ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ: ನಾಯಕನಾಗಿ ಮಕಾಡೆ ಮಲಗಿದ ಕೃಷ್ಣಪ್ಪ ಗೌತಮ್; ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಸೋಲು!

Maharaja Trophy 2022: Krishnappa Gowtham led Shivamogga strikers lost its all 5 matches in a row

ಸದ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಆಯೋಜನೆ ಮಾಡಿರುವ ಮಹಾರಾಜ ಟಿ ಟ್ವೆಂಟಿ ಲೀಗ್ ನಡೆಯುತ್ತಿದ್ದು, ಇದು ಈ ಹಿಂದೆ ನಡೆಯುತ್ತಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗೆ ಬದಲಿ ಟೂರ್ನಿಯಾಗಿದೆ ಎಂದು ಬಿಂಬಿತವಾಗುತ್ತಿದೆ. ಈ ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಶಿವಮೊಗ್ಗ ಸ್ಟ್ರೈಕರ್ಸ್, ಮಂಗಳೂರು ಯುನೈಟೆಡ್, ಹುಬ್ಬಳ್ಳಿ ಟೈಗರ್ಸ್ ಹಾಗೂ ಗುಲ್ಬರ್ಗ ಮಿಸ್ಟಿಕ್ಸ್ ಈ 6 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸುತ್ತಿದ್ದು, ಆಗಸ್ಟ್ 7ರಿಂದ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಆರಂಭಗೊಂಡಿವೆ.

ಸಚಿನ್ ಪ್ರಥಮ ಶತಕಕ್ಕೆ 32 ವರ್ಷ: ಯಾರ ವಿರುದ್ಧ, ಗಳಿಸಿದ್ದೆಷ್ಟು ರನ್, ಸಚಿನ್ ಆಡಿದ್ದ ಕ್ರಮಾಂಕ ಯಾವುದು?ಸಚಿನ್ ಪ್ರಥಮ ಶತಕಕ್ಕೆ 32 ವರ್ಷ: ಯಾರ ವಿರುದ್ಧ, ಗಳಿಸಿದ್ದೆಷ್ಟು ರನ್, ಸಚಿನ್ ಆಡಿದ್ದ ಕ್ರಮಾಂಕ ಯಾವುದು?

ಇನ್ನು ಈ ಲೀಗ್ ಹಂತದ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದು ಅಂತಿಮ 2 ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬೀಳಲಿವೆ. ಹೀಗಾಗಿ ಭಾಗವಹಿಸಲಿರುವ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲು ಕನಿಷ್ಠ 4ನೇ ಸ್ಥಾನವನ್ನಾದರೂ ಪಡೆದುಕೊಳ್ಳಲೇಬೇಕಾದ ಅನಿವಾರ್ಯತೆ ಇದ್ದು ಟೂರ್ನಿಯ ಲೀಗ್ ಹಂತದ ಮೊದಲಾರ್ಧದ ಮುಕ್ತಾಯದ ಸನಿಹಕ್ಕೆ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!

ಆಗಸ್ಟ್ 13ರ ಶನಿವಾರದ 2 ಪಂದ್ಯಗಳ ಮುಕ್ತಾಯದ ಹಂತಕ್ಕೆ ಟೂರ್ನಿಯ ಲೀಗ್ ಹಂತದ ಒಟ್ಟು 14 ಪಂದ್ಯಗಳು ಮುಗಿದಿದ್ದು, ಅಂಕಪಟ್ಟಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಉತ್ತಮ ನೆಟ್ ರನ್ ರೇಟ್ ಹೊಂದಿರುವ ಬೆಂಗಳೂರು ಬ್ಲಾಸ್ಟರ್ಸ್ ಅಗ್ರಸ್ಥಾನದಲ್ಲಿದ್ದರೆ, ಮೈಸೂರು ವಾರಿಯರ್ಸ್ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಈ ಟೂರ್ನಿಯಲ್ಲಿ ಕೆ ಗೌತಮ್ ನಾಯಕನಾಗಿ ಮುನ್ನಡೆಸುತ್ತಿರುವ ಶಿವಮೊಗ್ಗ ಸ್ಟ್ರೈಕರ್ಸ್ ತಂಡ ಮಾತ್ರ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಸೋತು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನಕ್ಕೆ ಕುಸಿತ ಕಂಡಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ನಾಯಕನಾಗಿ ಮಕಾಡೆ ಮಲಗಿದ ಕೃಷ್ಣಪ್ಪ ಗೌತಮ್

