ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ: ಹೊಸ ಕೆಪಿಎಲ್‌ನ ಎಲ್ಲಾ 6 ತಂಡಗಳ ನಾಯಕರ ಘೋಷಣೆ; ಬೆಂಗಳೂರಿಗೆ ಮಯಾಂಕ್ ನಾಯಕ!

Maharaja Trophy 2022: All 6 teams captains announced; Mayank Agarwal to lead Bengaluru Blasters

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ಸಿನ ಬೆನ್ನಲ್ಲೇ ವಿವಿಧ ರಾಜ್ಯ ಕ್ರಿಕೆಟ್ ಬೋರ್ಡ್‌ಗಳು ರಾಜ್ಯ ಪ್ರೀಮಿಯರ್ ಲೀಗ್ ಟೂರ್ನಿಗಳು ಆಯೋಜಿಸಲು ಆರಂಭಿಸಿದವು. ಈ ಪೈಕಿ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಒಂದು. 2019ರವರೆಗೆ ಎಂಟು ಕರ್ನಾಟಕ ಪ್ರೀಮಿಯರ್ ಲೀಗ್‌ ಆವೃತ್ತಿಗಳು ಯಾವುದೇ ಅಡಚಣೆ ಇಲ್ಲದೇ ಸರಾಗವಾಗಿ ನಡೆದಿತ್ತು. ಆದರೆ, ನಂತರದಲ್ಲಿ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಿಂದಾಗಿ ಕರ್ನಾಟಕ ಪ್ರೀಮಿಯರ್ ಲೀಗ್‌ನ ಮುಂದಿನ ಅವೃತ್ತಿ ಶುರುವಾಗಲೇ ಇಲ್ಲ.

ಏಷ್ಯಾಕಪ್ 2022: ಭಾರತ ತಂಡ ಪ್ರಕಟಗೊಳ್ಳುವ ದಿನಾಂಕವಿದು; ರಾಹುಲ್ ಬದಲು ಈತ ಉಪನಾಯಕ!ಏಷ್ಯಾಕಪ್ 2022: ಭಾರತ ತಂಡ ಪ್ರಕಟಗೊಳ್ಳುವ ದಿನಾಂಕವಿದು; ರಾಹುಲ್ ಬದಲು ಈತ ಉಪನಾಯಕ!

ಹೀಗೆ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಸ್ಥಗಿತಗೊಂಡ ನಂತರ ಸುಮಾರು ಮೂರು ವರ್ಷಗಳ ಕಾಲ ಯಾವುದೇ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳನ್ನು ನಡೆಸದೇ ಇದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಷನ್ ಇದೀಗ ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ನೂತನ ಟಿ ಟ್ವೆಂಟಿ ಲೀಗ್‌ನ್ನು ಘೋಷಣೆ ಮಾಡಿದ್ದು, ಇದಕ್ಕೆ ಮಹಾರಾಜ ಟಿ ಟ್ವೆಂಟಿ ಟ್ರೋಫಿ ಎಂದು ನಾಮಕರಣ ಮಾಡಿದೆ. ಈ ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಯುನೈಟೆಡ್, ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಸ್ಟ್ರೈಕರ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ಎಂಬ ಒಟ್ಟು ಆರು ತಂಡಗಳು ಭಾಗವಹಿಸುತ್ತಿದ್ದು, ಇತ್ತೀಚೆಗಷ್ಟೇ ಈ ಎಲ್ಲಾ ತಂಡಗಳ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಷನ್ ಇದೀಗ ಎಲ್ಲಾ 6 ತಂಡಗಳ ನಾಯಕರನ್ನು ಘೋಷಿಸಿದೆ.

IND vs WI 3ನೇ ಟಿ20: ರೋಹಿತ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಹೊರನಡೆದದ್ದೇಕೆ? ಮುಂದಿನ ಪಂದ್ಯ ಆಡ್ತಾರಾ, ಇಲ್ವಾ?IND vs WI 3ನೇ ಟಿ20: ರೋಹಿತ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಹೊರನಡೆದದ್ದೇಕೆ? ಮುಂದಿನ ಪಂದ್ಯ ಆಡ್ತಾರಾ, ಇಲ್ವಾ?

ಈ ನಾಯಕರ ಘೋಷಣೆ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಟ ಹಾಗೂ ಮಹಾರಾಜ ಟ್ರೋಫಿಯ ರಾಯಭಾರಿ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಈ ಕಾರ್ಯಕ್ರಮ ಮೈಸೂರಿನ ಸದರ್ನ್ ಹೊಟೇಲ್‌ನಲ್ಲಿ ನಡೆದಿದ್ದು, ಯಾವ ಆಟಗಾರರು ಯಾವ ತಂಡಗಳನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ನಾಯಕರ ಪಟ್ಟಿ

ನಾಯಕರ ಪಟ್ಟಿ

ಮಹಾರಾಜ ಟಿ ಟ್ವೆಂಟಿ ಲೀಗ್ ಟೂರ್ನಿಯಲ್ಲಿ ತಂಡಗಳನ್ನು ಮುನ್ನಡೆಸಲಿರುವ ಎಲ್ಲಾ 6 ನಾಯಕರ ಪಟ್ಟಿ:

