ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಸ್‌ ಆಫೀಸರ್ ವಿರುದ್ಧ ಧೋನಿಯ 100 ಕೋಟಿ ರೂಪಾಯಿ ಕೇಸ್: ಸಂಪತ್ ಕುಮಾರ್ ಅರ್ಜಿ ತಿರಸ್ಕರಿಸದ ಮದ್ರಾಸ್ ಹೈಕೋರ್ಟ್

MS Dhoni

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ಕೈಬಿಡುವಂತೆ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಮೂರ್ತಿ ಎನ್ ಶೇಷಸಾಯಿ, ಪ್ರಸ್ತುತ ಆದೇಶವು 2014 ರಿಂದ ನಡೆಯುತ್ತಿರುವ ಪ್ರಮುಖ ಪ್ರಕರಣದ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಈ ಮೂಲಕ ಐಪಿಎಸ್​ ಅಧಿಕಾರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ್ದಾರೆ.

2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ವಿರುದ್ದ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಐಪಿಎಲ್ ಪಂದ್ಯಗಳಲ್ಲಿ ಮ್ಯಾಚ್ ಮತ್ತು ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ನಲ್ಲಿ ಧೋನಿ ಭಾಗಿಯಾಗಿದ್ದಾರೆ ಎಂದು ಟಿವಿ ಮಾಧ್ಯಮ ಕಂಪನಿ ಮತ್ತು ಇತರರು ಮಾನಹಾನಿಕರ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ ಎಂದು ಧೋನಿ ಸಲ್ಲಿಸಿರುವ ಮಾನನಷ್ಟ ಅರ್ಜಿಯಲ್ಲಿ ತಿಳಿಸಲಾಗಿದೆ. ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಐಪಿಎಲ್ ಬೆಟ್ಟಿಂಗ್ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದರು.

ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾದ ರೋಹಿತ್‌ ಶರ್ಮಾಗೆ ಸ್ಯಾಲರಿ ಎಷ್ಟು?ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾದ ರೋಹಿತ್‌ ಶರ್ಮಾಗೆ ಸ್ಯಾಲರಿ ಎಷ್ಟು?

ಆರಂಭದಲ್ಲಿ ಐಪಿಎಲ್ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ ಕುಮಾರ್ ಸೇರಿದಂತೆ ಆರೋಪಿಗಳನ್ನು ಹೇಳಿಕೆಗಳನ್ನು ನೀಡದಂತೆ ಮತ್ತು ಅವುಗಳನ್ನು ಪ್ರಕಟಿಸದಂತೆ ತಡೆಯಲು ಅವರು ಪ್ರಯತ್ನಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫ್ರಾಂಚೈಸಿಯ ನಾಯಕ ಧೋನಿ ಅವರು ಫೆಬ್ರವರಿ 11, 2014 ರಿಂದ ತಮ್ಮ ವಿರುದ್ಧ ಗಂಭೀರ, ಮಾನನಷ್ಟ, ಮಾನಹಾನಿಕರ ಮತ್ತು ಸುಳ್ಳು ಸುದ್ದಿ ಮತ್ತು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಧೋನಿ ಪರವಾಗಿ ಸಲ್ಲಿಸಲಾದ ಮಾನನಷ್ಟ ಅರ್ಜಿಯಲ್ಲಿ ತಿಳಿಸಲಾಗಿದೆ.

ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಧೋನಿಯು ತನ್ನ ಇಮೇಜ್ ಅನ್ನು ಹಾಳುಮಾಡುವುದು ಮತ್ತು ಕಳಂಕಗೊಳಿಸುವುದು ಅವರ ಏಕೈಕ ಉದ್ದೇಶವಾಗಿದೆ. ಹೀಗಾಗಿ 100 ಕೋಟಿ ರೂ. ಮಾನನಷ್ಟ ಪರಿಹಾರ ನೀಡಬೇಕೆಂದು ಕೋರ್ಟ್ ಮೊರೆ ಹೋಗಲಾಗಿತ್ತು. ಜಿ ಸಂಪತ್ ಕುಮಾರ್ ಅವರು ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಇತ್ತೀಚೆಗೆ ಸಲ್ಲಿಸಿದ ಹೆಚ್ಚುವರಿ ಪ್ರತಿ-ಅಫಿಡವಿಟ್‌ನಲ್ಲಿ, ಈ ಮೊಕದ್ದಮೆ ಮುಚ್ಚಲು ಅವರು ಪ್ರತಿಪಾದಿಸಿದ್ದಾರೆ. ಹೀಗಾಗಿ ಮದ್ರಾಸ್ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಲು ಇದು ಕಾರಣವಾಗಿತ್ತು, ಆದರೆ ಮೊಕದ್ದಮೆಯ ಇತರ ಮೂವರು ಪ್ರತಿವಾದಿಗಳಲ್ಲಿ ಯಾರೂ ತಮಿಳುನಾಡಿನಲ್ಲಿ ನೆಲೆಸಿರಲಿಲ್ಲ.

ಅಷ್ಟೊಂದು ರಿಸ್ಕ್ ಇದ್ರೂ ಟೀಂ ಇಂಡಿಯಾಗಾಗಿ ಸೌತ್ ಆಫ್ರಿಕಾ ಮಾಡಿರೋ ಮಾಸ್ಟರ್ ಪ್ಲ್ಯಾನ್ ನೋಡಿ | Oneindia Kannada

ಏನಿದು ಸ್ಪಾಟ್ ಫಿಕ್ಸಿಂಗ್ ಪ್ರಕರಣ?
2013ರ ಐಪಿಎಲ್ ಸೀಸನ್‌ನಲ್ಲಿ ಶ್ರೀಶಾಂತ್, ಅಂಕಿತ್ ಚೌಹಾನ್ ಮತ್ತು ಅಂಕಿತ್ ಚಾಂಡಿಲಾ ಸ್ಪಾಟ್ ಫಿಕ್ಸಿಂಗ್‌ನ ಪ್ರಮುಖ ಆರೋಪಿಗಳಾಗಿದ್ದರು. ಇವರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಹೆಸರೂ ಬೆಟ್ಟಿಂಗ್ ನಲ್ಲಿ ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಚೆನ್ನೈ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು. ಈ ಪ್ರಕರಣದಲ್ಲಿ ಧೋನಿ ಕೂಡ ಭಾಗಿಯಾದ್ದಾರೆ ಎಂಬ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿ ಹರಡಲು ತನಿಖಾಧಿಕಾರಿ ಸಂಪತ್ ಕುಮಾರ್ ಸೇರಿದಂತೆ ಅನೇಕರು ಕಾರಣ ಎಂದು 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನ ಧೋನಿ ದಾಖಲಿಸಿದ್ದಾರೆ.

Story first published: Thursday, December 9, 2021, 23:58 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X