ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ: ಶಿವಮೊಗ್ಗ ವಿರುದ್ಧ ಗೆದ್ದು ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಮಂಗಳೂರು ಯುನೈಟೆಡ್

Maharaja Trophy 2022: Mangaluru United beat Shivamogga Strikers by 8 wickets

ಪ್ರಸ್ತುತ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡೆಸುತ್ತಿರುವ ಮಹಾರಾಜ ಟ್ರೋಫಿಯ ನಾಲ್ಕನೇ ದಿನದಂದು ನಡೆದ ಎರಡನೇ ಪಂದ್ಯದಲ್ಲಿ ಶಿವಮೊಗ್ಗ ವಿರುದ್ಧ ಮಂಗಳೂರು ಯುನೈಟೆಡ್ 8 ವಿಕೆಟ್‌ಗಳ ಜಯ ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಜಯವನ್ನು ಸಾಧಿಸಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಮಂಗಳೂರು ಯುನೈಟೆಡ್ ಎರಡನೇ ದಿನದಂದು ಮೈಸೂರು ವಾರಿಯರ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ, ಇಂದು ( ಆಗಸ್ಟ್ 10 ) ನಡೆದ ಪ್ರಥಮ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆದ್ದ ಪರಿಣಾಮ ಮೈಸೂರು ವಾರಿಯರ್ಸ್ ಅಗ್ರಸ್ಥಾನವನ್ನು ಅಲಂಕರಿಸಿತ್ತು. ಆದರೆ ಇದೀಗ ಟೂರ್ನಿಯಲ್ಲಿನ ತನ್ನ ಮೂರನೇ ಪಂದ್ಯದಲ್ಲಿ ಜಯ ಸಾಧಿಸಿರುವ ಮಂಗಳೂರು ವಾರಿಯರ್ಸ್ ಸಂಜೆಯಷ್ಟೇ ಅಗ್ರಸ್ಥಾನಕ್ಕೇರಿದ್ದ ಮೈಸೂರು ವಾರಿಯರ್ಸ್ ತಂಡವನ್ನು ಎರಡನೇ ಸ್ಥಾನಕ್ಕೆ ತಳ್ಳಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಏಷ್ಯಾಕಪ್‌ಗೆ ಪ್ರಕಟವಾದ ಭಾರತ ತಂಡದಲ್ಲಿ ಆರ್‌ಸಿಬಿಯ ಇಬ್ಬರು; ಆ ಒಂದು ತಂಡದವರಿಗೆ ಇಲ್ಲ ಸ್ಥಾನ!ಏಷ್ಯಾಕಪ್‌ಗೆ ಪ್ರಕಟವಾದ ಭಾರತ ತಂಡದಲ್ಲಿ ಆರ್‌ಸಿಬಿಯ ಇಬ್ಬರು; ಆ ಒಂದು ತಂಡದವರಿಗೆ ಇಲ್ಲ ಸ್ಥಾನ!

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ ಎದುರಾಳಿ ಮಂಗಳೂರು ಯುನೈಟೆಡ್ ತಂಡಕ್ಕೆ ಗೆಲ್ಲಲು 156 ರನ್‌ಗಳ ಗುರಿಯನ್ನು ನೀಡಿತ್ತು. ಇನ್ನು ಈ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಮಂಗಳೂರು ಯುನೈಟೆಡ್ ತಂಡ 18 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಬಾರಿಸಿ ಬರೋಬ್ಬರಿ 8 ವಿಕೆಟ್‌ಗಳ ಜಯ ಸಾಧಿಸಿತು. ಮಂಗಳೂರು ಯುನೈಟೆಡ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 56 ಎಸೆತಗಳಲ್ಲಿ ಅಜೇಯ 85 ಕಲೆಹಾಕಿ ಗೆಲುವಿಗೆ ಪ್ರಮುಖ ಕಾರಣನಾದ ನಿಕಿನ್ ಜೋಸ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಶಿವಮೊಗ್ಗ ಸ್ಟ್ರೈಕರ್ಸ್ ಇನ್ನಿಂಗ್ಸ್