ಬೆಂಗಳೂರು ಬ್ಲಾಸ್ಟರ್ಸ್ - ಮಯಾಂಕ್ ಅಗರ್ವಾಲ್

ಗುಲ್ಬರ್ಗಾ ಮಿಸ್ಟಿಕ್ಸ್ - ಮನೀಶ್ ಪಾಂಡೆ

ಮೈಸೂರು ವಾರಿಯರ್ಸ್ - ಕರುಣ್ ನಾಯರ್

ಶಿವಮೊಗ್ಗ ಸ್ಟ್ರೈಕರ್ಸ್ - ಕೃಷ್ಣಪ್ಪ ಗೌತಮ್

ಮಂಗಳೂರು ಯುನೈಟೆಡ್ - ಸಮರ್ಥ್ ಆರ್

ಹುಬ್ಬಳ್ಳಿ ಟೈಗರ್ಸ್ -ಅಭಿಮನ್ಯು ಮಿಥುನ್

ಆಗಸ್ಟ್ 7ಕ್ಕೆ ಟೂರ್ನಿ ಶುರು

ಆಗಸ್ಟ್ 7ಕ್ಕೆ ಟೂರ್ನಿ ಶುರು

ಇನ್ನು ಮಹಾರಾಜ ಟ್ರೋಫಿಯ ಪ್ರಥಮ ಪಂದ್ಯ ಆಗಸ್ಟ್ 7ರಂದು ನಡೆಯಲಿರುವ ಹುಬ್ಬಳ್ಳಿ ಟೈಗರ್ಸ್ ಮತ್ತು ಮಂಗಳೂರು ಯುನೈಟೆಡ್ ನಡವೆ ನಡೆಯಲಿದ್ದು, ಫೈನಲ್ ಪಂದ್ಯ ಆಗಸ್ಟ್ 26ರಂದು ನಡೆಯಲಿದೆ.

ಟೂರ್ನಿಯ ಸಂಪೂರ್ಣ ವೇಳಾಪಟ್ಟಿ

ಟೂರ್ನಿಯ ಸಂಪೂರ್ಣ ವೇಳಾಪಟ್ಟಿ

ಆಗಸ್ಟ್ 7: ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಯುನೈಟೆಡ್ & ಮೈಸೂರು ವಾರಿಯರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 8: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್ & ಮೈಸೂರು ವಾರಿಯರ್ಸ್ vs ಮಂಗಳೂರು ಯುನೈಟೆಡ್

ಆಗಸ್ಟ್ 9: ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ & ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್

ಆಗಸ್ಟ್ 10: ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ & ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 11: ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಯುನೈಟೆಡ್ & ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್

ಆಗಸ್ಟ್ 12: ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್ & ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 13: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ & ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್

ಆಗಸ್ಟ್ 14: ಮೈಸೂರು ವಾರಿಯರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ & ಗುಲ್ಬರ್ಗ ಮಿಸ್ಟಿಕ್ಸ್ vs ಮಂಗಳೂರು ಯುನೈಟೆಡ್

ಆಗಸ್ಟ್ 15: ಮಂಗಳೂರು ಯುನೈಟೆಡ್ vs ಬೆಂಗಳೂರು ಬ್ಲಾಸ್ಟರ್ಸ್ & ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್

ಆಗಸ್ಟ್ 16: ವಿಶ್ರಾಂತಿ ದಿನ

ಆಗಸ್ಟ್ 17: ಮೈಸೂರು ವಾರಿಯರ್ಸ್ vs ಮಂಗಳೂರು ಯುನೈಟೆಡ್ & ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 18: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ & ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್

ಆಗಸ್ಟ್ 19: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ & ಮಂಗಳೂರು ಯುನೈಟೆಡ್ vs ಗುಲ್ಬರ್ಗಾ ಮಿಸ್ಟಿಕ್ಸ್

ಆಗಸ್ಟ್ 20: ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಟ್ರೈಕರ್ಸ್ & ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್

ಆಗಸ್ಟ್ 21: ಮೈಸೂರು ವಾರಿಯರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್ & ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್

ಆಗಸ್ಟ್ 22: ಶಿವಮೊಗ್ಗ ಸ್ಟ್ರೈಕರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ & ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಯುನೈಟೆಡ್

ಆಗಸ್ಟ್ 23: ಎಲಿಮಿನೇಟರ್ & ಕ್ವಾಲಿಫೈಯರ್ 1

ಆಗಸ್ಟ್ 24: ವಿಶ್ರಾಂತಿಯ ದಿನ

ಆಗಸ್ಟ್ 25: ಎರಡನೇ ಕ್ವಾಲಿಫೈಯರ್ ಪಂದ್ಯ

ಆಗಸ್ಟ್ 26: ಫೈನಲ್ ಪಂದ್ಯ

Story first published: Thursday, August 4, 2022, 17:56 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X