ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿಯಲ್ಲಿ ಅಬ್ಬರಿಸಿದ್ದಾರೆ ಐಪಿಎಲ್‌ನಲ್ಲಿ ನಿರಾಸೆ ಮೂಡಿಸಿದ ಈ 4 ಕನ್ನಡಿಗರು

Maharaja T20 Trophy: These 4 cricketers performed well who had forgettable IPL 2022 Season

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೊಸಿಯೇಶನ್ ಈ ವರ್ಷ ಮಹಾರಾಜ ಟಿ20 ಕ್ರಿಕೆಟ್ ಟೂರ್ನಿಯನ್ನು ಆರಂಭಿಸಿದ್ದು ಉತ್ತಮ ಸ್ಪಂದನೆ ದೊರೆತಿದೆ. ಈ ಹಿಂದೆ ಉತ್ತಮ ಯಶಸ್ಸು ಕಂಡಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ನಿಷೇಧಕ್ಕೆ ಒಳಗಾದ ಬಳಿಕ ಮಹಾರಾಜ ಟಿ20 ಟ್ರೋಫಿ ಕರ್ನಾಟಕ ಕ್ರಿಕೆಟ್ ಅಸೊಸಿಯೇಶನ್‌ನ ಅಧಿಕೃತ ಕ್ರಿಕೆಟ್ ಲೀಗ್ ಎನಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವ ಕೆಲ ಪ್ರಮುಖ ಸ್ಟಾರ್ ಆಟಗಾರರು ಈ ಲೀಗ್‌ನಲ್ಲಿ ಭಾಗಿಯಾಗಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿರುವ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆಯಂತಾ ಆಟಗಾರರು ಕೂಡ ಟೂರ್ನಿಯಲ್ಲಿ ಭಾಗಿಯಾಗಿದ್ದು ಪ್ರಮುಖ ಆಕರ್ಷಣೆಯಾಗಿದ್ದರು. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಭಾಗಿಯಾಗಿದ್ದ ಕೆಲ ಆಟಗಾರರು ಆ ಮಹತ್ವದ ವೇದಿಕೆಯಲ್ಲಿ ವಿಫಲವಾಗಿದ್ದ ನಾಲ್ವರು ಆಟಗಾರರು ಮಹಾರಾಜ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದಾರೆ. ಆ ನಾಲ್ವರು ಆಟಗಾರು ಯಾರು? ಮುಂದೆ ಓದಿ..

ಈ ಬಾರಿ ಏಷ್ಯಾಕಪ್‌ನಲ್ಲಿ ಆಡಲಿರುವ 5 ತಂಡಗಳ ವಿರುದ್ಧ ಹೆಚ್ಚು ರನ್ ಗಳಿಸಿದವರಲ್ಲಿ ಕೊಹ್ಲಿಗಿಂತ ರೋಹಿತ್ ಮುಂದು!ಈ ಬಾರಿ ಏಷ್ಯಾಕಪ್‌ನಲ್ಲಿ ಆಡಲಿರುವ 5 ತಂಡಗಳ ವಿರುದ್ಧ ಹೆಚ್ಚು ರನ್ ಗಳಿಸಿದವರಲ್ಲಿ ಕೊಹ್ಲಿಗಿಂತ ರೋಹಿತ್ ಮುಂದು!

ಭರ್ಜರಿ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್

ಭರ್ಜರಿ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್

ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿರುವ ಮಯಾಂಕ್ ಅಗರ್ವಾಲ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫಲವಾಗಿದ್ದರು. ಆದರೆ ಮಹಾರಾಜ ಕಪ್‌ನಲ್ಲಿ ಮಯಾಂಕ್ ಅಗರ್ವಾಲ್ ಅಮೋಘ ಪ್ರದರ್ಶನ ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ಮಯಾಂಕ್ ಅಗರ್ವಾಲ್ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕತ್ವದ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ. ಫೈನಲ್‌ ಪಂದ್ಯಕ್ಕೂ ಮುನ್ನ 11 ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿರುವ ಮಯಾಂಕ್ ಅಗರ್ವಾಲ್ 480 ರನ್‌ಗಳನ್ನು ಗಳಿಸಿದ್ದಾರೆ. 167.24 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಕಳೆದ ಬಾರಿಯಂತಿಲ್ಲ ಭಾರತ ತಂಡ: ಏಷ್ಯಾ ಕಪ್‌ಗೆ ಮುನ್ನ ಎಚ್ಚರಿಕೆ ಸಂದೇಶ ನೀಡಿದ ನಾಯಕ ರೋಹಿತ್