ಶಿವಮೊಗ್ಗ ಸ್ಟ್ರೈಕರ್ಸ್ ಇನ್ನಿಂಗ್ಸ್

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರೋಹನ್ ಕದಮ್ 64 ರನ್ ಕಲೆಹಾಕಿದರೆ, ವಿನಯ್ ಸಾಗರ್ 6 ರನ್ ಕಲೆಹಾಕಿದರು. ಇನ್ನುಳಿದಂತೆ ಕೃಷ್ಣಮೂರ್ತಿ ಸಿದ್ಧಾರ್ಥ್ 7 ರನ್, ಶರತ್ ಬಿಆರ್ 21 ರನ್, ಸ್ಟಾಲಿನ್ ಹೋವರ್ 25 ರನ್, ನಾಯಕ ಕೃಷ್ಣಪ್ಪ ಗೌತಮ್ 9 ರನ್, ರಾಜ್‌ವೀರ್ ವಾಧ್ವಾ ಡಕ್ ಔಟ್, ಎಂಬಿ ದರ್ಶನ್ 2 ರನ್ ಕಲೆಹಾಕಿದರೆ, ಅಂತಿಮವಾಗಿ ಅವಿನಾಶ್ ಡಿ ಅಜೇಯ 13 ರನ್ ಹಾಗೂ ಕೆಸಿ ಕಾರಿಯಪ್ಪ ಅಜೇಯ 3 ರನ್ ಕಲೆಹಾಕಿದರು.

ಮಂಗಳೂರು ಯುನೈಟೆಡ್ ಪರ ವಿಜಯ್ ಕುಮಾರ್ ವೈಶಾಖ್ ಮತ್ತು ಎಂ ವೆಂಕಟೇಶ್ ತಲಾ ಮೂರು ವಿಕೆಟ್ ಪಡೆದರೆ, ಹೆಚ್ ಎಸ್ ಶರತ್ ಒಂದು ವಿಕೆಟ್ ಪಡೆದರು.

ಮಂಗಳೂರು ಯುನೈಟೆಡ್ ಇನ್ನಿಂಗ್ಸ್

ಮಂಗಳೂರು ಯುನೈಟೆಡ್ ಇನ್ನಿಂಗ್ಸ್

ಇನ್ನು ಶಿವಮೊಗ್ಗ ಸ್ಟ್ರೈಕರ್ಸ್ ನೀಡಿದ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಮಂಗಳೂರು ಯುನೈಟೆಡ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರವಿಕುಮಾರ್ ಸಮರ್ಥ್ 2 ರನ್ ಹಾಗೂ ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ 27 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕಿನ್ ಜೋಸ್ 5 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 56 ಎಸೆತಗಳಲ್ಲಿ 86 ರನ್ ಚಚ್ಚಿ ಅಜೇಯರಾಗಿ ಉಳಿದರೆ, ಅಮಿತ್ ವರ್ಮಾ 28 ಎಸೆತಗಳಲ್ಲಿ 41 ರನ್ ಕಲೆಹಾಕಿ ಅಜೇಯರಾಗಿ ಉಳಿದರು.

ಶಿವಮೊಗ್ಗ ಸ್ಟ್ರೈಕರ್ಸ್ ಪರ ಸ್ಟಾಲಿನ್ ಹೊವರ್ ಮತ್ತು ರಾಜ್‌ವೀರ್ ವಾಧ್ವಾ ತಲಾ ಒಂದೊಂದು ವಿಕೆಟ್ ಪಡೆದರು.

Dinesh Karthik ಬಗ್ಗೆ Jadeja ಹೀಗೆ ಹೇಳಿದ್ದೇಕೆ | *Cricket | OneIndia Kannada
ಆಡುವ ಬಳಗಗಳು

ಆಡುವ ಬಳಗಗಳು

ಮಂಗಳೂರು ಯುನೈಟೆಡ್: ರವಿಕುಮಾರ್ ಸಮರ್ಥ್ (ನಾಯಕ), ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ನಿಕಿನ್ ಜೋಸ್, ಅಭಿನವ್ ಮನೋಹರ್, ಅಮಿತ್ ವರ್ಮಾ, ಮುರಳೀಧರ ವೆಂಕಟೇಶ್, ಅನೀಶ್ವರ್ ಗೌತಮ್, ಸುಜಯ್ ಸಾತೇರಿ (ವಿಕೆಟ್ ಕೀಪರ್), ವಿಜಯಕುಮಾರ್ ವೈಶಾಕ್, ಎಚ್ ಎಸ್ ಶರತ್, ರೋಹಿತ್ ಕುಮಾರ್

ಶಿವಮೊಗ್ಗ ಸ್ಟ್ರೈಕರ್ಸ್: ರೋಹನ್ ಕದಮ್, ಸ್ಟಾಲಿನ್ ಹೂವರ್, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಮೂರ್ತಿ ಸಿದ್ಧಾರ್ಥ್, ವಿನಯ್ ಸಾಗರ್, ಕೃಷ್ಣಪ್ಪ ಗೌತಮ್ (ನಾಯಕ), ಅವಿನಾಶ್ ಡಿ, ರಾಜ್ವಿರ್ ವಾಧ್ವಾ, ಎಂಬಿ ದರ್ಶನ್, ಕೆಸಿ ಕಾರಿಯಪ್ಪ, ಪುನಿತ್ ಎಸ್

Story first published: Thursday, August 11, 2022, 10:27 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X