ಮಾಡಲು ಬಯಸಿದ್ದೇನೆ ಮತ್ತು ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ" ಎಂದು ಪೃಥ್ವಿ ಶಾ ಮಾಧ್ಯಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಕಳೆದ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ಶಾ ಬ್ಯಾಟ್‌ನಿಂದ ಬಾರದ ಕಾರಣ ಆಡುವ ಬಳಗದಿಂದ ಅವರು ಹೊರಗುಳಿದಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 0 ಹಾಗೂ 4 ರನ್‌ಗಳಿಸಿ ಔಟಾದ ಬಳಿಕ ಆಡುವ ಬಳಗದಿಂದ ಹೊರಗುಳಿದಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಗೆ ಶಾ ಆಯ್ಕೆಯೇ ಆಗಿರಲಿಲ್ಲ.

"ವಿಜಯ್ ಹಜಾರೆ ಟೂರ್ನಿಗೂ ಮುನ್ನ ನಾನು ನನ್ನ ಸ್ಟ್ರೆಂತ್ ಹಾಗೂ ಕಂಡೀಶನಿಂಗ್ ಕೋಚ್ ರಜಿನಿಕಾಂತ್ ಸಿವಾಗ್ನನಂ ಮತ್ತು ಪ್ರವೀಣ್ ಆಮ್ರೆ ಜೊತೆಗೆ ಎರಡು ವಾರಗಳ ಕಾಲ ಅಭ್ಯಾಸ ನಡೆಸಿದೆ. ಬಳಿಕ ಕೆಲ ಬದಲಾವಣೆಗಳೊಂದಿಗೆ ನನ್ನ ಸ್ವಾಭಾವಿಕ ಆಟವನ್ನು ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ್ದೇನೆ. ಈಗ ಚೆನ್ನೈ ವಿರುದ್ಧ ನಾನು ಬ್ಯಾಟಿಂಗ್ ಮಾಡಿದ ರೀತಿಗೆ ಸಂತಸಗೊಂಡಿದ್ದೇನೆ" ಎಂದು ಪೃಥ್ವಿ ಶಾ ಹೇಳಿದ್ದಾರೆ.

Story first published: Sunday, April 11, 2021, 22:08 [IST]
Other articles published on Apr 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X