ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ ಫೈನಲ್ : ಗುಲ್ಬರ್ಗ ಮಿಸ್ಟಿಕ್ಸ್ vs ಬೆಂಗಳೂರು ಬ್ಲಾಸ್ಟರ್ಸ್: ಆಡುವ ಬಳಗ, ಟಾಸ್ ರಿಪೋರ್ಟ್

Maharaja trophy Final: Gulbarga Mistics vs Bangaluru Blasters Playing XI and Toss Report

ಮಹಾರಾಜ ಟ್ರೋಫಿ ಟಿ20 ಲೀಗ್‌ನ ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಫೈನಲ್ ಹಂತಕ್ಕೇರಿದ್ದು ಚೊಚ್ಚಲ ಆವೃತ್ತಿಯ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟವನ್ನು ನಡೆಸಲಿದೆ. ಈ ಮಹತ್ವದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.

ಕರ್ನಾಟಕದ ಇಬ್ಬರು ಅತ್ಯುತ್ತಮ ಆಟಗಾರರು ಮುನ್ನಡೆಸುತ್ತಿರುವ ತಂಡಗಳು ಫೈನಲ್‌ನಲ್ಲಿ ಸೆಣೆಸಾಟವನ್ನು ನಡೆಸುತ್ತಿದ್ದು ಯಾರ ತಂಡಕ್ಕೆ ಮೇಲುಗೈ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಚೊಚ್ಚಲ ಮಹಾರಾಜ ಟಿ20 ಲೀಗ್‌ನ ಚಾಂಪಿಯನ್ ಪಟ್ಟಕ್ಕೇರುವ ತಂಡ ಯಾವುದು ಎಂಬ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಾರಾಜ ಟ್ರೋಫಿಯ ಫೈನಲ್ ಪಂದ್ಯ ನಡೆಯುತ್ತಿದ್ದು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಗುಲ್ಬರ್ಗಾ ಮಿಸ್ಟಿಕ್ಸ್ ರನ್ ಮಳೆ ಹರಿಸಿದೆ. ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಟ್ರೋಫಿ ಗೆಲ್ಲಲು ಭರ್ಜರಿ 221 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಕಣಕ್ಕಿಳಿದ ಎಲ್ಲಾ ಆಟಗಾರರು ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು ಬೆಂಗಳೂರು ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದೆ.

ನಾಯಕ ಮನೀಶ್ ಪಾಂಡೆ ಅಂತಿಮ ಹಂತದಲ್ಲಿ ನೀಡಿದ ಸ್ಪೋಟಕ ಪ್ರದರ್ಶನ ದೇವದತ್ ಪಡಿಕ್ಕಲ್ ಅವರ ಭರ್ಜರಿ ಅರ್ಧ ಶತಕ ಹಾಗೂ ಆರಂಭಿಕ ಜೋಡಿ ಜೆಸ್ವತ್ ಆಚಾರ್ಯ ಮತ್ತು ರೋಹನ್ ಪಾಟೀಲ್ ಅವರ ಅಮೋಘ ಪ್ರದರ್ಶನದಿಂದಾಗಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 220 ರನ್‌ಗಳನ್ನು ಗಳಿಸಿದೆ. ಈ ಮೂಲಕ ಚೊಚ್ಚಲ ಆವೃತ್ತಿಯ ಮಹಾರಾಜ ಟ್ರೋಫಿಯನ್ನು ಎತ್ತಿ ಹಿಡಿಯುವ ಆತ್ಮವಿಶ್ವಾಸದೊಂದಿಗೆ ಬೌಲಿಂಗ್ ದಾಳಿಗೆ ಇಳಿದಿದೆ.

ಆಡುವ ಬಳಗ ಹೀಗಿದೆ

ಬೆಂಗಳೂರು ಬ್ಲಾಸ್ಟರ್ಸ್ : ಮಯಾಂಕ್ ಅಗರ್ವಾಲ್ (ನಾಯಕ), ಎಲ್ ಆರ್ ಚೇತನ್, ಅನಿರುದ್ಧ ಜೋಶಿ, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಜಗದೀಶ ಸುಚಿತ್, ಕುಶ್ ಮರಾಠೆ, ಕ್ರಾಂತಿ ಕುಮಾರ್, ರಿಷಿ ಬೋಪಣ್ಣ, ರೋನಿತ್ ಮೋರೆ, ಪ್ರದೀಪ್ ಟಿ, ಸಂತೋಕ್ ಸಿಂಗ್
ಬೆಂಚ್: ಅನೀಶ್ ಕೆವಿ, ಕುಮಾರ್ ಎಲ್ ಆರ್, ಪಾರಸ್ ಗುರ್ಬಕ್ಸ್ ಆರ್ಯ, ಲೋಚನ್ ಗೌಡ, ಸೀನ್ ಇಶಾನ್ ಜೋಸೆಫ್, ತನಯ್ ವಾಲ್ಮಿಕ್, ಸೂರಜ್ ಅಹುಜಾ

ಗುಲ್ಬರ್ಗಾ ಮಿಸ್ಟಿಕ್ಸ್: ಜೆಸ್ವತ್ ಆಚಾರ್ಯ, ರೋಹನ್ ಪಾಟೀಲ್, ದೇವದತ್ತ್ ಪಡಿಕ್ಕಲ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ಮನೋಜ್ ಭಾಂಡಗೆ, ರಿತೇಶ್ ಭಟ್ಕಳ್, ಪ್ರಣವ್ ಭಾಟಿಯಾ, ಕುಶಾಲ್ ವಾಧ್ವಾನಿ, ವಿಧ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ
ಬೆಂಚ್: ಧನುಷ್ ಗೌಡ, ಅಜಯ್ ಗೌಡ, ಬೆಂಗಳೂರು ಮೋಹಿತ್, ಶ್ರೀಶ ಆಚಾರ್, ಕೃತಿಕ್ ಕೃಷ್ಣ, ಮೊಹಮ್ಮದ್ ಅಕಿಬ್ ಜವಾದ್, ಆರೋನ್ ಕ್ರಿಸ್ಟಿ, ಕೋದಂಡ ಅಜಿತ್ ಕಾರ್ತಿಕ್

Story first published: Friday, August 26, 2022, 21:22 [IST]
Other articles published on Aug 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X