ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪರ್ಪಲ್ ಕ್ಯಾಪ್ ಇಲ್ಲ, ಆರೆಂಜ್ ಕ್ಯಾಪ್ ಇಲ್ಲ, ಐಪಿಎಲ್ ಟ್ರೋಫಿ ಮಾತ್ರ ಬಿಡಲ್ಲ

Mahela Jayawardene Spoke About Orange cap and Purple cap

ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಐದನೇ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಮುಂಬೈ ವಿಜಯದ ಬಗ್ಗೆ ಕೋಚ್ ಮಹೇಲ ಜಯವರ್ಧನೆ ಸಂತಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಗೆದ್ದ ಬಳಿಕ ಮುಂಬೈ ಡ್ರೆಸ್ಸಿಂಗ್ ರೂಂನಲ್ಲಿ ಜಯವರ್ಧನೆ ಹೇಳಿರುವ ಮಾತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ''ಪರ್ಪಲ್ ಕ್ಯಾಪ್ ಇರಲ್ಲ, ಆರೆಂಜ್ ಕ್ಯಾಪ್ ಇರಲ್ಲ, ಆದರೂ ಐಪಿಎಲ್ ಟ್ರೋಫಿ ಗೆಲ್ತಿವಿ'' ಎಂದು ಹೇಳಿಕೆ ಗಮನ ಸೆಳೆದಿದೆ.

ಸೂರ್ಯ ಕುಮಾರ್ ರನ್‌ ಔಟ್ ಬಗ್ಗೆ ಪ್ರತಿಕ್ರಿಯೆ: ರೋಹಿತ್ ಮಾತಿಗೆ ಮೆಚ್ಚುಗೆಸೂರ್ಯ ಕುಮಾರ್ ರನ್‌ ಔಟ್ ಬಗ್ಗೆ ಪ್ರತಿಕ್ರಿಯೆ: ರೋಹಿತ್ ಮಾತಿಗೆ ಮೆಚ್ಚುಗೆ

ಏಕಂದ್ರೆ, ಕಳೆದ ವರ್ಷ ಐಪಿಎಲ್ ಪ್ರಶಸ್ತಿ ಮುಂಬೈ ತಂಡದಲ್ಲಿ ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್ ಗೆದ್ದಿಲ್ಲ. ಆದರೂ ಐಪಿಎಲ್ ಗೆದಿದ್ದರು. 2019ರ ಡ್ರೆಸ್ಸಿಂಗ್ ರೂಂನಲ್ಲೂ ಜಯವರ್ಧನೆ ಈ ಅಂಶವನ್ನು ಉಲ್ಲೇಖಿಸಿದ್ದರು.

ಈಗ 2020ರಲ್ಲಿ ಟ್ರೋಫಿ ಗೆದ್ದಿದ್ದಾರೆ. ಆದ್ರೆ, ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್ ಗೆದ್ದಿಲ್ಲ. ಈಗಲೂ ಜಯವರ್ಧನೆ ಈ ಅಂಶವನ್ನು ಪ್ರಸ್ತಾಪಿಸಿದ್ದಾರೆ. 'ನಮಗೆ ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್‌ಗಿಂತ ಈ ಟ್ರೋಫಿ ಹೆಚ್ಚು ಖುಷಿ ಕೊಡ್ತಿದೆ' ಎಂದು ಸಂತಸ ಹಂಚಿಕೊಂಡಿದ್ದಾರೆ.

ಮೈಖೇಲ್ ಕನ್ನಡ ಆಯ್ಕೆಯ ಐಪಿಎಲ್ 2020ರ ಶ್ರೇಷ್ಠ XIಮೈಖೇಲ್ ಕನ್ನಡ ಆಯ್ಕೆಯ ಐಪಿಎಲ್ 2020ರ ಶ್ರೇಷ್ಠ XI

ಇತಿಹಾಸ ಗಮನಿಸಿದರೆ ಐದು ಭಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ, ಗೆದ್ದಿರುವ ಆವೃತ್ತಿಗಳಲ್ಲಿ ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್‌ ಗೆದ್ದೇ ಇಲ್ಲ.

2010ರಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಸಿಎಸ್‌ಕೆ ವಿರುದ್ಧ ಸೋಲು ಕಂಡಿತ್ತು. ಆದ್ರೆ, ಆ ವರ್ಷ ಸಚಿನ್ ತೆಂಡೂಲ್ಕರ್ ಆರೆಂಜ್ ಕ್ಯಾಪ್ ಪಡೆದಿದ್ದರು. 2011ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ ಲಸಿತ್ ಮಾಲಿಂಗ್ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು.

Story first published: Wednesday, November 11, 2020, 18:25 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X