ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಸುಶಾಂತ್ ಸಾವು ಧೋನೀನ ಮೂಕನನ್ನಾಗಿಸಿದೆ': ನಿರ್ಮಾಪಕ ಅರುಣ್ ಪಾಂಡೆ

Mahi Was Impressed To See Sushants Dedication: MS Dhonis Managers Arun Pandey

ನವದೆಹಲಿ, ಜೂನ್ 16: ಸುಶಾಂತ್ ಸಿಂಗ್ ರಜಪೂತ್ ಸಾವು ಬರೀ ಸಿನಿಮಾ ರಂಗದ ಸ್ಟಾರ್‌ಗಳನ್ನಷ್ಟೇ ಅಲ್ಲ, ಭಾರತದ ಕ್ರೀಡಾಪಟುಗಳಿಗೂ ಆಘಾತ ನೀಡಿದೆ. ಪ್ರತಿಭಾನ್ವಿತ ನಟ ಸುಶಾಂತ್ ಸಾವು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಮೂಕನನ್ನಾಗಿಸಿದೆ ಎಂದು ಧೋನಿಯ ಮ್ಯಾನೇಜರ್, ನಿರ್ಮಾಪಕ ಅರುಣ್ ಪಾಂಡೆ ಹೇಳಿದ್ದಾರೆ. ಬಾಲಿವುಡ್ ನಟ, 34ರ ಹರೆಯದ ಸುಶಾಂತ್ ಸಿಂಗ್ ಭಾನುವಾರ (ಜೂನ್ 14) ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

 'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್ 'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್

ಸುಶಾಂತ್ ಮೃತ ದೇಹ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 'ಎಂಎಸ್ ಧೋನಿ: ದ ಅನ್‌ ಟೋಲ್ಡ್ ಸ್ಟೋರಿ' ಎನ್ನುವ ಧೋನಿ ಜೀನವಾಧಾರಿತ ಚಿತ್ರದಲ್ಲಿ ಎಂಎಸ್‌ಡಿ ಪಾತ್ರದಲ್ಲಿ ನಟಿಸಿದ್ದ ಸುಶಾಂತ್ ಹೆಚ್ಚು ಜನಪ್ರಿಯರಾಗಿದ್ದರು.

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಆಘಾತ ವ್ಯಕ್ತಪಡಿಸಿದ ಕ್ರಿಕೆಟ್ ಲೋಕಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಆಘಾತ ವ್ಯಕ್ತಪಡಿಸಿದ ಕ್ರಿಕೆಟ್ ಲೋಕ

2016ರಲ್ಲಿ 'ಎಂಎಸ್ ಧೋನಿ: ದ ಅನ್‌ ಟೋಲ್ಡ್ ಸ್ಟೋರಿ' ಚಿತ್ರ ತೆರೆ ಕಂಡಿತ್ತು. ಚಿತ್ರ ಶೂಟಿಂಗ್ ವೇಳೆ ಸುಶಾಂತ್ ಜೊತೆ ಕಳೆಯಬೇಕಾಗಿ ಬಂದಿದ್ದರಿಂದ ಸುಶಾಂತ್ ಬಗ್ಗೆ ಅರುಣ್ ಪಾಂಡೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಸಮೃದ್ಧ ವೃತ್ತಿಜೀವನ ಕಾಯುತ್ತಿತ್ತು

ಸಮೃದ್ಧ ವೃತ್ತಿಜೀವನ ಕಾಯುತ್ತಿತ್ತು

ಸದ್ಯ ದೆಹಲಿಯಲ್ಲಿ ವಾಸವಿರುವ ಅರುಣ್ ಎಬಿಪಿ ಆನಂದ ಜೊತೆ ಮಾತನಾಡುತ್ತ, 'ನಮಗಿದನ್ನು ನಂಬಲೇ ಸಾಧ್ಯವಾಗುತ್ತಿಲ್ಲ. ಸುಶಾಂತ್ ಸಾವಿಗೆ ನಾನೊಬ್ಬನೇ ಶೋಕ ತೋರಿಕೊಳ್ಳುತ್ತಿಲ್ಲ, ಮಾಹಿ (ಎಂಎಸ್‌ಡಿ) ಕೂಡ ಈ ದುರಂತ ಸುದ್ದಿಯಿಂದ ಆಘಾತಗೊಂಡಿದ್ದಾರೆ. ಕೇವಲ 34 ವರ್ಷ ಹರೆಯದವರಾಗಿದ್ದ ಸುಶಾಂತ್‌ಗಾಗಿ ಸಮೃದ್ಧ ವೃತ್ತಿಜೀವನ ಕಾಯುತ್ತಿತ್ತು, ಅದರ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಏರಿಳಿತಗಳು ಇದ್ದಿದ್ದೇ,' ಎಂದಿದ್ದಾರೆ.