ಫಾರ್ಮ್‌ಗೆ ಮರಳಿದ ಮನೀಶ್ ಪಾಂಡೆ

ಫಾರ್ಮ್‌ಗೆ ಮರಳಿದ ಮನೀಶ್ ಪಾಂಡೆ

ಕರ್ನಾಟಕದ ಪ್ರಮುಖ ಆಟಗಾರ ಮನೀಶ್ ಪಾಂಡೆ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಆಡಿದ್ದು ಕಳಪೆ ಪ್ರದರ್ಶನ ನೀಡಿದ್ದರು. ಆದರೆ ಮಹಾರಾಜ ಟ್ರೋಫಿಯಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಮನೀಶ್ ಪಾಂಡೆ ಅದ್ಭುತ ಪ್ರದರ್ಶನ ನೀಡಿದ್ದಾರೆ. 10 ಇನ್ನಿಂಗ್ಸ್‌ಗಳಲ್ಲಿ 317 ರನ್‌ಗಳನ್ನು ಗಳಿಸಿರುವ ಮನೀಶ್ ಪಾಂಡೆ 153.88ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ ನಡೆಸಿ ಮಿಂಚಿದ್ದಾರೆ.

ಅನುಭವಿ ಆಟಗಾರ ಕರುಣ್ ನಾಯರ್

ಅನುಭವಿ ಆಟಗಾರ ಕರುಣ್ ನಾಯರ್

ಕರುಣ್ ನಾಯರ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡಿದ್ದು ತಮ್ಮ ಸಾಮರ್ಥ್ಯವನ್ನು ಸಾಬಿತುಪಡಿಸಲು ಕೆಲ ಅವಕಾಶಗಳನ್ನು ಪಡೆದಿದ್ದರು. ಆದರೆ ಇದನ್ನು ಬಳಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ನಂತರ ಆಡುವ ಬಳಗದಿಂದ ಹೊರಗುಳಿಯಬೇಕಾಯಿತು. ಆದರೆ ಮಹಾರಾಜ ಟಿ20 ಟೂರ್ನಿಯಲ್ಲಿ ಕರುನ್ ನಾಯರ್ ಅವರಿಂದ ಅದ್ಭುತ ಪ್ರದರ್ಶನ ಬಂದಿದೆ. ಮೈಸೂರು ವಾರಿಯರ್ಸ್ ತಂಡದ ಪರವಾಗಿ ಕಣಕ್ಕಿಳಿದಿರುವ ಅನುಭವಿ ಆಟಗಾರ 12 ಇನ್ನಿಂಗ್ಸ್‌ಗಳಲ್ಲಿ 257 ರನ್‌ಗಳನ್ನು ಗಳಿಸಿದ್ದು 150ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಏಷ್ಯಾ ಕಪ್ 2022: ತಂಡದಲ್ಲಿದ್ದರೂ ಭಾರತದ ಈ ಮೂವರಿಗೆ ಆಡುವ ಅವಕಾಶ ದೊರೆಯುವುದು ಅನುಮಾನ!

ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್

ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್

ಕರ್ನಾಟಕದ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಕಾಣಿಸಿಕೊಂಡಿದ್ದರು. ಆದರೆ ಶ್ರೇಯಸ್ ಗೋಪಾಲ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಳು ವಿಫಲವಾಗಿದ್ದ ಕಾರಣ ಮತ್ತೆ ಅವಕಾಶವೇ ದೊರೆತಿರಲಿಲ್ಲ. ಆದರೆ ಮಹಾರಾಜ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಶ್ರೇಯಸ್ ಗೋಪಾಲ್ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡಿದ್ದಾರೆ. ಆಡಿರುವ 12 ಪಂದ್ಯಗಳಲ್ಲಿ ಅವರು 16 ವಿಕೆಟ್ ಪಡೆದು ಮಿಂಚಿದ್ದಾರೆ.

Story first published: Saturday, August 27, 2022, 9:02 [IST]
Other articles published on Aug 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X