ನಾಯಕನಾಗಿ ಮಕಾಡೆ ಮಲಗಿದ ಕೃಷ್ಣಪ್ಪ ಗೌತಮ್

ಟೂರ್ನಿಯ ಮೊದಲ 14 ಪಂದ್ಯಗಳು ಮುಕ್ತಾಯವಾದ ನಂತರ ಟೂರ್ನಿಯಲ್ಲಿ ಭಾಗವಹಿಸಿರುವ ಎಲ್ಲಾ ತಂಡಗಳೂ ಸಹ ಗೆಲುವಿನ ಖಾತೆ ತೆರೆದಿದ್ದು, ಕೃಷ್ಣಪ್ಪ ಗೌತಮ್ ನಾಯಕತ್ವದ ಶಿವಮೊಗ್ಗ ಸ್ಟ್ರೈಕರ್ಸ್ ಮಾತ್ರ ಆಡಿರುವ ಎಲ್ಲಾ 5 ಪಂದ್ಯಗಳಲ್ಲಿಯೂ ಸೋತು ಶೂನ್ಯ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

ಶಿವಮೊಗ್ಗ ಸ್ಟ್ರೈಕರ್ಸ್ ಆಡಿದ ಪಂದ್ಯಗಳ ಮಾಹಿತಿ

ಶಿವಮೊಗ್ಗ ಸ್ಟ್ರೈಕರ್ಸ್ ಆಡಿದ ಪಂದ್ಯಗಳ ಮಾಹಿತಿ

• ಮೈಸೂರು ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 69 ರನ್‌ಗಳ ಬೃಹತ್ ಸೋಲು

• ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್‍ಗಳ ಸೋಲು

• ಮಂಗಳೂರು ಯುನೈಟೆಡ್ ವಿರುದ್ಧ 8 ವಿಕೆಟ್‍ಗಳ ಸೋಲು

• ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 9 ವಿಕೆಟ್‍ಗಳ ಹೀನಾಯ ಸೋಲು

• ಹುಬ್ಬಳ್ಳಿ ಟೈಗರ್ಸ್ ವಿರುದ್ಧ 6 ವಿಕೆಟ್‍ಗಳ ಸೋಲು

ಶಿವಮೊಗ್ಗ ಸ್ಟ್ರೈಕರ್ಸ್ ಆಡಿದ ಪಂದ್ಯಗಳ ಮಾಹಿತಿ

ಶಿವಮೊಗ್ಗ ಸ್ಟ್ರೈಕರ್ಸ್ ಆಡಿದ ಪಂದ್ಯಗಳ ಮಾಹಿತಿ

ಆಗಸ್ಟ್ 14: ಮೈಸೂರು ವಾರಿಯರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 17: ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 19: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 20: ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 22: ಶಿವಮೊಗ್ಗ ಸ್ಟ್ರೈಕರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್

ಸ್ಕ್ವಾಡ್: ಕೃಷ್ಣಪ್ಪ ಗೌತಮ್, ಕೆಸಿ ಕಾರಿಯಪ್ಪ, ರೋಹನ್ ಕದಮ್, ಕೆವಿ ಸಿದ್ಧಾರ್ಥ, ದರ್ಶನ್ ಎಂಬಿ, ಸ್ಟಾಲಿನ್ ಹೂವರ್, ಅವಿನಾಶ್ ಡಿ, ಸ್ಮರಣ್ ಆರ್, ಶರತ್ ಬಿಆರ್, ರಣವೀರ್ ವಾಧ್ವಾ, ರಾಜೇಂದ್ರ ಡಂಗನವರ್, ಉತ್ತಮ್ ಅಯಪ್ಪ, ಚೈತನ್ಯ ಎಸ್, ಶ್ರೇಯಸ್ ಬಿಎಂ, ಕೆಎಸ್ ದೇವಯ್ಯ, ವಿನಯ್ ಸಾಗರ್, ಶ್ರೇಯಸ್ ಎಸ್ಪಿ ಮತ್ತು ಪುನಿತ್ ಎಸ್

Story first published: Sunday, August 14, 2022, 14:27 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X