9 ತಿಂಗಳ ಕಾಲ ಮೈದಾನದಲ್ಲಿ ಕಳೆದಿದ್ದರು

9 ತಿಂಗಳ ಕಾಲ ಮೈದಾನದಲ್ಲಿ ಕಳೆದಿದ್ದರು

'ಎಂಎಸ್ ಧೋನಿ: ಅನ್‌ ಟೋಲ್ಡ್ ಸ್ಟೋರಿ' ಚಿತ್ರದ ಶೂಟಿಂಗ್‌ ಕ್ಷಣದ ಬಗ್ಗೆ ನೆನಪಿಸಿಕೊಂಡ ಪಾಂಡೆ, 'ಶೂಟಿಂಗ್ ವೇಳೆ ನಾನು ಸುಮಾರು 18 ತಿಂಗಳ ಕಾಲ ಸುಶಾಂತ್ ಜೊತೆ ಕಳೆದಿದ್ದೆ. ತನ್ನ ಪಾತ್ರದ ಬಗ್ಗೆ ಸುಶಾಂತ್ ತುಂಬಾ ಗಮನ ಕೊಡುತ್ತಿದ್ದರು. ಧೋನಿಯನ್ನು ಎಲ್ಲಾ ವಿಧದಲ್ಲೂ ಪ್ರತಿಬಿಂಬಿಸುವುದಕ್ಕೋಸ್ಕರ ಸುಶಾಂತ್ ಒಟ್ಟು 9 ತಿಂಗಳ ಕಾಲ ಮೈದಾನದಲ್ಲಿ ಕಳೆದಿದ್ದಾರೆ. ಧೋನಿ ಜೊತೆಗೇನೆ ಸುಶಾಂತ್ 15 ದಿನಗಳ ಕಾಲ ಇದ್ದರು. ನನ್ನ ಪ್ರಕಾರ ಸುಶಾಂತ್, ತನ್ನ ಕೆಲಸದಲ್ಲಿ ಒಂದೇ ಒಂದು ಸಣ್ಣ ಕಲ್ಲು ಸಿಗದಷ್ಟು ಪರ್ಫೆಕ್ಟ್ ನಟನಾಗಿದ್ದ,' ಎಂದು ಸುಶಾಂತ್‌ಗಿದ್ದ ಕೆಲಸದ ತನ್ಮಯತೆ ಬಗ್ಗೆ ಮಾತನಾಡಿದ್ದಾರೆ.

ಮೋರೆ ಕಣ್ಗಾವಲಿನಲ್ಲಿ ಕ್ರಿಕೆಟ್ ಅಭ್ಯಾಸ

ಮೋರೆ ಕಣ್ಗಾವಲಿನಲ್ಲಿ ಕ್ರಿಕೆಟ್ ಅಭ್ಯಾಸ

'ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಅವರ ಕಣ್ಗಾವಲಿನಲ್ಲಿ ಸುಶಾಂತ್ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ಧೋನಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಹೇಗೆ ಮಾಡುತ್ತಾರೆಂದು ಕಲಿತರು. ಇದು ಮಾಹೀ ಪಾತ್ರವನ್ನು ನಿರ್ವಹಿಸಲು ಬಹಳ ಅವಶ್ಯಕವಾಗಿತ್ತು,' ಎಂದು ಪಾಂಡೆ ವಿವರಿಸಿದ್ದಾರೆ.

ಬೆನ್ನು ಮೂಳೆ ಮುರಿದರೂ ಹಿಂದೆ ಸರಿಯಲ್ಲಿಲ್ಲ

ಬೆನ್ನು ಮೂಳೆ ಮುರಿದರೂ ಹಿಂದೆ ಸರಿಯಲ್ಲಿಲ್ಲ

ಮಾತು ಮುಂದುವರೆಸಿದ ಪಾಂಡೆ, 'ನನಗೀಗಲೂ ನೆನಪಿದೆ. ಕ್ರಿಕೆಟ್ ಅಭ್ಯಾಸ ಮಾಡುವಾಗ ಸುಶಾಂತ್‌ಗೆ ದೈಹಿಕ ನೋವು ಕಾಡಿತ್ತು. ಅವರ ಬೆನ್ನುಮೂಳೆ ಮುರಿತಕ್ಕೊಳಗಾಗಿತ್ತೂ ಕೂಡ. ಆದರೆ ತನ್ನ ನಟನೆ, ಬದ್ಧತೆ ಬಗ್ಗೆ ವಿಶ್ವಾಸವಿದ್ದ ಸುಶಾಂತ್, ಚೇತರಿಕೊಳ್ಳುವುದಕ್ಕೋಸ್ಕರ ಶ್ರಮ ವಹಿಸಿದ್ದರು. ಒಂದು ವಾರದಲ್ಲಿ ಸುಧಾರಿಸಿದ್ದರು. ಕೆಲಸದ ಬಗ್ಗೆ ಸುಶಾಂತ್‌ಗಿದ್ದ ಸಮರ್ಪಣಾ ಭಾವಕ್ಕೆ ಧೋನಿ ಕೂಡ ಪ್ರಭಾವಿತರಾಗಿದ್ದರು,' ಎಂದಿದ್ದಾರೆ.

Story first published: Monday, June 15, 2020, 15:31 [IST]
Other articles published on Jun 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X