ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್‌ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!

ಸದ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿರುವ ಮಹಾರಾಜ ಟ್ರೋಫಿಯಲ್ಲಿ ಇಂದು ( ಆಗಸ್ಟ್ 12 ) ನಡೆದ ಟೂರ್ನಿಯ ಲೀಗ್ ಹಂತದ 12ನೇ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ಭರ್ಜರಿ ಜಯ ಸಾಧಿಸಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಭಾರತ vs ಜಿಂಬಾಬ್ವೆ: ಜಿಂಬಾಬ್ವೆ ಪ್ರವಾಸದಿಂದ ದ್ರಾವಿಡ್‌ಗೆ ಬ್ರೇಕ್; ಬದಲಿ ಕೋಚ್ ಆಯ್ಕೆ!ಭಾರತ vs ಜಿಂಬಾಬ್ವೆ: ಜಿಂಬಾಬ್ವೆ ಪ್ರವಾಸದಿಂದ ದ್ರಾವಿಡ್‌ಗೆ ಬ್ರೇಕ್; ಬದಲಿ ಕೋಚ್ ಆಯ್ಕೆ!

ಇನ್ನು ಮಳೆಯ ಕಾರಣದಿಂದಾಗಿ ಒಂದು ಓವರ್ ಕಡಿತಗೊಂಡ ಕಾರಣ 19 ಓವರ್‌ಗಳ ಪಂದ್ಯ ಏರ್ಪಟ್ಟು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ ರೋಹನ್ ಕದಮ್ ಹಾಗೂ ಶರತ್ ಬಿ ಆರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ಎದುರಾಳಿ ತಂಡಕ್ಕೆ 174 ರನ್‌ಗಳ ಕಠಿಣ ಗುರಿಯನ್ನೇ ನೀಡಿತು. ಅತ್ತ ಈ ಗುರಿಯನ್ನು ಕೇವಲ 15.4 ಓವರ್‌ಗಳಲ್ಲಿ ಮುಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ 9 ವಿಕೆಟ್‌ಗಳ ಅಬ್ಬರದ ಗೆಲುವನ್ನು ದಾಖಲಿಸಿದೆ. ಮಯಾಂಕ್ ಅಗರ್ವಾಲ್ ಅಬ್ಬರದ ಶತಕದ ನೆರವಿನಿಂದ 15.4 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿದ ಬೆಂಗಳೂರು ಬ್ಲಾಸ್ಟರ್ಸ್ ಭರ್ಜರಿ ಚೇಸ್ ಮಾಡಿ ಬೃಹತ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಶಿವಮೊಗ್ಗ ಉತ್ತಮ ಬ್ಯಾಟಿಂಗ್

ಶಿವಮೊಗ್ಗ ಉತ್ತಮ ಬ್ಯಾಟಿಂಗ್

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರೋಹನ್ ಕದಮ್ ಮತ್ತು ಶರತ್ ಬಿ ಆರ್ 116 ರನ್‌ಗಳ ಅಬ್ಬರದ ಜತೆಯಾಟವನ್ನಾಡಿದರು. ರೋಹನ್ ಕದಮ್ 8 ಬೌಂಡರಿ, 3 ಸಿಕ್ಸರ್ ಸಹಿತ 52 ಎಸೆತಗಳಲ್ಲಿ 84 ರನ್ ಬಾರಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಶರತ್ ಬಿ ಆರ್ 5 ಬೌಂಡರಿ ಸಹಿತ 45 ಎಸೆತಗಳಲ್ಲಿ 51 ರನ್ ಕಲೆಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೃಷ್ಣಪ್ಪ ಗೌತಮ್ ಅಜೇಯ 18 ರನ್ ಕಲೆ ಹಾಕಿದರೆ, ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 5 ಎಸೆತಗಳಲ್ಲಿ 13 ರನ್ ಬಾರಿಸಿದ ಅವಿನಾಶ್ ಡಿ ಅಜೇಯರಾಗಿ ಉಳಿದರು.

ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪರ ಕುಮಾರ್ ಎಲ್‌ ಆರ್ ಮತ್ತು ಜಗದೀಶ ಸುಚಿತ್ ತಲಾ ಒಂದೊಂದು ವಿಕೆಟ್ ಪಡೆದರು.

ಬೆಂಗಳೂರು ಬ್ಲಾಸ್ಟರ್ಸ್ ಅಬ್ಬರ

ಬೆಂಗಳೂರು ಬ್ಲಾಸ್ಟರ್ಸ್ ಅಬ್ಬರ

ಇನ್ನು ಶಿವಮೊಗ್ಗ ಸ್ಟ್ರೈಕರ್ಸ್ ನೀಡಿದ ಕಠಿಣ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಆರಂಭಿಕರಾಗಿ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಚೇತನ್ ಎಲ್ ಆರ್ ಕಣಕ್ಕಿಳಿದರು. ಈ ಪೈಕಿ ಚೇತನ್ ಎಲ್ ಆರ್ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 15 ಎಸೆತಗಳಲ್ಲಿ 34 ರನ್ ಕಲೆಹಾಕಿದರೆ, 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 49 ಎಸೆತಗಳಲ್ಲಿ 102 ರನ್ ಬಾರಿಸಿ ಅಜೇಯರಾಗಿ ಉಳಿದರು. ಹೀಗೆ ಈ ಮಹಾರಾಜ ಟ್ರೋಫಿಯಲ್ಲಿ ಶತಕ ಬಾರಿಸಿದಮೊದಲ ನಾಯಕ ಎಂಬ ಖ್ಯಾತಿಯನ್ನು ಮಯಾಂಕ್ ಅಗರ್ವಾಲ್ ಪಡೆದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನೀಶ್ ಕೆವಿ 30 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿದರು.

ಶಿವಮೊಗ್ಗ ಸ್ಟ್ರೈಕರ್ಸ್ ಪರ ವಿಕೆಟ್ ಪಡೆದ ಏಕೈಕ ಬೌಲರ್ ದೇವಯ್ಯ.

ಆಡುವ ಬಳಗ

ಆಡುವ ಬಳಗ

ಬೆಂಗಳೂರು ಬ್ಲಾಸ್ಟರ್ಸ್ ಆಡುವ ಬಳಗ: ಎಲ್ ಆರ್ ಚೇತನ್, ಮಯಾಂಕ್ ಅಗರ್ವಾಲ್ (ನಾಯಕ), ಅನೀಶ್ ಕೆವಿ, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಜಗದೀಶ ಸುಚಿತ್, ಕ್ರಾಂತಿ ಕುಮಾರ್, ರಿಷಿ ಬೋಪಣ್ಣ, ಕುಮಾರ್ ಎಲ್ ಆರ್, ಪ್ರದೀಪ್ ಟಿ, ಪಾರಸ್ ಗುರ್ಬೌಕ್ಸ್ ಆರ್ಯ, ಅನಿರುದ್ಧ ಜೋಶಿ

ಶಿವಮೊಗ್ಗ ಸ್ಟ್ರೈಕರ್ಸ್ ಆಡುವ ಬಳಗ: ರೋಹನ್ ಕದಮ್, ವಿನಯ್ ಸಾಗರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಶರತ್ ಬಿಆರ್ (ವಿಕೆಟ್ ಕೀಪರ್), ಸ್ಟಾಲಿನ್ ಹೂವರ್, ಕೃಷ್ಣಪ್ಪ ಗೌತಮ್ (ನಾಯಕ), ಅವಿನಾಶ್ ಡಿ, ಕೆಸಿ ಕಾರಿಯಪ್ಪ, ಪುನಿತ್ ಎಸ್, ದೇವಯ್ಯ, ಡೆಸ್ಮಂಡ್ ಆಂಟೋನಿ

For Quick Alerts
ALLOW NOTIFICATIONS
For Daily Alerts
Read more about: mykhel original mayank agarwal
Story first published: Friday, August 12, 2022, 23:03 [IST]
Other articles published on Aug 12, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X