ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ: 400 ರನ್‌ಗಳ ಹೊಳೆ ಹರಿದ ಪಂದ್ಯ ವೀಕ್ಷಿಸಿ ಖುಷ್ ಆದ ಸಿಂಪಲ್ ಸುನಿ

Maharaja Trophy 2022: Simple Suni watched and shared pics of Qualifier 2 match of the tournament

ಆಗಸ್ಟ್ 7ರಂದು ಆರಂಭವಾಗಿರುವ ಮಹಾರಾಜ ಟ್ರೋಫಿ ಇದೀಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಟೂರ್ನಿಯಲ್ಲಿ ಭಾಗವಹಿಸಿದ್ದ ಆರು ತಂಡಗಳ ಪೈಕಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಪ್ಲೇಆಫ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿದ್ದವು.

ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಭಾರತದ ಈ ಮೂವರಿಗೆ ಸಿಗುವುದಿಲ್ಲ ಟಿ20 ವಿಶ್ವಕಪ್‌ ಟಿಕೆಟ್!ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಭಾರತದ ಈ ಮೂವರಿಗೆ ಸಿಗುವುದಿಲ್ಲ ಟಿ20 ವಿಶ್ವಕಪ್‌ ಟಿಕೆಟ್!

ಪ್ಲೇಆಫ್ ಸುತ್ತಿನ ಎಲಿಮಿನೇಟರ್ ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯಗಳು ನಿನ್ನೆ ( ಆಗಸ್ಟ್ 23 ) ಜರುಗಿದವು. ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳ ನಡುವೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಗೆದ್ದು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡರೆ, ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳ ನಡುವೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ನೇರವಾಗಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ ಹಾಗೂ ಈ ಪಂದ್ಯದಲ್ಲಿ ಸೋತ ಗುಲ್ಬರ್ಗಾ ಮಿಸ್ಟಿಕ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡಲಿದೆ.

ಏಷ್ಯಾಕಪ್ ಟಿ20 ಮಾದರಿಯಲ್ಲಿ ಅತಿಹೆಚ್ಚು ಹಾಗೂ ಅತಿಕಡಿಮೆ ಮೊತ್ತ ಗಳಿಸಿರುವ ತಂಡಗಳಿವುಏಷ್ಯಾಕಪ್ ಟಿ20 ಮಾದರಿಯಲ್ಲಿ ಅತಿಹೆಚ್ಚು ಹಾಗೂ ಅತಿಕಡಿಮೆ ಮೊತ್ತ ಗಳಿಸಿರುವ ತಂಡಗಳಿವು

ಹೀಗೆ ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ತೆರಳಿದ್ದ ಕನ್ನಡ ಚಲನಚಿತ್ರರಂಗದ ನಿರ್ದೇಶಕ ಸಿಂಪಲ್ ಸುನಿ ಪಂದ್ಯಗಳನ್ನು ಆನಂದಿಸಿದ ಖುಷಿಯನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳ ನಡುವೆ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದ ಕುರಿತಾಗಿ ಬರೆದುಕೊಂಡಿರುವ ಸಿಂಪಲ್ ಸುನಿ ಪಂದ್ಯದ ಹಾಗೂ ಪಂದ್ಯ ಮುಗಿದ ನಂತರದ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

20-20 ಪಂದ್ಯದಲ್ಲಿ 400 ರನ್‌ಗಳು

ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳ ನಡುವೆ ನಡೆದ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ 410 ರನ್‌ಗಳು ಹರಿದುಬಂದವು. ಈ ಕುರಿತಾಗಿ ಸಂತಸ ವ್ಯಕ್ತಪಡಿಸಿರುವ ಸಿಂಪಲ್ ಸುನಿ "ಚಿನ್ನದಂತ ಕ್ಷಣಗಳು in chinnaswamy stadium .. with ಮುತ್ತಿನಂತ ಮನಸ್ಸುಗಳ ಜೊತೆ.. ಮತ್ತು ತಂದ ಮ್ಯಾಚ್ನಲ್ಲಿ 20-20 overs ..400 runs (bb v/s gm ) ಎಂದು ಬರೆದುಕೊಂಡಿದ್ದು, ತಾವು ಹಾಗೂ ಮಯಾಂಕ್ ಅಗರ್ವಾಲ್ ಜತೆಗಿರುವ ಚಿತ್ರ ಹಾಗೂ ಇನ್ನಿತರ ಚಿತ್ರಗಳನ್ನು ಪೋಸ್ಟ್ ಮಾಡಿ ಒಂದೊಳ್ಳೆ ಪಂದ್ಯ ನೋಡಿದ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹಾಗೂ ಗುಲ್ಬರ್ಗಾ ನಡುವಿನ ಪಂದ್ಯದಲ್ಲಿ ಹರಿದುಬಂತು 410 ರನ್

ಬೆಂಗಳೂರು ಹಾಗೂ ಗುಲ್ಬರ್ಗಾ ನಡುವಿನ ಪಂದ್ಯದಲ್ಲಿ ಹರಿದುಬಂತು 410 ರನ್

ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ನಾಯಕ ಮನೀಶ್ ಪಾಂಡೆ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿ ಎದುರಾಳಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೆ 228 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ 18.2 ಓವರ್‌ಗಳಲ್ಲಿ 183 ರನ್ ಕಲೆಹಾಕಿ ಆಲ್ ಔಟ್ ಆಗಿದ್ದು 44 ರನ್‌ಗಳ ಸೋಲುಂಡಿದೆ. ಇನ್ನು ಈ ಪಂದ್ಯದಲ್ಲಿ ಗೆದ್ದಿರುವ ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ನೇರವಾಗಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದು, ಸೋಲುಂಡ ಗುಲ್ಬರ್ಗಾ ಮಿಸ್ಟಿಕ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಹೀಗೆ ಈ ಎರಡೂ ತಂಡಗಳು ಸೇರದಂತೆ ಪಂದ್ಯದಲ್ಲಿ 410 ರನ್ ದಾಖಲಾಗಿದೆ.

ಮಯಾಂಕ್, ರೋಹನ್ ಪಾಟೀಲ್ ಶತಕ

ಮಯಾಂಕ್, ರೋಹನ್ ಪಾಟೀಲ್ ಶತಕ

ಇನ್ನು ಈ ಪಂದ್ಯದಲ್ಲಿ ಇಷ್ಟು ದೊಡ್ಡ ರನ್ ಹೊಳೆ ಹರಿಯಲು ಕಾರಣ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ರೋಹನ್ ಪಾಟೀಲ್ ಇಬ್ಬರೂ ಸಿಡಿಸಿದ ಶತಕ. ಮಯಾಂಕ್ ಅಗರ್ವಾಲ್ 61 ಎಸೆತಗಳ್ಲಲಿ ಅಜೇಯ 112 ರನ್ ದಾಖಲಿಸಿದರೆ, ರೋಹನ್ ಪಾಟೀಲ್ 49 ಎಸೆತಗಳಲ್ಲಿ 108 ರನ್ ಕಲೆಹಾಕಿದರು.

Story first published: Wednesday, August 24, 2022, 14:10 [IST]
Other articles published on Aug 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X